Connect with us

    LATEST NEWS

    ಬೆಟ್ಟಿಂಗ್‌ ಕಟ್ಟಿದ್ದ ಯುವತಿಯನ್ನು ಕಾರಿನಲ್ಲಿ ಎಳೆದೊಯ್ದ ಯುವಕರು

    Published

    on

    ಮಡಿಕೇರಿ: ರಸ್ತೆ ಬದಿ ನಿಂತಿದ್ದ ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣವು ಸಾರ್ವಜನಿಕರಿಗೆ ಅಪಹರಣದಂತೆ ಕಂಡು ಕೊನೆಯಲ್ಲಿ ಸ್ನೇಹಿತರೇ ಬೆಟ್ಟಿಂಗ್‌ಗಾಗಿ ತಮಾಷೆಯಲ್ಲಿ ನಡೆಸಿದ ಪ್ರಕರಣವು ಸುಖಾಂತ್ಯ ಕಂಡಿದೆ.


    ‘ಮಂಡ್ಯ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಈ ಯುವತಿಯು ತನ್ನ ನಾಲ್ವರು ಸ್ನೇಹಿತರೊಂದಿಗೆ ಮಡಿಕೇರಿಗೆ ಪ್ರವಾಸಕ್ಕಾಗಿ ಬಂದಿದ್ದರು.

    ಈ ವೇಳೆ ಸ್ನೇಹಿತರೊಂದಿಗೆ ತಾನು ಹಣ ಇಲ್ಲದಿದ್ದರೂ ಊರು ತಲುಪುತ್ತೇನೆ ಎಂದು ಮೋಜಿಗಾಗಿ ಬೆಟ್ಟಿಂಗ್ ಕಟ್ಟಿ, ಕಾರಿನಿಂದಿಳಿದು ಹೊರಟರು.

    ಸಂಪಿಗೆಕಟ್ಟೆ ಸಮೀಪ ಗೂಗಲ್‌ ಪೇ ಮಾಡಿ ಅಂಗಡಿಯೊಂದರ ಮಾಲೀಕರಿಂದ 500 ರೂ ನಗದು ಪಡೆದು, ಬಸ್‌ನಲ್ಲಿ ಹೊರಡಲು ಸಿದ್ಧವಾಗಿದ್ದರು.

    ಈ ವೇಳೆ ಯುವತಿಯನ್ನು ಹುಡುಕುತ್ತ ಬಂದ ಸ್ನೇಹಿತರು ಆಕೆಯನ್ನು ಎಳೆದೊಯ್ದರು. ಇದು ಸಾರ್ವಜನಿಕರಿಗೆ ಅಪಹರಣದಂತೆ ಕಂಡಿತು’ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು,

    ಯುವತಿಯ ಹೇಳಿಕೆ ಪಡೆಯಲಾಗಿದೆ. ಅಪಹರಣ ಪ್ರಕರಣ ಇದಾಗದೇ ಇರುವುದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.

    BELTHANGADY

    ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕುಟುಂಬ ಭೇಟಿ

    Published

    on

    ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಡಿ.23 ರಂದು ಮಧ್ಯಾಹ್ನ ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪತ್ನಿ ಗೀತಾ ಖಂಡ್ರೆ ಮಗ ಬಿದ‌ರ್ ಸಂಸದ ಸಾಗರ್ ಖಂಡ್ರೆ ಹಾಗೂ ಪತ್ನಿ ಗೀತಾ ಖಂಡ್ರೆ ಸಹೋದರರಾದ ಹೈಕೋರ್ಟ್‌ ಎಸ್.ಪಿ.ಪಿ ವಿಜಯ್ ಕುಮಾರ್ ಮಜ್ಜಿಗೆ ಹಾಗೂ ವಕೀಲ ಗಂಗಾಧರ್ ಮಜ್ಜಿಗೆ, ಕಾಂಗ್ರೆಸ್ SC ಮೋರ್ಚಾದ ಅಧ್ಯಕ್ಷ ಲಕ್ಷ್ಮಿ ನಾರಾಯಣ ಸ್ವಾಮಿ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಈಶ್ವರ್ ಖಂಡ್ರೆ ಮತ್ತು ಮಗ ಸಾಗರ್ ಖಂಡ್ರೆ ಬೆಲ್ಲ ಮತ್ತು ಕಡ್ಲೆ ಬೇಳೆಯಿಂದ ಧರ್ಮಾಧಿಕಾರಿಗಳ ಮುಂದೆ ತುಲಭಾರ ಸೇವೆ ಮಾಡಿಸಿದರು. ಬಳಿಕ ಡಾ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

