Connect with us

    LATEST NEWS

    ಲೋಕಲ್‌ ಬಾಡಿ ಎಲೆಕ್ಷನ್‌ ಎಫೆಕ್ಟ್‌: ಅಜ್ಜಿಗೆ ಗೂಟ ಇಟ್ಟ ಮೊಮ್ಮಗಳು, ಸೊಸೆಯನ್ನು ಕೆಡವಿದ ಅತ್ತೆ…

    Published

    on

    ಬೆಂಗಳೂರು: ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕೆಲವು ಕುತೂಹಲಕಾರಿ ಫಲಿತಾಂಶಗಳು ಪ್ರಕಟವಾಗಿದೆ. ಕೆಲವೆಡೆ ಸಂಬಂಧಿಕರ ವಿರುದ್ಧವೇ ಗೆಲುವು ದಾಖಲಿಸಿದ್ದಾರೆ. ಅಜ್ಜಿ ವಿರುದ್ಧ ಮೊಮ್ಮಗಳ ಗೆಲುವು, ಸೊಸೆ ವಿರುದ್ಧ ಗೆಲುವು ಹೀಗೆ ಹಲವು ಸ್ವಾರಸ್ಯಕರ ಫಲಿತಾಂಶ ಪ್ರಕಟವಾಗಿದೆ.


    ಶಿರಸಿ ತಾಲೂಕಿನ ಅಂಡಗಿ ಗ್ರಾಮ ಪಂಚಾಯಿತಿಯ ಕಿರವತ್ತಿ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಒಂದೇ ಕುಟುಂಬದ ಅಜ್ಜಿ ಹಾಗೂ ಮೊಮ್ಮಗಳು ಚುನಾವಣೆಗೆ ನಿಂತಿದ್ದು ಇದೀಗ ಅಜ್ಜಿಯನ್ನು ಸೋಲಿಸಿ, ಮೊಮ್ಮಗಳು ಗೆದ್ದು ಬೀಗಿದ್ದಾರೆ.
    ಕೆರೆಕಟ್ಟೆ ಗ್ರಾಮ ಪಂಚಾಯತ್ ಮಹಿಳೆಯೊಬ್ಬರು ತೀರಿಕೊಂಡಿದ್ದರು. ತೆರವಾದ ಸ್ಥಾನಕ್ಕೆ ಅತ್ತೆ ಪಾರ್ವತಮ್ಮ ಮತ್ತು ಸೊಸೆ ಲಕ್ಷ್ಮಮ್ಮ ಇಬ್ಬರೂ ಸ್ಪರ್ಧೆ ಮಾಡಿದ್ದು 91 ಮತಗಳ ಅಂತರದಿಂದ ಅತ್ತೆ ಪಾರ್ವತಮ್ಮ ಗೆಲುವು ಸಾಧಿಸಿದ್ದಾರೆ.
    ಬಾಗಲಕೋಟೆಯ ಕಮತಗಿ ಪಟ್ಟಣ ಪಂಚಾಯಿತಿ ಎರಡು ಬೇರೆ ಬೇರೆ ಕ್ಷೇತ್ರಗಳಲ್ಲಿ ಪತಿ ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದಾರೆ.
    ಯಾದಗಿರಿಯ ಕಕ್ಕೇರಾ ಪುರಸಭೆಯ ವಾರ್ಡ್ ನಂಬರ್ 6ರಿಂದ ಕಾಂಗ್ರೆಸ್‌ ಪಕ್ಷದಿಂದ ಪರಶುರಾಮ ಸ್ಪರ್ಧಿಸಿದ್ದ. ಇದೀಗ ಈತ ಗೆಲುವು ಸಾಧಿಸಿದ್ದಾನೆ.
    ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಯಲ್ಲಿ ಸಹೋದರಿಯರು ವಿಜಯಪತಾಕೆ ಹಾರಿಸಿದ್ದಾರೆ. ಪರಗಂಟಿ ಲಕ್ಷ್ಮಿ, ತಂಗಿ ಲತಾ ಸಂತೋಷ್ ಗೆಲುವು ಸಾಧಿಸಿದ್ದಾರೆ.

    LATEST NEWS

    ಕುಂದಾಪುರ: ಗಾಳಿ ತುಂಬಿಸುತ್ತಿದ್ದ ವೇಳೆ ಟೈರ್ ಸ್ಫೋಟ: ಯುವಕನಿಗೆ ಗಂಭೀರ ಗಾಯ

    Published

    on

    ಕುಂದಾಪುರ: ಟೈರ್ ಪಂಕ್ಚರ್ ಶಾಪ್ ಒಂದರಲ್ಲಿ ಬಸ್ಸೊಂದರ ಟೈರ್ ಗೆ ಗಾಳಿ ತುಂಬಿಸುತ್ತಿದ್ದ ಸಂದರ್ಭ ಟೈರ್ ಸಿಡಿದು ಯುವಕ ಗಂಭೀರ ಗಾಯಗೊಂಡ ಘಟನೆ ಕೋಟೇಶ್ವರದಲ್ಲಿ ಸಂಭವಿಸಿದೆ.

