ಮಂಗಳೂರು/ನವದೆಹಲಿ : ಪತಿಯನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸಲು ಮಹಿಳೆ ನಿರ್ಧರಿಸಿದ್ದು, ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ಪೊಲೀಸ್ ರಕ್ಷಣೆ ನೀಡುವುದನ್ನು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದ ಘಟನೆ ನಡೆದಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇದು ಲಿವ್-ಇನ್ ಸಂಬಂಧಕ್ಕಿಂತ ವಿರುದ್ಧವಾಗಿದೆ, ಸಾಮಾಜಿಕ ರಚನೆಗೆ ಧಕ್ಕೆ ತರುವ ಅಕ್ರಮ ಸಂಬಂಧಗಳಿಗೆ ಕಾನೂನು ರಕ್ಷಣೆ ನೀಡುವುದು ಸರಿಯಲ್ಲ ಎಂದಿದೆ.
ಈ ಪ್ರಕರಣದಲ್ಲಿ ‘ವಿವಾಹಿತ ಮಹಿಳೆ ಬೇರೊಬ್ಬರ ಮತ್ತೊಬ್ಬನ ಜೊತೆ ಹೊಂದಿದ ಸಂಬಂಧವನ್ನು ‘ಅಕ್ರಮ’ ಎಂದು ಪರಿಗಣಿಸಲಾಗುವುದು, ಸಮಾಜ ಮತ್ತು ಕಾನೂನಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ’ ಎಂದು ಹೈಕೋರ್ಟ್ ಸ್ಪಷ್ಟೀಕರಿಸಿದೆ.
ಮಹಿಳೆಯು ಕೋರ್ಟ್‌ಗೆ ನಿಡಿದ ಅರ್ಜಿಯಲ್ಲಿ, ‘ತಾನು 37 ವರ್ಷ ಪ್ರಾಯದವಳಾಗಿದ್ದು, ಪತಿಯ ದುರ್ನಡತೆಯಿಂದ ಕಂಗೆಟ್ಟು ಸ್ವಯಂಪ್ರೇರಣೆಯಿಂದ ಬೇರೊಬ್ಬ ವ್ಯಕ್ತಿಯೊಂದಿಗೆ ಶಾಂತಿಯುತ ಜೀವನ ನಡೆಸುತ್ತಿದ್ದೇನೆ’ ಎಂದು ಹೇಳಿದ್ದಳು. ಲಿವ್-ಇನ್ ಸಂಬಂಧಗಳನ್ನು ಕೋರ್ಟ್ ವಿರೋಧಿಸುವುದಿಲ್ಲ, ಆದರೆ ವಿವಾಹಿತ ವ್ಯಕ್ತಿ ಬೇರೊಬ್ಬರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರವಾಗಿದೆ. ಸಮಾಜ ಮತ್ತು ಕಾನೂನಿನ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಕಾರಣಕ್ಕಾಗಿ ಇಂತಹ ಸಂಬಂಧಗಳಿಗೆ ಕಾನೂನು ರಕ್ಷಣೆ ನೀಡಲಾಗುವುದಿಲ್ಲ.
ಮಹಿಳೆಯ ಶಾಂತಿಯುತ ಜೀವನಕ್ಕೆ ಪತಿ ಅಪಾಯವನ್ನುಂಟುಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ದೂರಿದ್ದರೂ, ಇಬ್ಬರ ವಿರುದ್ಧವೂ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ ಅಥವಾ ಈ ವಿಷಯದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಅರ್ಜಿದಾರ ಮಹಿಳೆ ಅಪರಿಚಿತನೊಂದಿಗೆ ಅಕ್ರಮ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಾಳೆ ಎಂದು ಸರ್ಕಾರದ ಪರವಾಗಿ ಹೇಳಲಾಗಿದೆ. ಅವನು ಮದುವೆಯಾಗಿದ್ದಾನೆ. ಅವರು ಇನ್ನೂ ವಿಚ್ಛೇದನ ಪಡೆದಿಲ್ಲ. ಆಕೆಯ ಪತಿ ಇನ್ನೂ ಜೀವಂತವಾಗಿದ್ದಾರೆ.
