Monday, August 8, 2022

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ: ವಾಹನ ಸವಾರರ ಪರದಾಟ

ಸುಳ್ಯ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಇದರಿಂದ ಹೆದ್ದಾರಿಯಲ್ಲಿ ಸ್ವಲ್ಪ ಪ್ರಮಾಣದ ಟ್ರಾಫಿಕ್‌ ಜಾಂ ಉಂಟಾಗಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವೆ ರಸ್ತೆಗೆ ಮಣ್ಣು ಕುಸಿದಿದೆ.

ಚರಂಡಿಗೆ ಮಣ್ಣು ಬಿದ್ದಿದ್ದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸ್ಥಳಕ್ಕೆ ಜೆಸಿಬಿ ಕರೆಸಿ ಮಣ್ಣು ತೆರವು ಕಾರ್ಯ ಮಾಡುತ್ತಿದ್ದು, ಈ ಮಧ್ಯೆ ಧಾರಾಕಾರ ಮಳೆಯಿಂದ ರಸ್ತೆಯ ಮಧ್ಯೆ ದಟ್ಟ ಮಂಜು ಆವರಿಸಿದ್ದು, ಹೀಗಾಗಿ ರಸ್ತೆ ಕಾಣುತ್ತಿಲ್ಲ. ಇದರಿಂದ ದಾರಿಯಲ್ಲಿ ಟ್ರಾಫಿಕ್‌ ದಟ್ಟಣೆ ಜಾಸ್ತಿ ಇದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ಮನೆ ಜಲಾವೃತ
ಧಾರಕಾರ ಮಳೆಯಿಂದ ಸುಳ್ಯ ತಾಲೂಕಿನ ಸಂಪಾಜೆ ಬಳಿಯ ಗೂನಡ್ಕ ಗ್ರಾಮದಲ್ಲಿ ಮನೆ ಜಲಾವೃತ ಆಗಿದೆ. ಭೂಕಂಪನವಾದ ಬೆಂಬು ಗ್ರಾಮದಲ್ಲಿ ಮಣ್ಣು ಕುಸಿದಿದೆ.

LEAVE A REPLY

Please enter your comment!
Please enter your name here

Hot Topics

ದ.ಕದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಹಿಂತೆಗೆತ-ಆ.14ರವರೆಗೆ ಸೆಕ್ಷನ್ 144 ಮುಂದುವರಿಕೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ (ಆ.8)ರಿಂದ ಎಲ್ಲಾ ನಿರ್ಬಂಧಗಳನ್ನು ಹಿಂತೆಗೆದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.ಆದರೆ ಆ.14ರ ಮಧ್ಯರಾತ್ರಿವರೆಗೆ ಸೆಕ್ಷನ್ 144 ಮಾತ್ರ...

ತಪ್ಪಿತಸ್ಥ ಎಂದು ಆದೇಶವಾಗುತ್ತಿದ್ದಂತೆ ಕೋರ್ಟ್‌ನಿಂದ ಎಸ್ಕೇಪ್‌ ಆದ ಉತ್ತರಪ್ರದೇಶದ ಸಚಿವ

ಕಾನ್ಪುರ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರಾಗಿರುವ ರಾಕೇಶ್ ಸಚನ್ ಅವರು 1991ರ ಪ್ರಕರಣದಲ್ಲಿ ತಪ್ಪಿತಸ್ಥ ಎನ್ನುವುದು ಸಾಬೀತಾಗಿದೆ.ಕಾನ್ಪುರ ನ್ಯಾಯಾಲಯವು ರಾಕೇಶ್ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡುತ್ತಿದ್ದಂತೆಯೇ ಅವರು ಕೋರ್ಟ್‌ನಿಂದ...

ಒಲಿಂಪಿಕ್ಸ್ ಯುನಿಫೈಡ್ ಫುಟ್ಬಾಲ್ ಪಂದ್ಯಾಟ: ಮಂಗಳೂರು ಮೂಲದ ಲಿಖಿತಾ ಹರೀಶ್ ತಂಡಕ್ಕೆ ಕಂಚು

ಮಂಗಳೂರು: ಅಮೆರಿಕಾದ ಮೆಚಿಗನ್‌ನಲ್ಲಿ ಸ್ಪೆಷಲ್ ಒಲಿಂಪಿಕ್ ಭಾರತ್ ನ್ಯಾಷನಲ್ ಕೋಚಿಂಗ್ ಕ್ಯಾಂಪ್‌ನ ಪಾಲುದಾರಿಕೆಯಲ್ಲಿ ಆಯೋಜಿಸಿದ್ದ ಸ್ಪೆಷಲ್ ಒಲಿಂಪಿಕ್ ಯುನಿಫೈಡ್ ಕಪ್-2022 ಅಂತರಾಷ್ಟ್ರೀಯ ಫುಟ್‌ಬಾಲ್‌ ಕ್ರೀಡೆಯಲ್ಲಿ ಮಂಗಳೂರಿನ ಸುರತ್ಕಲ್ ಲಯನ್ಸ್ ವಿಶೇಷ ಶಾಲೆಯ ವಿದ್ಯಾರ್ಥಿನಿ...