    ಅಬ್ದುಲ್ ರಶೀದ್ (19) ಗಂಭೀರ ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.

    ಕೋಟೇಶ್ವರದಲ್ಲಿರುವ ಟೈರ್ ಪಂಕ್ಚರ್ ಶಾಪ್ ಗೆ ಖಾಸಗಿ ಶಾಲಾ ಬಸ್ಸೊಂದರ ಟೈರ್ ಪ್ಯಾಚ್ ಗೆ ಬಂದಿತ್ತು. ಈ ವೇಳೆ ಅಬ್ದುಲ್ ರಶೀದ್ ಟೈರನ್ನು ಬಸ್ಸಿನಿಂದ ಕೆಳಗಿಳಿಸಿ ಗಾಳಿ ತುಂಬಿಸಿದ್ದಾರೆ. ಗಾಳಿ ತುಂಬಿಸಿ ರಶೀದ್ ಅಲ್ಲಿಂದ ಎದ್ದೇಳುತ್ತಿದ್ದಂತೆ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಟೈರ್ ಸಿಡಿದ ರಭಸಕ್ಕೆ ರಶೀದ್ ಗಾಳಿಯಲ್ಲಿ ಹಾರಿ ಗಿರಕಿ ಹೊಡೆದು ಬಿದ್ದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಸ್ಫೋಟದ ತೀವ್ರತೆಗೆ ಟೈರ್ ಡ್ರಮ್ ಹಾರಿ ಬಸ್ಸಿನ ಮೇಲ್ಛಾವಣಿಯ ಮೇಲೆ ಬಿದ್ದು ನೆಲಕ್ಕುರುಳಿದೆ. ಘಟನೆಯ ಎಲ್ಲಾ ದೃಶ್ಯಾವಳಿಗಳು ಸ್ಥಳೀಯ ಅಂಗಡಿಯವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Continue Reading

    LATEST NEWS

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

    Published

    on

    ಮಂಗಳೂರು/ಜೈಪುರ್: ಒಲಿಂಪಿಕ್ ಪದಕ ವಿಜೇತೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ. ವಿ ಸಿಂಧು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಪೊಸಿಡೆಕ್ಸ್ ಟೆಕ್ನಾಲಜೀಸ್ ಕಾರ್ಯನಿರ್ವಾಕ ನಿರ್ದೇಶಕರಾದ ವೆಂಕಟ ದತ್ತಶೈಲ ಅವರೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ಅದ್ದೂರಿ ಸಮಾರಂಭವನ್ನು ನಡೆಸಿದರು.

    ಡಿಸೆಂಬರ್ 22ರ ಭಾನುವಾರ ರಾತ್ರಿ 11 ಗಂಟೆ 20 ನಿಮಿಷಕ್ಕೆ ಸಿಂಧು ಮತ್ತು ಸಾಯಿ ಮದುವೆ ನಡೆದಿದೆ. ಕುಟುಂಬ ಸದಸ್ಯರು ಮತ್ತು ಹತ್ತಿರದ ಸ್ನೇಹಿತರು ಉಪಸ್ಥಿತರಿದ್ದರು. ಉದಯ ಸಾಗರದ ದ್ವೀಪವೊಂದರಲ್ಲಿ ಅದ್ದೂರಿ ತೆಲುಗು ಸಂಪ್ರದಾಯದಲ್ಲಿ ವಿವಾಹವಾದರು. ಈ ವಿವಾಹ ಸಮಾರಂಭದಲ್ಲಿ ಸುಮಾರು 140 ಅತಿಥಿಗಳು ಭಾಗವಹಿಸಿದ್ದರು.

    ಇದನ್ನೂ ಓದಿ: ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ಮನೆ ಬಿಟ್ಟು ತೆರಳಿದ ಕುಟುಂಬ

    ಮದುವೆಯ ಅತಿಥಿಗಳಿಗಾಗಿ ಸಿಂಧು ಸುಮಾರು 100 ಕೊಠಡಿಗಳನ್ನು ಬುಕ್ ಮಾಡಿದ್ದಾರೆ. ಇದಲ್ಲದೆ, ಮದುವೆಯಲ್ಲಿ ಭಾಗವಹಿಸಿದ ಅತಿಥಿಗಳಿಗೆ ವಿಶೇಷ ವಿಮಾನ ಟಿಕೆಟ್ ಗಳನ್ನು ಸಹ ಒದಗಿಸಲಾಗಿದೆ ಎಂದು ವರದಿಯಾಗಿದೆ. ಈ ವಿವಾಹ ಸಮಾರಂಭದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಐಪಿಎಲ್ ಆಡಳಿತ ಮಂಡಳಿ ಸದಸ್ಯ ಚಾಮುಂಡೇಶ್ವರನಾಥ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್, ಖ್ಯಾತ ವೈದ್ಯ ಗುರುವಾರೆಡ್ಡಿ ಉಪಸ್ಥಿತರಿದ್ದರು.

    ಇನ್ನು, ಸಿಂಧು ಮತ್ತು ಸಾಯಿ ವಿವಾಹದ ಆರತಕ್ಷತೆ ಹೈದರಾಬಾದ್ ನಲ್ಲಿ ಡಿಸೆಂಬರ್ 24 (ಮಂಗಳವಾರ) ರಾತ್ರಿ ನಡೆಯಲಿದೆ. ಈ ಆರತಕ್ಷತೆಗೆ ರಾಜಕೀಯ, ಚಿತ್ರರಂಗ ಹಾಗೂ ಕ್ರೀಡಾ ಗಣ್ಯರು ಆಗಮಿಸಲಿದ್ದಾರೆ.

    Continue Reading

    LATEST NEWS

    ಎನ್‌ಕೌಂಟರ್‌ನಲ್ಲಿ ಮೂವರು ಖಲಿಸ್ತಾನಿ ಭ*ಯೋತ್ಪಾದಕರ ಹ*ತ್ಯೆ

    Published

    on

    ಮಂಗಳೂರು/ಲಖನೌ : ಪಂಜಾಬ್‌ನ ಗುರುದಾಸ್‌ಪುರದ ಪೊಲೀಸ್ ಔಟ್ ಪೋಸ್ಟ್ ಮೇಲೆ ದಾ*ಳಿ ನಡೆಸಿದ ಮೂವರು ಖಲಿಸ್ತಾನಿ ಭ*ಯೋತ್ಪಾದಕರನ್ನು ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರ ತಂಡ ಹ*ತ್ಯೆಗೈದಿದೆ. ಪಿಲಿಭಿತ್ ಜಿಲ್ಲೆಯಲ್ಲಿ ಈ ಎ*ನ್‌ಕೌಂಟರ್ ನಡೆದಿದೆ.

    ಪುರನ್‌ಪುರ ಪ್ರದೇಶದ ಹರ್ದೋಯಿ ಶಾಖಾ ಕಾಲುವೆ ಬಳಿ ಬೆಳಗಿನ ಜಾವ ನಡೆದ ಈ ಎನ್‌ಕೌಂಟರ್‌ನಲ್ಲಿ ಪ್ರತಾಪ್ ಸಿಂಗ್, ವೀರೇಂದ್ರ ಸಿಂಗ್, ಗುರ್ವಿಂದರ್ ಸಿಂಗ್ ಎಂಬ ಮೂವರು ಉ*ಗ್ರರು ಹ*ತರಾಗಿದ್ದಾರೆ. ಅವರ ಬಳಿಯಿದ್ದ ಎರಡು ಎಕೆ-47 ರೈಫಲ್‌ಗಳು, ಎರಡು ಪಿಸ್ತೂಲ್‌ಗಳು ಮತ್ತು ಅಪಾರ ಪ್ರಮಾಣದ ಮದ್ದು ಗುಂ*ಡುಗಳನ್ನು ವಶಕ್ಕೆ ಪಡೆಯಲಾಗಿದೆ.

    ಖಲಿಸ್ತಾನ್ ಕಮಾಂಡೋ ಫೋರ್ಸ್‌ಗೆ ಸೇರಿದ ಮೂವರು ಭ*ಯೋತ್ಪಾದಕರು ಪುರನ್‌ಪುರ ಪ್ರದೇಶದಲ್ಲಿ ಅಡಗಿರುವ ಮಾಹಿತಿ ಸಿಕ್ಕ ಹಿನ್ನೆಲೆ ಉಭಯ ರಾಜ್ಯಗಳ ಪೊಲೀಸ್ ತಂಡವು ಅಡ್ಡಗಟ್ಟಿ ಎನ್‌ಕೌಂಟರ್ ನಡೆಸಿದ್ದು, ಭ*ಯೋತ್ಪಾರು ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ  ಅವರು ಮೃ*ತಪಟ್ಟಿದ್ದರು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ : 18ರ ಯುವಕನ ಜೊತೆ 51ರ ಮಹಿಳೆಯ ಲವ್; 4 ಮಕ್ಕಳನ್ನು ತೊರೆದು ಆಂಟಿ ಪರಾರಿ

    ಎ*ನ್‌ಕೌಂಟರ್‌ನಲ್ಲಿ ಉತ್ತರಪ್ರದೇಶದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಸ್ ಗಾ*ಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

     

     

    Continue Reading

    LATEST NEWS

    Trending