DAKSHINA KANNADA
ಕಾಡಾನೆಗಳ ಹಾವಳಿ ತಡೆಗೆ ಜೇನು ಹುಳಗಳ ನೆರವು ಪಡೆದ ಸುಳ್ಯದ ಕೃಷಿಕ ಜನ..!
ಸುಳ್ಯ : ಕಾಡಾನೆ ಹಾವಳಿಯಿಂದ ಕಂಗಾಲಾಗಿರುವ ಕೃಷಿಕರು ಪ್ರಸ್ತುತ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಸಿದ್ಧರಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆ ಇರಿಸುವ ಮೂಲಕ ಹೊಸ ದಾರಿ ಕಂಡುಕೊಂಡಿದ್ದಾರೆ.
ಆನೆ ಹಾವಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು, ಅಜ್ಜಾವರ, ಆಲೆಟ್ಟಿ ಇತ್ಯಾದಿ ಗ್ರಾಮಗಳ ಕೃಷಿಕರು ಹೈರಾಣಾಗಿದ್ದಾರೆ.
ಆನೆ ಕಂದಕ, ಸೋಲಾರ್ ಬೇಲಿ, ಸಿಮೆಂಟ್ ಹಲಗೆ ಅಳವಡಿಕೆ ಹೀಗೆ ಹಲವು ತಂತ್ರಗಳನ್ನು ಅಳವಡಿಸಿದರೂ ಪರಿಣಾಮಕಾರಿಯಾಗಿಲ್ಲ.
ಅಸ್ಸಾಂನಲ್ಲಿ ಕೃಷಿಕರು ಪ್ರಯೋಗಿಸಿ ಯಶಸ್ವಿಯಾಗಿರುವ ಜೇನುಗೂಡು ಬಳಕೆಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಭಾಗದ ತೋಟಗಳಲ್ಲಿ ಮಾಡಲಾಗುತ್ತಿದೆ.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಮತ್ತು ದ.ಕ., ಉಡುಪಿ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೇತೃತ್ವ ದಲ್ಲಿ ಹನಿಮಿಷನ್ ಯೋಜನೆ ಯಡಿಯಲ್ಲಿ ರೈತರಿಗೆ ಜೇನುಕೃಷಿ ತರಬೇತಿ ನೀಡಲಾಗಿದೆ.
ಅರ್ಹರಿಗೆ ಜೇನು ಕೃಷಿ ಮಾಡಲು ತಲಾ 10 ಪೆಟ್ಟಿಗೆಯನ್ನು ಜೇನು ಕುಟುಂಬ ಸಮೇತ ನೀಡಿ, ಪೆಟ್ಟಿಗೆಯನ್ನು ಆನೆಗಳು ಬರುವ ದಾರಿಯಲ್ಲಿ ಜೋಡಿಸುವ ಪ್ರಯತ್ನ ನಡೆಯಲಿದೆ.
ಜೇನು ಕೃಷಿಯ ಆದಾಯದ ಜತೆಗೆ ಆನೆಗಳ ಹಾವಳಿ ತಪ್ಪಿದರೆ ಇದೊಂದು ವರದಾನ ವಾಗಲಿದೆ ಎಂಬ ನಿರೀಕ್ಷೆ ಕೃಷಿಕರದು.
ಏನಿದು ಜೇನು ಪೆಟ್ಟಿಗೆ ಪ್ರಯೋಗ..?
ತೋಟದ ಬದಿಯಲ್ಲಿ ಜೇನು ಪೆಟ್ಟಿಗೆಗಳನ್ನು ಸಾಲಾಗಿ ಇರಿಸಿ ತಂತಿಗಳ ಮೂಲಕ ಪರಸ್ಪರ ಕಟ್ಟಲಾಗುತ್ತದೆ.

