Connect with us

DAKSHINA KANNADA

ಕುಂದಾಪುರ; ಬಾಲಕನ ವ್ಯರ್ಥ ಅಪಹರಣ ಯತ್ನ; ಇಬ್ಬರ ಬಂಧನ ಓರ್ವ ಪರಾರಿ..!

Published

on

ಕುಂದಾಪುರ; ಬಾಲಕನ ವ್ಯರ್ಥ ಅಪಹರಣ ಯತ್ನ; ಇಬ್ಬರ ಬಂಧನ ಓರ್ವ ಪರಾರಿ..!

Kundapur; Child abduction attempt; An escaped prisoner of two..!

ಉಡುಪಿ:ಕುಂದಾಪುರ ತಾಲೂಕಿನ ಜಪ್ತಿ ಎಂಬಲ್ಲಿ ಮಕ್ಕಳ ಅಪಹರಣದ ಯತ್ನ ನಡೆದಿದ್ದು, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದೆ ಓರ್ವ ಪರಾರಿಯಾಗಿದ್ದಾನೆ.

ಪರಾರಿಯಾದ  ಆರೋಪಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಬೆಂಗಳೂರು ಮೂಲದ ಸುರೇಶ್ ಮತ್ತು ರಾಕೇಶ್ ಎಂಬುವರನ್ನು ಬಂಧಿಸಲಾಗಿದೆ.ಇನ್ನೋರ್ವ ಆರೋಪಿ ನಂದೀಶ ಯಾನೆ ವಿಶ್ವ ಪರಾರಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.ತಾಲೂಕಿನ ಶಿರಿಯಾರ ಗುಡ್ಡಟ್ಟು ಬಳಿ ಮಕ್ಕಳನ್ನು ಅಪಹರಿಸಲು ಇವರು ಯತ್ನಿಸುತ್ತಿದ್ದಾರೆಂಬ ಅನುಮಾನ ಹಿನ್ನೆಲೆಯಲ್ಲಿ ಸ್ಥಳೀಯರು, ಈ ಮೂವರು ಅಪರಿಚಿತ ಯುವಕರನ್ನು ಸೆರೆ ಹಿಡಿಯಲು ಮುಂದಾದರು.ತಪ್ಪಿಸಿಕೊಂಡ ಇವರನ್ನು ಬೆನ್ನಟ್ಟಿದ ಪೊಲೀಸರು  ಸಾರ್ವಜನಿಕರ ಸಹಕಾರದೊಂದಿಗೆ ಜಪ್ತಿ ಎಂಬಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಗಳು ಚಲಾಯಿಸುತ್ತಿದ್ದ ಬೈಕ್ ಮಂಗಳೂರಿನ ಉರ್ವ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದು ಎಂಬ ಅಂಶ ವಿಚಾರಣೆ ವೇಳೆ ತಿಳಿದು ಬಂದಿದೆ. ಆರೋಪಿಗಳನ್ನು ಉರ್ವ ಠಾಣೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು  ಆರೋಪಿಗಳು ