Thursday, September 29, 2022

ಲಿವಾ ಮಿಸ್ ದಿವಾ ಸೌಂಧರ್ಯ ಸ್ಪರ್ಧಾ ವಿಜೇತೆ ತುಳುನಾಡ ಬೆಡಗಿ ದಿವಿತಾ ರೈಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ

ಮಂಗಳೂರು :  ಲಿವಾ ಮಿಸ್ ದಿವಾ ಸೌಂಧರ್ಯ ಸ್ಪರ್ಧೆಯಲ್ಲಿ ವಿಜೇತಳಾಗಿರುವ ತುಳುನಾಡ ಬೆಡಗಿ ದಿವಿತಾ ರೈ ಅವರಿಗೆ ಹುಟ್ಟೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.

ಮಂಗಳೂರು ನಗರದ ಅಂಬೇಡ್ಕರ್‌ ವೃತ್ತದಿಂದ ತೆರೆದ ವಾಹನದಲ್ಲಿ 23 ವರ್ಷದ ದಿವಿತಾ ರೈ ಅವರನ್ನು ಮೆರವಣಿಗೆಯಲ್ಲಿ ಬಂಟ್ಸ್‌ಹಾಸ್ಟೆಲ್‌ನ ಗೀತಾ ಶೆಟ್ಟಿ ಮೆಮೊರಿಯಲ್ ಸಭಾಂಗಣದವರೆಗೆ   ಕರೆತರಲಾಯಿತು.

ಕೇರಳದ ಚೆಂಡೆಗಳು, ವಾದ್ಯಸಂಗೀತ, ಹುಲಿವೇಷ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.ಕೇರಳದ ಚೆಂಡೆಗಳು, ವಾದ್ಯಸಂಗೀತ, ಹುಲಿವೇಷ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.

ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ದಿವಿತಾ ರೈ ಅವರನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡರು.

ಸುಮಂಗಲಿಯರು ಆರತಿ ಬೆಳಗಿ, ತಿಲಕವಿಟ್ಟು, ಮಲ್ಲಿಗೆ ಹಾರವನ್ನು ಹಾಕಿ ದೀವಿಕಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.

ಬಂಟರ ಮಾತೃ ಸಂಘ ಹಾಗೂ ಮಂಗಳೂರು ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ದಿವಿತಾ ರೈ ಅವರನ್ನು ತುಳುನಾಡಿನ ಸಂಪ್ರದಾಯದಂತೆ ವೀಳ್ಯದೆಳೆ, ಅಡಿಕೆ ನೀಡಿ, ಸೀರೆ, ಕೃಷ್ಣನ ಮೂರ್ತಿ ಕೊಟ್ಟು ಅಭಿನಂದಿಸಲಾಯಿತು.

ಇದಕ್ಕೂ ಮುನ್ನ ನಮ್ಮ ಕುಡ್ಲ ವಾಹಿನಿಯೊಂದಿಗೆ ಮಾತನಾಡಿದ ಲಿವಾ ಮಿಸ್ ಯೂನಿವರ್ಸ್ ಸ್ಪರ್ಧಿ ಚೆಲುವೆ ದಿವಿತಾ ರೈ ಹುಟ್ಟೂರಿನ ಹೃದಯಸ್ಪರ್ಶಿ ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು ತುಳು ನಾಡಿನ ಜನತೆಯ ಸಹಕಾರವನ್ನು ಕೋರಿದಳು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್‌, ಪ್ರಮುಖರಾದ ಶಾಲಿನಿ ಶೆಟ್ಟಿ, ಸವಿತಾ ಶೆಟ್ಟಿ, ಆಶಾಜ್ಯೋತಿ,ವೀಣಾ ಟಿ. ಶೆಟ್ಟಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here

Hot Topics

ಸುಳ್ಯ: ಮಾಡರ್ನ್‌ಯುಗಕ್ಕೆ ಹೊಂದಿಕೊಂಡ ಕಾಗೆ ತನ್ನ ಗೂಡು ಹೆಣೆದಿದ್ದು ಕಬ್ಬಿಣದ ತಂತಿಯಲ್ಲಿ..!

ಸುಳ್ಯ: ಕಾಗೆಯೊಂದು ಕಬ್ಬಿಣದ ತಂತಿಗಳನ್ನೇ ಬಳಸಿ ಗೂಡು ಹೆಣೆದಿರುವ ಅದ್ಭುತ ಘಟನೆ ಸುಳ್ಯದ ಚೊಕ್ಕಾಡಿಯಲ್ಲಿ ನಡೆದಿದೆ.ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ಆವರಣದಲ್ಲಿ ಸ್ವಚ್ಚತೆ ಕಾರ್ಯ ಕೈಗೊಂಡ ವೇಳೆ ಮರವೊಂದರ ಕೊಂಬೆಯಲ್ಲಿ ಈ...

5 ವರ್ಷ PFI ಬ್ಯಾನ್ : ಮಂಗಳೂರಿನ ಕಚೇರಿಗಳಿಗೆ ಬೀಗ ಜಡಿದು ಸೀಲ್ ಡೌನ್ ಮಾಡಿದ ಪೊಲೀಸರು..!

ಮಂಗಳೂರು : ಪಿಎಫ್‌ಐ ಮತ್ತು ಅದರ ಅಂಗ ಸಂಘಟನೆಗಳನ್ನು 5 ವರ್ಷ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ಪಿಎಫ್‌ಐ ಕಚೇರಿಗಳನ್ನು ಸೀಲ್ ಡೌನ್...

ಕೇರಳದಲ್ಲಿ ಸಿನಿಮಾ ಪ್ರಚಾರಕ್ಕೆ ತೆರಳಿದ ನಟಿಯರ ಮೇಲೆ ಅಭಿಮಾನಿಯಿಂದ ಲೈಂಗಿಕ ದೌರ್ಜನ್ಯ : ನಟಿಯಿಂದ ಅಭಿಮಾನಿಗೆ ದಂಡಂ ದಶಗುಣಂ..!

ಅಭಿಮಾನಿಯೋರ್ವ ನಟಿಯನ್ನು ಎಳೆದುಕೊಂಡು ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ. ಈ ಬಗ್ಗೆ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಮುಟ್ಟಬಾರದ ಜಾಗಗಳಿಗೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಕೋಯಿಕ್ಕೋಡ್ : ಸಿನಿಮಾ ಪ್ರಚಾರಕ್ಕೆ ತೆರಳಿದ ಮಲಯಾಳಂ ನಟಿಯರ...