MANGALORE
ಮೂಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ವಿಶೇಷ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ
Published
3 years agoon
By
Adminಮಂಗಳೂರು: ಇಲ್ಲಿನ ಮುಲ್ಕಿ ಸಮೀಪದ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ವೇದಮೂರ್ತಿ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಅರ್ಚಕರಾದ ಪುರುಷೋತ್ತಮ ಭಟ್ ನೇತೃತ್ವದಲ್ಲಿ ವಿಶೇಷ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ ನಡೆಯಿತು.
ಸಿಂಹ ಸಂಕ್ರಮಣದ ಶುಭ ದಿನ ವಾದ ನಿನ್ನೆ ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಪೂಜಾಕೈಂಕರ್ಯ ಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳು ಆಶೀರ್ವಚನ ನೀಡಿ ಭಕ್ತಜನರ ದುರಿತ ನಿವಾರಣಾ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಲಕ್ಷ ತುಳಸಿ ಅರ್ಚನೆ ನಡೆಸಲಾಗಿದ್ದು,
ಲೋಕಕ್ಕೆ ಬಂದಿರುವ ಕೊರೊನಾ ಮಹಾಮಾರಿಯ ಕಂಟಕ ದೂರವಾಗಿ ಶಾಂತಿ ನೆಲೆಸಲಿ ಎಂದರು.
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯಚಂದ್ರ ಜೈನ್, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ,
ಗುರುಪ್ರಸಾದ್ ಭಟ್, ಉದ್ಯಮಿ ಪ್ರಸಾದ್ ಶೆಟ್ಟಿ ಮುಂಡ್ಕೂರು ಅಂಗಡಿ ಗುತ್ತು, ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ, ಶಿವರಾಮಶೆಟ್ಟಿ ಅಜೆಕಾರು,
ಡಾ. ಪಿ.ವಿ. ಶೆಟ್ಟಿ ಮುಂಬೈ, ಸತೀಶ್ ಶೆಟ್ಟಿ ಕೆಂಚನಕೆರೆ, ಜಯ ಶೆಟ್ಟಿ ಮುಂಬೈ,ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯ ಕೃಷ್ಣ ಶೆಟ್ಟಿಗಾರ್, ಪದ್ಮಿನಿ ವಿಜಯ ಶೆಟ್ಟಿ, ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ,
ಸಹಕಾರಿ ಪ್ರಕೋಷ್ಠದ ಸಂಚಾಲಕ ರಂಗನಾಥ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಉದಯಕುಮಾರ್ ಶೆಟ್ಟಿ ಅಧಿಧನ್ ಮುಲ್ಕಿ, ಸುನಿಲ್ ಆಳ್ವ, ಶರತ್ ಕುಬೆವೂರು, ಮೋಹನ್ ಕೋಟ್ಯಾನ್ ಶಿಮಂತೂರು ಉಪಸ್ಥಿತರಿದ್ದರು.
LATEST NEWS
ಉಳ್ಳಾಲ: ಎರಡು ಶಾಲೆಗಳಿಗೆ ನುಗ್ಗಿದ ಕಳ್ಳರು – ನಗದು ದೋಚಿ ಪರಾರಿ
Published
10 hours agoon
28/11/2024By
NEWS DESK2ಉಳ್ಳಾಲ: ಎರಡು ಶಾಲೆಗಳಿಗೆ ನುಗ್ಗಿದ ಕಳ್ಳರು ಕಚೇರಿಯನ್ನೆಲ್ಲಾ ತಡಕಾಡಿದ್ದು, ನಗದು ದೋಚಿ ಪರಾರಿಯಾಗಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆ ಕಾರ್ ಕೊಲ್ಯದಲ್ಲಿ ನಡೆದಿದ್ದು, ಈ ಪ್ರಕರಣವು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕೊಲ್ಯದ ಸಂತ ಜೋಸೆಫರ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಕನ್ನಡ ಮಾಧ್ಯಮ ಶಾಲೆಗಳಿಗೆ ಕಳ್ಳರು ಕನ್ನ ಹಾಕಿದ್ದು ,ಸಿಸಿಟಿವಿ ಕ್ಯಾಮೆರಾವನ್ನು ತಿರುಚಿ ಬೀಗ ಒಡೆದು ಒಳ ನುಗ್ಗಿ ಜಾಲಾಡಿದ್ದಾರೆ.
