DAKSHINA KANNADA
‘ಲವ್ ಜಿಹಾದ್’ ಎಂದು ಆರೋಪ : ಮಂಗಳೂರಿನ ಆಭರಣ ಮಳಿಗೆಗೆ ನುಗ್ಗಿ ಹಿಂದೂ ಯುವತಿ- ಮುಸ್ಲೀಂ ಯುವಕನಿಗೆ ಹಲ್ಲೆ..!
ಮಂಗಳೂರು : ಲವ್ ಜಿಹಾದ್ ಆರೋಪದಡಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯ ಮೇಲೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಮೂರು ದೂರುಗಳು ದಾಖಲಾಗಿವೆ. ಕದ್ರಿ ಠಾಣಾ ವ್ಯಾಪ್ತಿಯ ಚಿನ್ನಾಭರಣ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ.
ಸಂತ್ರಸ್ತ ಯುವಕ ಹಲ್ಲೆ ಮತ್ತು ಗಲಭೆಯ ಬಗ್ಗೆ ದೂರು ನೀಡಿದ್ದು, ಹಿಂದುತ್ವ ಪರ ಕಾರ್ಯಕರ್ತರು ಮತ್ತು ಯುವತಿಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಏತನ್ಮಧ್ಯೆ, ಮುಸ್ಲಿಂ ಯುವಕ ತನ್ನನ್ನು ನಿಂದಿಸಿದ್ದು ಅಲ್ಲದೆ ಗಂಭೀರ ಪರಿಣಾಮ ಬೀರುವ ಬೆದರಿಕೆ ಹಾಕಿದ್ದಾನೆ ಎಂದು ಯುವತಿಯ ತಾಯಿ ದೂರಿದ್ದಾರೆ.
ಇನ್ನು ಆಭರಣ ಅಂಗಡಿಯವರು ಅತಿಕ್ರಮಿಸಿ ಗಲಾಟೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಉಳ್ಳಾಲದ ಲುಕ್ಮಾನ್ ಎಂಬ ಮುಸ್ಲಿಂ ಯುವಕನ ಜೊತೆ ಶೃಂಗೇರಿ ಕೊಪ್ಪದ ಯುವತಿ ಸುತ್ತಾಡುತ್ತಿದ್ದು ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿತ್ತು.
ಮಂಗಳವಾರ ಸಂಜೆ ಹಿಂದು ಪರ ಕಾರ್ಯಕರ್ತರು ಚಿನ್ನಾಭರಣ ಅಂಗಡಿಗೆ ನುಗ್ಗಿ ಮುಸ್ಲಿಂ ಯುವಕನ ಮೇಲೆ ‘ಲವ್ ಜಿಹಾದ್’ ಮಾಡ್ತೀಯಾ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ.
ಇದೇ ಯುವತಿಯ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ.
ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದಾರೆ.
ಈ ಸಂಬಂಧ 3 ಪ್ರಕರಣಗಳು ದಾಖಲಾಗಿದ್ದು ಇದುವರೆಗೆ ಯಾರನ್ನು ಬಂಧಿಸಲಾಗಿಲ್ಲ ತನಿಖೆ ನಡೆಯತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
DAKSHINA KANNADA
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಗಣಪತಿ ವಿಗ್ರಹದ ವಿಸರ್ಜನೆ
ಮಂಗಳೂರು: ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ 3ದಿನಗಳ ಕಾಲ ನಡೆದ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಗುರುವಾರ ರಾತ್ರಿ ಸಂಪನ್ನಗೊಂಡಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಹಯೋಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಯೋಗದಲ್ಲಿ ನಡೆದ ಈ ಉತ್ಸವದ ಕೊನೆಗೆ ಶ್ರೀ ಸಿದ್ದಿವಿನಾಯಕ ದೇವರಿಗೆ ಮಹಾಪೂಜೆ ನೆರವೇರಿಸಲಾಯಿತು.
ಬಳಿಕ ಕಡೆಂಜ ಅಶೋಕ್ ಕುಮಾರ್ ಚೌಟ ಶೋಭಾಯಾತ್ರೆಯನ್ನು ಉದ್ಘಾಟಿಸಿದರು. ಚೆಂಡೆ ವಾದ್ಯ ಮೇಳ ಮತ್ತು ಭಜನಾ ಸೇವೆಗಳ ಜೊತೆಗೆ ಸಾಗಿ ಬಂದ ಶೋಭಾಯಾತ್ರೆಯು ಬಂಟ್ಸ್ ಹಾಸ್ಟೆಲ್ ನ ಹಿಂಭಾಗವಾಗಿ ಹೊರಟು ಪಿವಿಸ್ ಸರ್ಕಲ್, ನವಭಾರತ ಸರ್ಕಲ್, ಡೊಂಗರಕೇರಿ, ನ್ಯೂ ಚಿತ್ರ ಆಗಿ ಕಾರ್ ಸ್ಟ್ರೀಟ್ ಗೆ ಸಾಗಿ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಗೆ ಬಂದು ಗಣಪತಿ ಮೂರ್ತಿಯ ವಿಗ್ರಹದ ವಿಸರ್ಜನೆ ಮಾಡಲಾಯಿತು.
3ಜಿಲ್ಲೆಗಳಿಂದ ಆಗಮಿಸಿದ ಬಂಟರ ಮತ್ತು ಊರ – ಪರವೂರ ಭಕ್ತರು ವೈಭವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು .
DAKSHINA KANNADA
ಹಿಂದೂ ನಾಯಕರ ಫೇಸ್ಬುಕ್ ಅಕೌಂಟ್ ಹ್ಯಾಕ್- ಶ್ರೀಕಾಂತ್ ಶೆಟ್ಟಿ ಆರೋಪ..!
ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್ ಖಾತೆಗಳನ್ನು ನಿಷ್ಕ್ರೀಯಗೊಳಿಸಿದಕ್ಕೆ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿ: ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗಿದೆ.
ಆದರೆ ಇದನ್ನು ಸ್ವತಃ ಫೇಸ್ಬುಕ್ ಸಂಸ್ಥೆಯೇ ನಿಷ್ಕ್ರೀಯಗೊಳಿಸಿದೆಯೋ ಅಥವಾ ಯಾರದ್ದೋ ದೂರಿನ ಆಧಾರದಲ್ಲಿ ನಿಷ್ಕ್ರೀಯಗೊಳಿಸಲಾಗಿದೆಯೋ ಎನ್ನುವುದು ತಿಳಿದು ಬಂದಿಲ್ಲ.
ಆದರೆ ಇದು ಹಿಂದೂ ವಿಚಾರಧಾರೆಯ ಪ್ರಚಾರ ಮತ್ತು ಹೋರಾಟ ನಡೆಸುತ್ತಿರುವವರ ಮೇಲೆ ನಡೆದ ವ್ಯವಸ್ಥಿತ ಸೈಬರ್ ದಾಳಿಯಾಗಿದೆ ಎಂದು ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಆರೋಪಿಸಿದ್ದಾರೆ.
ಸ್ವತಃ ಶ್ರೀಕಾಂತ್ ಶೆಟ್ಟಿ ಸಂಘಟನೆಯ ಇತರ ಪ್ರಚಾರಕರಾದ ಪ್ರವೀಣ್ ಯಕ್ಷಮಠ, ಕೆ ಟಿ ಉಲ್ಲಾಸ್, ಸುಕೃತ್ ಭಾರದ್ವಾಜ್, ಅರವಿಂದ ಕೋಟೇಶ್ವರ ಮೊದಲಾದ 20ಕ್ಕೂ ಹೆಚ್ಚು ಮಂದಿಯ ಫೇಸ್ಬುಕ್ ಪೇಜ್‌ಗಳನ್ನು ಡಿಲಿಟ್ ಮಾಡಲಾಗಿದೆ.
ನಾವು ಯಾರೂ ಸಾಮಾಜಿಕ ಸಾಮರಸ್ಯವನ್ನು ಕೆಡಿಸಿಲ್ಲ. ಗಲಭೆ ಸೃಷ್ಟಿಸಿಲ್ಲ. ಕೇವಲ ಹಿಂದೂಪರ ಹೋರಾಟ ಮಾಡುತ್ತಿರುವವರು.
