Friday, July 1, 2022

ಜಾಮೀನು ಸಿಕ್ಕ ಬಳಿಕವೂ ಯುವಕನನ್ನು ಬಂಧಿಸಿದ ಪೊಲೀಸರ ವಿರುದ್ಧ ಆಕ್ರೋಶಿತ ಕುಂದಾಪುರ ಜನತೆ..!

ಜಾಮೀನು ಸಿಕ್ಕ ಬಳಿಕವೂ ಯುವಕನನ್ನು ಬಂಧಿಸಿದ ಪೊಲೀಸರ ವಿರುದ್ಧ ಆಕ್ರೋಶಿತ ಕುಂದಾಪುರ ಜನತೆ..!

ಉಡುಪಿ:ಗಲಾಟೆ ಸಂಬಂಧಿತ ವಿಚಾರದಲ್ಲಿ ಕೋರ್ಟ್ ನಿಂದ ಜಾಮೀನು ಪಡೆದಿದ್ದರೂ‌, ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಯುವಕನೋರ್ವನನ್ನು ಮತ್ತೊಮ್ಮೆ ವಶಕ್ಕೆ ಪಡೆದಿರುವುದನ್ನು ಖಂಡಿಸಿ ಉಡುಪಿಯ ಕಂಡ್ಲೂರಿನಲ್ಲಿರುವ ಗ್ರಾಮಾಂತರ ಠಾಣೆಯೆದುರು ನೂರಾರು‌ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ ಘಟನೆ ನಡದಿದೆ.ಕಳೆದ ಬುಧವಾರ ನಡೆದ ಗಲಾಟೆ ವಿಚಾರದಲ್ಲಿ‌ ನಾಗರಾಜ್ ಎನ್ನುವ ಯುವಕನ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಆತ ತನ್ನ ವಕೀಲರ ಮೂಲಕ‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದಿದ್ದ.

ಆದರೆ ಏಕಾಏಕಿ‌ ಮಂಗಳವಾರ‌ ಮುಂಜಾನೆ ಆತನ ಮನೆಗೆ ಬಂದ ಪೊಲೀಸರು‌ ಆತನನ್ನು‌ ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರ ತಿಳಿಯುತ್ತಲೇ ಬೈಂದೂರು ಹಾಗೂ ಕುಂದಾಪುರ ವಿಧಾನ ಸಭಾ ಕ್ಷೇತ್ರದ ನೂರಾರು‌ ಮಂದಿ ಪಕ್ಷಾತೀತವಾಗಿ ಠಾಣೆಯೆದುರು ಜಮಾಯಿಸಿದರು.

ಠಾಣೆ ಬಳಿ ಭೇಟಿ ನೀಡಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ  “ಘಟನೆ ಬಗ್ಗೆ ಈಗಾಗಲೇ ಎಸ್ಪಿಯವರ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕೆಲಸ ಮಾಡುವುದು ಸರಿಯಲ್ಲ. ನಾನು‌ ಕೂಡ ನಾಲ್ಕು ಬಾರಿ ಶಾಸಕ‌ನಾಗಿದ್ದು ಪೊಲೀಸರಿಗೆ ಯಾವ ವಿಚಾರದಲ್ಲಿಯೂ ಒತ್ತಡ ಹಾಕಿಲ್ಲ.

ಆದರೆ ಇದೀಗ ಪ್ರತಿ ಕೇಸಿನಲ್ಲೂ ರಾಜಕೀಯ ಹಸ್ತಕ್ಷೇಪವಾಗುತ್ತಿರುವ ದೂರುಗಳು ಕೇಳಿಬರುತ್ತಿದ್ದು ಇದನ್ನು ಸಹಿಸಲ್ಲ. ಮುಂದೆ ಇಂತಹ ಘಟನೆ ಪುನರಾವರ್ತನೆಯಾದರೆ ಸಂಬಂದಪಟ್ಟ ಠಾಣೆಯೆದುರು ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆರೋಪಿಯನ್ನು ವಿಚಾರಣೆಗಾಗಿ ಕರೆಸಲಾಗಿತ್ತು. ಆತ ಬಾರದ ಕಾರಣ ಮನೆಗೆ ತೆರಳಿ ಕರೆತರಬೇಕಾಯ್ತು ಎಂದು ಪೊಲಿಸರು ಸಮಜಾಯಿಷಿ ನೀಡಿದ್ದಾರೆ.ಆ

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನಲೆ : ನಾಳೆ (ಜುಲೈ1) ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆy ಹಿನ್ನಲೆಯಲ್ಲಿ ನಾಳೆ (ಜುಲೈ1) ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕರಾವಳಿಯಲ್ಲಿ ರಣಭೀಕರ ಮಳೆಗೆ ಹೈರಾಣಾದ ಜನತೆ-ಅಪಾರ ಹಾನಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಅನೇಕ ನಗರಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇಂದು ಮುಂಜಾನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ...

ಸುಳ್ಯ: ಲೈಸೆನ್ಸ್‌ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್‌ಗೆ ಬೀಗ ಜಡಿದ ಇಲಾಖೆ

ಸುಳ್ಯ: ಲೈಸೆನ್ಸ್‌ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್‌ಗೆ ಆರೋಗ್ಯ ಇಲಾಖೆ ಬೀಗ ಜಡಿದು, ಕ್ಲಿನಿಕ್‌ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಿಸಿದ ಘಟನೆ ಸುಳ್ಯದ ಕಲ್ಲುಗುಂಡಿಯಲ್ಲಿ ನಡೆದಿದೆ.ಕ್ಲಿನಿಕ್‌ನ ವಸ್ತುಗಳನ್ನು ಕೂಡಾ ಮುಟ್ಟುಗೋಲು ಹಾಕಲಾಗಿದೆ.ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ...