Connect with us

LATEST NEWS

 ಲಾಕ್ ಡೌನ್ ಅನಿವಾರ್ಯ ಎಂದ ಸಚಿವ ಸುಧಾಕರ್.!

Published

on

ಬೆಂಗಳೂರು: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ನ ಅಟ್ಟಹಾಸ ಮೇರೆ ಮೀರುತ್ತಿದೆ. ಇದರಿಂದ ಬಿಗಿ ಬಂದೋಬಸ್ತ್ ಬೇಕೇ ಬೇಕು ಎನ್ನುವ ಮೂಲಕ ಪರೋಕ್ಷವಾಗಿ ಲಾಕ್ ಡೌನ್ ಸುಳಿವು ನೀಡಿದ್ದಾರೆ.ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ. ಆಸ್ಪತ್ರೆಗಳಲ್ಲಿ ಐಸಿಯುಗಳ ಸಾಮರ್ಥ್ಯ ಮೀರಿ ರೋಗಿಗಳು ಇರೋದ್ರಿಂದ ಸಮಸ್ಯೆಯಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿ ಕೆಲ ಕಾಲ ಮುಂಜಾಗ್ರತೆ ಅಗತ್ಯ ಎನ್ನಲಾಗಿದೆ.

ಈ ಬಗ್ಗೆ ಮುಖ್ಯಮಂತ್ರಿ ಜೊತೆ  ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಲಾಕ್ ಡೌನ್ ನಡೆಸುವ ಬಗ್ಗೆ ಚರ್ಚೆ ನಡೆಸುವುದಾಗಿ  ಹೇಳಿದ್ದಾರೆ.

ರಾಜ್ಯದಲ್ಲಿ 200ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಕೇಂದ್ರದಿಂದ 300 ಮೆಟ್ರಿಕ್ ಟನ್ ಅಲಾಟ್ ಆಗಿದೆ. ಇನ್ನೂ ಹೆಚ್ಚು ಬೇಕು ಎಂದು ಕೇಳಲಾಗಿದೆ.

ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ರೋಗಿಗಳಿಗೆ ಆಕ್ಸಿಜನ್ ಅಗತ್ಯವಾಗಿದ್ದು, ಎಲ್ಲೂ ಆಕ್ಸಿಜನ್ ಸಿಗುತ್ತಿಲ್ಲ ಎಂಬ ಆರೋಪವನ್ನು ಸಚಿವ ಸುಧಾಕರ್  ತಳ್ಳಿ ಹಾಕಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

“ಸೆಕ್ಸ್‌” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್‌..!

Published

on

ಮಂಗಳೂರು ( ಪಶ್ಚಿಮ ಬಂಗಾಳ ) : ಮಾಜಿ  ಸಂಸದೆ ಮಹುವಾ ಮೋಯಿತ್ರಾ ( Mahua Moitra ) ವಿವಾದದ ಕಾರಣದಿಂದ ಸಂಸತ್‌ನಿಂದ ಉಚ್ಚಾಟಿತರಾಗಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದರು ಎಂಬ ಆರೋಪ ಅವರ ಮೇಲಿತ್ತು. ಈಗ ಅವರು ಮತ್ತೊಂದು ವಿವಾದಕ್ಕೆ ಸಿಲುಕಿದ್ದು ಅವರ ಹೇಳಿಕೆ ಬಾರಿ ವೈರಲ್ ಆಗಿದೆ. ಕೃಷ್ಣ ನಗರ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿದಿದ್ದಾರೆ. ಭರ್ಜರಿ ಪ್ರಚಾರ ನಡೆಸುತ್ತಿರುವ ಅವರನ್ನ ಪತ್ರಕರ್ತರೊಬ್ಬರು ಸಂದರ್ಶನ ನಡೆಸಿದ್ದಾರೆ. ಈ ವೇಳೆ ಪತ್ರಕರ್ತ ನಿಮ್ಮ ಸಾಮಾರ್ಥ್ಯದ ರಹಸ್ಯ ಏನು ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೊಯಿತ್ರಾ ಅವರು “ಸೆಕ್ಸ್‌” ಎಂದು ಹೇಳಿರುವ ವಿಡಿಯೋವನ್ನು ಮೋದಿ ಕಾ ಪರಿವಾರ ವೈರಲ್ ಮಾಡಿದೆ. ವಿಡಿಯೊ ವೈರಲ್‌ ಆಗುತ್ತಲೇ ಜನ ಟೀಕೆ ವ್ಯಕ್ತಪಡಿಸಿದ್ದಾರೆ. ಒಬ್ಬ ಸಂಸದೆಯಾಗಿ ಬಹಿರಂಗವಾಗಿ ಹೀಗೆ ಹೇಳುವುದು ತಪ್ಪು ಎಂದು ಖಂಡಿಸಿದ್ದಾರೆ.

ನ್ಯೂಸ್‌ ದಿ ಟ್ರುತ್‌ ಎಂಬ ಮಾದ್ಯಮ ಮಾಡಿದ ಸಂದರ್ಶನ

ಸ್ಪಷ್ಟನೆ ನೀಡಿದ ಸಂದರ್ಶನ ನೀಡಿದ ವರದಿಗಾರ..!

“ಮಹುವಾ ಮೊಯಿತ್ರಾ ಅವರನ್ನು ಸಂದರ್ಶನ ಮಾಡಿದ್ದು ನಾನೇ. ನಿಮ್ಮ ಸಾಮರ್ಥ್ಯದ ಗುಟ್ಟೇನು ಎಂಬುದಾಗಿ ಕೇಳಿದೆ. ಅದಕ್ಕೆ ಅವರು, ಎಗ್ಸ್‌ (ಮೊಟ್ಟೆಗಳು) ಎಂಬುದಾಗಿ ಎರಡು ಬಾರಿ ಉತ್ತರಿಸಿದರು. ಆದರೆ, ಭಕ್ತ ಮಂಡಳಿಯು ಎಗ್ಸ್‌ ಎಂಬುದನ್ನು ಸೆಕ್ಸ್‌ ಎಂಬುದಾಗಿ ತಿರುಚಿದೆ” ಎಂಬುದಾಗಿ ನ್ಯೂಸ್‌ ದಿ ಟ್ರುತ್‌ ಎಂಬ ಮಾಧ್ಯಮ ಸಂಸ್ಥೆ ವರದಿಗಾರ ತಮಲ್‌ ಸಾಹ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ವರದಿಗಾರ ಸ್ಪಷ್ಟನೆ ನೀಡುವ ಹೊತ್ತಿಗೆ ವಿಡಿಯೊ ಭಾರಿ ವೈರಲ್‌ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.

49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು 2 ಕೋಟಿ ರೂ. ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದರು.  ಈ ಹಿನ್ನೆಲೆಯಲ್ಲಿ ಅವರನ್ನು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.

 

Continue Reading

LATEST NEWS

ಸಾಕು ಪ್ರಾಣಿಗಳ ಕೃತ್ಯಕ್ಕೆ ಮಾಲೀಕರೇ ಜವಾಬ್ದಾರಿ : ಕರ್ನಾಟಕ ಹೈಕೋರ್ಟ್

Published

on

ಬೆಂಗಳೂರು : ಅಪಾಯಕಾರಿ ತಳಿಯ ಶ್ವಾನಗಳು ಮಾತ್ರ ಜನರಿಗೆ ಗಾಯವನ್ನುಂಟು ಮಾಡಲ್ಲ. ಯಾವ ನಾಯಿಯೂ ಉಗ್ರವಾಗಬಹುದು ಎಂದು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಸಾಕುಪ್ರಾಣಿಗಳ ಮಾಲೀಕರ ಜವಾಬ್ದಾರಿಯನ್ನು ನಿಗದಿಪಡಿಸಲು ಸಂಬಂಧಿತ ನಿಯಮಗಳ ಅಡಿಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸುವುದು ಅಗತ್ಯ ಎಂದು ಹೇಳಿದೆ.


ಕೇಂದ್ರ ಸರ್ಕಾರದ ಮೂರು ನಿಯಮಗಳಾದ ಪ್ರಾಣಿಗಳ ಜನನ ನಿಯಂತ್ರಣ (ನಾಯಿಗಳು) ನಿಯಮಗಳು, 2001, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ನಾಯಿ ಸಂತಾನೋತ್ಪತ್ತಿ ಮತ್ತು ಮಾರುಕಟ್ಟೆ) ನಿಯಮಗಳು, 2017 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ (ಪೆಟ್ ಶಾಪ್) ನಿಯಮಗಳು, 2018 ಅಡಿಯಲ್ಲಿ ಅಂತಹ ಮಾರ್ಗಸೂಚಿಗಳನ್ನು ನೀಡಲು ಪರಿಗಣಿಸಬಹುದು ಎಂದು ಕೋರ್ಟ್ ಹೇಳಿದೆ.

ಸಾಕು ಪ್ರಾಣಿ ಮಾಲೀಕರ ಹೊಣೆ :

ನಾಯಿ ಕಚ್ಚಿದರೆ ಅದು ಯಾವುದೇ ನಾಯಿಯಾಗಿದ್ದರೂ ಅದು ನಾಯಿ ಕಚ್ಚಿದ್ದೇ ಆಗಿರುತ್ತದೆ. ಅದು ಬ್ರಾಂಡೆಡ್ ಅಪಾಯಕಾರಿ ನಾಯಿ ಅಥವಾ ಇತರ ಯಾವುದೇ ಸಾಮಾನ್ಯ ನಾಯಿಯಾಗಿರಬಹುದು. ಸಾಕು ಪ್ರಾಣಿ ಮಾಲೀಕರು ತಮ್ಮ ನಾಯಿಗಳ ಕೃತ್ಯಕ್ಕೆ ಸಂಪೂರ್ಣವಾಗಿ ಜವಾಬ್ದಾರರಾಗುತ್ತಾರೆ. ಸಾಕು ಪ್ರಾಣಿಗಳ ಮಾಲೀಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸೂಕ್ತವಾಗಿ ರಚಿಸಲಾದ ಸಮಿತಿಯು ಜವಾಬ್ದಾರಿಯುತ ಸಾಕುಪ್ರಾಣಿಗಳ ಮಾಲೀಕತ್ವದ ಪರಿಕಲ್ಪನೆಯನ್ನು ರಕ್ಷಿಸಬೇಕು ಮತ್ತು ಬೇಜವಾಬ್ದಾರಿಯುತ ಸಾಕುಪ್ರಾಣಿ ಮಾಲೀಕತ್ವವನ್ನು ದಂಡನೆಗೆ ಒಳಪಡಿಸಬೇಕು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಅಪಾಯಕಾರಿ ಶ್ವಾನಗಳ ಸಾಕಣೆ ನಿಷೇಧಿಸಿ ಮಾರ್ಚ್ 12, 2024 ರಂದು ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ (ಏ.10) ರದ್ದುಗೊಳಿಸಿದೆ. ಇಂತಹ ಆಲೋಚನಾ ಪ್ರಕ್ರಿಯೆಯು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಮತ್ತು ನಾಯಿ ಮಾಲೀಕರು ಅಥವಾ ಯಾವುದೇ ಸಾಕುಪ್ರಾಣಿಗಳು ಮಾಲೀಕರು ಯಾವುದೇ ನಾಗರಿಕರಿಗೆ / ಇತರ ಜೀವಿಗಳಿಗೆ ಹಾನಿಯಾಗದಂತೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ : ಶ್ವಾನ ಪ್ರಿಯರೇ ಎಚ್ಚರ..ಎಚ್ಚರ..! ಮಾಲಕಿಯ ತಲೆ ಸೀಳಿದೆ ಸಾಕು ನಾಯಿ..!
ಆಯಾ ಪ್ರದೇಶದ ಸುತ್ತಮುತ್ತಲಿನ ನಾಗರಿಕರು ಮತ್ತು ಇತರ ಪ್ರಾಣಿಗಳ ಸಂರಕ್ಷಣೆಗೆ ಸಾಕುಪ್ರಾಣಿ ಮಾಲೀಕರು ಜವಾಬ್ದಾರರಾಗಿರುತ್ತಾರೆ. ಸಾಕುಪ್ರಾಣಿಗಳಿಂದಾಗುವ ಯಾವುದೇ ರೀತಿಯ ಬೇಜವಾಬ್ದಾರಿಯುತ ನಡವಳಿಕೆಗೆ ಸಾಕುಪ್ರಾಣಿ ಮಾಲೀಕರೇ ಜವಾಬ್ದಾರರಾಗಿರುತ್ತಾರೆ ಎಂದು ಕೋರ್ಟ್ ತಿಳಿಸಿದೆ.

