ಅನೇಕ ಜನರು ವಾಸ್ತು ಪ್ರಕಾರ ಮನೆ, ಕಛೇರಿಗಳನ್ನು ನಿರ್ಮಿಸುತ್ತಾರೆ. ಅಲ್ಲದೇ ವಾಸ್ತು ಪ್ರಕಾರನೇ ಕೆಲಸ ಮಾಡುತ್ತಾರೆ. ಆದರೆ ವಾಸ್ತು ಪ್ರಕಾರ, ದಿಕ್ಕುಗಳು ನಿದ್ರೆಯ ಗುಣಮಟ್ಟ ಮತ್ತು ಮಾನಸಿಕ ಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ವಾಸ್ತು ಶಾಸ್ತ್ರದ ತಜ್ಞರು ಹೇಳುತ್ತಾರೆ. ಹೌದು ಕೆಲವರು ಅಸಡ್ಡೆಯಿಂದ ಎಲ್ಲಿ ಮಲಗಿದರೇನು ನಿದ್ದೆ ಬಂದರೆ ಆಯಿತು ಎಂದು ಮಲಗುತ್ತಾರೆ. ಆದರೆ ಇದು ಸರಿಯಲ್ಲ. ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಕು ಎನ್ನುತ್ತಾರೆ ತಜ್ಞರು.
ಮಲಗುವಾಗ ತಪ್ಪು ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ನೀವು ಸಮಸ್ಯೆಗಳನ್ನು ಎದುರಿಸಬಹುದು.. ಮಲಗುವಾಗ ವಾಸ್ತು ನಿಯಮಗಳನ್ನು ಪಾಲಿಸಬೇಕು. ಈ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ದೇಹಕ್ಕೆ ಹಲವಾರು ರೀತಿಯಲ್ಲಿ ಹಾನಿಯಾಗಬಹುದು.. ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಜೀವನದಲ್ಲಿ ಸುಖ ಮತ್ತು ಸಮೃದ್ಧಿ ದೊರೆಯುತ್ತದೆ ಮತ್ತು ಯಾವುದೇ ಸಮಸ್ಯೆಗಳಿದ್ದರೂ ದೂರವಾಗುತ್ತವೆ.
ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಇದು ನಿಮ್ಮನ್ನು ದಿನವಿಡೀ ಫ್ರೆಶ್ ಆಗಿರಿಸುತ್ತದೆ. ದಕ್ಷಿಣಕ್ಕೆ ತಲೆ ಇಟ್ಟು ಮಲಗಿದರೆ ಉತ್ತಮ ನಿದ್ದೆ ಬರುತ್ತದೆ. ಜೊತೆಗೆ, ಗಮನ, ಸ್ಮರಣ, ಮಾನಸಿಕ ಸ್ಪಷ್ಟತೆ ಸುಧಾರಿಸುತ್ತದೆ.
ಪಶ್ಚಿಮಕ್ಕೆ ತಲೆ ಇಟ್ಟು ಮಲಗಬಹುದು. ಆದರೆ ಪಶ್ಚಿಮ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಸ್ಥಿರವಾದ ನಿದ್ರೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಪೂರ್ವದಿಕ್ಕಿಗೆ ತಲೆ ಇಟ್ಟು ಮಲಗುವುದು ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಹೀಗೆ ಮಲಗುವುದರಿಂದ ಧ್ಯಾನಸ್ಥ ನಿದ್ರೆ ಬರುತ್ತದೆ. ಅಲ್ಲದೇ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ. ಹೆಚ್ಚಿನ ಜನರು ಪೂರ್ವಕ್ಕೆ ತಲೆಯಿಟ್ಟು ಮಲಗಲು ಶಿಫಾರಸು ಮಾಡುತ್ತಾರೆ.