Connect with us

    DAKSHINA KANNADA

    ಪ್ರೀತಿ ಕೊಲೆಯಲ್ಲಿ ಅಂತ್ಯ : ಬೆಂಗಳೂರಲ್ಲಿ ಕಿಡ್ನ್ಯಾಪ್, ಮರ್ಡರ್- ಚಾರ್ಮಾಡಿಯಲ್ಲಿ ಹೆಣ ಎಸೆದರು..!

    Published

    on

    ಪ್ರೀತಿ ಪ್ರೇಮದ ವಿಚಾರದಲ್ಲಿ ಯುವಕನೊಬ್ಬನನ್ನು ಅಪಹರಣ ಮಾಡಿದ ತಂಡವೊಂದು ಯುವಕನನ್ನು ಕೊಲೆ ಮಾಡಿ ಬಳಿಕ ಶವವನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದು ಹೋಗಿದೆ.

    ಚಿಕ್ಕಮಗಳೂರು : ಪ್ರೀತಿ ಪ್ರೇಮದ ವಿಚಾರದಲ್ಲಿ ಯುವಕನೊಬ್ಬನನ್ನು ಅಪಹರಣ ಮಾಡಿದ ತಂಡವೊಂದು ಯುವಕನನ್ನು ಕೊಲೆ ಮಾಡಿ ಬಳಿಕ ಶವವನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದು ಹೋಗಿದೆ.

    ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಇದೀಗ ಚಾರ್ಮಾಡಿ ಘಾಟ್‌ನಲ್ಲಿ ಶವ ಮೇಲಕ್ಕೆತ್ತಿದ್ದಾರೆ.

    ಬೆಂಗಳೂರು ಯಶವಂತಪುರ ಠಾಣಾ ವ್ಯಾಪ್ತಿಯ ಮತ್ತಿಕೆರೆ ನಿವಾಸಿ ಗೋವಿಂದರಾಜು (19) ಕೊಲೆಯಾದ ಯುವಕನಾಗಿದ್ದಾನೆ.

    ಕೊಲೆಯಾದ ಗೋವಿಂದರಾಜು ಕುಟುಂಬದಲ್ಲಿಯೇ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದ,

    ಇದನ್ನು ಸಹಿಸದ ಕುಟುಂಬದ ಅನಿಲ್ ಕುಮಾರ್, ಭರತ್ ಮತ್ತಿತರ ಇಬ್ಬರು ಆರೋಪಿಗಳು ಕಳೆದ ಸೋಮವಾರ ಮತ್ತಿಕೆರೆಯಿಂದ ಗೋವಿಂದರಾಜನನ್ನು ಅಪಹರಿಸಿ ರಾಜ್ ಗೋಪಾಲ್ ನಗರದ ಅಂದರಳ್ಳಿಯಲ್ಲಿ ಕೊಲೆ ಮಾಡಿ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಮಲಯ ಮಾರುತದ ಬಳಿ ವಾಹನದಲ್ಲಿ ಶವ ತಂದು ಬಿಸಾಕಿ ಪರಾರಿಯಾಗಿದ್ದರು.

    ಕುಟುಂಬದವರು ಗೋವಿಂದರಾಜು ಕಾಣೆಯಾಗಿರುವ ಬಗ್ಗೆ ಯಶವಂತಪುರ ಠಾಣೆಗೆ ದೂರು ನೀಡಿದ್ದರು.

    ಕೊಲೆಯಾದ ಗೋವಿಂದರಾಜು

    ಕುಟುಂಬದವರಿಗೆ ಅನಿಲ್ ಕುಮಾರ್ ಮೇಲೆ ಅನುಮಾನವಿದ್ದರಿಂದ ಪೊಲೀಸರು ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭರತ್ ಮತ್ತಿತರ ಇಬ್ಬರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದು  ಆರೋಪಿಗಳನ್ನು ಚಾರ್ಮಾಡಿ ಘಾಟಿಗೆ ಕರೆ ತಂದು ಯಶವಂತಪುರ ಠಾಣೆಯ ಸಬ್ ಇನ್ ಸ್ಪೆಕ್ಟರ್ ಮಹೇಶ್ ಅವರ ತಂಡ ಸ್ಥಳೀಯ ಸಮಾಜ ಸೇವಕರ ಜತೆ ಸೇರಿ ಮೃತದೇಹವನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಗೆ ಸೇರುವ ಕೊಟ್ಟಿಗೆಹಾರ ಚೆಕ್ ಪೋಸ್ಟ್, ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೇರುವ ಚಾರ್ಮಾಡಿ ಯಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ ಸರಿಯಾಗಿ ತಪಾಸಣೆ ಮಾಡದ ಕಾರಣ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ, ಇಲಾಖೆ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ

    DAKSHINA KANNADA

    ಮಂಗಳೂರು – ಕಟೀಲಮ್ಮನ ಮಡಿಲಲ್ಲಿ ಹಲವಾರು ಬಣ್ಣದ ವೇಷಗಳ ವೈಭವ

    Published

    on

    ಮಂಗಳೂರು: ನಂದಿನಿ ನದಿಯ ಮಧ್ಯದಲ್ಲಿ ರಾರಾಜಿಸುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಯುವ ಶರನ್ನವರಾತ್ರಿ ಉತ್ಸವದ ವೈಭವ ಒಂದು ಕಡೆಯಾದರೆ ಹುಲಿ, ಸಿಂಹ ಸೇರಿದಂತೆ ಸಾವಿರಾರು ಬಣ್ಣದ ವೇಷಗಳು ಸೇವೆ ಸಲ್ಲಿಸುವ ಸೊಬಗು ಇನ್ನೊಂದು ಕಡೆ.