ಕೊಲ್ಯ ಜಾಯ್ ಲ್ಯಾಂಡ್ ಶಾಲೆಗೆ ಮೂರನೇ ಬಾರಿ ಕಳ್ಳರು ಕನ್ನ ಹಾಕಿದ್ದಾರೆ.ಈ ಹಿಂದೆಯೂ ಎರಡು ಬಾರಿ ಶಾಲೆಗೆ ಕಳ್ಳರು ನುಗ್ಗಿದ್ದು ನಗದು ಕಳವುಗೈದಿದ್ದರು.ಈ ಬಾರಿ ಸಿಸಿಟಿವಿ ಕ್ಯಾಮೆರ ತಿರುಚಿ ಒಳ ನುಗ್ಗಿದ ಕಳ್ಳರು ಪ್ರಾಂಶುಪಾಲರ ಕಚೇರಿ,ಕಬಾಟುಗಳ ಬೀಗ ಒಡೆದು ಹುಡುಕಾಟ ನಡೆಸಿದ್ದು, ವಿದ್ಯಾರ್ಥಿಗಳಿಂದ ಪಿಕ್ನಿಕ್ ಗಾಗಿ ಸಂಗ್ರಹಿಸಿದ್ದ ಸುಮಾರು 26,000 ರೂಪಾಯಿ ನಗದನ್ನ ಎಗರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಗೂ ಬುಧವಾರ ಮುಂಜಾನೆ 4.30 ಗಂಟೆ ವೇಳೆಗೆ ಕನ್ನ ಹಾಕಿದ ಕಳ್ಳನೋರ್ವನು ಸಿಸಿಟಿವಿ ಕ್ಯಾಮರಕ್ಕೆ ಮುಖ ಕಾಣದಿರಲು ಮ್ಯಾಟನ್ನು ಅಡ್ಡ ಹಿಡಿದು ಮುನ್ನುಗ್ಗುತ್ತಿರುವ ದೃಶ್ಯವು ಸಿಸಿಟಿವಿ ಯಲ್ಲಿ ದಾಖಲಾಗಿದೆ. ಸಿಸಿಟಿವಿ ಕ್ಯಾಮರ ತಿರುಚಿ ಕಚೇರಿ ,ಸ್ಟಾಪ್ ರೂಂನ ಕಪಾಟುಗಳನ್ನು ಒಡೆದು ತಡಕಾಡಿ ನಗದು ದೋಚಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎರಡೂ ಶಾಲೆಗಳಲ್ಲೂ ಏಕಕಾಲದಲ್ಲಿ ಕಳ್ಳತನ ನಡೆದಿದ್ದು, ಓರ್ವನೇ ಕಳ್ಳ ಕೈಚಳಕ ತೋರಿದ್ದಾನೋ ಅಥವ ತಂಡ ಶಾಮೀಲಾಗಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
DAKSHINA KANNADA
ಮಂಗಳೂರು : ನ. 30 ರಂದು ‘ಇಸ್ಕಾನ್’ ನಶಾಮುಕ್ತಿ ಅಭಿಯಾನ; ಅಮೋಘ್ ಲೀಲಾ ದಾಸ್ ಭಾಷಣ
Published
12 hours agoon
28/11/2024By
NEWS DESK4ಮಂಗಳೂರು : ಇಸ್ಕಾನ್ ಕುಡುಪುಕಟ್ಟೆವತಿಯಿಂದ ನಡೆಯಲಿರುವ ನಶಾ ಮುಕ್ತಿ ಅಭಿಯಾನಕ್ಕೆ ನ. 30ರಂದು ಅಪರಾಹ್ನ 3.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಗುವುದು ಎಂದು ಇಸ್ಕಾನ್ ಕುಡುಪು ಕಟ್ಟೆಯ ಕಾರ್ಯದರ್ಶಿ ಎಚ್.ಜಿ. ಪ್ರೇಮಾ ಭಕ್ತಿದಾಸ್ ಮತ್ತು ಯುವ ಘಟಕದ ಸದಸ್ಯ ಎಚ್.