Monday, July 4, 2022

ವಿಟ್ಲ: ರಸ್ತೆಯಲ್ಲಿಯೇ ಕುಸಿದು ನಿಂತ ಘನ ಭಾರದ ಬೃಹತ್ ಲಾರಿ-ಬಸ್ಸು ಸಂಚಾರ ಅಸ್ತವ್ಯಸ್ತ

ವಿಟ್ಲ: ಘನ ಭಾರದ ಕೆಂಪು ಕಲ್ಲನ್ನು ಹೊತ್ತು ಒಯ್ಯುತ್ತಿದ್ದ ಬೃಹತ್ ಗಾತ್ರದ ಲಾರಿಯ ಎರಡು ಚಕ್ರಗಳು ಒಡೆದು ರಸ್ತೆಯ ಮಧ್ಯೆಯೇ ಕುಸಿದು ನಿಂತು ವಾಹನಗಳಿಗೆ ಸಂಚರಿಸಲು ಸ್ಥಳಾವಕಾಶವಿರದೇ ಸಾಲುಗಟ್ಟಿ ನಿಂತು ಪರದಾಡ ಬೇಕಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಬಂಟ್ವಾಳದ ವಿಟ್ಲ ಸಮೀಪದ ಕನ್ಯಾನ ಎಂಬಲ್ಲಿ ನಡೆದಿದೆ.


ಕೆಂಪು ಕಲ್ಲು ಹೊತ್ತು ಒಯ್ಯುತ್ತಿದ್ದ ಲಾರಿಯ ಎರಡು ಚಕ್ರಗಳು ಒಡೆದ ಹೋದ ಕಾರಣದಿಂದಾಗಿ ವಿಟ್ಲ ಕನ್ಯಾನ ಮಾರ್ಗವಾಗಿ ಕೇರಳದ ಉಪ್ಪಳ, ಮಂಜೇಶ್ವರ ಇನ್ನಿತರ ಭಾಗಗಳಿಗೆ ಸಂಚರಿಸುವ ಪ್ರಯಾಣಿಕರು, ಸವಾರರು ಮನೆ ತಲುಪಲು ಪ್ರಯಾಸ ಪಡಬೇಕಾಯಿತು.

ಕರೋಪಾಡಿ ಪಾದೆಕಲ್ಲು ಎಂಬಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಅಂತರ್‌ರಾಜ್ಯಗಳಿಗೆ ಸಾಗಾಟವಾಗುತ್ತಿದೆ.
ಸಂಬಂಧಪಟ್ಟ ಇಲಾಖೆಗಳು ಜಾಣತನದ ಕುರುಡುತನದಿಂದ ವರ್ತಿಸುತ್ತಿದೆ ಎನ್ನುವ ಆರೋಪವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಯುವ ಕೃಷಿಕ ಜಾರಿ ಬಿದ್ದು ಕೊನೆಯುಸಿರು

ಉಡುಪಿ: ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಯುವ ಕೃಷಿಕನೊಬ್ಬ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಬೈರಂಪಳ್ಳಿಯ ದೂಪದಕಟ್ಟೆ ನಿನ್ನೆ ನಡೆದಿದೆ.ಮೃತ ಯುವಕನನ್ನು ಉಮೇಶ್‌ ಕುಲಾಲ್‌ (35) ಎಂದು...

“ಪೀ ಬನ್ನಗ ಬಿತ್ತಿಲ್‌ ನಾಡುನ ಪರಿಸ್ಥಿತಿ” ಮಳೆ ಅವಾಂತರದ ಬಗ್ಗೆ ಮಾಜಿ ಶಾಸಕ ಲೋಬೊ ವ್ಯಂಗ್ಯ

ಮಂಗಳೂರು: ಕಳೆದ ಒಂದು ವಾರದಿಂದ ಮಂಗಳೂರು ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ನಗರದಾದ್ಯಂತ ಅವ್ಯವಸ್ಥೆ ಉಂಟಾಗಿದೆ. ಮಳೆ ಪ್ರಾರಂಭವಾಗುವ ಮೊದಲು ಪೂರ್ವ ತಯಾರಿ ಮಾಡದಿದ್ದರೆ ಇಂದಿನ ಅವಾಂತರಕ್ಕೆ ಕಾರಣವಾಗುತ್ತದೆ.ಇದು ಪೀ ಬನ್ನಗ ಬಿತ್ತಿಲ್‌...

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲು-ಓರ್ವನ ರಕ್ಷಣೆ

ಬಂಟ್ವಾಳ: ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದರೆ, ಮತ್ತೋರ್ವ ಬಾಲಕ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಳ್ಳಾಲ ತಾಲೂಕಿನ ಸಜಿಪಪಡು...