Connect with us

    LATEST NEWS

    ಮನೆಯ ಈ ದಿಕ್ಕಿಗೆ ಮಲಗಿದ್ರೆ ಸಾಕು ಥಟ್ ಅಂತಾ ಗಾಢ ನಿದ್ರೆ ಬರುತ್ತೆ..!

    Published

    on

    ಅನೇಕ ಜನರು ವಾಸ್ತು ಪ್ರಕಾರ ಮನೆ, ಕಛೇರಿಗಳನ್ನು ನಿರ್ಮಿಸುತ್ತಾರೆ. ಅಲ್ಲದೇ ವಾಸ್ತು ಪ್ರಕಾರನೇ ಕೆಲಸ ಮಾಡುತ್ತಾರೆ. ಆದರೆ ವಾಸ್ತು ಪ್ರಕಾರ, ದಿಕ್ಕುಗಳು ನಿದ್ರೆಯ ಗುಣಮಟ್ಟ ಮತ್ತು ಮಾನಸಿಕ ಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ವಾಸ್ತು ಶಾಸ್ತ್ರದ ತಜ್ಞರು ಹೇಳುತ್ತಾರೆ. ಹೌದು ಕೆಲವರು ಅಸಡ್ಡೆಯಿಂದ ಎಲ್ಲಿ ಮಲಗಿದರೇನು ನಿದ್ದೆ ಬಂದರೆ ಆಯಿತು ಎಂದು ಮಲಗುತ್ತಾರೆ. ಆದರೆ ಇದು ಸರಿಯಲ್ಲ. ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಕು ಎನ್ನುತ್ತಾರೆ ತಜ್ಞರು.

    ಮಲಗುವಾಗ ತಪ್ಪು ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ನೀವು ಸಮಸ್ಯೆಗಳನ್ನು ಎದುರಿಸಬಹುದು.. ಮಲಗುವಾಗ ವಾಸ್ತು ನಿಯಮಗಳನ್ನು ಪಾಲಿಸಬೇಕು. ಈ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ದೇಹಕ್ಕೆ ಹಲವಾರು ರೀತಿಯಲ್ಲಿ ಹಾನಿಯಾಗಬಹುದು.. ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಜೀವನದಲ್ಲಿ ಸುಖ ಮತ್ತು ಸಮೃದ್ಧಿ ದೊರೆಯುತ್ತದೆ ಮತ್ತು ಯಾವುದೇ ಸಮಸ್ಯೆಗಳಿದ್ದರೂ ದೂರವಾಗುತ್ತವೆ.

    ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಇದು ನಿಮ್ಮನ್ನು ದಿನವಿಡೀ ಫ್ರೆಶ್ ಆಗಿರಿಸುತ್ತದೆ. ದಕ್ಷಿಣಕ್ಕೆ ತಲೆ ಇಟ್ಟು ಮಲಗಿದರೆ ಉತ್ತಮ ನಿದ್ದೆ ಬರುತ್ತದೆ. ಜೊತೆಗೆ, ಗಮನ, ಸ್ಮರಣ, ಮಾನಸಿಕ ಸ್ಪಷ್ಟತೆ ಸುಧಾರಿಸುತ್ತದೆ.

    ಪಶ್ಚಿಮಕ್ಕೆ ತಲೆ ಇಟ್ಟು ಮಲಗಬಹುದು. ಆದರೆ ಪಶ್ಚಿಮ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಸ್ಥಿರವಾದ ನಿದ್ರೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಪೂರ್ವದಿಕ್ಕಿಗೆ ತಲೆ ಇಟ್ಟು ಮಲಗುವುದು ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಹೀಗೆ ಮಲಗುವುದರಿಂದ ಧ್ಯಾನಸ್ಥ ನಿದ್ರೆ ಬರುತ್ತದೆ. ಅಲ್ಲದೇ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ. ಹೆಚ್ಚಿನ ಜನರು ಪೂರ್ವಕ್ಕೆ ತಲೆಯಿಟ್ಟು ಮಲಗಲು ಶಿಫಾರಸು ಮಾಡುತ್ತಾರೆ.

    LATEST NEWS

    ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಐವರು ಯುವಕರು

    Published

    on

    ಮಂಗಳೂರು/ಹೈದರಾಬಾದ್ : ರೀಲ್ಸ್ ಮಾಡಲು ಹೋದ ಐವರು ಯುವಕರು ನೀರುಪಾಲಾದ ಘಟನೆ ತೆಲಂಗಾಣದ ಸಿದ್ದಿ ಪೇಟ್ ಜಿಲ್ಲೆಯ ಕೊಂಡ ಪೋಚಮ್ಮ ಸಾಗರ ಜಲಾಶಯದಲ್ಲಿ ನಡೆದಿದೆ.

    ಇಂದು ಏಳು ಮಂದಿ ಯುವಕರ ತಂಡ ಬೆಳಗ್ಗೆ ಒಂಬತ್ತರ ಸುಮಾರಿಗೆ ಜಲಾಶಯದ ಬಳಿ ಬಂದು, ಅಲ್ಲೇ ತಿರುಗಾಡಿ ಕೊನೆಗೆ ನೀರಿಗೆ ಇಳಿದಿದ್ದರು. ನೀರಿಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದ ದೃಶ್ಯವನ್ನು ಈಜು ಬಾರದ ಇಬ್ಬರು ಬದಿಯಲ್ಲಿ ನಿಂತು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು.

