Connect with us

    ಸಣ್ಣ ವಯಸ್ಸಿನಲ್ಲೇ ಕ್ಯಾನ್ಸರ್ ಗೆ ತುತ್ತಾದ ಸಾಮಾಜಿಕ ಉದ್ಯಮಿ ಲೀಲಾ ಜನಾಹ್

    Published

    on

    ನ್ಯೂಯಾರ್ಕ್: ಭಾರತ, ಉಗಾಂಡ ಮತ್ತು ಕೀನ್ಯಾದ ಸಾವಿರಾರು ಮಂದಿ ಬಡವರಿಗೆ ಉದ್ಯೋಗ ನೀಡಿದ್ದ ಭಾರತೀಯ ಮೂಲದ ಸಾಮಾಜಿಕ ಉದ್ಯಮಿ ಲೀಲಾ ಜನಾಹ್ ಮನ್ಹಾತನ್‌ನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು. ಮೆದು ಅಂಗಾಂಗ ಕ್ಯಾನ್ಸರ್ (ಎಪಿಥೆಲಾಯ್ಡಾ ಸರ್ಕೋಮಾ) ಎಂಬ ಅಪರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಕೆ ಇದೀಗ ಮೃತಪಟ್ಟಿದ್ದಾರೆ.

    ಭಾರತೀಯ ವಲಸೆ ದಂಪತಿಯ ಮಗುವಾಗಿದ್ದ ಜನಾಹ್ ವ್ಯವಸ್ಥಾಪನಾ ಸಲಹೆಗಾರ್ತಿಯಾಗಿ ಮುಂಬೈಗೆ ಭೇಟಿ ನೀಡಿ ಹೊರಗುತ್ತಿಗೆ ಕಂಪನಿಗೆ ನೆರವಾಗಿದ್ದರು. ನಗರದಲ್ಲಿ ಆಟೊರಿಕ್ಷಾದಲ್ಲಿ ಕೊಳಗೇರಿ ಮೂಲಕ ಹಾದು ಹೋಗಿದ್ದರು. ಹೊರಗುತ್ತಿಗೆ ಕಂಪನಿಗೆ ಬಂದಾಗ ಅಲ್ಲಿ ಸುಶಿಕ್ಷಿತ ಮಧ್ಯಮವರ್ಗದ ಉದ್ಯೋಗಿಗಳಿದ್ದುದನ್ನು ಕಂಡರು. ಕೊಳಗೇರಿಯ ಬಡವರು ಅಲ್ಲಿ ಇರಲಿಲ್ಲ. ಈ ಪೈಕಿ ಕೆಲ ಕೆಲಸಗಳನ್ನು ಕೊಳಗೇರಿಯ ಬಡವರು ಮಾಡಲು ಸಾಧ್ಯವಿಲ್ಲವೇ ಎಂದು ಯೋಚಿಸಿದ್ದರು. ತೀರಾ ಬಡ ಪ್ರತಿಭಾವಂತರನ್ನು ಜಾಗತಿಕ ಆರ್ಥಿಕತೆಯಲ್ಲಿ ಬಳಕೆ ಮಾಡಿಕೊಳ್ಳದ ಅತಿದೊಡ್ಡ ಸಂಪನ್ಮೂಲ ಎಂದವರು ಬಣ್ಣಿಸಿದ್ದರು.

    2008ರಲ್ಲಿ ಕೀನ್ಯಾದ ನೈರೋಬಿಯಲ್ಲಿ ಬಡವರಿಗೆ ಉದ್ಯೋಗ, ಜೀವನಯೋಗ್ಯ ವೇತನ ನೀಡುವ ಉದ್ದೇಶದಿಂದ ಸಮಸೋರ್ಸ್ ಕಂಪನಿ ಆರಂಭಿಸಿದ್ದರು. ಫೋಟೊ ಟ್ಯಾಗ್ ಮಾಡುವುದು ಮುಂತಾದ ಡಿಜಿಟಲ್ ಉದ್ಯೋಗ ನೀಡಿದ್ದರು. ಸ್ವಯಂ ಚಾಲನೆಯ ಕಾರು, ವಿಡಿಯೊ ಗೇಮ್, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಸಾಕಷ್ಟು ದತ್ತಾಂಶಗಳನ್ನು ಈ ಬಡ ಉದ್ಯೋಗಿಗಳು ಉತ್ಪಾದಿಸಿದ್ದರು. ಸಮಸೋರ್ಸ್ ನೇಮಕ ಮಾಡಿಕೊಂಡ ಉದ್ಯೋಗಿಗಳಲ್ಲಿ ಬಹಳಷ್ಟು ಮಂದಿ ಮಹಿಳೆಯರು.

    1982ರ ಅಕ್ಟೋಬರ್ 9ರಂದು ನ್ಯೂಯಾರ್ಕ್‌ನ ಲೆವಿಸ್ಟನ್‌ನಲ್ಲಿ ಜನಿಸಿದ ಲೀಲಾ ಚಿರಾಯತ್ ಅವರ ತಂದೆ ಸಹದೇವ್ ಚಿರಾಯತ್ ರಾನಿಕ ಎಂಜಿನಿಯರ್. ತಾಯಿ ಮಾರ್ಟೀನ್ ಜನಾಹ್. ಭಾರತದಿಂದ ವಲಸೆ ಬಂದಾಗ ವೆಂಡ್ಸ್ ರೆಸ್ಟೋರೆಂಟ್‌ನಲ್ಲಿ ಈರುಳ್ಳಿ ಹಚ್ಚುವುದು ಸೇರಿದಂತೆ ಹಲವು ಕೆಲಸ ಮಾಡಿದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಮಂಗಳೂರು: ಹೊಸ ವರ್ಷಾಚರಣೆ- ವಾಹನ ಸವಾರರಿಗೆ ಕೇಕ್ ವಿತರಿಸಿದ ಪೊಲೀಸ್ ಸಿಬ್ಬಂದಿ

    Published

    on

    ಮಂಗಳೂರು: ಹೊಸ ವರ್ಷ ಹಿನ್ನೆಲೆಯಲ್ಲಿ ಹಲವೆಡೆ ಸಂಭ್ರಮಾಚರಣೆ ನಡೆಸಲಾಗಿದೆ. ಅದರಂತೆ ಮಂಗಳೂರು ನಗರದಲ್ಲಿ ಪೊಲೀಸ್ ಸಿಬ್ಬಂದಿ ವಾಹನ ಸವಾರರಿಗೆ ಕೇಕ್ ನೀಡುವ ಮೂಲಕ ಸಂಭ್ರಮಾಚರಣೆ ನಡೆಸಿದರು.

    ಮಂಗಳೂರಿನ ಪ್ರಮುಖ ರಸ್ತೆಗಳ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಸಿಬ್ಬಂದಿ ಕೇಕ್ ಕತ್ತರಿಸಿ ನೂತನ ವರ್ಷವನ್ನು ಸ್ವಾಗತಿಸಿದ್ದು, ಬಳಿಕ ವಾಹನ ಸವಾರರಿಗೆ ಕೇಕ್ ನೀಡುವ ಮೂಲಕ ಸಂಭ್ರಮಾಚರಣೆ ನಡೆಸಿದರು.

    Continue Reading

    BELTHANGADY

    ಹೊಸ ವರ್ಷಾಚರಣೆ ಹಿನ್ನೆಲೆ: ಧರ್ಮಸ್ಥಳದಲ್ಲಿ ಭಕ್ತ ಸಾಗರ

    Published

    on

    ಮಂಗಳೂರು: ಹೊಸ ವರ್ಷಾರಂಭ ಸಂದರ್ಭದಲ್ಲಿ ಕರ್ನಾಟಕ ಕರಾವಳಿಯ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದು ಬಂದಿದೆ. ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಭಕ್ತರು ದೇಗುಲಗಳಿಗೆ ಆಗಮಿಸಿ ದೇವರ ದರ್ಶನ ಪಡೆದು ಹೊಸ ವರ್ಷದ ದಿನಾರಂಭ ಮಾಡುತ್ತಿದ್ದಾರೆ.

    ಕದ್ರಿ ಮಂಜುನಾಥ ದೇಗುಲಕ್ಕೆ ಬೆಳ್ಳಗ್ಗಿನಿಂದಲೂ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ದೇವಳದ ಕೆರೆಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ದೇವಳದ ಮುಂದೆ ಕಲಶ ಸ್ನಾನ ಮಾಡುತ್ತಿದ್ದಾರೆ. ಕದ್ರಿ ದೇವಳದಲ್ಲಿ ಕಲಶ ಸ್ನಾನ ಸೇವೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

    ಹೊಸ ವರ್ಷಾರಂಭದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಭಕ್ತ ಸಾಗರವೇ ನೆರೆದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ದಂಡು ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮುಗಿಬಿದ್ದಿದೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸದ್ಯ ದೇವಸ್ಥಾನದ ಕ್ಯೂ ಸೆಂಟರ್ನಲ್ಲಿ ಭಾರೀ ಜನಜಂಗುಳಿ ಏರ್ಪಟ್ಟಿದೆ.

    ದೇವಸ್ಥಾನದ ಮುಂಭಾಗದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿದ್ದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.

    Continue Reading

    LATEST NEWS

    ಹೊಸ ವರ್ಷಕ್ಕೆ ರಾಜ್ಯದಲ್ಲಿ ಮದ್ಯದ ಹೊಳೆ : ನಿನ್ನೆ ಒಂದೇ ದಿನ ಭರ್ತಿ 308 ಕೋಟಿ ರೂ. ಮದ್ಯ ಸೇಲ್.!

    Published

    on

    ಬೆಂಗಳೂರು: ರಾಜ್ಯದಲ್ಲಿ ಹೊಸವರ್ಷ 2025 ನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಲಾಗಿದ್ದು, ಈ ನಡುವೆ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.

    ಹೌದು, 2024 ರ ಡಿಸೆಂಬರ್ 31 ರಂದು ರಾಜ್ಯಾದ್ಯಂತ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿದೆ. 2023 ರ ಡಿಸೆಂಬರ್ 31 ರಂದು 193 ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿತ್ತು. 2,92,339 ಬಿಯರ್ ಬಾಕ್ಸ್ ಮಾರಾಟದಿಂದ 57.75 ಕೋಟಿ ರೂ. ಒಟ್ಟು 7,76,042 ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಬಂದಿದೆ.

    ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡಿಸೆಂಬರ್ 28ರ ಶನಿವಾರ 408.53 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಡಿಸೆಂಬರ್ 27ರಂದು ರಜೆ ಘೋಷಣೆ ಮಾಡಿದ್ದರಿಂದ ಮದ್ಯ ಖರೀದಿ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 28 ರಂದು ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ರಾಜ್ಯಾದ್ಯಂತ ಡಿ. 28ರಂದು 6,22,062 ಕೇಸ್ ವಿಸ್ಕಿ ಮತ್ತು ಇತರ ಸ್ಪಿರಿಟ್ ಖರೀದಿ ಮಾಡಲಾಗಿದೆ. 4,04,998 ಕೇಸ್ ಬಿಯರ್ ಸೇರಿದಂತೆ 10,27,060 ಕೇಸ್ ಮದ್ಯ ಮಾರಾಟ ಆಗಿದೆ. ಇದರಲ್ಲಿ 80.58 ಕೋಟಿ ಮೊತ್ತದ ಬಿಯರ್ ಇದ್ದರೆ, 327,50 ಕೋಟಿ ಮೌಲ್ಯದ ಸ್ಪಿರಿಟ್ಸ್ ಮಾರಾಟವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    Continue Reading

    LATEST NEWS

    Trending