Connect with us

    LATEST NEWS

    ಕುಂದಾಪುರ : ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆ ಕಡಿದು ನರ್ತಿಸಿ, ವಿಕೃ*ತಿ ಮೆರೆದ ಪತಿ

    Published

    on

    ಕುಂದಾಪುರ : ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆ ಕಡಿದು ಪತಿಯೊಬ್ಬ ನರ್ತಿಸಿ ವಿ*ಕೃತಿ ಮೆರೆದಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ. ಅನಿತಾ (38) ಹ*ಲ್ಲೆಗೊಳಗಾದಾಕೆ. ಈಕೆ ಪತಿ ಸೊರಬ ತಾಲೂಕು ಮೂಲದ ಲಕ್ಷ್ಮಣ ಯಾನೆ ರಮೇಶ್ ಹ*ಲ್ಲೆ ನಡೆಸಿದಾತ. ಈ ಘಟನೆ ಮಠವೊಂದಕ್ಕೆ ಸಂಬಂಧಿಸಿದ ರೆಸಿಡೆನ್ಶಿಯಲ್ ಬ್ಲಾಕ್‌ನ ಬಾಡಿಗೆ ಮನೆಯಲ್ಲಿ ನಡೆದಿದೆ.


    ಲಕ್ಷ್ಮಣ ಮತ್ತು ಅನಿತಾ ದಂಪತಿ ಮಠದ ತೋಟ ನೋಡಿಕೊಳ್ಳುತ್ತಿದ್ದರು. ನಾಲ್ಕು ತಿಂಗಳ ಹಿಂದೆಯಷ್ಟೆ ತೋಟ ನೋಡಿಕೊಳ್ಳಲು ಉಡುಪಿ ಜಿಲ್ಲೆಗೆ ಬಂದಿದ್ದರು. ವಿಪರೀತ ಕುಡಿತದ ಚಟ ಹೊಂದಿದ್ದ ಲಕ್ಷ್ಮಣ ಪತ್ನಿಯ ಕುತ್ತಿಗೆ ಕಡಿದು ಮಾರಣಾಂ*ತಿಕ ಗಾಯಗೊಳಿಸಿದ್ದ. ಮನೆಯ ಬಾಗಿಲ ಚಿಲಕ ಹಾಕಿ ಹಾಲ್ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಆರೋಪಿ ಲಕ್ಷ್ಮಣ ನರ್ತಿಸುತ್ತಿದ್ದ.

    ಇದನ್ನೂ ಓದಿ : 26 ಅಡಿ ಆಳಕ್ಕೆ ಇಳಿದು ಕೆರೆಯ ಗೇಟ್ ತೆರೆದ ಅಕ್ವಾಮ್ಯಾನ್ ಈಶ್ವರ್ ಮಲ್ಪೆ
    ಘಟನೆ ಅರಿವಿಗೆ ಬರುತ್ತಲೇ ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ಪತ್ನಿಯನ್ನು ಹೊರತಂದ ಸ್ಥಳೀಯರು ಆಕೆಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಷ್ಟಾದರೂ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ ಪತಿಯನ್ನು ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಅಶ್ರುವಾಯು ಪ್ರಯೋಗಿಸಿ ಸುಮಾರು ‌ಒಂದೂವರೆ ಗಂಟೆಯ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    3 Comments

    DAKSHINA KANNADA

    ಛೀ! ಎಂಥ ಹೇಯ ಕೃ*ತ್ಯ; ಜೀವಂತ ಸಾಕು ನಾಯಿಯನ್ನು ಕಸ ವಿಲೇವಾರಿ ವಾಹನಕ್ಕೆ ತುಂಬಿಸಿದ ಮಾಲಕ

    Published

    on

    ಮಂಗಳೂರು : ಮನೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ಸಾಕುವುದನ್ನು ಹಲವರು ಇಷ್ಟ ಪಡುತ್ತಾರೆ. ಹೆಚ್ಚಿನವರ ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕುವುದನ್ನು ಕಾಣುತ್ತೇವೆ. ತಮ್ಮ ಮಕ್ಕಳಂತೆ ಅವುಗಳನ್ನು ಮುದ್ದು ಮಾಡುತ್ತಾರೆ. ಆದ್ರೆ, ಇಲ್ಲಿ ಮಾತ್ರ ಆಗಿರೋದು ಬೇರೆ.

