ಬೆಂಗಳೂರು : ದೇಶದ ಗಡಿ ಕಾಯುತ್ತಿದ್ದ ಕರ್ನಾಟಕ ಮೂಲದ ಯೋಧನೊಬ್ಬ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದಾನೆ.
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಬೇಡಕುಂದಾ ಗ್ರಾಮದ ರಾಮದಾಸ್ ಧನರಾಜ್ ಚಂದಾಪುರೆ (35) ಮೃತ ಯೋಧನಾಗಿದ್ದಾನೆ.
ಆಮ್ಲಜನಕ ಕೊರತೆ ಮತ್ತು ಆರೋಗ್ಯದ ಸಮಸ್ಯೆಯಿಂದಾಗಿ ಜಮ್ಮು ಕಾಶ್ಮೀರದಿಂದ 125 ಕಿ. ಮೀ ದೂರದ ಗುರೇಜ್ ಪ್ರದೇಶದಲ್ಲಿ ಧನರಾಜ್ ಸಾವನ್ನಪ್ಪಿದ್ದಾನೆ.
2006 ರಲ್ಲಿ ಸೇನೆಗೆ ಸೇರಿದ್ದ ರಾಮದಾಸ್ ವಿವಿಧೆಡೆ ಸೇವೆ ಸಲ್ಲಿಸಿದ್ದರು.
ಇತ್ತೀಚಿಗೆ ಹೈದರಾಬಾದ್ನಿಂದ ಗುರೇಜ್ಗೆ ವರ್ಗಾವಣೆಯಾಗಿದ್ದರು.ಇವರು ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಮೃತದೇಹವನ್ನು ವಿಶೇಷ ವಿಮಾನದ ಮೂಲಕ ಶ್ರೀನಗರದಿಂದ ಹೈದರಾಬಾದ್ಗೆ ಬಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ವಗ್ರಾಮಕ್ಕೆ ಇಂದು ಆಗಮಿಸಲಿದ್ದು ಸಕಲ ಸೇನಾ ಗೌರವಗಳೊಂದಿಗೆ ಅಂತ್ಯ ಕ್ರೀಯೆ ನಡೆಸಲು ಬೀದರ್ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.