Connect with us

    LATEST NEWS

    ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

    Published

    on

    ಬೆಂಗಳೂರು: ಸವದತ್ತಿ ಶಾಸಕ ಹಾಗೂ ಕರ್ನಾಟಕದ ವಿಧಾನಸಭೆಯ ಉಪ ಸಭಾಪತಿಯಾಗಿದ್ದ ಆನಂದ್ ಮಾಮನಿ ನಿನ್ನೆ ರಾತ್ರಿ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


    ಆನಂದ್ ಮಾಮನಿ ಅವರಿಗೆ 56 ವರ್ಷ ವಯಸ್ಸಾಗಿತ್ತು. ಇವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

    ಕ್ಯಾನ್ಸರ್ ಕಾಯಿಲೆಯಿಂದಾಗಿ ಚೆನ್ನೈ ಖಾಸಗಿ ಆಸ್ಪತ್ರೆ ಪಡೆಯುತ್ತಿದ್ದ ಅವರನ್ನು ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮಧ್ಯರಾತ್ರಿ ಕೊನೆಯುಸಿರೆಳೆದರು.

    ಅನಾರೋಗ್ಯದ ಸಂದರ್ಭದಲ್ಲೂ ಧೃತಿಗೆಡದೆ ಆನಂದ್ ಮಾಮನಿ ಅವರು ವೀಡಿಯೋ ಒಂದನ್ನು ಬಿಡುಗಡೆ ಮಾಡಿ ‘ನಾನು ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ಜನಸೇವೆಗೆ ಮರಳುತ್ತೇನೆ. ನಾನು ಆರೋಗ್ಯವಾಗಿದ್ದೇನೆ, ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದಿದ್ದರು.


    ಆದರೆ ಇದೀಗ ಅವರು ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಭಾನುವಾರ ಮಧ್ಯಾಹ್ನ ಆನಂದ್ ಮಾಮನಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

    ಇನ್ನು ಇವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷದ ಶಾಸಕರು, ರಾಜ್ಯ ವಿಧಾ‌ನಸಭೆಯ ಮಾನ್ಯ ಉಪ ಸಭಾಧ್ಯಕ್ಷರಾದ ಆತ್ಮೀಯ ಶ್ರೀ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾದ ವಿಷಯ ತಿಳಿದು ಅತೀವ ದುಃಖವಾಗಿದೆ‌.

    ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ‌. ಓಂ ಶಾಂತಿ ಎಂದು ಟ್ವೀಟ್​ ಮಾಡಿ ಸಿಎಂ ಸಂತಾಪ ಸೂಚಿಸಿದ್ದಾರೆ.

     

    LATEST NEWS

    ಬಜೆಟ್ 2024: ಮೊದಲ ಬಾರಿಗೆ ಉದ್ಯೋಗ ಹುಡುಕುವವರಿಗೆ ಬಂಪರ್ ಉಡುಗೊರೆ.!

    Published

    on

    Union Budget 2024 : ಸರ್ಕಾರದ 9 ಆದ್ಯತೆಗಳಲ್ಲಿ ಒಂದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ದೊಡ್ಡ ಸಹಾಯ ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು.

    ಈ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಗರಿಷ್ಠ ಮೊತ್ತ 15 ಸಾವಿರ ರೂ. ಇಪಿಎಫ್​ಒನಲ್ಲಿ ನೋಂದಾಯಿಸಲ್ಪಟ್ಟವರು ಈ ಭತ್ಯೆ ಪಡೆಯಲಿದ್ದಾರೆ. ಅರ್ಹತೆಯ ಮಿತಿಯು ತಿಂಗಳಿಗೆ 1 ಲಕ್ಷ ರೂ. ಇದರಿಂದ 2.10 ಕೋಟಿ ಯುವಕರಿಗೆ ಅನುಕೂಲವಾಗಲಿದೆ.

    ಉದ್ಯೋಗ, ಕೌಶಲ್ಯ ತರಬೇತಿಗೆ ಸಂಬಂಧಿಸಿದ 5 ಯೋಜನೆಗಳಿಗೆ ₹2 ಸಾವಿರ ಕೋಟಿ

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಭಾರತದ ಆರ್ಥಿಕತೆಯ ಬೆಳವಣಿಗೆಯು ಅತ್ಯುತ್ತಮವಾಗಿ ಮುಂದುವರಿದಿದೆ. ಭಾರತದ ಹಣದುಬ್ಬರವು ಸ್ಥಿರವಾಗಿದೆ, 4% ಗುರಿಯತ್ತ ಸಾಗುತ್ತಿದೆ. ಬಡವರು, ಯುವಕರು, ಮಹಿಳೆಯರು, ರೈತರಂತಹ ಪ್ರಮುಖ ವರ್ಗಗಳನ್ನು ಕೇಂದ್ರೀಕರಿಸುವ ಪ್ರಯತ್ನ ಮಾಡಲಾಗುತ್ತಿದೆ. ಉದ್ಯೋಗ, ಕೌಶಲ್ಯ, ಎಂಎಸ್‌ಎಂಇ, ಮಧ್ಯಮ ವರ್ಗದವರಿಗೆ ನಿರಂತರ ಗಮನ ನೀಡಲಾಗುತ್ತಿದೆ. ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ಸಂಬಂಧಿಸಿದ 5 ಯೋಜನೆಗಳಿಗೆ 2 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಹೇಳಿದರು.

    Continue Reading

    LATEST NEWS

    ಮಳೆ ಆರ್ಭಟ; ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾ*ಲು

    Published

    on

    ಮಳೆ ಬಂದ್ರೆ ಇಳೆಗೆ ಜೀವ ಕಳೆ. ಅದೇ ಮಳೆ ರೌದ್ರನರ್ತನ ಮೆರೆದ್ರೆ ಸಾ*ವು-ನೋವಿನ ಸೆಲೆ. ರಾಜ್ಯದ ಅಷ್ಟ ದಿಕ್ಕುಗಳಲ್ಲೂ ಅಬ್ಬಿರಿಸಿ ಬೊಬ್ಬರಿಯುತ್ತಿರೋ ವರುಣ ಸಾ*ವು ನೋವಿನ ಸಂಕಷ್ಟಗಳ ಸರಮಾಲೆಗೆ ಸಾಕ್ಷಿಯಾಗಿದ್ದಾನೆ.

    ಕೃಷ್ಣಾ ನದಿಗೆ ಭಾಗಿನ ಅರ್ಪಿಸಲು ಹೋದ ಯುವಕ ಸಾ*ವು

    ಕೃಷ್ಣಾ ನದಿಯ ಹಿನ್ನೀರಿನಲ್ಲಿ ಭಾಗಿನ ಅರ್ಪಿಸಲು ಹೋದ ಯುವಕ ನೀರುಪಾ*ಲಾಗಿರೋ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

    ಈಜಲು ಬರದ ಹಿನ್ನಲೆ 28 ವರ್ಷದ ಯುವಕ ರೋಹಣ ಪಾಟೀಲ ಆಯತಪ್ಪಿ ನೀರಿಗೆ ಬಿದ್ದು ಸಾ*ವನ್ನಪ್ಪಿದ್ದಾನೆ. ಸ್ಥಳೀಯರ ಸಹಾಯದಿಂದ ಬೋಟ್ ಮೂಲಕ ರೋಹಣ ಪಾಟೀಲ ಮೃ*ತದೇಹ ಹೊರ ತೆಗೆಯಲಾಗಿದೆ.

    Continue Reading

    LATEST NEWS

    ಕೇಂದ್ರ ಬಜೆಟ್ 2024 : ಗಮನ ಸೆಳೆದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀರೆ

    Published

    on

    ಮಂಗಳೂರು / ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲಿದ್ದಾರೆ.  ಪ್ರತೀ ವರ್ಷದಂತೆ ಈ ವರ್ಷವೂ ಅವರ ಸೀರೆ ಗಮನ ಸೆಳೆದಿದೆ. ಅವರು ಮೆಜೆಂಟಾ ಮತ್ತು ಗೋಲ್ಡ್ ಬಾರ್ಡರ್ ಹೊಂದಿರುವ ಬಿಳಿ ಚೆಕ್ ಸೀರೆಯನ್ನು ಉಟ್ಟಿದ್ದಾರೆ.


    ಸತತ ಏಳನೇ ಬಜೆಟ್ ಮಂಡಿಸುತ್ತಿರುವ ಮೊದಲ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಹೊರಹೊಮ್ಮಿದ್ದಾರೆ. ಇದು ಭಾರತದ ಇತಿಹಾಸದ ಪುಟ ಸೇರಿದೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಕೈಮಗ್ಗ ಸೀರೆ ಸಂಗ್ರಹ ಅಧಿಕ. ಹೀಗಾಗಿ ಇದು ಎಲ್ಲರ ಗಮನ ಸೆಳೆಯುತ್ತದೆ. ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲು ಸಂಸತ್ತಿಗೆ ತೆರಳುತ್ತಿದ್ದಾಗ,  ತಮ್ಮ ತಂಡದೊಂದಿಗೆ ಫೋಟೋಗೆ ಫೋಸ್ ನೀಡಿದರು. ಅವರು ಚೌಕಾಕಾರದ ಚೆಕ್ ಮತ್ತು ಚಿನ್ನದ ಕಸೂತಿಯೊಂದಿಗೆ ಅಗಲವಾದ ಮೆಜೆಂಟಾ ಬಾರ್ಡರ್ ಹೊಂದಿರುವ ಆಫ್-ವೈಟ್ ಬೇಸ್ ಕೈಮಗ್ಗ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.

    Continue Reading

    LATEST NEWS

    Trending