    ಹಲವಾರು ತಂಡಗಳು ಹುಲಿ ವೇಷ ಹಾಕಿ ತಿರುಗಾಟ ನಡೆಸಿ ಅಂತಿಮವಾಗಿ ಕಟೀಲಿಗೆ ಬಂದು ದೇವಾಲಯದ ಆವರಣದಲ್ಲಿ ನರ್ತಿಸಿ ವೇಷ ಕಳಚಿ ನಂದಿನಿ ನೀರಿನಲ್ಲಿ ಮಿಂದು ಹೋಗುವುದು ರೂಢಿ. ವೇಷ ಹಾಕುವಾಗಲೇ ಕಟೀಲಿನಲ್ಲಿ ವೇಷ ಬಿಚ್ಚುತ್ತೇವೆ ಎಂದು ಹರಕೆ ಹೊತ್ತವರು ಒಂದೆಡೆಯಾದರೆ, ಕಟೀಲು ಕ್ಷೇತ್ರದಲ್ಲೇ ಸೇವೆ ಸಲ್ಲಿಸಿ ಮರಳಿ ಅಲ್ಲೇ ವೇಷ ಬಿಚ್ಚುತ್ತೇವೆ ಎನ್ನುವವರು ಇನ್ನೊಂದೆಡೆ ಇದ್ದಾರೆ. ಇದು ತಲತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.


    ಶರನ್ನವರಾತ್ರಿ ಸಮಯದಲ್ಲಿ ಕಟೀಲು ದೇವಾಲಯದ ಆವರಣದಲ್ಲಿ ನಿತ್ಯವೂ ಹತ್ತಾರು ತಂಡಗಳ ಹುಲಿ ವೇಷ ನರ್ತನ ಇರುತ್ತದೆ. ಒಟ್ಟಾರೆಯಾಗಿ 2000 ಕ್ಕೂ ಅಧಿಕ ವೇಷಗಳು , 70 ರಿಂದ 80 ತಂಡಗಳು ಕಟೀಲು ಸನ್ನಿಧಿಗೆ ಬಂದು ಸೇವೆ ಸಲ್ಲಿಸುತ್ತವೆ ಎಂದು ಹೇಳಬಹುದು.

    Continue Reading

    DAKSHINA KANNADA

    ಮುಂದಿನ ಐದು ದಿನ ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    Published

    on

    ಬೆಂಗಳೂರು: ಈ ಬಾರಿಯ ದಸರಾ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳಲ್ಲಿ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.

    ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಯಲ್ಲಿ ನೀರು ರಭಸದಿಂದ ಹರಿದು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

    Continue Reading

    DAKSHINA KANNADA

    ಮಂಗಳೂರು – ರೌಡಿಗಳಂತೆ ಫೈಟ್ ಮಾಡಿಕೊಂಡ ಬಸ್ ಸಿಬ್ಬಂದಿ; ವಿಡಿಯೋ ವೈರಲ್

    Published

    on

    ಮಂಗಳೂರು: ವಿಟ್ಲ-ಮಂಗಳೂರು ಹಾಗೂ ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸಿನ ಸಿಬ್ಬಂದಿ ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.

    ಒಂದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ ನೆಪದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪ್ರಯಾಣಿಕರು ತಿಳಿಸಿದ್ದಾರೆ.
    ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್‌ಗಳ ಸಿಬ್ಬಂದಿಯ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬನ್ ಸಿಬ್ಬಂದಿಗಳು ಅನಾಗರಿಕರಾಗಿದ್ದಾರೆಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
    ಬಸ್ ವ್ಯವಸ್ಥೆ ಸಾರ್ವಜನಿಕ ಸೇವೆಯೆಂಬುದು ಇಂದಿನವರಿಗೆ ತಿಳಿದಿಲ್ಲವಾಗಿದೆ. ತಮ್ಮದೇ ಸಾಮ್ರಾಜ್ಯ, ತಾವು ಮಾಡಿದ್ದೇ ಆಟ, ನಾವು ನಡೆದಿದ್ದೇ ದಾರಿ ಎಂಬುದನ್ನು ತಿಳಿದಿರುವ ಇಂತಹ ಸಿಬ್ಬಂದಿಯ ಸಮಾಜ ಕಂಟಕ ವರ್ತನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.


    ‘ಇಂತಹ ಅನಾಗರಿಕ ವರ್ತನೆಯಿಂದ ಮಹಿಳೆಯರು , ಪುಟ್ಟ ಮಕ್ಕಳು ಬಸ್ಸಿನಲ್ಲಿ ಹೋಗಲು ಹಿಂದೇಟು ಹಾಕುವಂತಾಗಿದೆ. ಅಲ್ಲದೆ ಬಸ್ಸಿನ ಸಿಬ್ಬಂದಿಗಳನ್ನು ಅರ್ಧದಾರಿಯಲ್ಲೇ ಇಳಿಸಿ ಅವರನ್ನು ಅತಂತ್ರರನ್ನಾಗಿಸುವ ಕ್ರಮ ಸರಿಯಲ್ಲ. ಬೇರೆ ಬಸ್ಸು ಇಲ್ಲದೇ ಅವರು ಕಂಗೆಡುವ ಪರಿಸ್ಥಿತಿ ಕೂಡಾ ಇರುವ ಕಾರಣ ಇಂತಹ ಬಸ್ಸು ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    ಈ ಕುರಿತ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶಿಸುತ್ತಿದ್ದಾರೆ.

     

    ವಿಡಿಯೋ ನೋಡಿ :

     

     

    Continue Reading

    LATEST NEWS

    Trending