ಆದ್ದರಿಂದ ಹಿಂದೂ ಚಳುವಳಿಯಲ್ಲಿ ಭಾಗವಹಿಸುತ್ತಿರುವವರನ್ನು ಹತ್ತಿಕ್ಕುವ ಹುನ್ನಾರ ಇದು ಎನ್ನುವುದು ಸಾಬೀತಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿರುವ ಕೆಲಸ ಇದು.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದೂವಾದಿ ಸಂಗಟನೆಳು ಮೋದಿ ಪರವಾಗಿ ಯಶಸ್ವಿ ಕೆಲಸ ಮಾಡಿದ್ದೆವು.
2024ರ ಚುನಾವಣೆಯಲ್ಲಿ ಮತ್ತೇ ಅದಾಗಬಾರದು ಎನ್ನುವ ಪೂರ್ವ ತಯಾರಿ ಇದಾಗಿದೆ ಎಂದವರು ಹೇಳಿದ್ದಾರೆ.
ಆದರೆ ಆರ್‌ಎಸ್‌ಎಸ್‌ನ ಭಾಗವಾಗಿರುವ ಹಿಂದು ಜಾಗರಣ ವೇದಿಕೆ ಸಾಮಾಜಿಕ ಜಾಲತಾಣಗಳನ್ನು ನಂಬಿಕೊಂಡಿರುವ ಫೇಸ್ಬುಕ್ ಉಳಿಯಲ್ಲ.
ಆನ್ ಗ್ರೌಂಡ್ ಜನರ ಮಧ್ಯೆ ಕೆಲಸ ಮಾಡವ ವೇದಿಕೆ.
ಈ ಫೇಸ್ಬುಕ್ ಖಾತೆಗಳ ನಿಷ್ಕ್ರೀಯ ಕೃತ್ಯವನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
DAKSHINA KANNADA
Mangaluru: ಅಯ್ಯೋ… ಸಂಚಾರಿ ಪೊಲೀಸರ ಕಷ್ಟಕ್ಕೆ ಸ್ಪಂದಿಸುವವರು ಯಾರು..?
ಮಂಗಳೂರು ನಗರದಲ್ಲಿ ಹೊಂಡಗುಂಡಿಗಳನ್ನು ಸರಿಪಡಿಸುವ ಗತಿ ಇಲ್ಲದ ಕಾರಣ, ಇದೀಗ ಸಂಚಾರಿ ಪೊಲೀಸರೇ ಹಾರೆ ಕೈಯಲ್ಲಿ ಹಿಡಿದುಕೊಂಡು ಬಿರುಬಿಸಿಲಿಗೆ ಹೊಂಡಗುಂಡಿಗಳನ್ನು ತುಂಬಿಸುತ್ತಿದ್ದಾರೆ.
ಮಂಗಳೂರು: ಮಂಗಳೂರು ನಗರದಲ್ಲಿ ಹೊಂಡಗುಂಡಿಗಳನ್ನು ಸರಿಪಡಿಸುವ ಗತಿ ಇಲ್ಲದ ಕಾರಣ, ಇದೀಗ ಸಂಚಾರಿ ಪೊಲೀಸರೇ ಹಾರೆ ಕೈಯಲ್ಲಿ ಹಿಡಿದುಕೊಂಡು ಬಿರುಬಿಸಿಲಿಗೆ ಹೊಂಡಗುಂಡಿಗಳನ್ನು ತುಂಬಿಸುತ್ತಿದ್ದಾರೆ.
ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಭ್ ಇನ್ಸ್ ಪೆಕ್ಟರ್ ಈಶ್ವರ ಸ್ವಾಮಿ , ಎಎಸ್‌ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿ ಹಿಡಿದು ಈ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ವೈರಲ್ ಆಗುತ್ತಿದೆ.
ಮಂಗಳೂರಿನ ಬಹುತೇಕ ರಸ್ತೆಗಳಲ್ಲಿ ಈಗ ಹೊಂಡಗಳೇ ಇವೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದ್ದರೂ ಆಟಕ್ಕುಂಟು…ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಂಡಗುಂಡಿಗಳೂ ಇವೆ. ಆದರೆ ಇದನ್ನು ಸರಿಪಡಿಸಬೇಕಾದ ಹೆದ್ದಾರಿ ಇಲಾಖೆ ಅದಕ್ಕೆ ಮುಂದಾಗುತ್ತಿಲ್ಲ.
