ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗೆ ಜನರ ಹಗಲು ದರೋಡೆ: ಆರೋಗ್ಯ ಸಚಿವರಿಗೆ ದೂರು..!
Published
5 years agoon
By
Adminಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗೆ ಜನರ ಹಗಲು ದರೋಡೆ: ಆರೋಗ್ಯ ಸಚಿವರಿಗೆ ದೂರು..!
ಮಂಗಳೂರು: ವಿಶ್ವದಾದ್ಯಂತ ಕೊರೊನಾ ವೈರಸ್ ತಾಂಡವವಾಡುತಿದ್ರೆ, ಮೆಡಿಕಲ್ ಶಾಪ್ ಇಟ್ಟುಕೊಂಡಿರುವವರು ಜನರ ಕೈಯಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ.
ಈ ಬಗ್ಗೆ ಬೇಸರಗೊಂಡಿರುವ ನಾಗರೀಕರೊಬ್ಬರು ಇದೀಗ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ಮಾಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
“ಮಾನ್ಯ ಮಂತ್ರಿವರ್ಯರಲ್ಲಿ ಒಂದು ಕಳಕಳಿಯ ಮನವಿ, ಪ್ರಪಂಚದಾದ್ಯಂತ ಕೊರೊನ ರೋಗ ಹರಡುತಿರುವುದು ಬೇಸರದ ಸಂಗತಿ.
ಭಾರತ ಸರ್ಕಾರ ಮತ್ತು ರಾಜ್ಯ ಸರಕಾರ ಈ ಮಾರಕ ರೋಗ ಹರಡದಂತೆ ತಾವುಗಳು ತೆಗೆದುಕೊಂಡ ಕ್ರಮಗಳು ಶ್ಲಾಘನೀಯವಾಗಿದೆ.
ಆದರೆ ಈ ಮಾರಕ ರೋಗ ಹರಡದಂತೆ ಸಾರ್ವಜನಿಕರು ಸ್ಯಾನಿಟೈಸರ್ ಮತ್ತು ಮುಖಕ್ಕೆ ಮಾಸ್ಕ್ ಖರೀದಿಸಲು ಔಷಧಾಲಯಕ್ಕೆ ಹೋದಾಗ ಹಗಲು ದರೋಡೆ ನಡೆಯುತ್ತಿದೆ.
10 ರೂಪಾಯಿಯ ವಸ್ತುವಿಗೆ 100 ರಿಂದ 150 ರೂಪಾಯಿ, 20 ರೂಪಾಯಿ ವಸ್ತುವಿಗೆ 250 ಯಂತೆ ಭಾರಿ ಹಣ ತೆಗೆದುಕೊಂಡು ಹಗಲು ದರೋಡೆ ನಡೆಸುತ್ತಿದ್ದಾರೆ.
ದಯವಿಟ್ಟು ಇದರ ಬಗ್ಗೆ ನಿಗಾ ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಿ”, ಎಂದು ನೊಂದ ನಾಗರಿಕರೊಬ್ಬರು ವಿನಮ್ರ ವಿನಂತಿ ಮಾಡಿಕೊಂಡಿದ್ದಾರೆ.
You may like
ಮಂಗಳೂರು : ರಾಜ್ಯ ಸರಕಾರ ಕೆಎಸ್‌ಆರ್‌ಟಿಸಿ ಬಸ್ಸುಗಳ ಟಿಕೆಟ್ ದರವನ್ನು ಏರಿಸಿದ ಬೆನ್ನಲ್ಲೇ ದ.ಕ.ಜಿಲ್ಲೆಯ ವಿವಿಧ ರೂಟ್‌ಗಳಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಪ್ರಯಾಣ ದರವನ್ನೂ ಏರಿಸಲಾಗಿದೆ.
ಸರಕಾರಿ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಜಿಲ್ಲೆಯ ವಿವಿಧ ಬಸ್ಸು ಮಾಲಕರ ಸಂಘದವರಲ್ಲಿ ವಿಚಾರಿಸಿದಾಗ “ಸದ್ಯಕ್ಕೆ ದರ ಏರಿಕೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಮಾಡುವುದು ಅನಿವಾರ್ಯವಾದೀತು” ಎಂದು ತಿಳಿಸಿದ್ದರು. ಆದರೆ ಖಾಸಗಿ ಬಸ್‌ಗಳಲ್ಲಿ ಜ. 7ರಿಂದಲೇ ಟಿಕೆಟ್ ದರ ಏರಿಸಲಾಗಿದೆ.
ಮಂಗಳೂರಿನಿಂದ ಪ್ರತ್ಯೇಕ ರೂಟ್‌ಗಳಲ್ಲಿ ಪುತ್ತೂರು, ಉಪ್ಪಿನಂಗಡಿ, ವಿಟ್ಲ ಭಾಗಕ್ಕೆ ಈ ಬಸ್ಸುಗಳು ಓಡುತ್ತಿದ್ದು, ಇದೇ ರೂಟ್‌ನಲ್ಲಿ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ಸುಗಳೂ ಸಂಚರಿಸುತ್ತಿವೆ. ರಾಷ್ಟ್ರೀಕೃತ ರೂಟ್‌ಗಳಲ್ಲಿ ಸರಕಾರಿ ಬಸ್ಸುಗಳ ಓಡಾಟ ವ್ಯವಸ್ಥೆ ಸರಿ ಇಲ್ಲ ಎಂಬ ಕಾರಣಕ್ಕೆ 2003ರಲ್ಲಿ ಅಂದಿನ ಸರಕಾರ ಖಾಸಗಿ ಬಸ್ಸುಗಳ ಓಡಾಟಕ್ಕೆ ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಿಗೆ ನೀಡಿತ್ತು.ದರ ಏರಿಕೆ ಕುರಿತು ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜಯರಾಮ್ ಶೇಖ ಪ್ರತಿಕ್ರಿಯಿಸಿ, ನಾವು ಉಳಿದ ಬಸ್ಸುಗಳಿಗಿಂತ ಹೆಚ್ಚಿನ ಮೊತ್ತದ ತೆರಿಗೆಯನ್ನು ಪಾವತಿಸುತ್ತಿದ್ದು, ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದಿದ್ದಾರೆ.
ಕೇರಳದ ಬಸ್‌ಗಳಲ್ಲೂ ದರ ಏರಿಕೆ ??
ಕರ್ನಾಟಕಕ್ಕೆ ಕೇರಳ ರಾಜ್ಯ ಸಾರಿಗೆ ಬಸ್ (ಕೆಎಸ್ಸಾರ್ಟಿಸಿ) ಸೇವೆಗಳ ಟಿಕೆಟ್ ದರವನ್ನೂ ಜ. 7ರಿಂದ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಟಿಕೆಟ್ ದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಕೇರಳವೂ ಟಿಕೆಟ್ ದರ ಹೆಚ್ಚಳಗೊಳಿಸಿದೆ. ಅಂತಾರಾಜ್ಯ ಒಪ್ಪಂದದ ಪ್ರಕಾರ ಎರಡು ರಾಜ್ಯಗಳ ನಡುವೆ ಟಿಕೆಟ್ ದರ ಏಕರೂಪವಾಗಿರಬೇಕೆಂದು ಈ ಹಿಂದೆ ತೀರ್ಮಾನಿಸಲಾಗಿದ್ದು, ಆ ಹಿನ್ನೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.
ಪ್ರಸ್ತುತ ಕಾಸರಗೋಡು-ಮಂಗಳೂರು ಟಿಕೆಟ್ ದರ 74 ರೂ.ಯಿಂದ 81 ರೂ.ಗೇರಿದೆ. ಪುತ್ತೂರಿಗೆ 74 ರೂ. ಇದ್ದುದು 85 ರೂ., ಸುಳ್ಯಕ್ಕೆ 73 ರೂ. ಇದ್ದುದು 80 ರೂ.ಗೆ ಏರಿಕೆಯಾಗಿದೆ.
DAKSHINA KANNADA
ಪುತ್ತೂರು : ಕಾಲೇಜು ವಿದ್ಯಾರ್ಥಿನಿ ನೇ*ಣಿಗೆ ಶರಣು; ಕಾರಣ ನಿಗೂಢ
Published
20 minutes agoon
10/01/2025ಪುತ್ತೂರು : ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮನೆಯೊಳಗೆ ನೇ*ಣು ಬಿ*ಗಿದು ಆ*ತ್ಮಹ*ತ್ಯೆ ಮಾಡಿಕೊಂಡ ಘಟನೆ ಜ.9ರಂದು ಸಂಜೆ ನಡೆದಿದೆ.
ನರಿಮೊಗರು ಕೂಡುರಸ್ತೆಯ ಕೇಶವ ಜೋಗಿ ಎಂಬವರ ಪುತ್ರಿ ದೀಕ್ಷಿತಾ(17ವ) ಮೃ*ತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಶರಣಾದ ನಕ್ಸಲರನ್ನು NIA ವಿಶೇಷ ಕೋರ್ಟ್ ಗೆ ಹಾಜರುಪಡಿಸಿದ ಪೊಲೀಸರು!
ದೀಕ್ಷಿತಾ ಜ 9 ರಂದು ಕಾಲೇಜಿಗೆ ಹೋಗಿದ್ದು ಅಲ್ಲಿಂದ ಸಂಜೆ ವಾಪಸ್ಸು ಮನೆಗೆ ಬಂದಿದ್ದಾರೆ. ಬಳಿಕ ಮನೆಯ ಕೊಠಡಿಯಲ್ಲಿ ನೇ*ಣು ಬಿ*ಗಿದು ಅ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆ*ತ್ಮಹ*ತ್ಯೆಯ ಹಿಂದಿನ ಕಾರಣ ನಿಗೂಢವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
LATEST NEWS
ಮೊಸಳೆ ತಲೆ ಬುರುಡೆ ಕಳ್ಳ ಸಾಗಣೆ ಯತ್ನ; ಕೆನಡಾ ಮೂಲದ ವ್ಯಕ್ತಿ ಅರೆಸ್ಟ್
Published
16 hours agoon
09/01/2025By
NEWS DESK4ಮಂಗಳೂರು/ನವದೆಹಲಿ : ಮೊಸಳೆಯ ತಲೆಬುರುಡೆ ಕಳ್ಳಸಾಗಣೆಗೆ ಯತ್ನಿಸಿದ ಆರೋಪದಲ್ಲಿ ಕೆನಡಾ ಮೂಲದ ವ್ಯಕ್ತಿಯನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಟರ್ಮಿನಲ್ 3ರಲ್ಲಿ ಕೆನಡಾ ಮೂಲದ ವ್ಯಕ್ತಿ ಮಾಂಟ್ರಿಯಲ್‌ಗೆ ವಿಮಾನ ಹತ್ತಲು ಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮೊಸಳೆಯ ಮರಿಯನ್ನು ಹೋಲುವ ಸುಮಾರು 770 ಗ್ರಾಂ ತೂಕದ ಚೂಪಾದ ಹಲ್ಲುಗಳನ್ನು ಹೊಂದಿರುವ ತಲೆಬುರುಡೆ ಪತ್ತೆಯಾಗಿದೆ.
ದೆಹಲಿ ಸರ್ಕಾರದ ಅಧೀನದಲ್ಲಿರುವ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ನಡೆಸಿದ ಶೋಧ ಕಾರ್ಯದಲ್ಲಿ ಅದು ಮೊಸಳೆ ಮರಿಯ ತಲೆಬುರುಡೆ ಎಂಬುದಾಗಿ ದೃಢಪಟ್ಟಿದೆ. 1972ರ ವನ್ಯ ಜೀವಿ ಕಾಯ್ದೆಯಡಿಯಲ್ಲಿ ಸಂರಕ್ಷಿತ ಜಾತಿಗೆ ಸೇರಿದ ತಲೆಬುರುಡೆ ಇದಾಗಿದೆ. ಹೆಚ್ಚಿನ ವೈಜ್ಞಾನಿಕ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.