Connect with us

3 ಗಂಟೆ 40 ನಿಮಿಷದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ… ಯು.ಟಿ.ಖಾದರ್‌ರನ್ನು ತಲುಪಿಸಿದ ಲಿಬ್ಝತ್ ದಾಖಲೆ..!

Published

on

3 ಗಂಟೆ 40 ನಿಮಿಷದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ… ಯು.ಟಿ.ಖಾದರ್‌ರನ್ನು ತಲುಪಿಸಿದ ಲಿಬ್ಝತ್ ದಾಖಲೆ..!

ಅಂದು ಮಾರ್ಚ್ 26, 2014. ಬಿ. ಜನಾರ್ದನ ಪೂಜಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ದಿನ. ಜಿಲ್ಲಾಧಿಕಾರಿ ಕಛೇರಿಯಲ್ಲಿ ಬೆಳಿಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಕೆ. ಆಗ ಮಂಗಳೂರು ಶಾಸಕರಾಗಿದ್ದ ಯು.ಟಿ.ಖಾದರ್, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು. ಮಹಮ್ಮದ್ ಲಿಬ್ಝತ್ ಸಚಿವರ ಆಪ್ತ ಸಹಾಯಕರು.

ಯು.ಟಿ.ಖಾದರ್ ಅವರಿಗೆ ಅಂದು ಸಂಜೆ 4 ಗಂಟೆಗೆ ಬೆಂಗಳೂರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತುರ್ತು ಕ್ಯಾಬಿನೆಟ್ ಸಭೆ ಕರೆದಿದ್ದರು. ಇತ್ತ ಪೂಜಾರಿಯವರ ನಾಮಪತ್ರ ಸಲ್ಲಿಕೆಯಲ್ಲೂ ಭಾಗವಹಿಸಬೇಕಿತ್ತು. ಈ ಮಧ್ಯೆ ಮಂಗಳೂರಿನಿಂದ ಬೆಂಗಳೂರಿಗೆ ವಿಮಾನವೂ ಇಲ್ಲ. ಮಿನಿಸ್ಟರ್ ಸರಕಾರಿ ಇನ್ನೋವಾದಲ್ಲಿ ಹೋದರೆ ಕ್ಯಾಬಿನೆಟ್ ಗೆ ತಲುಪುವುದು ಕಷ್ಟ. ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಗುರಿ ಮುಟ್ಟಿಸಿದವರೇ ಪಿಎ ಲಿಬ್ಝತ್.

 

ಮಂಗಳೂರು ಜಿಲ್ಲಾಧಿಕಾರಿ ಕಛೇರಿಯಿಂದ ನಾಮಪತ್ರ ಸಲ್ಲಿಸಿದ ಬಳಿಕ ಮಧ್ಯಾಹ್ನ 12:00 ಗಂಟೆಗೆ ಹೊರಟ ಖಾಸಗಿ ಆಡಿ ಕಾರಲ್ಲಿ ಲಿಬ್ಝತ್ ಡ್ರೈವಿಂಗ್ ಸೀಟ್‌ನಲ್ಲಿ ಕೂತರೆ, ಯು.ಟಿ.ಖಾದರ್ ಕಾರು ಹತ್ತಿದರು. ಖಾಸಗಿ ಅಂದ್ರೆ ಹೇಳಬೇಕೇ, ಟ್ರಾಫಿಕ್ ನಡುವೆ ಹೋಗಬೇಕು. ಮಂಗಳೂರಿನಿಂದ ಬೆಂಗಳೂರು ತನಕ ಸಿಗುವ ಆರೇಳು ಟೋಲ್ ಬೂತ್’ಗಳಲ್ಲಿ ಕ್ಯೂ ನಿಲ್ಲಬೇಕು. ನೆಲಮಂಗಲ ನಂತರದ ಟ್ರಾಫಿಕ್ ಕಿರಿಕಿರಿ ಮಧ್ಯೆ ಮುನ್ನುಗ್ಗಬೇಕು. ಈ ಮಧ್ಯೆ ಆಗಾಗ ಸಚಿವರಿಗೆ ಬರುತ್ತಿದ್ದ ಫೋನನ್ನು ಲಿಬ್ಝತ್ ಅಟೆಂಡ್ ಮಾಡಿ ಕೊಡಬೇಕು. ಇವನ್ನೆಲ್ಲಾ ದಾಟಿ ರಿಸ್ಕ್ ತೆಗೆದುಕೊಂಡು 3.40ಕ್ಕೆ ಬೆಂಗಳೂರಿನ ಜಯಮಹಲ್ ತಲುಪಿಸಿದ ಲಿಬ್ಝತ್ ಕೆಚ್ಛೆದೆಯ ಅತೀ ಸ್ಪೀಡ್ ಚಾಲನೆಗೆ 2014ರಲ್ಲೇ ದಾಖಲೆ ಬರೆದಿದ್ದು ಇಂದೂ ನೆನಪಾಗುತ್ತಿದೆ.

ಕೇವಲ 3 ಗಂಟೆ 40 ನಿಮಿಷದಲ್ಲಿ ಗುರಿ ಮುಟ್ಟಿಸಿದರು. 03:40ಕ್ಕೆ ಜಯಮಹಲ್ ನಲ್ಲಿ ಊಟ ಮಾಡಿ 03:55ಕ್ಕೆ ಸಿದ್ಧರಾಮಯ್ಯ ಅವರ ಕಾರು ವಿಧಾನಸೌಧ ಎಂಟ್ರಿಯಾಗುವಾಗ ಯು.ಟಿ.ಖಾದರ್ ಅವರ ‘ಆಡಿ’ ಕಾರು ಅದರ ಹಿಂಬದಿಯಲ್ಲಿತ್ತು.

 

ಇಂತಹುದೇ ಘಟನೆ ಮತ್ತೊಮ್ಮೆ ನಡೆದಿತ್ತು. ಧರ್ಮಸ್ಥಳದಲ್ಲಿ ಕಾರ್ಯಕ್ರಮ. ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದಿಂದ ಮಂಗಳೂರು ಸರ್ಕ್ಯೂಟ್ ಹೌಸ್‌ಗೆ ಹೆಲಿಕಾಪ್ಟರ್ ನಲ್ಲಿ ಹೊರಟಿದ್ದರು. ಸಿದ್ದರಾಮಯ್ಯ ಹೆಲಿಕಾಪ್ಟರ್ ಹತ್ತಿ ಅದರ ಫ್ಯಾನ್ ತಿರುಗುವವರೆಗೂ ಯು.ಟಿ.ಖಾದರ್ ಧರ್ಮಸ್ಥಳದ ಹೆಲಿಪ್ಯಾಡಿನಲ್ಲೇ ಇದ್ದರು. ಸಿದ್ದರಾಮಯ್ಯ ಮಂಗಳೂರು ತಲುಪುವಾಗ ಸಚಿವ ಯು.ಟಿ.ಖಾದರ್ ಮಾರ್ಗ ಮೂಲಕ ಮಂಗಳೂರಿಗೆ ಹೋಗುವ ಅನಿವಾರ್ಯ ಪರಿಸ್ಥಿತಿ. ಆಗಲೂ ಡ್ರೈವರ್ ಸೀಟಲ್ಲಿ ಕೂತವರು ಅವರ ಪಿಎ ಮಹಮ್ಮದ್ ಲಿಬ್ಝತ್.

 

ಧರ್ಮಸ್ಥಳದಿಂದ ಮಂಗಳೂರಿನ ಅಗಲ ಕಿರಿದಾದ ತಿರುವು-ಮುರುವು ರಸ್ತೆ ಗೊತ್ತೇ ಇದೆ. ಜೊತೆಗೆ ವಿಪರೀತ ವಾಹನ ಟ್ರಾಫಿಕ್ ಬೇರೆ. ಇದನ್ನೆಲ್ಲಾ ದಾಟಬೇಕು. ಬೆಳ್ತಂಗಡಿ ಮತ್ತು ವಗ್ಗದಲ್ಲಿ ತಲಾ ಐದೈದು ನಿಮಿಷ ಸಚಿವ ಯು.ಟಿ.ಖಾದರ್ ಅಭಿಮಾನಿಗಳಿಗೋಸ್ಕರ ನಿಲ್ಲಿಸಿದ್ದರು. ವಗ್ಗ ತಲುಪುವಾಗ ಹೆಲಿಕಾಪ್ಟರ್ ನೇರ ಮೇಲಿಂದ ಹಾರುವುದು ಕಾಣಿಸುತ್ತಿತ್ತು. ಕಾರಲ್ಲಿ ಡೀಸೆಲ್ ಮುಗಿದ ಕಾರಣ ಅಡ್ಯಾರ್ ಪಂಪ್‌ನಲ್ಲೂ ಐದು ನಿಮಿಷ ನಿಲ್ಲಬೇಕಾಯಿತು.