ಜಿ. ದೇವಧರ್ಮ ದಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಶಾ ವ್ಯಸನದ ವಿರುದ್ದ ಜಾಗೃತಿ ಮೂಡಿಸಲು ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದ್ಘಾಟನೆಯ ಬಳಿಕ ‘ಉಮಂಗ್ 3.0 : ಮೆಗಾ ಯೂತ್ ಫೆಸ್ಟ್‌ವಲ್’ ನಡೆಯಲಿದ್ದು, ಇಸ್ಕಾನ್ ಹೊಸದಿಲ್ಲಿಯ ಉಪಾಧ್ಯಕ್ಷ ಪ್ರೇರಕ ಭಾಷಣಕಾರ ಅಮೋಘ್ ಲೀಲಾ ದಾಸ್ ಪಾಲ್ಗೊಳ್ಳಲಿದ್ದಾರೆ. ದೇಶಾದ್ಯಂತದ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಸ್ಕಾನ್ ಯೂತ್‌ವಿಂಗ್‌ನ್ನು ಯುವ ಪ್ರಭಾವದ ಉಪಕ್ರಮಗಳಿಗಾಗಿ ಶ್ಲಾಘಿಸಿದ್ದು, ವ್ಯಸನ ಮತ್ತು ಮಾದಕ ದ್ರವ್ಯಗಳ ವಿಷಯದ ಕುರಿತು ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಲು ಎಂಒಯುಗೆ ಸಹಿ ಹಾಕಿದೆ. ಕರ್ನಾಟಕದಲ್ಲಿ ಸುಮಾರು ಶೇ.30ರಷ್ಟು ನಶಾ ವ್ಯಸನ ಪ್ರಕರಣಗಳು ಮಂಗಳೂರು ನಗರದಲ್ಲಿಯೇ ಕಂಡುಬಂದಿದ್ದು ಇಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಎಚ್.ಜಿ. ಪ್ರೇಮಾ ಭಕ್ತಿದಾಸ್ ತಿಳಿಸಿದರು.
ಮಂಗಳೂರು: ಬರ್ಕೆ ಫ್ರೆಂಡ್ಸ್ ಇದರ ಗುರ್ಜಿ ದೀಪೋತ್ಸವ ಮಣ್ಣಗುಡ್ಡೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ಸಾವಿರಾರು ಜನರು ಈ ಗುರ್ಜಿ ದೀಪೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರಾರಾಗಿದ್ದಾರೆ. ಹುಲಿ ವೇಷ ಮಾತ್ರವಲ್ಲದೆ ಹಲವಾರು ಸಮಾಜಸೇವಾ ಕಾರ್ಯದ ಮೂಲಕ ಜನರ ಕಷ್ಟಕ್ಕೆ ಸ್ಪಂಧಿಸುತ್ತಿರುವ ಬರ್ಕೆ ಫ್ರೆಂಡ್ಸ್ ಈ ಧಾರ್ಮಿಕ ಕಾರ್ಯಕ್ರಮವನ್ನು ಕೂಡಾ ಆಯೋಜಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ಜನರಿಗೆ ಭಕ್ತಿಯ ಪ್ರಸಾದ ನೀಡುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನರಂಜಿಸುವ ಕೆಲಸ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಸಲಾಗುತ್ತಿದೆ. ಬುಧವಾರ ಸಂಜೆ ಮಣ್ಣಗುಡ್ಡೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸುವುದರೊಂದಿಗೆ ಬರ್ಕೆ ಗುರ್ಜಿ ದೀಪೋತ್ಸವ ಸಂಪನ್ನಗೊಂಡಿದೆ.
ಇದುವರೆಗೆ ನೂರಾರು ಸಾಧಕರನ್ನು ಗುರುತಿಸಿ ಗೌರವಿಸಿರುವ ಬರ್ಕೆ ಫ್ರೆಂಡ್ಸ್ ತಂಡ ಈ ಬಾರಿ ವಿಶೇಷವಾಗಿ ಇಬ್ಬರು ಹಿರಿಯರನ್ನು ಹಾಗೂ ಇಬ್ಬರು ಕಿರಿಯರನ್ನು ಸನ್ಮಾನಿಸಿದೆ. ಕಟೀಲು ಯಕ್ಷಗಾನ ಮೇಳದ ಹಿರಿಯ ಕಲಾವಿದ ಉಮೇಶ್ ಕಕ್ಕೆಪದವು ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಗಿದೆ. ಉಮೇಶ್ ಕಕ್ಕೆಪದವು ಕಟೀಲು ಯಕ್ಷಗಾನದಲ್ಲಿ ಮಹಿಷಾಸುರನ ಪಾತ್ರದ ಮೂಲಕ ಜನರ ಮನಸ್ಸು ಗೆದ್ದವರಾಗಿದ್ದಾರೆ. ಅಷ್ಟೇ ಅಲ್ಲದೆ ಒಬ್ಬ ಬಡ ಕೂಲಿಕಾರ್ಮಿಕನಾಗಿ ಹಗಲಿನಲ್ಲಿ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡಿ ಸಂಜೆಯಾಗುತ್ತಿದ್ದಂತೆ ಯಕ್ಷಗಾನದಲ್ಲಿ ಬಣ್ಣ ಹಚ್ಚಿ ದೇವಿಯ ಸೇವೆ ಮಾಡುತ್ತಿದ್ದಾರೆ. ಇವರ ಈ ಸೇವಾ ಕಾರ್ಯವನ್ನು ಬರ್ಕೆ ಫ್ರೆಂಡ್ಸ್ ಗುರುತಿಸಿ ಗೌರವಿಸಿದೆ.
ಜಾತಿ ಧರ್ಮದ ಎಲ್ಲೆ ಮೀರಿ ಪ್ರೀತಿ ವಿಶ್ವಾಸಕ್ಕೆ ಬೆಲೆ ನೀಡುವ ಬರ್ಕೆ ಫ್ರೆಂಡ್ಸ್ , ತಮ್ಮೆಲ್ಲಾ ಕಾರ್ಯಕ್ಕೆ ಹಲವಾರು ವರ್ಷಗಳಿಂದ ಕೈ ಜೋಡಿಸುವ ಸೆಂಟ್ರಲ್ ಮಾರ್ಕೆಟ್‌ನ ಹಣ್ಣಿನ ವ್ಯಾಪಾರಿ ಅಶ್ರಫ್ ಅವರನ್ನು ಸನ್ಮಾನಿಸಿದೆ. ಅಶ್ರಫ್ ಅವರ ಸಂಕಷ್ಟದ ಸಮಯದಲ್ಲಿ ಬರ್ಕೆ ಫ್ರೆಂಡ್ಸ್ ಸಹಾಯ ಮಾಡಿದ್ದನ್ನು ಮರೆಯದೆ ಕೃತಜ್ಞತೆಯನ್ನು ತೋರಿಸಿದ್ದಾರೆ. ಬರ್ಕೆ ಫ್ರೆಂಡ್ಸ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಹಲವಾರು ವರ್ಷದಿಂದ ಗುರ್ಜಿ ಸೇರಿದಂತೆ ಎಲ್ಲಾ ಕಾರ್ಯಕ್ರಮದಲ್ಲೂ ಅಶ್ರಫ್ ಅವರು ಸಹಾಯ ಹಸ್ತ ನೀಡಿದ್ದಾರೆ. ಇದೇ ವೇಳೆ ಸ್ಕೇಟಿಂಗ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಕೇಟ್ ಆರ್ವಿ ವಾಸ್ ಹಾಗೂ ತನ್ನ ಸುಂದರ ಹಸ್ತಾಕ್ಷರಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಕೃತಿ ಬೋಳೂರು ಅವರನ್ನು ಸನ್ಮಾನಿಸಲಾಗಿದೆ.
