Friday, August 12, 2022

ಮಂಗಳೂರು: ‘ಲವ್‌’ ಕಿರಿಕಿರಿ ತಾಳಲಾರದೆ ಸಾಯಲು ಮೊಬೈಲ್‌ ಟವರ್‌ ಏರಿದ ಭಗ್ನಪ್ರೇಮಿ

ಮಂಗಳೂರು: ಮನಸಾರೆ ಪ್ರೀತಿಸುತ್ತಿದ್ದ ಹುಡುಗಿಯೇ ತನ್ನ ಮೇಲೆಯೇ ಸಂಶಯಪಟ್ಟು ಪೊಲೀಸ್‌ ಕಂಪ್ಲೈಂಟ್‌ ಕೊಡಿಸಿ ಎಲ್ಲರ ಮುಂದೆ ಮರ್ಯಾದಿ ತೆಗೆದಿದ್ದಾಳೆಂದು ಆರೋಪಿಸಿ ಜಿಗುಪ್ಸೆಗೊಂಡು ಟವರ್‌ ಏರಿ ಅಲ್ಲಿಂದ ಹಾರಿ ಸಾಯಲು ಯತ್ನಿಸಿದ ಯುವಕ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಮನವೊಲಿಕೆಯಿಂದ ಕೆಳಗಿಳಿದ ಆತಂಕಕಾರಿ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್‌ ಬಳಿ ನಡೆದಿದೆ.


ಫರಂಗಿಪೇಟೆಯ ಕೊಡ್ಮಾಣ್‌ನ ಸುಧೀರ್‌ (32) ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ, ದಿನಕಳೆದಂತೆ ಈಕೆಯ ಮೇಲಿನ ಒಲವು ಕಮ್ಮಿಯಾಗಿ ಮತ್ತೊಬ್ಬಳ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ ಎಂದು ಆತನ ಮೊದಲ ಪ್ರೇಯಸಿ ಖಿನ್ನತೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದಳು.

ತನ್ನ ಅನಾರೋಗ್ಯಕ್ಕೆ ಪ್ರೀತಿಸುತ್ತಿದ್ದ ಹುಡುಗನೇ ಕಾರಣ ಎಂದು ಮನೆಯವರ ಬಳಿ ದೂರಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಮನೆಯವರು ಸುಧೀರ್‌ ವಿರುದ್ದ ಬಂಟ್ವಾಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.


ಇದರಿಂದ ತನ್ನ ಊರಿನಲ್ಲಿ, ಫ್ರೆಂಡ್ಸ್‌ ಮುಂದೆ ತನ್ನ ಮಾನ ಮರ್ಯಾದೆ ಕಳೆದ್ಳು ಎಂದು ಮಾನಸಿಕವಾಗಿ ನೊಂದು ಸಾಯಬೇಕೆಂದುಕೊಂಡಾಗ ಆತನಿಗೆ ಕಾಣಿಸಿದ್ದು ಮೊಬೈಲ್‌ ಟವರ್‌,

ಅಲ್ಲಿಂದ ಬಿದ್ದು ಸತ್ತರೆ ತನಗೆ ಮುಕ್ತಿ ಸಿಗುತ್ತದೆ ಅಂದುಕೊಂಡ ಸುಧೀರ್‌ ಇಂದು ಬೆಳ್ಳಂ ಬೆಳಗ್ಗೆ ತನ್ನ ಬ್ಯಾಗ್‌ ಜೊತೆ ಒಂದು ಬಾಟ್ಲಿ ನೀರಿನ ಜೊತೆ ಅಡ್ಯಾರ್‌ನಲ್ಲಿರುವ ಟವರ್‌ ಮೇಲೇರಿದ್ದಾನೆ. ಮೇಲೇರಿದ ಈತ ತನ್ನ ಹುಡುಗಿಗೆ ತಾನು ಸಾಯ್ತನೆಂದು ಪೋನ್‌ ಮಾಡಿ ಮಾತನಾಡುತ್ತಿದ್ದ.

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ ಪೊಲೀಸರು ಟವರ್‌ ಬಳಿ ಬಂದಿದ್ದಾರೆ. ಕೆಳಗಿನಿಂದಲೇ ಸುಧೀರ್‌ನನ್ನು ಮನವೊಲಿಸಿದ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಮಾತಿಗೆ ಹೆದರಿದ ಯುವಕ ಟವರ್‌ನಿಂದ ಕೆಳಗಿಳಿದಿದ್ದ,

ಘಟನಾ ಸ್ಥಳಕ್ಕೆ ಆತನ ಪ್ರೇಯಸಿ ಕೂಡಾ ಬಂದಿದ್ದಳು. ಸದ್ಯ ಯುವಕನನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿಗಳು 5 ದಿನ ಪೊಲೀಸ್ ಕಸ್ಟಡಿಗೆ

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಬಂಧಿತರಾದ ಮೂವರು ಮುಖ್ಯ ಆರೋಪಿಗಳನ್ನು ಸುಳ್ಯ ನ್ಯಾಯಾಲಯ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.ಬಂಧಿತ ಆರೋಪಿಗಳಾದ ಸುಳ್ಯದ ಶಿಹಾಬುದ್ದೀನ್ (33), ರಿಯಾಝ್ ಅಂಕತ್ತಡ್ಕ (27),...

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹಿಟ್‌ ಆ್ಯಂಡ್‌ ರನ್‌: ಓರ್ವ ಸ್ಪಾಟ್‌ ಡೆತ್‌, ಮತ್ತೋರ್ವನಿಗೆ ಗಾಯ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಬದಿ ಹುಲ್ಲು ಕಟಾವು ಮಾಡುತ್ತಿದ್ದ ಕಾರ್ಮಿಕರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ಘಟನೆ ಮಂಗಳೂರು ನಗರದ ಜೆಪ್ಪಿನಮೊಗರುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು...

ಶರತ್ ಮಡಿವಾಳ ಹತ್ಯೆಗೆ 5 ವರ್ಷ : ಇನ್ನೂ ಸಿಕ್ಕಿಲ್ಲ ಓರ್ವ ಆರೋಪಿ- ಅರೆಸ್ಟಾದವರೆಲ್ಲರೂ ರಿಲೀಸ್..!

ವಿಶೇಷ ವರದಿಮಂಗಳೂರು: ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಹಾಗೂ ರಾಜ್ಯ ರಾಜಕೀಯ ಇತಿಹಾಸದಲ್ಲಿ ಹಲವರನ್ನು ಮನೆಗೆ ಕಳುಹಿಸಿ ಮತ್ತೆ ಕೆಲವರನ್ನು ವಿಧಾನಸಭೆಯ ಮೊಗಸಾಲೆಗೆ ಕಳುಹಿಸಿದ್ದ ಬಂಟ್ವಾಳ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ಐದು...