ಇವೆಲ್ಲವನ್ನೂ ದಾಟಿ ಸಿದ್ದರಾಮಯ್ಯ ಅವರು ಸರ್ಕ್ಯೂಟ್ ಹೌಸಿನ ಮೆಟ್ಟಿಲು ಹತ್ತುವ ಮುನ್ನ ಯು.ಟಿ.ಖಾದರ್ ಸ್ವಾಗತಿಸಲು ಅಲ್ಲಿದ್ದರು. ಅಂದು ಖಾದರನ್ನು ನೋಡಿ ಖುದ್ದು ಸಿದ್ದರಾಮಯ್ಯನವರಿಗೆ ಆಶ್ಚರ್ಯವಾಗಿತ್ತು.

BIG BOSS

BBK 11: ತ್ರಿವಿಕ್ರಮ್‌ ಡೇಂಜರ್‌ ಎಂದ ಭವ್ಯಾ ಗೌಡ

Published

on

ಬಿಗ್ ಬಾಸ್ ಮನೆಯ ಆಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಈ ವಾರ ಫ್ಯಾಮಿಲಿ ರೌಂಡ್‌ನಿಂದ ಜಾಲಿ ಮೂಡ್‌ನಲ್ಲಿದ್ದ ಸ್ಪರ್ಧಿಗಳಿಗೆ ಸುದೀಪ್ ಶಾಕ್ ಕೊಟ್ಟಿದ್ದಾರೆ. ಎಂದಿನಂತೆ ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ ಈ ವಾರವು ಸ್ಪರ್ಧಿಗಳಿಗೆ ಚಟುವಟಿಕೆ ಒಂದನ್ನು ಕೊಟ್ಟಿದ್ದಾರೆ. ಅದುವೆ ಈ ಬಿಗ್ ಬಾಸ್ ಮನೆಯಲ್ಲಿ ಯಾರು ಡೇಂಜರ್, ಯಾರು ಜೋಕರ್? ಎಂದು ಮನೆ ಮಂದಿಗೆ ಕಿಚ್ಚ ಕೇಳಿದ್ದಾರೆ. ಈ ವೇಳೆ, ಕಿಚ್ಚನ ಮುಂದೆ ತ್ರಿವಿಕ್ರಮ್‌ ಡೇಂಜರ್‌ ಎಂದು ಹೇಳಿದ್ದಾರೆ.

ಹೌದು, ಈ ಜರ್ನಿಯಲ್ಲಿ ನೀವು ಯಾರು ಅಂತ ಇನ್ನೊಬ್ಬರಿಗೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಒಂದು ಬೋರ್ಡ್ ಮೇಲೆ ಸ್ಪರ್ಧಿಗಳು ಈ ಮನೆಯಲ್ಲಿ ಯಾರು ಡೇಂಜರ್? ಯಾರು ಜೋಕರ್? ಹಾಗೂ ಯಾರು ಕಾಂಪಿಟೆಟರ್? ಅಂತ ಬರೆಯಲಾಗಿದೆ. ಅದರಂತೆ ಈ ಮನೆಯಲ್ಲಿರೋ ಸ್ಪರ್ಧಿಗಳಿಗೆ ಏನೇನೂ ಹೋಗುತ್ತೆ ಅಂತ ಬಾಣದ ಮೂಲಕ ಚುಚ್ಚಬೇಕು. ಅದರಂತೆ ಭವ್ಯಾ ಗೌಡ ಅವರು ‘ಡೇಂಜರ್’ ಜಾಗಕ್ಕೆ ತ್ರಿವಿಕ್ರಮ್ ಫೋಟೋವನ್ನು ಅಂಟಿಸಿದ್ದಾರೆ. ತ್ರಿವಿಕ್ರಮ್‌ ಡೇಂಜರ್‌ ಎಂದು ಭವ್ಯಾ ಹೇಳಿದ್ದಾರೆ.

ಉಳಿದಂತೆ ರಜತ್ ಹಾಗೂ ಹನುಮಂತ ಚೈತ್ರಾಗೆ ಜೋಕರ್ ಪಟ್ಟ ಕೊಟ್ಟಿದ್ದಾರೆ. ಚೈತ್ರಕ್ಕಾಗೆ ನಾನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅಂತ ಹನುಮಂತ ಹೇಳಿದ್ದಾರೆ. ಬಳಿಕ ಮಾತಾಡಿ ರಜತ್ ಅವರು ಚೈತ್ರಾ ಅವರು ಬಂದು 14 ವಾರ ಆಗಿದೆ. ಇಲ್ಲಿತನಕ ಅವರು ಇಷ್ಟು ಸಂಪಾದನೆ ಮಾಡಿದ್ದಾರೆ ಎಂದು ಈ ಚಟುವಟಿಕೆಯಿಂದ ತಿಳಿಯುತ್ತಿದೆ. ಹೀಗಾಗಿ ಅವರನ್ನು ಜೋಕರ್ ತರ ನೋಡುತ್ತಿದ್ದೇನೆ ಅಂತ ಹೇಳಿದ್ದಾರೆ.

ರಜತ್ ಮಾತಿಗೆ ಕೂಡಲೇ ಮಾತಾಡಿದ ಚೈತ್ರಾ ಕುಂದಪುರ, ಅದೇ ಜೋಕರ್ ಆಸ್ಕರ್ ಗೆದ್ದಿದ್ದನ್ನು ನಾನು ಕೇಳಿದ್ದೀನಿ, ಹೀಗಾಗಿ ಇವರುಗಳ ಅಭಿಪ್ರಾಯ ನನಗೆ ದೊಡ್ಡದು ಅಂತ ಅನಿಸುವುದೇ ಇಲ್ಲ ಅಂತ ಹೇಳಿದ್ದಾರೆ. ಬೇಕಾದ್ರೇ ಚೈತ್ರಾ ಆಸ್ಕರ್ ಗೆದ್ದುಕೊಳ್ಳಲಿ, ನಾನು ಬಿಗ್ ಬಾಸ್ ಕಪ್ ಗೆದ್ದುಕೊಂಡು ಮನೆಗೆ ಹೋಗುತ್ತೇನೆ ಅಂತ ರಜತ್ ಠಕ್ಕರ್ ಕೊಟ್ಟಿದ್ದಾರೆ.

Continue Reading

LATEST NEWS

ಬೆಳ್ಳಂಬೆಳಗ್ಗೆ ನಡೆದ ಸಿಲಿಂಡರ್ ಸ್ಪೋ*ಟ; ಕೇರಳ ಮೂಲದ ಯುವಕರು ಗಂ*ಭೀರ

Published

on

ಮಂಗಳೂರು/ಬೆಂಗಳುರು : ಬೆಳ್ಳಂಬೆಳಗ್ಗೆ ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಬ್ಲಾ*ಸ್ಟ್‌ ಆಗಿರುವ ಘಟನೆ ಬೆಂಗಳೂರಿನ ಆನೇಕಲ್‌ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಇಂದು (ಜ.6) ಮುಂಜಾನೆ ನಡೆದಿದೆ.

ಮೂಲತಃ ಕೇರಳದವರಾದ ಸುನೀಲ್‌ ಜೋಸೆಫ್‌, ವಿಷ್ಣು ಜಯರಾಜ್‌ ಗಾ*ಯಾಳುಗಳು ಎಂದು ಗುರುತಿಸಲಾಗಿದೆ.

ಇಬ್ಬರೇ ಯುವಕರು ಆ ಮನೆಯಲ್ಲಿ ವಾಸವಿದ್ದರು. ಓರ್ವನಿಗೆ ಮೈ-ಕೈಗೆಲ್ಲಾ ಗಾ*ಯ ಹಾಗೂ ಮತ್ತೋರ್ವನ ತಲೆ-ಕೈಕಾಲುಗಳಿಗೆ ಪೆ*ಟ್ಟು ಬಿದ್ದಿದೆ. ಸ್ಪೋ*ಟಕ್ಕೆ ಕಾರಣವೇನು ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಆದರೆ, ಇಡೀ ಕಟ್ಟಡ ಸ್ಫೋ*ಟದ ಕಾರಣದಿಂದ ಧ್ವಂ*ಸಗೊಂಡಿದೆ.