File picture
ಆನೆಗಳು ದಾಂಗುಡಿಯಿಡುವಾಗ ಜೇನು ಪೆಟ್ಟಿಗೆಗೆ ಅಥವಾ ತಂತಿಗೆ ತಾಗಿದರೆ ಎಲ್ಲ ಪೆಟ್ಟಿಗೆಗಳು ಏಕಕಾಲಕ್ಕೆ ಅಲುಗಾಡುವುದರಿಂದ ಜೇನು ನೊಣಗಳು ಎದ್ದು ಗುಂಪಾಗಿ ಗುಂಯ್‌ಗಾಡುತ್ತವೆ.
ಆ ಸದ್ದು ಆನೆಗಳಿಗೆ ಕಿರಿಕಿರಿ ಉಂಟು ಮಾಡುವುದರಿಂದ ಮತ್ತೆ ಆ ಕಡೆ ಬರಲಾರವು. ಮುಂದಕ್ಕೆ ಇಂತಹ ಪೆಟ್ಟಿಗೆಗಳನ್ನು ಕಂಡಾಗಲೇ ಕಾಡಾನೆಗಳು ಹಿಂದೆ ಸರಿಯುತ್ತವೆ ಎಂಬುದು ಈ ಪ್ರಯೋಗದ ತಾತ್ಪರ್ಯ.
ಜೇನು ಪೆಟ್ಟಿಗೆಗಳ ಜತೆಗೆ ಸಿಸಿ ಕೆಮರಾ ಅಳವಡಿಸಿ ಕಾಡಾನೆಗಳ ಚಲನ ವಲನದ ಬಗ್ಗೆಯೂ ನಿಗಾವಹಿಸಲಾಗುತ್ತಿದೆ.
DAKSHINA KANNADA
ಪಾವಂಜೆ ನದಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ..!
ಮುಲ್ಕಿ: ಮಂಗಳೂರು ಹೊರವಲಯದ ಮುಲ್ಕಿಯ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದ ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ನಂದಿನಿ ನದಿಯ ದಡದಲ್ಲಿ ಸುಮಾರು 19 ರಿಂದ 20 ವರ್ಷದ ಒಳಗಿನ ಪ್ರಾಯದ ಯುವಕನ ಶವ ಪತ್ತೆಯಾಗಿದೆ.
ಹಳೆಯಂಗಡಿ ಪೂಜಾ ಫ್ರೆಂಡ್ಸ್ ನ ಸದಸ್ಯರು ಸ್ಥಳಕ್ಕೆ ಧಾವಿಸಿ ಶವವನ್ನು ಆಂಬುಲೆನ್ಸ್ ಮೂಲಕ ಮೂಲ್ಕಿ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಕಳೆದ ದಿನಗಳ ಹಿಂದೆ ಇದೇ ಪರಿಸರದ ಚೇಳಾಯರು ಅಣೆಕಟ್ಟಿನ ಬಳಿ ಯುವಕನೊಬ್ಬ ನಾಪತ್ತೆಯಾಗಿದ್ದು, ಈ ಶವ ಆತನದ್ದೇ ಇರಬೇಕು ಇರಬೇಕೆಂಬ ಶಂಕೆ ವ್ಯಕ್ತವಾಗಿದೆ.
ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.
DAKSHINA KANNADA
Kadaba: ಹಠಾತ್ ಕಾಡಾನೆ ದಾಳಿ- ವ್ಯಕ್ತಿ ಗಂಭೀರ..!
ಕಡಬ: ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಸ್ಥಿತಿಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮದ ಮರ್ಧಾಳ-ಕೊಣಾಜೆಯಲ್ಲಿ ನಡೆದಿದೆ.
ಐತ್ತೂರು ಗ್ರಾಮದ ಗರ್ತಿಲ ನಿವಾಸಿ ಓಡಿ ಎಂಬವರ ಪುತ್ರ ಕೂಲಿ ಕಾರ್ಮಿಕ ಚೋಮ (56) ಗಾಯಗೊಂಡವರು.