    ಇದನ್ನೂ ಓದಿ: ಕಡಬ : ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಬಾಣಂತಿ ಸಾ*ವು

    ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಐವರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಇಬ್ಬರು ಅವರ ರಕ್ಷಣೆಗೆ ಮುಂದಾದ್ರೂ ಸಾಧ್ಯವಾಗಿಲ್ಲ. ಮುಶೀರಾಬಾದ್‌ನ ಸಹೋದರರಾದ ಧನುಷ್ (20), ಲೋಹಿತ್ (17), ಬನ್ಸಿಲಾಲ್ ಪೇಟೆಯ ದಿನೇಶ್ವರ್ (17), ಖೈರತಾಬಾದ್‌ನ ಚಾಂತಲ್ ಬಸ್ತಿಯ ಜತಿನ್ (17), ಮತ್ತು ಸಾಹಿಲ್ (19) ನೀರುಪಾಲಾದ ಯುವಕರು. ಮೃಗಾಂಕ್‌ (17) ಮತ್ತು ಇಬ್ರಾಹಿಂ (19) ಇಬ್ಬರಿಗೂ ಈಜು ಬರುತ್ತಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

    ಜಲಾಶಯದ ಬಳಿ ಜನರ ಓಡಾಟ ಕಡಿಮೆ ಇದ್ದ ಕಾರಣ ಮುಳುಗುತ್ತಿದ್ದ ಐವರ ರಕ್ಷಣೆಗೆ ಯಾರೂ ಸಿಗಲಿಲ್ಲ ಎಂದು, ಬದುಕಿ ಉಳಿದ ಇಬ್ಬರು ಸ್ನೇಹಿತರು ಪೊಲೀಸರ ಬಳಿ ಹೇಳಿದ್ದಾರೆ.

     

    Continue Reading

    DAKSHINA KANNADA

    ನರಿಂಗಾನ ಜೋಡುಕರೆ ಕಂಬಳ ಕಣ್ತುಂಬಿಕೊಂಡ ಶಾನ್ವಿ ಶ್ರೀವಾಸ್ತವ್

    Published

    on

    ಉಳ್ಳಾಲ : ಕೊಣಾಜೆ ದೇರಳಕಟ್ಟೆ ಸಮೀಪದಲ್ಲಿ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಲವ- ಕುಶ ಜೋಡುಕರೆ ನರಿಂಗಾನ ಜೋಡುಕರೆ ಕಂಬಳೋತ್ಸವಕ್ಕೆ ಶನಿವಾರ ಚಾಲನೆ ದೊರಕಿದ್ದು, ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗವಹಿಸಿದ್ದರು.

    ಸಿಎಂ ಅವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಆರತಿ ಬೆಳಗಿ ಸ್ವಾಗತಿಸಲಾಯಿತು. ಸ್ಪೀಕರ್ ಯು ಟಿ ಖಾದರ್ ಸಿಎಂ ಅವರನ್ನು ವೇದಿಕೆಗೆ ಕರೆದುಕೊಂಡು ಬಂದರು. ಸಭಾ ಕಾರ್ಯಕ್ರಮವನ್ನು ಸಿಎಂ ಅವರು ಉದ್ಘಾಟಿಸಿದರು.

    ಇದನ್ನೂ ಓದಿ: ನರಿಂಗಾನ ಕಂಬಳದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ; ತುಳುವಿಗೆ ಎರಡನೇ ರಾಜ್ಯಭಾಷೆ ಸ್ಥಾನಮಾನದ ಭರವಸೆ 

    ಇಂದಿನ ಕಂಬಳ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಶಾನ್ವಿ ಶ್ರೀವಾಸ್ತವ್, ಕಂಬಳದ ಓಟವನ್ನು ಬೆರಗುಗಣ್ಣಿನಿಂದ ವೀಕ್ಷಣೆ ಮಾಡಿದರು. ಮಾತ್ರವಲ್ಲದೆ ಕಂಬಳದ ಓಟವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡರು.

    Continue Reading

    DAKSHINA KANNADA

    60 ರೂ. ಗಡಿ ದಾಟಿದ ತೆಂಗಿನಕಾಯಿ ಬೆಲೆ

    Published

    on

    ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ತೆಂಗಿನಕಾಯಿ ದರ ಭಾರಿ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

    ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆ ತೆಂಗಿನಕಾಯಿ ಕಡಿಮೆಯಾಗಿದ್ದು, ಈ ಹಿನ್ನೆಲೆ ದರ ಏರಿಕೆಯಾಗಿದೆ.

    ಈ ಮೊದಲು ಒಂದು ತೆಂಗಿನಕಾಯಿಗೆ 20, 25, 30 ರೂ. ದರ ಇತ್ತು. ಈಗ 65 ರೂ.ವರೆಗೆ ಮಾರಾಟವಾಗುತ್ತಿದೆ. ಕೆಜಿಗೆ 32-33 ಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಈಗ 60 ರೂ.ಗೆ ತಲುಪಿದೆ. ತೆಂಗಿನ ಇಳುವರಿ ಕಡಿಮೆಯಾಗಿದ್ದು, ಎಳನೀರಿಗೂ ಭಾರಿ ಪ್ರಮಾಣದಲ್ಲಿ ಕೊಯ್ದು ಮಾಡುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

    Continue Reading

    LATEST NEWS

    Trending