‘ಮದುವೆಯ ಪವಿತ್ರತೆಯು ಈಗಾಗಲೇ ವಿಚ್ಛೇದನವನ್ನು ಒಳಗೊಂಡಿದೆ. ಅರ್ಜಿದಾರರಿಗೆ ತನ್ನ ಪತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ, ಅನ್ವಯಿಸುವ ಕಾನೂನಿನ ಪ್ರಕಾರ ಅವಳು ಮೊದಲು ತನ್ನ ಸಂಗಾತಿಯಿಂದ ಬೇರ್ಪಡಲು ಮುಂದುವರಿಯಬೇಕು. ಪತಿ ಬದುಕಿರುವಾಗ ಪತ್ನಿ ಮತ್ತೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಲು ಅವಕಾಶ ನೀಡುವಂತಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಂಗಳೂರು/ಬೆಂಗಳೂರು: ಶಾಲೆಗೆ ಹೋಗದೆ ಇದ್ದ ಮಗನನ್ನು ತಂದೆಯೊಬ್ಬ ಕುಡಿದ ಮತ್ತಿನಲ್ಲಿ ಕ್ರಿಕೆಟ್ ಬ್ಯಾಟ್‌ನಿಂದ ಹೊ*ಡೆದು, ತಲೆಯನ್ನು ಗೋಡೆಗೆ ಗು*ದ್ದಿಸಿ ಹ*ತ್ಯೆಗೈದ ಕ್ರೂ*ರ ಘಟನೆ ಬೆಂಗಳೂರಿನ ಯಲಚೇನಹಳ್ಳಿಯ ಕಾಶಿನಗರದಲ್ಲಿ ನಡೆದಿದೆ.
ತೇಜಸ್ (14) ಮೃ*ತ ದು*ರ್ದೈವಿ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಪರಾರಿಯಾಗಿದ್ದ ತಂದೆ ರವಿಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಲೆಗೆ ಹೋಗದೆ ಮನೆಯಲ್ಲಿ ಮೊಬೈಲ್ ರಿಪೇರಿ ಮಾಡಿಸುವಂತೆ ಹಠ ಮಾಡುತ್ತಿದ್ದ ಮಗನಿಗೆ ಶುಕ್ರವಾರ (ನ.15) ಬೆಳಗ್ಗೆ ರವಿಕುಮಾರ್ ಬುದ್ದಿಮಾತು ಹೇಳಿದ್ದಾರೆ. ಆಗ ಮಗ ಹಠ ಮಾಡಿದ್ದರಿಂದ ಕೆರಳಿದ ತಂದೆ, ಮನಬಂದಂತೆ ಮಗನಿಗೆ ಹೊ*ಡೆದಿದ್ದಲ್ಲದೆ ತಲೆಯನ್ನು ಗೋಡೆ ಗುದ್ದಿಸಿದ್ದಾರೆ. ಈ ಹ*ಲ್ಲೆ ನಡೆದ ಕೆಲ ಕ್ಷಣದಲ್ಲೇ ತೇಜಸ್‌ನನ್ನು ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದರೂ, ಮಾರ್ಗ ಮಧ್ಯೆ ಬಾಲಕ ಮೃ*ತಪಟ್ಟಿದ್ದಾನೆ.
ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೃ*ತ್ಯ ಎಸಗಿ ಪರಾರಿಯಾಗಿದ್ದ ಮೃ*ತನ ತಂದೆಯನ್ನು ಶನಿವಾರ (ನ.16) ಬೆಳಗ್ಗೆ ಬಂಧಿಸಿದ್ದಾರೆ.
ಉಳ್ಳಾಲ: ಮಂಗಳೂರಿನ ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ಘಟನೆ ರವಿವಾರ (ನ.17) ನಡೆದಿದೆ.
ಮೈಸೂರು ಮೂಲದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಕೀರ್ತನಾ ಎನ್ (21), ನಿಶಿತಾ ಎಂ ಡಿ (21) ಮತ್ತು ಪಾರ್ವತಿ ಎಸ್ (20) ಎಂದು ಗುರುತಿಸಲಾಗಿದೆ.
