ಬಂಟ್ವಾಳ: ಹಾಡುಹಗಲೇ ವ್ಯಕ್ತಿಯೋರ್ವರಿಗೆ ತಲವಾರು ತೋರಿಸಿ ಬೆದರಿಕೆ ಹಾಕಿದ ಘಟನೆ ಬಂಟ್ವಾಳದ ಉರಿಮಜಲು ಜಂಕ್ಷನ್ ನಲ್ಲಿ ನಡೆದಿದೆ.
ರವುಫ್ ಉರಿಮಜಲು ಅವರ ಪುತ್ರ ಅಪ್ಪಿ ಯಾನೆ ಆಫೀಲ್ ಬಂಧಿತ ಆರೋಪಿ.
ಉರಿಮಜಲು ಜಂಕ್ಷನ್ ನಲ್ಲಿ ಶರೀಫ್ ಎಂಬವರಿಗೆ ಆಫೀಲ್ ತಲವಾರು ತೋರಿಸಿ ಬೆದರಿಕೆ ಹಾಕಿದ್ದಾನೆ. ಆಫೀಲ್ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ತಲ್ವಾರು ಝಳಪಿಸಿದ್ದಾನೆ ಎನ್ನಲಾಗಿದೆ.
ಹಾಡುಹಗಲೇ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಆಫೀಲ್ ಅಕ್ರಮ ಗೋ ಸಾಗಾಟದಲ್ಲಿ ಸಿಕ್ಕಿ ಬಿದ್ದಿದ್ದನು. ಇಂದು ಆಫೀಲ್ ತಲವಾರು ಹಿಡಿದು ಶರೀಫ್ ಆಗಮನಕ್ಕಾಗಿ ಕಾದು ಕುಳಿತ್ತಿದ್ದು ಬಳಿಕ ಆತನ ಮೇಲೆ ದಾಳಿ ನಡೆಸಿದ್ದಾನೆ.
ಶರೀಫ್ ನೀಡಿದ ದೂರಿನಂತೆ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಭಾರಿ ಗಾತ್ರದ ತಲವಾರು ವಶಕ್ಕೆ ಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.