Home ಕರ್ನಾಟಕ ವಾರ್ತೆ ಲಾಕ್ ಡೌನ್ ನಲ್ಲಿ ಅಡ್ಮಿಶನ್ ಗೆ ಪೋಷಕರಿಂದ ಶುಲ್ಕ ಸಂಗ್ರಹ, 163 ಶಾಲೆಗೆ ಸರ್ಕಾರದಿಂದ ನೋಟಿಸ್

ಲಾಕ್ ಡೌನ್ ನಲ್ಲಿ ಅಡ್ಮಿಶನ್ ಗೆ ಪೋಷಕರಿಂದ ಶುಲ್ಕ ಸಂಗ್ರಹ, 163 ಶಾಲೆಗೆ ಸರ್ಕಾರದಿಂದ ನೋಟಿಸ್

ಲಾಕ್‌ ಡೌನ್‌ ನಲ್ಲಿ ಅಡ್ಮಿಶನ್‌ ಗೆ ಪೋಷಕರಿಂದ ಶುಲ್ಕ ಸಂಗ್ರಹ, 163 ಶಾಲೆಗೆ ಸರ್ಕಾರದಿಂದ ನೋಟಿಸ್‌

ಬೆಂಗಳೂರು: ಲಾಕ್‌ ಡೌನ್‌ ಸಮಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಡೆಸದಂತೆ ಹಾಗೂ ಪೋಷಕರಿಂದ ಶುಲ್ಕ ಸಂಗ್ರಹಿಸದಂತೆ ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿದ 163 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್‌ ಜಾರಿಗೊಳಿಸಿದೆ.

10 ದಿನಗಳಿಂದ ನಗರದ ವಿವಿಧ ಶಾಲೆಗಳಿಗೆ ನೋಟಿಸ್‌ ನೀಡಲಾಗಿದೆ.

ಬೆಂ.ದಕ್ಷಿಣ ಶೈಕ್ಷಣಿಕ ಜಿಲ್ಲೆಯಿಂದ 710 ದೂರುಗಳು ದಾಖಲಾಗಿದ್ದು, ಈ ಪೈಕಿ 116 ಶಾಲೆಗಳಿಗೆ ನೋಟಿಸ್‌ ನೀಡಲಾಗಿದೆ.

ಬೆಂ. ಉತ್ತರದಿಂದ 113 ದೂರುಗಳು ದಾಖಲಾಗಿದ್ದು, ಈ ಪೈಕಿ 45 ಶಾಲೆಗಳಿಗೆ ಹಾಗೂ ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ 6 ದೂರುಗಳು ದಾಖಲಾಗಿದ್ದು,

ಎರಡು ಶಾಲೆಗಳಿಗೆ ನೋಟಿಸ್‌ ನೀಡಲಾಗಿದೆ. ಒಟ್ಟಾರೆ 829 ದೂರುಗಳ ಪೈಕಿ 163 ಶಾಲೆಗಳಿಗೆ ದೂರು ನೀಡಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಇಲ್ಲಿಯವರೆಗೂ 370 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಶಾಲಾ ಆಡಳಿತ ಮಂಡಳಿಗಳು ಶುಲ್ಕ ವಸೂಲಿ, ಶುಲ್ಕ ಹೆಚ್ಚಳ ಮತ್ತು ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಡೆಯುವ ಪ್ರಕರಣಗಳು ಕಂಡುಬಂದಲ್ಲಿ,

ದೂರು ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ದೂರವಾಣಿ ಸಂಖ್ಯೆ- 080 2490025 ಅಥವಾ ಉಚಿತ ಕರೆ 1800 425 11035 ಕರೆ ಮಾಡಿ ದೂರು ನೀಡುವ ಅವಕಾಶ ಕಲ್ಪಿಸಿತ್ತು.

ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಮೂಲಕ ನೋಟಿಸ್‌ ನೀಡಲಾಗಿದ್ದು, ಲಿಖಿತವಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.

ಶಾಲಾ ಆಡಳಿತ ಮಂಡಳಿಗಳು ಪ್ರತಿಕ್ರಿಯಿಸಿದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ಶಾಲಾ ಮಾನ್ಯತೆಯನ್ನು ಕೂಡ ರದ್ದುಗೊಳಿಸುವ ಅಧಿಕಾರ ನೀಡಲಾಗಿದೆ ಎಂದು ತಿಳಿದುಬಂದಿದೆ.

- Advertisment -

RECENT NEWS

ದೇವರಗುಡ್ಡದಲ್ಲಿ ಯುವಕನ ಹತ್ಯೆ ಪ್ರಕರಣ ಹದಿಹರೆಯದ ಐವರು ಆರೋಪಿಗಳ ಬಂಧನ

ದೇವರಗುಡ್ಡದಲ್ಲಿ ಯುವಕನ ಹತ್ಯೆ ಪ್ರಕರಣ ಹದಿಹರೆಯದ ಐವರು ಆರೋಪಿಗಳ ಬಂಧನ ಮಂಗಳೂರು :  ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರು ದೇವರ ಗುಡ್ಡೆ ಬಳಿ ನಡೆದ ಎಕ್ಕಾರು ನಿವಾಸಿ ಕೀರ್ತನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 25ರಿಂದ ಎಸ್‌ ಎಸ್ ಎಲ್‌ ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಜೂನ್ 25ರಿಂದ ಎಸ್‌ ಎಸ್ ಎಲ್‌ ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ :ಜೂನ್ 25ರಂದು ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಿದ್ಧತಾ ಪೂರ್ವಬಾವಿ ಸಭೆಯು ಈ ದಿನ...

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು 

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು  ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಂದಾಪುರದ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಹಾಗೂ ಕೋಟ ಸಮುದಾಯ ಆಸ್ಪತ್ರೆಯನ್ನು ತಾಲೂಕು...

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ ಉಳ್ಳಾಲ: ಕಳೆದೆರಡು ದಿನಗಳಿಂದ ಮುಂಗಾರು ಮಳೆ ತೀವ್ರವಾಗಿ ಕರಾವಳಿ ತೀರದಲ್ಲಿ ಸುರಿಯತೊಡಗಿದ್ದು, ಕಡಲ ತೀರದಲ್ಲೂ ಕಡಲ ಅಬ್ಬರ ಜೋರಾಗಿದೆ. ಪ್ರತೀ ವರ್ಷ ಕಡಲಕೊರೆತ ತೀವ್ರವಾಗಿರುವ ಮಂಗಳೂರು ಕ್ಷೇತ್ರದ ಉಳ್ಳಾಲ...