ಈ ಮೂವರು ಯುವತಿಯರು ಶನಿವಾರ ಮುಂಜಾನೆ ರೆಸಾರ್ಟ್ ಗೆ ಬಂದಿದ್ದರು. ರವಿವಾರ ಬೆಳಗ್ಗೆ 10.30 ಸಮಯಕ್ಕೆ ಈಜುಕೊಳದಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಓರ್ವ ಯುವತಿ ನೀರಿನಲ್ಲಿ ಮುಳುಗಿದ್ದು, ರಕ್ಷಣೆಗೆ ಮುಂದಾಗಿದ ಮತ್ತೊಬ್ಬಾಕೆಯೂ ಮುಳುಗಿದ್ದ ಕಾರಣ ಮೂರನೇ ಯುವತಿಯೂ ನೀರಿಗೆ ಇಳಿದಿದ್ದಾಳೆ. ಕೆಲವೇ ನಿಮಿಷದ ಅಂತರದಲ್ಲಿ ಈ ಘಟನೆ ನಡೆದಿದೆ.
ಮುಂಜಾನೆ ಉಪಹಾರದ ಸಮಯವಾದ್ದರಿಂದ ರೆಸಾರ್ಟ್ ಸಿಬ್ಬಂದಿ ಈಜುಕೊಳದ ಬಳಿ ಇದ್ದರು ಎನ್ನಲಾಗಿದೆ. ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
BBK 11 : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಬಣ್ಣ ಸಮಯಕ್ಕೆ ತಕ್ಕಂತೆ ಬದಲಾಗುವುದು, ಆಟಗಾರರ ನಡುವೆ ಜಗಳ – ಮನಸ್ತಾಪಗಳು, ಮನೆಯೊಳಗೆ ನೆಲೆಯೂರಲು ಆಡುವ ನಾಟಕಗಳು ಪ್ರತೀದಿನ ನಡೆಯುತ್ತಿರುತ್ತವೆ. ಆದರೆ, ಈ ವಾರದ ಎಲಿಮೀನೆಷನ್ ಗೂ ಮೊದಲು ಅಚ್ಚರಿಯ ಘಟನೆಯೊಂದು ನಡೆದಿತ್ತು.
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಕೂಡಲೇ ಬಿಗ್ ಬಾಸ್ ತಂಡ ಚೈತ್ರಾ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದರು. ಇದೀಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಚೈತ್ರಾ ಬಿಗ್ ಬಾಸ್ ಮನೆಗೆ ವಾಪಸ್ಸಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಹೊರಗೆ ಹೋಗಿ ಬಂದ ಸ್ಪರ್ಧಿಗಳಿಗೆ ಹೆಚ್ಚಿನ ಮಾಹಿತಿ ಗೊತ್ತಿರಬಹುದು ಎಂಬ ಸಂಶಯ ಇರೋದು ಸಾಮಾನ್ಯ. ಅದೇ ರೀತಿ ಸಂಶಯ ಚೈತ್ರಾ ಹೊರಗಡೆ ಹೋಗಿ ಬಂದಾಗಿನಿಂದ ಉಗ್ರಂ ಮಂಜು ತಲೆಯಲ್ಲಿ ಕೊರೆಯುತ್ತಿತ್ತು. ಹೀಗಾಗಿ ಚೈತ್ರಾರನ್ನು ಮಂಜು ಪ್ರಶ್ನಿಸಿದ್ದಾರೆ.
