Monday, July 4, 2022

ಬಸ್ಸಿನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಅಟ್ಟಾಡಿಸಿ ಪೊಲೀಸರಿಗೆ ಒಪ್ಪಿಸಿದ ಯುವತಿ

ಕೇರಳ: ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಕಾಮುಕನನ್ನು ಯುವತಿಯೊಬ್ಬಳು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೇರಳದ ಕರಿವೆಲ್ಲೂರಿನಲ್ಲಿ ನಡೆದಿದೆ.


ರಾಜೀವ್ (52) ಬಂಧಿತ ಆರೋಪಿ.

ಕಣ್ಣೂರಿನಿಂದ KSRTC ಬಸ್‌ನಲ್ಲಿ ಆರ್‌ಟಿ ಭಾರತಿ ಪ್ರಯಾಣ ಮಾಡುತ್ತಿದ್ದಳು. ಸರ್ಕಾರದ ನೀತಿಯನ್ನು ವಿರೋಧಿಸಿ ಕೇರಳದ ಖಾಸಗಿ ಬಸ್‌ ಸ್ಟ್ರೈಕ್ ಇದ್ದ ಕಾರಣ ಸರ್ಕಾರಿ ಬಸ್‌ಗಳೆಲ್ಲ ತುಂಬಿ ತುಳುಕುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಆರತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

ಆತನಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಕೂಡ ಅದನ್ನು ಲೆಕ್ಕಿಸದೆ ತನ್ನ ನೀಚ ಕೆಲಸ ಮುಂದುವರೆಸಿದ್ದಾನೆ. ಆಕೆಗೆ ಕಿರುಕುಳ ನೀಡುವುದು ತಿಳಿಯುತ್ತಿದ್ದರೂ ಬಸ್ಸಿನಲ್ಲಿದ್ದ ಯಾರೂ ಆಕೆಯ ಸಹಾಯಕ್ಕೆ ಬಂದಿರಲಿಲ್ಲ. ಆ ಸಂದರ್ಭ ಆರತಿ ಪೊಲೀಸ್‌ನವರಿಗೆ ಫೋನ್ ಮಾಡಿ ಮಾಹಿತಿ ನೀಡುತ್ತಾಳೆ.

ಇದು ಗೊತ್ತಾಗುತ್ತಿದ್ದಂತೆ ಆರೋಪಿ ಬಸ್ಸಿನಿಂದ ಇಳಿದು ಪರಾರಿಯಾಗಲು ಯತ್ನಿಸುತ್ತಾನೆ. ಆದರೆ ಮುಂದಾಲೋಚನೆಯಿಂದ ಆರತಿ ಆತನ ಫೋಟೋ ಕ್ಲಿಕ್ಕಿಸಿಕೊಂಡಿದ್ದು , ಆರೋಪಿ ರಾಜೀವ್ ಲಾಟರಿ ಕೊಳ್ಳುವ ಗ್ರಾಹಕನಂತೆ ನಾಟಕವಾಡಿ ಅಂಗಡಿ ಒಳಕ್ಕೆ ಹೋದಾಗ ಸ್ಥಳೀಯರ ನೆರವಿನಿಂದ ಆತನನ್ನು ಆಕೆ ಪೊಲೀಸರಿಗೆ ಒಪ್ಪಿಸುತ್ತಾಳೆ.

ಪದವಿ ಪೂರ್ಣಗೊಳಿಸಿರುವ ಆರತಿ ತನ್ನ ಕಾಲೇಉ ದಿನಗಳಲ್ಲಿ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದರು. ಇವರ ಈ ಕಾರ್ಯ ಅನೇಕ ಮಹಿಳೆಯರಿಗೆ, ಹುಡುಗಿಯರಿಗೆ ನಿದರ್ಶನ.

LEAVE A REPLY

Please enter your comment!
Please enter your name here

Hot Topics

ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಲ್ಲಿದ್ದ ಡೆಡ್‌ ಬಾಡಿ ಎರಡು ದಿನಗಳ ಬಳಿಕ ಪತ್ತೆ

ಉಡುಪಿ: ಎರಡು ದಿನಗಳ ಹಿಂದೆ ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಿಂದ ನಾಪತ್ತೆಯಾದ ಓರ್ವನ ಶವ ಇಂದು ಬೈಂದೂರಿನ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.ಮೃತನನ್ನು ರೋಶನ್ ಆಚಾರ್ಯ ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ...

ಕಣಿವೆಗೆ ಉರುಳಿದ ಶಾಲಾ ಬಸ್‌: 16 ವಿದ್ಯಾರ್ಥಿಗಳು ಕೊನೆಯುಸಿರು

ಕುಲು: ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ ಕಣಿವೆಗೆ ಉರುಳಿ ಬಿದ್ದ ಪರಿಣಾಮ 16 ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.‘ಸಾಯಿಂಜ್‌ಗೆ ತೆರಳುತ್ತಿದ್ದ ಬಸ್ ಬೆಳಿಗ್ಗೆ 8.30ರ...

ಪುತ್ತೂರಿನಲ್ಲಿ ಬೈಕ್‌ – ಕಾರು ಡಿಕ್ಕಿ: ಓರ್ವ ಜೀವಾಂತ್ಯ

ಪುತ್ತೂರು: ಬೈಕ್ ಮತ್ತು ಮಾರುತಿ ಕಾರು ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರ ವಲಯದ ಕುಂಬ್ರದಲ್ಲಿ ನಡೆದಿದೆ.ಕು೦ಬ್ರ...