Continue Reading

BELTHANGADY

ಶ್ವಾನ ಪ್ರಿಯರೇ ಎಚ್ಚರ..ಎಚ್ಚರ..! ಮಾಲಕಿಯ ತಲೆ ಸೀಳಿದೆ ಸಾಕು ನಾಯಿ..!

Published

on

ಬೆಳ್ತಂಗಡಿ : ಮನೆಯಲ್ಲಿ ಪ್ರಾಣಿಗಳನ್ನು ಸಾಕುವುದೆಂದರೆ ಹೆಚ್ಚಿನವರಿಗೆ ಇಷ್ಟ. ಅದರಲ್ಲೂ ನಾಯಿ ಪ್ರಿಯರು ಅನೇಕ ಮಂದಿ ಇದ್ದಾರೆ. ತಮ್ಮ ಮನೆಗಳಲ್ಲಿ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಾರೆ. ಈ ನಾಯಿಗಳನ್ನು ಪ್ರೀತಿಸಿದಾಗ ಅವೂ ಅದಕ್ಕೆ ಪ್ರತಿಯಾಗಿ ಪ್ರೀತಿ ಕೊಡೋದು ಸಹಜ. ಆದರೆ, ಅದಕ್ಕೆ ವಿರುದ್ಧವಾದ ಘಟನೆಯೂ ನಡೆಯಬಹುದು ಎಂಬುದಕ್ಕೆ ಗುರುವಾರ(ಏ.18) ಬೆಳ್ತಂಗಡಿಯಲ್ಲಿ ನಡೆದ ಈ ಸುದ್ದಿ ನಿದರ್ಶನವಾಗಿದೆ.


ಮನೆ ಮಾಲಕಿ ತನ್ನ ಸಾಕು ನಾಯಿಯನ್ನು ಮುದ್ದಾಡುವಾಗ ಅದು ಏಕಾಏಕಿ ದಾ*ಳಿ ಮಾಡಿ, ತಲೆ ಭಾಗವನ್ನು ಸೀಳಿ ಹಾಕಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಮುಂಡಾಜೆ ಗ್ರಾಮ ನಿಡಿಕಲ್ ಓಂಕಾರ್ ನಿವಾಸಿ ದಿವಂಗತ ರಾಮ್ ದಾಸ್ ಎಂಬವರ ಪತ್ನಿ 49 ವರ್ಷದ ಪೂರ್ಣಿಮಾ ಗಂಭೀ*ರ ಗಾ*ಯಗೊಂಡ ಮಹಿಳೆ.

ಇದನ್ನೂ ಓದಿ : Viral Video; ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ

ಪೂರ್ಣಿಮಾ ತನ್ನ ಮನೆಯ ಸಾಕು ನಾಯಿಯನ್ನು ಎಂದಿನಂತೆ ಮುದ್ದಾಡುತ್ತಿದ್ದರು. ಈ ವೇಳೆ ಅವರು ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಅದೇನಾಯ್ತೋ ಗೊತ್ತಿಲ್ಲ, ಸಾಕು ನಾಯಿ ಪೂರ್ಣಿಮಾ ಮೇಲೆ ದಾ*ಳಿ ನಡೆಸಿದೆ. ತಲೆ ಭಾಗ ಸೀ*ಳಿ ಹಾಕಿದೆ. ಕೈ ಕಚ್ಚಿ ಗಂಭೀ*ರ ಗಾ*ಯಗೊಳಿಸಿದೆ. ಸದ್ಯ, ಪೂರ್ಣಿಮಾ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

LATEST NEWS

Trending