ಅದಕ್ಕೆ ಹೆದ್ದಾರಿಯ ಗುಂಡಿಗಳನ್ನು ಕೂಡಾ ಸಂಚಾರಿ ಪೊಲೀಸರೇ ಹಾರೆ ಹಿಡಿದು ತುಂಬಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಹೇಳಿ…ಕೇಳಿ ನಗರದ ನಂತೂರು ವೃತ್ತ ಸಾವಿನ ಸರಮಾಲೆಗೆ ಕಾರಣವಾಗಿರುವ ಜಂಕ್ಷನ್. ಇಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಲವು ಮಾರ್ಪಾಟುಗಳನ್ನು ಮಾಡಿದ್ದಾರೆ.
ಸದ್ಯ ಇತ್ತೀಚೆಗೆ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಇಲ್ಲಿನ ಹೆದ್ದಾರಿಗಳ ಹೊಂಡ ತುಂಬಿ, ಸಾವಿಗೆ ನ್ಯಾಯ ಕೊಡಿ ಎಂದು ಸಾಮಾಜಿಕ ಕಾರ್ಯಕರ್ತರು ಕೈಯಲ್ಲಿ ಪ್ಲೇಕಾರ್ಡ್ ಹಿಡಿದು ಪ್ರತಿಭಟನೆಯನ್ನೂ ನಡೆಸಿದ್ದರು.
ಇದೀಗ ನಂತೂರಿನ ಹೊಂಡಗುಂಡಿಗಳನ್ನು ಸಂಚಾರಿ ಪೊಲೀಸರೇ ತುಂಬಿಸುತ್ತಿರುವುದು ಪಾಪ ಅನ್ನಿಸಿದರೂ ಅವರ ಕಾರ್ಯಕ್ಕೆ ವಾಹನ ಸವಾರರು, ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಿರುಬಿಸಿಲಿಗೂ ಅವರು ಸಿಮೆಂಟ್, ಜಲ್ಲಿಕಲ್ಲು ಮಿಕ್ಸರ್ ಹಾಕಿ ರಸ್ತೆ ಸರಿಪಡಿಸುತ್ತಿರುವುದು ನೋಡಿದರೆ ಅಯ್ಯೋ ಅನ್ನಿಸುತ್ತಿದೆ.
ಇನ್ನೊಂದೆಡೆ ರಸ್ತೆ ಬ್ಲಾಕ್ ಆಗಿ ಜನ ಹಿಡಿಶಾಪ ಹಾಕುತ್ತಿದ್ದಾರೆ.
- FILM6 days ago
‘ಜವಾನ್’ ಶಾಕಿಂಗ್ ಕಲೆಕ್ಷನ್ – ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ 700 ಕೋಟಿ..!
- LATEST NEWS6 days ago
“ಕಚೇರಿ ವೇಳೆಯಲ್ಲಿ ಗಂಟೆ ಗಟ್ಟಲೆ ಕಾಫಿ, ಟೀಗೆ ಹೋಗುವ ಸರ್ಕಾರಿ ನೌಕರರ ವಿರುದ್ದ ಕಠಿಣ ಕ್ರಮ”
- FILM6 days ago
ಸೈಮಾ 2023-ಅತೀ ಹೆಚ್ಚು ಪ್ರಶಸ್ತಿ ಗೆದ್ದು ಬೀಗಿದ ಕನ್ನಡದ “ಕಾಂತಾರ”
- bangalore6 days ago
ಮುಂದಿನ ವಾರವೇ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್- ರಿಲೀಸ್ ಡೇಟ್?
ARUN
07/12/2022 at 10:13 AM
FAILUEAR OF LAW AND ORDER , SASHIKUMAR SIR U HAVE FAILED IN MANGALORE TO MAINTAIN THE LAW AND ORDER IN MANAGALORE ANY ONE CAN HIN ANY BODY IN MANGALORE