Wednesday, June 29, 2022

ಮಕ್ಕಳು, ಗಣ್ಯರು, ಸೇನಾಧಿಕಾರಿಗಳಿಂದ ಬಿಪಿನ್ ರಾವತ್-ಪತ್ನಿಯ ಪಾರ್ಥಿವ ಶರೀರಕ್ಕೆ ಅಂತಿಮ ನಮನ: ಇಂದು ಅಂತ್ಯಕ್ರಿಯೆ

ನವದೆಹಲಿ: ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆ ಮುಖ್ಯಸ್ಥ(CDS) ಜನರಲ್ ಬಿಪಿನ್ ರಾವತ್,

ಅವರ ರತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರಗಳನ್ನು ದೆಹಲಿಯ ಕಾಮರಾಜ್ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಕರೆತರಲಾಗಿದ್ದು,

ಮಕ್ಕಳು, ಗಣ್ಯರು, ಸೇನಾಧಿಕಾರಿಗಳಿಂದ ಬಿಪಿನ್ ರಾವತ್-ಪತ್ನಿಯ ಪಾರ್ಥಿವ ಶರೀರಕ್ಕೆ ಅಂತಿಮ ನಮನ: ಇಂದು ಅಂತ್ಯಕ್ರಿಯೆಅವರ ಪಾರ್ಥಿವ ಶರೀರಕ್ಕೆ ಕೇಂದ್ರದ ನಾಯಕರು, ಸೇನಾಧಿಕಾರಿಗಳು, ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.


ಕೇಂದ್ರದ ನಾಯಕರಾದ ಅಮಿತ್ ಶಾ ಇಂದು ಬೆಳಗ್ಗೆ ಜನರಲ್ ರಾವತ್ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಇನ್ನೊಂದೆಡೆ ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ ಬ್ರಿಗೇಡಿಯರ್ ಲಖ್ವಿಂದರ್ ಸಿಂಗ್ ಲಿಡ್ಡರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ದೆಹಲಿ ಕಂಟೋನ್ಮೆಂಟ್ ನ ಬ್ರಾರ್ ಸ್ಕ್ವಾರ್ ನಲ್ಲಿ ನೆರವೇರಿದೆ.


ಇದಕ್ಕೂ ಮೊದಲು ಬ್ರಿಗೇಡಿಯರ್ ಲಖ್ವಿಂದರ್ ಸಿಂಗ್ ಲಿಡ್ಡರ್ ಅವರ ಪಾರ್ಥಿವ ಶರೀರಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾಪಡೆ ಮುಖ್ಯಸ್ಥ ಜನರಲ್ ಎಂ ಎಂ ನರವಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್,

ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸಹ ಅಂತಿಮ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here

Hot Topics

ದ.ಕ ಜಿಲ್ಲೆಯಲ್ಲಿ ಏಕಾಏಕಿ ಹೆಚ್ಚಿದ ಕೊರೋನಾ: 21ಪಾಸಿಟಿವ್ -ಒಂದು ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮತ್ತೆ ಕಾಲಿಟ್ಟಿದೆ. ನಿನ್ನೆ ಜಿಲ್ಲೆಯಲ್ಲಿ 21 ಹೊಸ ಸೋಂಕಿತರು ಪತ್ತೆಯಾಗಿದ್ದು, 40 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಹಲವು ಸಮಯಗಳ ಬಳಿಕ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದೆ...

ದೇಶದ ಏಕತೆಗೆ ಮದರಸದ ಶಿಕ್ಷಣಗಳೇ ಮುಳುವಾಗುತ್ತಿದೆ-ಶರಣ್ ಪಂಪ್‌ವೆಲ್

ಮಂಗಳೂರು: ಇವತ್ತು ದೇಶದಲ್ಲಿ ಹಿಂದೂಗಳ ಹತ್ಯೆ, ಪೊಲೀಸರ ಮೇಲೆ ದಾಳಿ,ರಸ್ತೆಗಳಲ್ಲಿ ಅಂಗಡಿಗಳಲ್ಲಿ, ಹಿಂದೂಗಳ ಮನೆಗಳ ಮೇಲೆ ದಾಳಿ ಇಂತಹ ಘೋರ ಕೃತ್ಯಗಳು ಪದೇ ಪದೇ ಸಂಭವಿಸುತ್ತಿರಲು ಅವರಿಗೆ ಮದರಸದಲ್ಲಿ ಸಿಗುತ್ತಿರುವ ಶಿಕ್ಷಣವೇ ಪ್ರಮುಖ...

ಉಡುಪಿ: ಹಣದಾಸೆಗೆ ಕಿಡ್ನಾಪ್ ನಾಟಕವಾಡಿ ಪೋಷಕರನ್ನೇ ಯಾಮಾರಿಸಿದಾತ ಅಂದರ್

ಉಡುಪಿ: ಹಣದ ಆಸೆಗೆ ಹೆತ್ತವರನ್ನೇ ಯಾಮಾರಿಸಿ ಅಪಹರಣದ ನಾಟಕವಾಡಿದ ಯುವಕನನ್ನು ಪೊಲೀಸರು ಗೋವಾದಲ್ಲಿ ಪತ್ತೆ ಹಚ್ಚಿದ ಘಟನೆ ಉಡುಪಿಯಲ್ಲಿ ನಡೆದಿದೆ.ವರುಣ್ ನಾಯಕ್ ಎಂಬವನು ಹೆತ್ತವರಿಗೆ ವಂಚಿಸಿದ ಯುವಕ ಎಂದು ಗುರುತಿಸಲಾಗಿದೆ.ತಾನು ಕಿಡ್ನಾಪ್ ಆಗಿದ್ದೇನೆ...