    ಹೌದು, ಜೀವಂತ ಸಾಕು ನಾಯಿಯನ್ನು ಮನೆ ಮಾಲಕರು ಪಾಲಿಕೆಯ ಕಸ ವಿಲೇವಾರಿ ಮಾಡುವ ವಾಹನಕ್ಕೆ ಕೊಟ್ಟ ಹೇಯ ಕೃ*ತ್ಯ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆದಿದೆ. ಕೆಲ ವರ್ಷಗಳಿಂದ ಮನೆಯಲ್ಲಿ ಸಾಕಿದ್ದ ಹೆಣ್ಣು ಶ್ವಾನವನ್ನು ನಗರದ ಕಸ ವಿಲೇವಾರಿ ಮಾಡುವ ಪಾಲಿಕೆಯ ಲಾರಿಗೆ ಹಾಕಿ ನಗರದ ಹೊರವಲಯದ ವಾಮಾಂಜೂರು ಡಂಪಿಂಗ್ ಯಾರ್ಡ್ ಬಳಿ ಬಿಡಲಾಗಿದೆ.

    ಇದನ್ನೂ ಓದಿ : ಮಕ್ಕಳಿಗೆ ಹಣ್ಣು ಕೊಡುವಾಗ ಎಚ್ಚರ! ರಂಬುಟಾನ್ ಹಣ್ಣು ಗಂಟಲಲ್ಲಿ ಸಿಲುಕಿ ಬಾಲಕಿ ಸಾ*ವು

    ಘಟನೆಯ ವಿಡೀಯೋ ಸಿಟಿ ಟಿವಿಯಲ್ಲಿ ದಾಖಲಾಗಿದೆ. ಜೊತೆಗೆ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.  ಈ ಅಮಾನವೀಯ ಘಟನೆಗೆ ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

     

    Continue Reading

    FILM

    ಕನ್ನಡ ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಮುಹೂರ್ತ ಫಿಕ್ಸ್‌! ಹೋಸ್ಟ್‌ ಕೂಡ ಕನ್‌ಫರ್ಮ್‌!

    Published

    on

    ಬಿಗ್‌ ಬಾಸ್‌ ವೀಕ್ಷಕರಿಗೆ ಅಂತೂ ಸಿಹಿ ಸುದ್ದಿ ಬಂದಿದೆ. ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ನಿರೂಪಣೆ ಮಾಡೋರು ಯಾರು? ಯಾವಾಗಿನಿಂದ ಶುರು ? ಎಂದು ತಿಳಿಯಲು ಮುಂದೆ ಓದಿ.

    ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಅಂತೂ ಮುಹೂರ್ತ ಫಿಕ್ಸ್‌ ಆಗಿದೆ. ಬಹು ದಿನಗಳಿಂದ ಕಾದಿದ್ದ ವೀಕ್ಷಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಇದೇ ತಿಂಗಳ 28 ರಿಂದ 11 ನೇ ಬಿಗ್ ಬಾಸ್ ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲೇ 11 ನೇ ಬಿಗ್ ಬಾಸ್ ಆಗುತ್ತಿದೆ ಎಂಬುದೇ ವಿಶೇಷ. ಈಗಾಗಲೇ ಬಿಗ್ ಬಾಸ್ ಪ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ. ಸದ್ದಿಲ್ಲದೆ ಹೈದರಾಬಾದ್ ನಲ್ಲಿ ಫ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ.

    ಸೀಸನ್ 11 ಕ್ಕೆ ಕಿಚ್ಚ ಇರಲ್ಲ ಅನ್ನೋ ಗಾಳಿ ಸುದ್ದಿಗೆ ಬ್ರೇಕ್ ಕನ್ಪರ್ಮ್

    ಈ ಮುಂಚೆ ಸೀಸನ್‌ 11ರಲ್ಲಿ ರಿಷಬ್‌ ಶೆಟ್ಟಿ ಅಥವಾ ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ ಎಂದು ಗಾಸಿಪ್‌ಗಳು ಹರಿದಾಡುತ್ತಿದ್ದವು. ಇದೀಗ ಈ ಎಲ್ಲ ವದಂತಿಗಳಿಗೆ ಫುಲ್‌ಸ್ಟಾಪ್‌ ಇಡಲಾಗಿದೆ. ಇದೇ ತಿಂಗಳ 23 ಕ್ಕೆ ಬಿಗ್‌ ಬಾಸ್‌ ತಂಡ ಪ್ರೆಸ್‌ ಮೀಟ್‌ ಹಮ್ಮಿಕೊಂಡಿದೆ. ಸುದೀಪ್ ನೇತೃತ್ವದಲ್ಲೇ ಬಿಗ್‌ ಬಾಸ್‌ ಪ್ರೆಸ್‌ ಮೀಟ್‌ ನಡೆಯುತ್ತಿದೆ.

    ಈ ಮುಂಚೆ ವಾಹಿನಿ ಹಂಚಿಕೊಂಡ ಪ್ರೊಮೋದಲ್ಲಿ ಹ್ಯಾಶ್ ಟ್ಯಾಗ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಇಲ್ಲವಾಗಿತ್ತು ಹಾಗಾಗಿಯೇ ಕಿಚ್ಚ ಇರಲ್ಲ ಎನ್ನುವ ಗಾಸಿಪ್‌ ಶುರುವಾಗಿತ್ತು,

    ಸ್ಪರ್ಧಿಗಳು ಯಾರೆಲ್ಲ?

    ಬಿಗ್ ಬಾಸ್ ಸ್ಪರ್ಧಿಗಳಾಗಿ ಸೋಷಿಯಲ್ ಮೀಡಿಯಾ influencer ಗಳು ಇರಲಿದ್ದಾರೆ ಎನ್ನಲಾಗುತ್ತಿದೆ. ಕಿರುತೆರೆ ಸ್ಟಾರ್ ಗಳ ಜೊತೆ ಬಿಗ್ ಬಾಸ್ ನಲ್ಲಿ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಕಿರುತೆರೆ ನಟ ತ್ರಿವಿಕ್ರಮ್ 11ನೇ ಬಿಗ್ ಸೀಸನ್‌ಗೆ ಹೋಗೋದು ಬಹುತೇಕ ಫಿಕ್ಸ್‌ ಎನ್ನಲಾಗುತ್ತಿದೆ.

    Continue Reading

    LATEST NEWS

    ತಂಗಿಯ ಅದ್ಧೂರಿ ಮದುವೆಗಾಗಿ ಗಾಂಜಾ ಮಾರಲು ಹೋದ ಅಣ್ಣ ಜೈಲು ಪಾಲು..!!

    Published

    on

    ಬೆಂಗಳೂರು/ಮಂಗಳೂರು: ತನ್ನ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಹೋಗಿ ಅಣ್ಣ ಪೊಲೀಸರಲ್ಲಿ ಲಾಕ್ ಆದ ಘಟನೆ ಬೆಂಗಳೂರಿನ ಬಾಸಣವಾಡಿಯಲ್ಲಿ ನಡೆದಿದೆ. ಅದ್ಧೂರಿ ಮದುವೆಗೆ ಗಾಂಜಾ ಮಾರಾಟ ಮಾಡಲು ಹೊರಟಿದ್ದ ಅಣ್ಣ ಇದೀಗ ಪೊಲೀಸರಲ್ಲಿ ಬಂಧಿಯಾಗಿದ್ದಾನೆ. ಬದ್ರುದ್ದಿನ್ (25) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.

    ಹೋಟೆಲ್‌ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಈತನಿಗೆ ತನ್ನ ತಂಗಿಯ ಮದುವೆ ಮಾಡೋದು ದೊಡ್ಡ ಸವಾಲಾಗಿ ಹೋಗಿತ್ತು. ಬರುವ ಸಂಬಳದಲ್ಲಿ ಮನೆ ನಿರ್ವಹಣೆ ಮಾಡುವುದು ಕಷ್ಟಕರವಾಗಿತ್ತು. ಈ ಮಧ್ಯೆ ಯಾರೋ ಸ್ನೇಹಿತರಿಂದ ಗಾಂಜಾ ಮಾರಿ ಹಣ ಮಾಡಬಹುದು ಎಂಬುದನ್ನು ತಿಳುದುಕೊಳ್ಳುತ್ತಾನೆ. ಬಳಿಕ ಪೆಡ್ಲರ್‌ ಒಬ್ಬರ ಸಂಪರ್ಕವನ್ನು ಮಾಡಿ ಒರಿಸ್ಸಾಗೆ ಹೋಗಿದ್ದಾನೆ. ಅಲ್ಲಿ ಲಾರಿ ಚಾಲಕನ ಪರಿಚಯವಾಗಿ ಆತನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರುತ್ತಿದ್ದ. ಅಲ್ಲಿಂದ ದುರಂತ್ ಎಕ್ಸ್‌ಪ್ರೆಸ್‌ ಟ್ರೈನ್‌ ಮೂಲಕ ಬರುವಾಗ ಎಸ್‌.ಎಂ.ಟಿ ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ.

    ವರ್ಕ್‌ ಫ್ರಮ್‌ ಹೋಮ್‌ ಲಿಂಕ್‌ ಒತ್ತಿ 67ಸಾವಿರ ರೂ ಕಳೆದುಕೊಂಡ ಮಹಿಳೆ..! ದೂರು ದಾಖಲು

    ಹೆಣ್ಣೂರು ಪೊಲೀಸರು ಒರಿಸ್ಸಾದ ದಿಲೀಪ್, ಶಿವರಾಜ್, ರಾಮ್ ಹಂತಲ್ ಎಂಬುವವರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಲಾಕ್ ಮಾಡಿದ ಪೊಲೀಸರು, 21 ಲಕ್ಷ ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

    Continue Reading

    LATEST NEWS

    Trending