Thursday, September 29, 2022

ಬಿಜೆಪಿ ಕಾರ್ಯಕರ್ತ ಖಾಲಿದ್ ನಂದಾವರಗೆ ಜೀವಬೆದರಿಕೆ: ಬಂಟ್ವಾಳ DYSPಗೆ ದೂರು

ಮಂಗಳೂರು: ಬಿಜೆಪಿ ಕಾರ್ಯಕರ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಬೋರ್ಡ್‌ ಸದಸ್ಯರ ಜೀವಬೆದರಿಕೆ ಇರುವ ಬಗ್ಗೆ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿಗೆ ದೂರು ನೀಡಿದ್ದಾರೆ.

  ಖಾಲಿದ್ ನಂದಾವರ

ದ.ಕ ಜಿಲ್ಲಾ ವಕ್ಫ್‌ ಬೋರ್ಡ್ ಸದಸ್ಯ ಖಾಲಿದ್ ನಂದಾವರ ಅವರು ಬಿಜೆಪಿಯ ಸಕ್ರಿಯ ಕಾರ್ಯಕತರು. ಜೊತೆಗೆ ಆರ್‌ಟಿಐ ಕಾರ್ಯಕರ್ತ.

ಬಂಟ್ವಾಳದಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡ, ಮರಳುಗಾರಿಕೆ ಸೇರಿ ಹಲವು ಅಕ್ರಮಗಳ ವಿರುದ್ಧ ಆಯಾ ಇಲಾಖೆಗೆ ಲಿಖಿತ ದೂರು ನೀಡುತ್ತಿದ್ದರು. ಈ ಬಗ್ಗೆ ಕೊಲ್ಲಿ ರಾಷ್ಟ್ರಗಳಿಂದ ಅವರಿಗೆ ಜೀವಬೆದರಿಕೆ ಕರೆಗಳು ಬರುತ್ತಿತ್ತು.

ಈ ಬಗ್ಗೆ ಹಿಂದೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ಆ.18 ರಂದು ಖಾಲಿದ್ ಅವರ ಸ್ನೇಹಿತರೊಬ್ಬರು ಕರೆ ಮಾಡಿ “ನೀವು ಸ್ವಲ್ಪ ದಿನ ಹುಷಾರಾಗಿರಿ, ನಿಮ್ಮ ಮೇಲೆ ದಾಳಿ ನಡೆಸುವ ಸಂಭವ ಇದೆ” ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಖಾಲಿದ್‌ ಅವರು ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

‘ಪುರಾಣ ಜ್ಞಾನ ನೀಡುವ ಅದ್ಭುತವಾದ ಕಲೆ ಯಕ್ಷಗಾನ’

ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 29 ನೆಯ ಸರಣಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ CA ಗಿರಿಧರ ಕಾಮತ್ ಯಕ್ಷಗಾನ ಕಲೆಯು ಪುರಾಣ ಜ್ಞಾನ ನೀಡುವಷ್ಟು ಬೇರೆ ಯಾವ ಮಾಧ್ಯಮವೂ...

ಅಪರಿಚಿತರಿಂದ ಕಾಲಿವುಡ್‌ ‘ಆ್ಯಕ್ಷನ್‌ ಸ್ಟಾರ್’ ವಿಶಾಲ್ ಮನೆಗೆ ಕಲ್ಲು ತೂರಾಟ

ಚೆನ್ನೈ: ಕಾಲಿವುಡ್‌ನ 'ಆ್ಯಕ್ಷನ್‌ ಸ್ಟಾರ್' ನಟ ವಿಶಾಲ್ ಅವರ ಮನೆಗೆ ಯಾರೋ ಅಪರಿಚಿತ ಗನ್‌ಮ್ಯಾನ್‌ಗಳು ನುಗ್ಗಿ ಆಕ್ರಮಣ ಮಾಡಿ ಕಲ್ಲುತೂರಾಟ ಮಾಡಿದ್ದಾರೆ. ಅದರ ಪರಿಣಾಮವಾಗಿ ಮನೆಯ ಕಿಟಕಿ ಗಾಜುಗಳು ಒಡೆದಿರುವ ಘಟನೆ ಚೆನ್ನೈಯಲ್ಲಿ...

ಸುಳ್ಯ: ಮಾಡರ್ನ್‌ಯುಗಕ್ಕೆ ಹೊಂದಿಕೊಂಡ ಕಾಗೆ ತನ್ನ ಗೂಡು ಹೆಣೆದಿದ್ದು ಕಬ್ಬಿಣದ ತಂತಿಯಲ್ಲಿ..!

ಸುಳ್ಯ: ಕಾಗೆಯೊಂದು ಕಬ್ಬಿಣದ ತಂತಿಗಳನ್ನೇ ಬಳಸಿ ಗೂಡು ಹೆಣೆದಿರುವ ಅದ್ಭುತ ಘಟನೆ ಸುಳ್ಯದ ಚೊಕ್ಕಾಡಿಯಲ್ಲಿ ನಡೆದಿದೆ.ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ಆವರಣದಲ್ಲಿ ಸ್ವಚ್ಚತೆ ಕಾರ್ಯ ಕೈಗೊಂಡ ವೇಳೆ ಮರವೊಂದರ ಕೊಂಬೆಯಲ್ಲಿ ಈ...