ಪುತ್ತೂರು: ಕಬಕ ಸರ್ಕಾರಿ ಶಾಲೆಯಲ್ಲಿ ಕಳವು ಮಾಡಿದ್ದ ಲ್ಯಾಪ್‌ಟಾಪ್‌ನ್ನು ಆರೋಪಿಯು ಮಂಗಳೂರಿನ ಅಂಗಡಿಯ ಮಾಲೀಕನೊಬ್ಬನಿಗೆ ಮಾರಾಟ ಮಾಡಿದ್ದು ಅದನ್ನು ಸ್ವಾಧೀನಪಡಿಸಿಕೊಂಡ ಘಟನೆ ನಿನ್ನೆ ನಡೆದಿದೆ.
ದ.ಕ..ಜಿ.ಪ ಹಿ.ಪ್ರಾ ಶಾಲೆಯೊಂದರ ಕಛೇರಿ ಕೋಣೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಬಲಾತ್ಕಾರವಾಗಿ ಮುರಿದು ಒಳಪ್ರವೇಶಿಸಿ ಕಛೇರಿಯ ಕೋಣೆಯಲ್ಲಿ ಸೆಲ್ಫ್ ಒಂದರ ಮೇಲಿರಿಸಿದ್ದ ಲ್ಯಾಪ್ ಟ್ಯಾಪ್ ಕಳವು ಮಾಡಿರುವ ಘಟನೆ ನಿನ್ನೆ ಕಬಕ ಗ್ರಾಮದಲ್ಲಿ ನಡೆದಿತ್ತು.
ಫೆ.12 ರಂದು ಸಂಜೆ 4:30 ಗಂಟೆಗೆ ಎಂದಿನಂತೆ ಶಾಲೆಯ ಕಛೇರಿ ಸಹಿತ ಎಲ್ಲಾ ಕೊಠಡಿಗಳಿಗೆ ಬೀಗವನ್ನು ಹಾಕಿ ಹೋಗಿದ್ದು ಮರುದಿನ ಬೆಳಿಗ್ಗೆ ಶಾಲೆಗೆ ಬಂದು ನೋಡಿದಾಗ ಶಾಲಾ ಒಳಗಿದ್ದ ನಾಲ್ಕು ಕಪಾಟಿನ ಬಾಗಿಲುಗಳನ್ನು ತೆರೆದು ಎಲ್ಲಾ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು,
ಅದೇ ಕೋಣೆಯಲ್ಲಿದ್ದ 24,990 ರೂಪಾಯಿ ಬೆಲೆಬಾಳುವ ಲ್ಯಾಪ್‌ಟಾಪ್ ಕೂಡ ಕಳವಾಗಿರುವ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕಿ ಸುಲೋಚನಾರವರು ದೂರು ನೀಡಿದ್ದರು.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ತನಿಖೆಯ ಸಂದರ್ಭದಲ್ಲಿ ಮಂಜನಾಡಿ ಗ್ರಾಮದ ಅಬ್ದುಲ್ ಫಯಾನ್ (22) ಎಂಬಾತನು ಫೆ. 13 ರಂದು ಬೆಳಗ್ಗಿನ ಜಾವ ತನ್ನ ಸ್ನೇಹಿತ ಸುಹೇಬ್ ಎಂಬಾತನೊಂದಿಗೆ ಸೇರಿ ಕಬಕ ಶಾಲೆಯ ಕಛೇರಿ ಕೋಣೆಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ ಶಾಲೆಯೊಳಗಿದ್ದ ಒಂದು ಲ್ಯಾಪ್‌ಟಾಪ್‌ನ್ನು ಕಳವು ಮಾಡಿಕೊಂಡು ಹೋಗಿ ಮಂಗಳೂರಿನ ಒಂದು ಅಂಗಡಿಗೆ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.
ಆರೋಪಿಯು ಪ್ರಸ್ತುತ ಬೆಳಗಾಂ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಈತನನ್ನು ಬಾಡಿ ವಾರೆಂಟ್ ಮುಖೇನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಕೋರಿತ್ತು.
ನ್ಯಾಯಾಲಯವು ಮಾ.16ಕ್ಕೆ ಆದೇಶವನ್ನು ಹೊರಡಿಸಿದ್ದು ಬೆಳಗಾಂ ಜಿಲ್ಲಾ ಕಾರಾಗೃಹದಿಂದ ಆರೋಪಿಯು ವಶಕ್ಕೆ ಪಡೆದು 5 ದಿನಗಳ ಕಾಲ ಪೊಲೀಸ್ ಭದ್ರತೆಗೆ ಪಡೆದು ತನಿಖೆ ನಡೆಸಿ, ತನಿಖೆಯ ಬಳಿಕ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂಬ ಆದೇಶ ನೀಡಿದ್ದಾರೆ.