ಮಂಗಳೂರು/ಕೊಚ್ಚಿ : ಯಹೂದಿ ಸಮುದಾಯಕ್ಕೆ ಸೇರಿದ ಕೊನೆಯ ಮಹಿಳೆ ಕ್ವೀನಿ ಹಲ್ಲೆಗುವಾ ಮಟ್ಟಂಚೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊ*ನೆಯುಸಿರೆಳೆದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಕ್ವೀನಿ ಹಲ್ಲೆಗುವಾ ಭಾನುವಾರ(ಆ.11) ಇಹಲೋಕ ತ್ಯಜಿಸಿದ್ದು, ಅವರ ಅಂ*ತ್ಯಕ್ರಿಯೆಯನ್ನು ಇಲ್ಲಿನ ಯಹೂದಿ ಸ್ಮ*ಶಾನದಲ್ಲಿ ಸಮುದಾಯದ ವಿಧಿ ವಿಧಾನಗಳ ಪ್ರಕಾರ ನಡೆಸಲಾಗಿದೆ ಎಂದು ವರದಿಯಾಗಿದೆ.
ಹಲ್ಲೆಗುವಾ ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಮಕ್ಕಳಿಬ್ಬರು ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಕ್ವೀನಿ ಹಲ್ಲೆಗುವಾ ಅವರ ಸಹೋದರಳಿಯ 65 ವರ್ಷದ ಕೀತ್ ಹಲ್ಲೆಗುವಾ ಕೊಚ್ಚಿಯಲ್ಲಿ ಉಳಿದಿರುವ ಏಕೈಕ ಯಹೂದಿ ಸಮುದಾಯದ ಸದಸ್ಯ ಎಂದು ತಿಳಿದು ಬಂದಿದೆ.
ಮಂಗಳೂರು : ಸಾಕಷ್ಟು ಟ್ವಿಸ್ಟ್ ಗಳನ್ನು ಕಂಡ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಈಗ ಫಿನಾಲೆಯ ಹಂತಕ್ಕೆ ತಲುಪುತ್ತಿದೆ. ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿತ್ತು.
ಈ ವಾರದ ನಾಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.
ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳು ಬಿಗ್ ಬಾಸ್ ಕೊಡುವ ಟಾಸ್ಕ್ ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಧನರಾಜ್ ಬಿಗ್ ಬಾಸ್ ಕೊಟ್ಟ ಟಾಸ್ಕ್ ವೊಂದರಲ್ಲಿ ವಿನ್ ಆಗಿದ್ದಾರೆ.
ಕೊನೆಯ ಟಾಸ್ಕ್ ನಲ್ಲೂ ಗೆದ್ದುಕೊಂಡ ಧನರಾಜ್ ಬಿಗ್ ಬಾಸ್ 100 ಅಂಕಗಳನ್ನು ಕೊಟಿದ್ದರು. ಅದರಲ್ಲೂ ಕೊನೆಗೆ ಧನರಾಜ್ ಪ್ರತಿ ಸ್ಪರ್ಧಿಯ ಅಂಕವನ್ನು ಪಡೆದುಕೊಳ್ಳಬೇಕು ಅಂತ ಹೇಳಿದ್ದರು. ಆಗ ಧನರಾಜ್ ಭವ್ಯಾ ಗೌಡ ಅವರ ಅಂಕವನ್ನು ಪಡೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಬಿಗ್ ಬಾಸ್ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ನಿಂದ ಧನರಾಜ್ ಸೇಫ್ ಆಗಿದ್ದೀರಿ ಎಂದು ಘೋಷಣೆ ಮಾಡಿದ್ದಾರೆ.
ಮಿಡ್ ವೀಕ್ ನಾಮಿನೇಷನ್ ಸೀಟ್ನಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್, ಮಂಜಣ್ಣ, ರಜತ್, ಮೋಕ್ಷಿತಾ ಹಾಗೂ ಗೌತಮಿ ಇದ್ದಾರೆ. ಸ್ಟ್ರಾಂಗ್ 6 ಸ್ಪರ್ಧಿಗಳು ಯಾರು ಬಿಗ್ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಒಂದು ಕಡೆ ಟಾಸ್ಕ್ ಪಾಯಿಂಟ್ ಟೇಬಲ್ ನಲ್ಲಿ ಟಾಪ್ ನಲ್ಲಿದ್ದ ಭವ್ಯಾಗೆ, ಧನರಾಜ್ ಅವರ ನಿರ್ಧಾರ ಶಾಕ್ ಆಗಿತ್ತು.
ಮಂಗಳೂರು/ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧ*ನ ಹೊಂದಿದ್ದಾರೆ. ಅವರು ಕನ್ನಡ ಸಿನಿಮಾ, ಧಾರವಾಹಿ ಹಾಗೂ ರಂಗಭೂಮಿಯಲ್ಲಿ ನಟಿಸಿದ್ದರು.
ಸರಿಗಮ ವಿಜಿ ಅವರ ಮೂಲ ಹೆಸರು ವಿಜಯ್ ಕುಮಾರ್. ಆದರೆ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಹಲವರಲ್ಲಿ ಇದೆ.
‘ಸರಿಗಮ ವಿಜಿ’ ಎಂದೇ ಕರೆಯಲ್ಪಡುವ ನಟ ವಿಜಯ್ ಕುಮಾರ್ (76) ಅವರು ಬುಧವಾರ (ಜ.15) ನಿಧ*ನರಾದರು. ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ವಾರದ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ 9:45ರ ಸುಮಾರಿಗೆ ಅವರು ನಿಧ*ನ ಹೊಂದಿದ್ದಾರೆ.
ಬೆಂಗಳೂರಿನ ವಿಮಾನಪುರದಲ್ಲಿ (ಎಚ್ಎಎಲ್ ಪ್ರದೇಶ) ಜನಿಸಿದ ವಿಜಯ್ ಕುಮಾರ್, ನಾಟಕದ ನಂಟು ಇಟ್ಟುಕೊಂಡು ಸಿನಿಮಾಲೋಕ ಪ್ರವೇಶಿಸಿದವರು. ‘ಬೆಳುವಲದ ಮಡಿಲಲ್ಲಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ನಟನಾಗಿ ಮೊದಲ ಹೆಜ್ಜೆ ಇಟ್ಟ ಅವರು ಎನ್ ಜಿಇಎಫ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿದವರು. ಈ ಅವಧಿಯಲ್ಲೇ ಅವರು ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕ ಬರೆದರು.
ಇದು ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ, ಹೈದರಾಬಾದ್, ಚೆನ್ನೈ, ದೆಹಲಿಗಳಲ್ಲಿಯೂ ಆ ನಾಟಕ ಪ್ರದರ್ಶನವಾಗಿತ್ತು. ಸುಮಾರು 1390 ಪ್ರದರ್ಶನಗಳಲ್ಲಿ ‘ಸಂಸಾರದಲ್ಲಿ ಸರಿಗಮ’ ನಾಟಕ ಕಂಡಿತ್ತು. ಇದೇ ಕಾರಣಕ್ಕೆ ವಿಜಿ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡು ಸರಿಗಮ ವಿಜಿ ಎಂದೇ ಜನಪ್ರಿಯರಾದರು.
ಹಲವು ದಿಗ್ಗಜ ನಟರ ಜೊತೆ ತೆರೆಹಂಚಿಕೊಂಡಿದ್ದ ವಿಜಿ ಅವರು, ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಹಲವು ಧಾರವಾಹಿಗಳಲ್ಲೂ ಅವರು ಬಣ್ಣಹಚ್ಚಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಬಂಟ್ವಾಳ: ಬೈಕ್ ಗಳ ನಡುವೆ ಭೀ*ಕರ ಅ*ಪಘಾ*ತ ಸಂಭವಿಸಿ ಬೈಕ್ ನಲ್ಲಿ ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃ*ತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಿನ್ನೆ (ಜ.14) ರಾತ್ರಿ ನಡೆದಿದೆ.
ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃ*ತ ಬಾಲಕಿ ಎಂದು ಗುರುತಿಸಲಾಗಿದೆ.
ಬಾಲಕಿಯ ತಂದೆ ಬೈಕ್ ಚಾಲಕ ಅಬ್ದುಲ್ ರಹಮಾನ್ ಕೂಡ ಗಾ*ಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ ನಿವಾಸಿ ರಂಜಿತ್ ಎಂಬಾತ ಬಿ.ಸಿ ರೋಡಿನ ಕಡೆಯಿಂದ ತುಂಬೆ ಕಡೆಗೆ ಸರಿಯಾದ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಗೆ ಡಿ*ಕ್ಕಿ ಹೊಡೆದಿದ್ದಾನೆ. ರಂಜಿತ್ ಗೆ ಕೂಡ ಗಾ*ಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಅ*ಪಘಾ*ತ ನಡೆದ ರಭಸಕ್ಕೆ ಬೈಕ್ ಸಂಪೂರ್ಣ ಜ*ಖಂಗೊಂಡಿದೆ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಟ್ರಾಫಿಕ್ ಎಸ್.ಐ ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.