    ಸಚಿವರ ಭೇಟಿ ವೇಳೆ ಮಂಗಳೂರು ಡಿಸಿಎಫ್ ಮರಿಯಪ್ಪ ಕರಿಕಳನ್, ಅರಣ್ಯ ಇಲಾಖೆಯ (FMS) ಮಂಗಳೂರು DCF ಶ್ರೀಕಾಂತ್‌ ಖಣದಾಳಿ ಬೆಳ್ತಂಗಡಿ ಆರ್.ಎಫ್.ಓ ತ್ಯಾಗರಾಜ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಗೌಡ ಮತ್ತಿತರ ಕಾರ್ಯಕರ್ತರು ಭಾಗಿಯಾಗಿದ್ದರು.

    Continue Reading

    BIG BOSS

    ಎಲಿಮಿನೇಷನ್ ಹೈಡ್ರಾಮಾ: ಬಿಗ್ ಬಾಸ್‌ನಿಂದ ಹೊರಬಂದ ತ್ರಿವಿಕ್ರಮ್!

    Published

    on

    ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ ಬಾಸ್ ಸೀಸನ್ 11 ಇವತ್ತು ಮತ್ತೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕಳೆದ ವಾರದ ಎಲಿಮಿನೇಷನ್ ಟ್ವಿಸ್ಟ್‌ಗೆ ಇವತ್ತು ಮೆಗಾ ಕ್ಲೈಮ್ಯಾಕ್ಸ್‌ ಕಾದಿದೆ. ಬಿಗ್ ಬಾಸ್ ವೀಕ್ಷಕರ ಕುತೂಹಲ ಹಾಗೂ ಕಾಡುತ್ತಿರುವ ಪ್ರಶ್ನೆಗೆ ಕೆಲವೇ ಕ್ಷಣದಲ್ಲಿ ಉತ್ತರ ಸಿಗುತ್ತಿದೆ.

    ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಜಿದ್ದಾಜಿದ್ದಿ ಜೋರಾಗಿದೆ. 12ನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಸೂಪರ್ ಸಂಡೇ ವಿತ್ ಬಾದ್ ಷಾ ಎಪಿಸೋಡ್‌ನಲ್ಲಿ ಐಶ್ವರ್ಯ ಹಾಗೂ ತ್ರಿವಿಕ್ರಮ್‌ ಡೇಂಜರ್ ಝೋನ್ ತಲುಪಿದ್ದರು. ಕೊನೆಗೆ ತ್ರಿವಿಕ್ರಮ್ ಅವರೇ ಎಲಿಮಿನೇಟ್ ಎಂದು ಘೋಷಣೆ ಮಾಡಲಾಗಿದ್ದು, ಬಿಗ್ ಬಾಸ್ ಆದೇಶದಂತೆ ತ್ರಿವಿಕ್ರಮ್ ಬಿಗ್ ಬಾಸ್ ಗೇಟ್ ಓಪನ್ ಮಾಡಲಾಗಿದೆ.

    ತ್ರಿವಿಕ್ರಮ್ ಅವರು ಈ ವಾರ ಎಲಿಮಿನೇಟ್ ಆಗಿದ್ದಾರಾ ಅನ್ನೋದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ವೀಕ್ಷಕರಿಗೆ ಇವತ್ತು ಮೆಗಾ ಟ್ವಿಸ್ಟ್ ಕಾದಿದೆ. ಬಿಗ್ ಬಾಸ್ ಮನೆಯ ಸದಸ್ಯರು ಕೂಡ ತ್ರಿವಿಕ್ರಮ್ ಈ ವಾರ ಎಲಿಮಿನೇಟ್ ಆಗಿದ್ದಾರೆ ಅನ್ನೋದನ್ನ ಈಗಲೂ ನಂಬುತ್ತಿಲ್ಲ. ಮತ್ತೊಂದು ಸರ್‌ಪ್ರೈಸ್ ಕಾದಿದೆ ಅಂದುಕೊಂಡೇ ಕಾಲ ಕಳೆಯುತ್ತಿದ್ದಾರೆ.

