Thursday, September 29, 2022

ಸರ್ಕಾರದ ಮೇಲೆ ಒತ್ತಡ ಹಾಕೋಣ-ನಾವು ಏನೂ ಮಾಡಿಕೊಳ್ಳುವುದು ಬೇಡ: ಸತ್ಯಜಿತ್ ಸುರತ್ಕಲ್

ಸುಳ್ಯ: ‘ಸಿಟ್ಟಿನಲ್ಲಿ ಕೋಪದ ಭರದಲ್ಲಿ ನಾವು ಮತ್ತೇನನ್ನೂ ಮಾಡುವುದು ಬೇಡ. ಈ ಪ್ರತಿಯೊಂದು ಜೀವಗಳು ಅಮೂಲ್ಯ. ಸರ್ಕಾರದ ಮೇಲೆ ಮತ್ತಷ್ಟು ಒತ್ತಡವನ್ನು ಹಾಕೋಣ. ಅದಕ್ಕೆ ಅದರದ್ದೇ ಆದ ಜವಾಬ್ದಾರಿಯಿದೆ. ಮೊನ್ನೆ ಆಕ್ರೋಶ ವ್ಯಕ್ತಪಡಿಸಿ ಮನವಿ ಸಲ್ಲಿಸಿದ ಹಾಗೆ ಸರ್ಕಾರದ ಮೇಲೆ ಒತ್ತಡವನ್ನು ಹಾಕಿ ಜವಾಬ್ದಾರಿ ನಿರ್ವಹಿಸುವಂತೆ ಮಾಡೋಣ. ಇದರ ಮಧ್ಯೆ ನಾವು ನಾವು ಏನೂ ಮಾಡಿಕೊಳ್ಳುವುದೂ ಬೇಡ ಎಂದು ನಾನು ಸಮಾಜದ ಜೊತೆ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಸಾಮಾಜಿಕ ಕಾರ್ಯಕರ್ತ ಸತ್ಯಜಿತ್ ಸುರತ್ಕಲ್ ಹೇಳಿದರು.


ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಮಾತಾಡಿದ ಅವರು ‘ಮತ್ತೊಮ್ಮೆ ಜಿಹಾದಿ ಶಕ್ತಿಗಳು ತಲೆ ಎತ್ತಿ ಮರೆಯುವುದನ್ನು ಕಾಣುತ್ತಿದ್ದೇವೆ.

ನಮಗೆ ಸರ್ಕಾರ ಬದಲಾದಾಗ ಒಂದು ತೆರನಾದ ಆಶೋತ್ತರಗಳು ಇತ್ತು. ಇನ್ನು ಮುಂದೆ ಇಂತಹ ಘಟನೆಗಳು ನಡೆಯಲಿಕ್ಕಿಲ್ಲ ಅಂತ.

ಸರ್ಕಾರ ಪಿಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧ ಮಾಡ್ತೇವೆ ಅಂತ ಯಾವ ಪ್ರಣಾಳಿಕೆಯಲ್ಲಿ ಆಶ್ವಾಸನೆ ಕೊಟ್ಟಿತ್ತೋ ಆ ಮುಖೇನ ಇಂತಹ ಹತ್ಯೆಯನ್ನು ಕೊನೆಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ದುರ್ದೈವ ಇದು ಮತ್ತೊಮ್ಮೆ ಮುಂದುವರೆಯುವುದಕ್ಕೆ ಕಾರಣವಾಗಿದೆ.

ಆವತ್ತು ಶರತ್ ಮಡಿವಾಳ ಕೊಲೆ ನಂತರ ಸ್ವಲ್ಪ ಕಡಿಮೆಯಿತ್ತು. ಸರ್ಕಾರದ ಮೇಲೆ ನಂಬಿಕೆ ಇಟ್ಟುಕೊಂಡು ಎಲ್ಲವನ್ನು ಸಹಿಸಿಕೊಂಡು ಬಂದೆವು.

ಅದರ ಕಟ್ಟೆ ಯಾವ ರೀತಿ ಒಡೆಯಿತು ಅಂತ ನಾವು 3 ದಿವಸದ ಹಿಂದೆ ಗಮನಿಸಿದೆವು. ಆದರೆ ಮುಂದೆ ಇಂತಹ ಹತ್ಯೆಗಳು ನಡೆಯುವುದು ಬೇಡ’ ಎಂದು ಹೇಳಿದರು.

LEAVE A REPLY

Please enter your comment!
Please enter your name here

Hot Topics

ಮುಲ್ಕಿ: ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ

ಮಂಗಳೂರು: ಮನೆಯೊಂದರಲ್ಲಿ ವ್ಯಕ್ತಿಯೋರ್ವ ನಿಗೂಢವಾಗಿ ಸಾವನ್ನಪ್ಪಿದ್ದು ನಾಲ್ಕು ದಿನಗಳ ಬಳಿಕ ಪೊಲೀಸರಿಗೆ ಮಾಹಿತಿ ತಿಳಿದು ಮೃತದೇಹವನ್ನು ತೆರವುಗೊಳಿಸಿದ ಘಟನೆ ಮುಲ್ಕಿಯ ಕಿಲ್ಪಾಡಿ ಮದಕ ಬಳಿ ನಡೆದಿದೆ.ಮೃತ ವ್ಯಕ್ತಿಯನ್ನು ಸ್ಥಳಿಯ ನಿವಾಸಿ ಸುಧೀರ್ ಶೆಟ್ಟಿ...

ಎಸ್‌ಡಿಪಿಐ, ಒವೈಸಿಯ ಪಕ್ಷಗಳೊಂದಿಗೆ ವಕ್ಫ್ ಬೋರ್ಡನ್ನೂ ನಿಷೇಧಿಸಿ : ಹಿಂದೂ ಮಹಾಸಭಾ

ಮಂಗಳೂರು : ಆಡಳಿತದಲ್ಲಿರುವ ಸರಕಾರ ಪಿಎಫ್ ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಸ್ವಾಗತಿಸುತ್ತದೆ. ಇದು ಹಿಂದುತ್ವಕ್ಕೆ ಸಿಕ್ಕ ಗೆಲುವು ಎಂದು ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್...

ಮಂಗಳೂರು: ಚಿಟ್ ಫಂಡ್ ಹೆಸರಲ್ಲಿ ಕೋಟ್ಯಾಂತರ ರೂ. ಪಂಗನಾಮ-ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮಂಗಳೂರು: ಮಂಗಳೂರು ನಗರ ಹೊರವಲಯದ ಸುರತ್ಕಲ್‌ನಲ್ಲಿ ಭಾರ್ಗವಿ ಫೈನಾನ್ಸ್‌ ಮತ್ತು ಚಿಟ್ ಫಂಡ್ ನಡೆಸಿ ಅಮಾಯಕರಿಗೆ ವಂಚಿಸಿದ ಪ್ರಕರಕ್ಕೆ ಸಂಬಂಧಿಸಿ ಭಾರ್ಗವಿ ಫೈನಾನ್ಸ್‌ ಮಾಲಕ ಅಶೋಕ್ ಭಟ್ ಮತ್ತು ಆತನ‌ ಪತ್ನಿ ವಿದ್ಯಾಭಟ್...