 

ಇದನ್ನೂ ಓದಿ : ಗುರುಪುರ : ನಗರದ ಹಲವು ಅಂಗಡಿಗಳಲ್ಲಿ ಕಳ್ಳತನ

 

ಗಾ*ಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆ ಗೋಡೆಗಳು, ಕಿಟಕಿ, ಬಾಗಿಲು, ಅಕ್ಕಪಕ್ಕದ ನಾಲ್ಕೈದು ಮನೆಗಳು, ಕೆಲವು ವಾಹನಗಳೂ ಸ್ಫೋ*ಟದ ತೀವ್ರತೆಗೆ ಭಾರೀ ಹಾ*ನಿಯಾಗಿದೆ. ಈ ಘಟನೆಯಿಂದ ಸ್ಥಳೀಯರು ಗಾ*ಬರಿಗೊಂಡಿದ್ದು,  ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

FILM

ಯಶ್ ಫ್ಯಾನ್ಸ್‌ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್‌ನಿಂದ ಸಿಕ್ತು ಸಿಹಿ ಸುದ್ದಿ

Published

on

ನ್ಯಾಷನಲ್ ಸ್ಟಾರ್ ಯಶ್ ಅವರು ಇದೇ ಜ.8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ದಿನ ‘ಟಾಕ್ಸಿಕ್’ ಚಿತ್ರದ ಬಗ್ಗೆ ಏನಾದರೂ ಅಪ್‌ಡೇಟ್ ಸಿಗಬಹುದು ಎಂದು ನಿರೀಕ್ಷಿಸಿದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯ ಚಿತ್ರತಂಡದ ಕಡೆಯಿಂದ ಬಿಗ್ ನ್ಯೂಸ್‌ವೊಂದು ಸಿಕ್ಕಿದೆ. ಸಿನಿಮಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಯಶ್ ಬರ್ತ್‌ಡೇಯಂದು (ಜ.8) ಬೆಳಗ್ಗೆ 10:25ಕ್ಕೆ ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್’ (Toxic) ಬಗ್ಗೆ ಅಪ್‌ಡೇಟ್ ಸಿಗಲಿದೆ ಎಂದು ಕೆವಿಎನ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಯಶ್ ಕೂಡ ಇದೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸದ್ಯ ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ಯಶ್ ಅವರು ಹಳೆಯ ಕಾಲದ ಕಾರಿನ ಮೇಲೆ ನಿಂತಿದ್ದಾರೆ. ಅವರ ಬಾಯಲ್ಲಿ ಸಿಗರೇಟ್ ಇದೆ. ತಲೆಗೆ ಹ್ಯಾಟ್ ಧರಿಸಿದ್ದಾರೆ. ಇದು ಅವರ ಗೆಟಪ್ ಎಂದು ಹೇಳಲಾಗುತ್ತಿದೆ. ಈ ಮೊದಲು ಟೈಟಲ್ ಟೀಸರ್ ಅನೌನ್ಸ್ ಮಾಡುವಾಗಲೂ ಯಶ್ ಅವರು ತಲೆಗೆ ಹ್ಯಾಟ್ ಧರಿಸಿಯೇ ಕಾಣಿಸಿಕೊಂಡಿದ್ದರು. ಇದೇ ಲುಕ್ ಸಿನಿಮಾದಲ್ಲೂ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಫ್ಯಾನ್ಸ್ ಜ.8ರಂದು ಯಶ್ ಲುಕ್ ನೋಡಲು ಕಾಯುತ್ತಿದ್ದಾರೆ.

ಇನ್ನೂ ಜ.8ರಂದು ಬೆಂಗಳೂರಿನಲ್ಲಿ ಇರುವುದಿಲ್ಲ ಬರ್ತ್‌ಡೇ ಆಚರಣೆ ಮಾಡಲ್ಲ ಎಂದು ಫ್ಯಾನ್ಸ್ ಯಶ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಯಶ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು (ಜ.8) ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ ಎಂದಿದ್ದಾರೆ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್ ಎಂದು ಬರೆದಿದ್ದರು.

Continue Reading

LATEST NEWS

Trending

Exit mobile version