ಗುರ್ಜಿ ದೀಪೋತ್ಸವದ ಹಿನ್ನಲೆಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆದಿತ್ತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವರ್ಣರಂಜಿತ ಬೆಳಕಿನಲ್ಲಿ ರಸಮಂಜರಿ ಹಾಗೂ ನೃತ್ಯಗಳ ಮೂಲಕ ಜನರನ್ನು ರಂಜಿಸಲಾಗಿತ್ತು. ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಮನೋಜ್ ಕೋಡಿಕಲ್, ಸರ್ವದಾ ಡಿಸ್ಟಿಲರ್ಸ್ ಇದರ ಮಾಲಕ ಮನುಕುಮಾರ್, ಮಾಯಾ ಕ್ಯಾಟರರ್ಸ್ ಮಾಲಕ ಮಾದವ ಕಾಮತ್, ಮಾಯ ಇಂಟರ್ನ್ಯಾಷನಲ್ ಇದರ ಮಾಲಕಾರದ ವಾಸುದೇವ ಕಾಮತ್, ಇನ್ ಆರ್ಟ್‌ದ ಮಾಲಕ ಯಶ್ ರಾಜ್, ಗುರ್ಜಿಯನ್ನು ಆರಂಭಿಸಿದ ಯಜ್ಞೇಶ್ ಬರ್ಕೇ, ಸುಚೀಂದ್ರ ಅಮೀನ್ , ಕಿಶನ್ ಬರ್ಕೆ, ಸಂತೋಷ್ ಶೆಟ್ಟಿ , ಉದ್ಯಮಿ ಅಜಿತ್ ಕಾಂಚನ್ , ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರಾ ಮೊದಲಾದವರು ಉಪಸ್ಥಿತರಿದ್ದರು.
LATEST NEWS
ಕ್ಯಾನ್ಸರ್ ವಾಸಿ ಬಗ್ಗೆ ಸಿಧು ಹೇಳಿಕೆಗೆ ಆಕ್ಷೇಪ..! 850 ಕೋಟಿ ಮಾನನಷ್ಟ ಕೋರಿ ನೋಟಿಸ್
ಉತ್ತರ ಪ್ರದೇಶ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ವೈರ್ ತಗುಲಿ ವಿದ್ಯಾರ್ಥಿನಿ ಸಾವು
ಬೆಂ*ಕಿ ಹಚ್ಚಿ ಇಡೀ ಕುಟುಂಬದ ಸಾಮೂಹಿಕ ಹ*ತ್ಯೆಗೆ ಯತ್ನ
ಕೊರೆಯುವ ಚಳಿಯಲ್ಲಿ ತುಟಿಗಳ ಅಂದ ಮಾಸದಿರಲಿ, ಈ ರೀತಿ ಆರೈಕೆ ಮಾಡಿ
Watch video: ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿ ಜೈಲಾಧಿಕಾರಿಗಳ ಎದುರೇ ಯುವಕನ ಭರ್ಜರಿ ಡ್ಯಾನ್ಸ್ !
ಅಂತಾರಾಷ್ಟ್ರೀಯ ಸಮ್ಮೇಳನ: ವ್ಯಾಟಿಕನ್ಗೆ ತೆರಳಿದ ಸ್ಪೀಕರ್ ಯುಟಿ ಖಾದರ್
Trending
- Baindooru6 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- BIG BOSS5 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru5 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- Ancient Mangaluru1 day ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು