ಬಂಟ್ವಾಳ: ಸಿಡಿಲು ಬಡಿದು ವಿದ್ಯಾರ್ಥಿನಿಯೊರ್ವಳು ಅಪಾಯದಿಂದ ಪಾರಾಗಿದ್ದು, ಮನೆಗೆ ಹಾನಿಯಾದ ಘಟನೆ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಕಲ್ಪಲೆ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.
ಘಟನೆಯಿಂದ ಸುಮಾರು 1 ಲಕ್ಷ ನಷ್ಟ ಸಂಭವಿಸಿದೆ. ಕಲ್ಮಲೆ ನಿವಾಸಿ ರಘರಾಮ ಶೆಟ್ಟಿ ಅವರ ಮನೆಗೆ ಸಂಜೆ ವೇಳೆ ಸಿಡಿಲು ಬಡಿದ ಘಟನೆಯಲ್ಲಿ ಮನೆಯ ಸಂಪೂರ್ಣ ಬಿರುಕುಬಿಟ್ಟಿದ್ದು, ವಿದ್ಯುತ್ ಮೀಟರ್ ಹಾಗೂವ ವಯರ್ ಗಳು ಸಂಪೂರ್ಣ ಕೆಟ್ಟುಹೋಗಿದೆ.
ಸಿಡಿಲು ಬಡಿಯುವ ವೇಳೆ ಕಾಲೇಜು ವಿದ್ಯಾರ್ಥಿನಿ ರಘರಾಮ ಅವರ ಮಗಳು ಪ್ರಜಿತ ಅವರಿಗೆ ಆನ್ ಲೈನ್ ಕ್ಲಾಸು ನಡೆಯುತ್ತಿದ್ದು ಅವರು ಮೊಬೈಲ್ ಇಯರ್ ಪೋನ್ ಬಳಸಿ ಮನೆಯ ಕೋಣೆಯಲ್ಲಿ ಕ್ಲಾಸ್ ನ ಪಾಠ ಕೇಳುತ್ತಿದ್ದರು, ಸಂಜೆ ವೇಳೆ ಅಚಾನಕ್ ಆಗಿ ಸಿಡಿಲು ಬಡಿದ ಪರಿಣಾಮ ಆನ್ ಲೈನ್ ಕ್ಲಾಸ್ ನಲ್ಲಿದ್ದ ರಜಿತ ಅವರ ಕಿವಿಗೆ ಸಿಡಿಲಿನ ಅಘಾತವಾಗಿದೆ.
ಇಯರ್ ಪೋನ್ ಮೂಲಕ ಪಾಠ ಕೇಳುತ್ತಿದ್ದ ಪ್ರಜಿತ ಅವರ ಕಿವಿಗೆ ಸ್ವಲ್ಪ ಮಟ್ಟಿಗೆ ಅಘಾತವಾಗಿದೆ ಎಂದು ಮನೆಯವರು ತಿಳಿಸಿದ್ದಾರೆ. ಇನ್ನೋರ್ವ ಮಗಳು ರಕ್ಷಿತಾ ಅವರು ಬಚ್ಚಲು ಕೋಣೆಯಲ್ಲಿದ್ದು ಅವರು ಕುಸಿದು ಬಿದ್ದ ಘಟನೆ ನಡೆದಿದೆ.
ಯಾವುದೇ ಪ್ರಾಣಾಪಾಯವಾಗಿಲ್ಲ, ಇವರ ಜೊತೆಗೆ ಪತ್ನಿ ಮತ್ತು ಅಳಿಯ ಮನೆಯಲ್ಲಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಶೀಲಾನಿರ್ಮಲ ವೇಗಸ್, ಸದಸ್ಯ ರಾದ ಅಬ್ದುಲ್ ರಹಮಾನ್, ಜಯಪ್ರಸಾದ್, ಸಂದೀಪ್, ಗ್ರಾಮ ಕರಣೀಕ ಕರಿಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.