ಬಿಗ್ ಬಾಸ್ ಮನೆಯ ಹೊರಗಡೆ ಜನರ ಅಭಿಪ್ರಾಯದ ಕುರಿತು ಚೈತ್ರಾ ಹಾಗೂ ಮಂಜು ನಡುವೆ ದೊಡ್ಡ ಚರ್ಚೆ ನಡೆದಿದೆ. ಈ ವೇಳೆ ಚೈತ್ರಾ ಮೂರು ದಿನದಿಂದ ವಾತಾವರಣ ಕಂಪ್ಲೀಟ್ ಚೆಂಜ್ ಇದೆ ಎಂದಿದ್ದಾರೆ. ಇದಕ್ಕೆ ಮಂಜು, ಇಲ್ಲಿಯ ವಾತವರಣ ಹೇಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಚೈತ್ರಾ, ನಾನು ಹೇಳಂಗಿಲ್ಲ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಮಂಜು, ರೆಕ್ಕೆ ಏನಾದರೂ ಜಾಸ್ತಿ ಅಗಲ ಇದೆಯಾ, ಜಾಸ್ತಿ ಮುಚ್ಚಿಕೊಂಡು ಇದೆಯಾ ಎಂದು ಮತ್ತೆ ಪ್ರಶ್ನಿಸಿದ್ದಾರೆ. ಇದಕ್ಕೆ ಕೌಂಟರ್ ಕೊಟ್ಟ ಚೈತ್ರಾ, ರೆಕ್ಕೆ ಮುರಿದು ಹೋಗಿದೆ ಎಂದಿದ್ದಾರೆ. ಹೀಗೆ ಚೈತ್ರಾ ಹಾಗೂ ಮಂಜು ನಡುವೆ ಪಿಸು ಮಾತಿನ ಸಂಭಾಷಣೆ ನಡೆದಿದೆ. ಇನ್ನೂ ಪಿಸು ಮಾತಿನಲ್ಲೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಜನರ ಅಭಿಪ್ರಾಯ ಹೇಗಿದೆ ಅನ್ನುವ ಸಂದೇಶ ನೀಡಲು ಯತ್ನಿಸುತ್ತಿರುವಾಗ ಬಿಗ್ ಬಾಸ್, ಚೈತ್ರಾ ನೀವು ಪಿಸು ದನಿಯಲ್ಲಿ ಮಾತನಾಡುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಬಿಗ್ ಬಾಸ್ ಆದೇಶ ನೀಡಿದ ಮೇಲೂ ಚೈತ್ರಾ ಕಥೆಯ ರೂಪದಲ್ಲಿ ಇಂಡೈರೆಕ್ಟ್ ಆಗಿ ಹೊರಗಿನ ವಿಚಾರವನ್ನು ಹಂಚಿಕೊಂಡಿದ್ದರು. ಇದರಿಂದ ಬಿಗ್ ಬಾಸ್ ಗರಂ ಆಗಿದ್ದಾರೆ.
ಸುದೀಪ್ ಕ್ಲಾಸ್ :
ಸುದೀಪ್ ಕ್ಲಾಸ್ :
ಕಥೆಯನ್ನು ಹೇಳುತ್ತಾ ಎಲ್ಲರ ತಲೆಯಲ್ಲಿ ಹುಳ ಬಿಟ್ಟ ಕಾರಣ ಕಿಚ್ಚ ಸುದೀಪ್ ಚೈತ್ರಾ ಮೇಲೆ ಕೋಪಗೊಂಡಿದ್ದರು. ವಾರದ ಕಥೆಯಲ್ಲಿ ಕಿಚ್ಚ ಚೈತ್ರಾಗೆ ಕ್ಲಾಸ್ ತಗೊಂಡಿದ್ದಾರೆ. ಬಿಗ್ ಬಾಸ್ ವಾರ್ನಿಂಗ್ ನೀಡಿದ ಮೇಲೂ ಚೈತ್ರಾ ಈ ರೀತಿ ಮಾಡಿರುವುದು ಕಿಚ್ಚ ಕೋಪ ನೆತ್ತಿಗೇರಿಸಿದೆ. ಇಂತಹ ಕಥೆ ಯಾಕೆ ಹೇಳಿದ್ರಿ ಎಂದು ಕಿಚ್ಚ ಕೇಳಿದ್ದಕ್ಕೆ, ಆಸ್ಪತ್ರೆಯಲ್ಲಿ ಡಾಕ್ಟರ್, ನರ್ಸ್ ಹೇಳಿದ್ದನ್ನು ಹೇಳಿದೆ ಎಂದು ಚೈತ್ರಾ ಸಮರ್ಥಿಸಿಕೊಂಡಿದ್ದಾರೆ. ಕೋಪಗೊಂಡ ಕಿಚ್ಚ ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೇ, ಚೈತ್ರಾಗೆ ಎಸಿಕೆ ಅಂದ್ರೆ ಅಮರ ಚಿತ್ರ ಕಥಾ ಎಂಬುದಾಗಿ ಹೆಸರಿಟ್ಟಿದ್ದಾರೆ.