    ಮೂಲಗಳ ಪ್ರಕಾರ ತ್ರಿವಿಕ್ರಮ್‌ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋ ಸಾಧ್ಯತೆ ಕಡಿಮೆ ಇದೆ. ಪ್ರತಿ ಸೀಸನ್ ಅಂತೆ ತ್ರಿವಿಕ್ರಮ್ ಅವರನ್ನ ಬಿಗ್ ಬಾಸ್ ಸೀಕ್ರೆಟ್ ರೂಮ್‌ಗೆ ಕಳುಹಿಸಿರುವ ಸಾಧ್ಯತೆ ಇದೆ. ಮನೆಯವರ ಮಾತುಗಳನ್ನ ಕೇಳಿಸಿಕೊಂಡು ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯಲ್ಲಿ ಸರ್‌ಪ್ರೈಸ್ ಆಗಿ ಎಂಟ್ರಿ ಕೊಡಬಹುದು ಎನ್ನಲಾಗಿದೆ.

    ಬಿಗ್ ಬಾಸ್ ಕೊಟ್ಟ ಎಲ್ಲಾ ಟಾಸ್ಕ್‌ಗಳಲ್ಲೂ ತ್ರಿವಿಕ್ರಮ್ ಅವರು ಚೆನ್ನಾಗಿಯೇ ಆಟ ಆಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ಈ ವಾರ ಬಿಗ್ ಬಾಸ್ ಎಲಿಮಿನೇಷನ್‌ನಿಂದ ವೀಕ್ಷಕರ ವೋಟಿಂಗ್ ಕೂಡ ಓಪನ್ ಆಗಿಲ್ಲ. ಹೀಗಾಗಿ ತ್ರಿವಿಕ್ರಮ್ ಅವರು ಎಲ್ಲರ ನಿರೀಕ್ಷೆಯಂತೆ ಎಲಿಮಿನೇಟ್ ಆಗದೆ ಇಂದು ಮತ್ತೆ ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಡುವ ಸಾಧ್ಯತೆ ಇದೆ.

    Continue Reading

    LATEST NEWS

    ಕುಂದಾಪುರ: ಗಾಳಿ ತುಂಬಿಸುತ್ತಿದ್ದ ವೇಳೆ ಟೈರ್ ಸ್ಫೋಟ: ಯುವಕನಿಗೆ ಗಂಭೀರ ಗಾಯ

    Published

    on

    ಕುಂದಾಪುರ: ಟೈರ್ ಪಂಕ್ಚರ್ ಶಾಪ್ ಒಂದರಲ್ಲಿ ಬಸ್ಸೊಂದರ ಟೈರ್ ಗೆ ಗಾಳಿ ತುಂಬಿಸುತ್ತಿದ್ದ ಸಂದರ್ಭ ಟೈರ್ ಸಿಡಿದು ಯುವಕ ಗಂಭೀರ ಗಾಯಗೊಂಡ ಘಟನೆ ಕೋಟೇಶ್ವರದಲ್ಲಿ ಸಂಭವಿಸಿದೆ.

    ಅಬ್ದುಲ್ ರಶೀದ್ (19) ಗಂಭೀರ ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.

    ಕೋಟೇಶ್ವರದಲ್ಲಿರುವ ಟೈರ್ ಪಂಕ್ಚರ್ ಶಾಪ್ ಗೆ ಖಾಸಗಿ ಶಾಲಾ ಬಸ್ಸೊಂದರ ಟೈರ್ ಪ್ಯಾಚ್ ಗೆ ಬಂದಿತ್ತು. ಈ ವೇಳೆ ಅಬ್ದುಲ್ ರಶೀದ್ ಟೈರನ್ನು ಬಸ್ಸಿನಿಂದ ಕೆಳಗಿಳಿಸಿ ಗಾಳಿ ತುಂಬಿಸಿದ್ದಾರೆ. ಗಾಳಿ ತುಂಬಿಸಿ ರಶೀದ್ ಅಲ್ಲಿಂದ ಎದ್ದೇಳುತ್ತಿದ್ದಂತೆ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಟೈರ್ ಸಿಡಿದ ರಭಸಕ್ಕೆ ರಶೀದ್ ಗಾಳಿಯಲ್ಲಿ ಹಾರಿ ಗಿರಕಿ ಹೊಡೆದು ಬಿದ್ದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಸ್ಫೋಟದ ತೀವ್ರತೆಗೆ ಟೈರ್ ಡ್ರಮ್ ಹಾರಿ ಬಸ್ಸಿನ ಮೇಲ್ಛಾವಣಿಯ ಮೇಲೆ ಬಿದ್ದು ನೆಲಕ್ಕುರುಳಿದೆ. ಘಟನೆಯ ಎಲ್ಲಾ ದೃಶ್ಯಾವಳಿಗಳು ಸ್ಥಳೀಯ ಅಂಗಡಿಯವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Continue Reading

    LATEST NEWS

    Trending