Connect with us

BIG BOSS

ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು.. ಏನಿದು ವಿವಾದ?

Published

on

ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ಮಹಿಳೆಯರ ಒಳಉಡುಪಿನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಸ್ವರ್ಗ ನಿವಾಸಿಗಳು ಮಾತ್ರ ಭಾಗಿ ಆಗಲು ಅವಕಾಶ ಇತ್ತು. 10 ಮಂದಿಯಲ್ಲಿ ಆರು ಜನರು ಮಾತ್ರ ಕ್ಯಾಪ್ಟನ್ಸಿ ಟಾಸ್ಕಲ್ಲಿ ಇರಬಹುದು ಎಂದು ಬಿಗ್ ಬಾಸ್ ಆದೇಶ ಕೊಟ್ಟರು. ಇಷ್ಟೇ ಅಲ್ಲ, ಆರು ಮಂದಿಯನ್ನು ಸ್ವರ್ಗ ನಿವಾಸಿಗಳ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದರು.

ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡೋಣ ಎನ್ನುವ ನಿರ್ಧಾರಕ್ಕೆ ಎಲ್ಲರೂ ಬಂದರು. ಇದು ಜಗದೀಶ್ ಅವರ ಕೋಪಕ್ಕೆ ಕಾರಣ ಆಯಿತು. ಅವರು ನೇರವಾಗಿ ಸ್ಪರ್ಧಿಗಳ ವಿರುದ್ಧ ಹರಿಹಾಯ್ದರು. ಅದರಲ್ಲೂ ಈ ಐಡಿಯಾ ನೀಡಿದ ಉಗ್ರಂ ಮಂಜು ವಿರುದ್ಧ ಸಿಡಿದೆದ್ದರು. ಮಾತು ಮಿತಿ ಮೀರುತ್ತಿತ್ತು. ‘ನೀನು ಸಿನಿಮಾದಲ್ಲಿ ಮಾತ್ರ ಉಗ್ರಂ ನಿಜ ಜೀವನದಲ್ಲಿ ನಾನು ನಿನಗೆ ಉಗ್ರಂ ತೋರಿಸುತ್ತೇನೆ’ ಎಂದು ಜಗದೀಶ್ ಹೇಳಲು ಆರಂಭಿಸಿದರು.

ಇದಕ್ಕೆ ಮಂಜು ಹೆಚ್ಚಿನ ಉತ್ತರ ಕೊಡೋಕೆ ಹೋಗಿಲ್ಲ.’ಬೋ..’ `ಬೋ..’ ಎಂದಷ್ಟೇ ಹೇಳಿದರು.’ಬೋ ಪ್ಯಾಂಟೀಸ್ ಎಲ್ಲ ನೋಡಿದೀನಿ.ನನ್ನ ಹೆಂಡತಿ ಹಾಕೋದು ಇದನ್ನೇ’ ಎಂದು ಜಗದೀಶ್ ಹೇಳಿದ್ದಾರೆ. ಇದು ಮನೆಯವರ ಅಸಮಾಧಾನಕ್ಕೆ ಕಾರಣ ಆಗಿದೆ. ಈ ವೇಳೆ ನಿಜವಗಾಲೂ ಇನ್ಸ್‌ಕ್ಯೂರ್ ಫೀಲ್ ಆಗ್ತಿದೆ ಎಂದು ಭವ್ಯಾ ಗೌಡ ಹೇಳಿದ್ದಾರೆ.

BIG BOSS

ಬಿಗ್‌ಬಾಸ್ ಮನೆಯಲ್ಲಿನ ಸ್ಪರ್ಧಿಗಳ ವಯಸ್ಸೆಷ್ಟು ಗೊತ್ತಾ..?

Published

on

ದಿನದಿಂದ ದಿನಕ್ಕೆ ಬಿಗ್‌ಬಾಸ್ ಕನ್ನಡ 11ರ ಆಟದ ಕುತೂಹಲ ಹೆಚ್ಚುತ್ತಿದೆ. ಇದರ ಜೊತೆಗೆ ಮನೆಯಲ್ಲಿ ಜಗಳ, ಕುತಂತ್ರ, ವಾಗ್ವಾದ, ತಂತ್ರಗಾರಿಕೆ ಇದ್ದೇ ಇದೆ. ಈ ವಾರದ ಟಾಸ್ಕ್ ಮುಗಿದಿದ್ದು, ಮಂಜು ಮನೆಯ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ. ಮೋಕ್ಷಿತಾ ಅವರು ಉತ್ತಮ ಮತ್ತು ರಜತ್‌ ಕಳಪೆಯಾಗಿದ್ದಾರೆ. ಇದೀಗ ಬಿಗ್‌ಬಾಸ್ ನಲ್ಲಿ ಇರುವ ಸ್ಪರ್ಧಿಗಳ ವಯಸ್ಸೆಷ್ಟು ಎಂಬುದನ್ನು ನೋಡೋಣ.

ಮೋಕ್ಷಿತಾ                  ವಯಸ್ಸು                   29

ಭವ್ಯಾ ಗೌಡ                ವಯಸ್ಸು                   25

ಗೌತಮಿ                       ವಯಸ್ಸು                    31

ಐಶ್ವರ್ಯ                   ವಯಸ್ಸು                    28

ಚೈತ್ರಾ                        ವಯಸ್ಸು                    29

ರಂಜಿತ್                     ವಯಸ್ಸು                    30

ಅನುಷಾ ರೈ               ವಯಸ್ಸು                   28

ಶಿಶಿರ್                         ವಯಸ್ಸು                    31

ಧನ್‌ರಾಜ್                 ವಯಸ್ಸು                   33

ಗೋಲ್ಡ್‌ ಸುರೇಶ್      ವಯಸ್ಸು                   41

ಜಗದೀಶ್                   ವಯಸ್ಸು                   46

ತ್ರಿವಿಕ್ರಮ್                  ವಯಸ್ಸು                   32

ಹನುಮಂತ                ವಯಸ್ಸು                   31

ಶೋಭಾ ಶೆಟ್ಟಿ            ವಯಸ್ಸು                  34

ಧರ್ಮ                         ವಯಸ್ಸು                  40

ಮಂಜು                      ವಯಸ್ಸು                   39

Continue Reading

BIG BOSS

BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್​ಗೆ ಫುಲ್​ ಕ್ಲಾಸ್​; ಹೊರ ಹೋಗೋಕೆ ಬಾಗಿಲು ಓಪನ್​ ಇದೆ ಎಂದ ಬಾದ್​ ಷಾ!

Published

on

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 54ನೇ ದಿನಕ್ಕೆ ಕಾಲಿಟ್ಟಿದೆ. ಈ ಐವತ್ತು ದಿನಗಳಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅದರಲ್ಲೂ ಬಿಗ್​ಬಾಸ್​ ಮನೆಗೆ 50ನೇ ದಿನಕ್ಕೆ ಎಂಟ್ರಿ ಕೊಟ್ಟಿದ್ದ ಸ್ಪರ್ಧಿಗಳು ಸುದ್ದಿಯಲ್ಲಿದ್ದಾರೆ.

ಹೌದು, ಬಿಗ್​ಬಾಸ್​ ಮನೆಗೆ ಹನುಮಂತನ ಬಳಿಕ ಶೋಭಾ ಶೆಟ್ಟಿ ಹಾಗೂ ರಜತ್​​ ಕಿಶನ್​ ಎಂಟ್ರಿ ಕೊಟ್ಟಿದ್ದರು. ಬಿಗ್​ಬಾಸ್​ ಮನೆಗೆ ಬಂದ ದಿನದಲ್ಲೇ ವಿಶೇಷ ಅಧಿಕಾರವನ್ನು ಪಡೆದುಕೊಂಡಿದ್ದರು. ಇದಾದ ಬಳಿಕ ಶೋಭಾ ಶೆಟ್ಟಿ ಅದ್ಭುತವಾಗಿ ಟಾಸ್ಕ್​ ಆಡುವ ಮೂಲಕ ಕಮಾಲ್​ ಮಾಡಿದ್ದರು. ಆದರೆ ರಜತ್​ ಟಾಸ್ಕ್​ವೊಂದನ್ನು ಆಡುವಾಗ ಗೋಲ್ಡ್​ ಸುರೇಶ್​ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು.

ಆದರೆ ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಅವರು ನೇರ ನೇರವಾಗಿ ಅವಾಚ್ಯ ಶಬ್ದಗಳನ್ನು ಬಳಸಿದ ರಜತ್​ಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. ಸದ್ಯ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಅವರು, ರಜತ್​ ಕನ್ನಡದಲ್ಲಿ ತುಂಬಾ ಪದಗಳು ಇವೆ ಮಾತನಾಡೋಕೆ, ಆದರೆ ಕೆಲವೊಂದಕ್ಕೆ ಅದರದ್ದೇ ಆದ ತೂಕಗಳಿವೆ. ಆ ಪದವನ್ನೇ ನನ್ನ ಮುಂದೆ ಹೇಳಿ ಅಂತ ಕೇಳಿದ್ದಾರೆ. ಆಗ ರಜತ್​ ಫುಲ್ ಸೈಲೆಂಟ್ ಆಗಿದ್ದಾರೆ. ಮತ್ತೆ ಕಿಚ್ಚ ಸುದೀಪ್​ ಅವರು ನೆಕ್ಸ್ಟ್ ಟೈಮ್ ಬಾಗಿಲು ಇದೆ ಹೊರಗಡೆ ಹೋಗೋದಕ್ಕೆ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.

Continue Reading

BIG BOSS

ಉಪಚುನಾವಣೆಯಲ್ಲಿ ಗೆಲುವು; ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

Published

on

ಮಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಮಲ್ಲಿಕಟ್ಟೆಯಲ್ಲಿರುವ ಕಚೇರಿಯೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಪರ ಘೋಷಣೆ ಕೂ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ‘ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ’ ಎಂದರು.

‘ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ‌. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ’ ಎಂದು ಹೇಳಿದರು

Continue Reading

LATEST NEWS

Trending

Exit mobile version