ಚೋಮ ಅವರು ಸಂಜೆ ವೇಳೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭ ನೆಲ್ಯಡ್ಕ ಶಾಲೆಯ ಸಮೀಪ ಇರುವ ಕಾರ್ತಿಕೇಯ ಭಜನಾ ಮಂದಿರ ಬಳಿ ಆನೆಯೊಂದು ಹಠತ್ ದಾಳಿ ನಡೆಸಿದೆ.
ಪರಿಣಾಮ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ.
ಸದ್ಯ ಚೋಮ ಅವರ ಸ್ಥಿತಿಯು ಚಿಂತಾಜನಕವಾಗಿದ್ದು, ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಈ ಹಿಂದೆ ಆನೆ ದಾಳಿಯ ಘಟನೆಗಳು ನಡೆದಿದ್ದು, ಕೃಷಿ ನಾಶದಂತಹ ಘಟನೆಗಳು ದಿನಂಪ್ರತಿ ನಡೆಯುತ್ತಿದೆ ಎನ್ನಲಾಗಿದೆ.
DAKSHINA KANNADA
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಪದ್ಮಪ್ರಸಾದ್ ಜೈನ್ ಆಯ್ಕೆ
ಮಂಗಳೂರು: ಮಂಗಳೂರು ಸೊಬೆಸ್ಟಿಯನ್ ಹಾಲ್ ನಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನೊಳಗೊಂಡ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಪದ್ಮಪ್ರಸಾದ್ ಜೈನ್ ಆಯ್ಕೆಯಾಗಿದ್ದಾರೆ.
ಸಂಚಾಲಕರಾಗಿ ಕರುಣಾಕರ್ ಕಾನಂಗಿ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಬಂಟ್ವಾಳ, ಕೋಶಾಧಿಕಾರಿಯಾಗಿ ನವೀನ್ ರೈ ಪಂಜಳ, ಉಪಾಧ್ಯಕ್ಷರಾಗಿ ರಮೇಶ್ ಕಲಾ ಶ್ರೀ ಮಂಗಳೂರು, ಜಯಕರ್ ಸುವರ್ಣ ಉಡುಪಿ, ಜೊತೆ ಕಾರ್ಯದರ್ಶಿ ಹರೀಶ್ ಪಿ ಕೋಟ್ಯಾನ್ ಮುಲ್ಕಿ, ಹೆರಿಕ್ ಡಿಸೋಜ ಬ್ರಹ್ಮಾವರ, ಸಂಘಟನಾ ಕಾರ್ಯದರ್ಶಿ ಕೃಷ್ಣರಾವ್ ಕಾಪು, ರಮೇಶ್ ಹೊಸಬೆಟ್ಟು ಸುರತ್ಕಲ್, ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್ ಮೂಡಬಿದ್ರಿ, ಕ್ರೀಡಾ ಕಾರ್ಯದರ್ಶಿ ರಂಜಿತ್ ಕುಂದಾಪುರ, ಭಾರದ್ವಾಜ್ ಬೆಳ್ತಂಗಡಿ, ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ್ ಉಳ್ಳಾಲ ಮಾಧ್ಯಮ ಕಾರ್ಯದರ್ಶಿ ಹರೀಶ್ ರಾವ್ ಆಯ್ಕೆಯಾಗಿದ್ದಾರೆ.
ಈ ಚುನಾವಣಾ ಪ್ರಕ್ರಿಯೆಯನ್ನು ಎಸ್ ಕೆಪಿಎ ಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಆನಂದ್ ಬಂಟ್ವಾಳ್ ಅವರು ನಡೆಸಿಕೊಟ್ಟರು.
- bangalore6 days ago
ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?
- bengaluru5 days ago
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!
- DAKSHINA KANNADA4 days ago
2ನೇ ಮದುವೆಯಾದ ಕಿರುತೆರೆ ನಟಿ ಜ್ಯೋತಿ ರೈ …!
- DAKSHINA KANNADA5 days ago
ಮುಂದಿನ ವರ್ಷದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ 3 ಬೋರ್ಡ್ ಎಕ್ಸಾಮ್- ಮಧು ಬಂಗಾರಪ್ಪ