ಮಂಗಳೂರು: ಮಾಜಿ ಕೇಂದ್ರ ಸಚಿವ ಬಿಲ್ಲವ ನೇತಾರ ಜನಾರ್ದನ ಪೂಜಾರಿ ನೇತೃತ್ವದ ‘ಸ್ವಾಭಿಮಾನಿ ನಡಿಗೆ’ ಕಾರ್ಯಕ್ರಮದ ನಡೆಯುವ ಮೊದಲು ಇತ್ತ ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಬಜರಂಗದಳ ಕಾರ್ಯಕರ್ತರಿಂದ ‘ನಾರಾಯಣ ಗುರು ವೃತ್ತ’ ಎಂದು ನಾಮಫಲಕ ಅಳವಡಿಸಲಾಗಿದೆ.
ಸದ್ಯ ಮಂಗಳೂರು ಪಾಲಿಕೆ ಲೇಡಿಹಿಲ್ ವೃತ್ತದ ಹೆಸರು ಬದಲಾವಣೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಲವು ವರ್ಷಗಳಿಂದ ಲೇಡಿಹಿಲ್ ವೃತ್ತ ಎಂದು ಅಧಿಕೃತ ದಾಖಲೆಗಳಿವೆ.
ಆದರೆ ವೃತ್ತದ ಹೆಸರು ನಾರಾಯಣ ಗುರು ವೃತ್ತ ಅಂತ ಬದಲಿಸಲು ಬಿಜೆಪಿ ಪ್ರಸ್ತಾಪಿಸಿದೆ. ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ನಾರಾಯಣ ಗುರು ಹೆಸರಿಡಲು ಲಿಖಿತ ಆಕ್ಷೇಪ ವ್ಯಕ್ತವಾಗಿದೆ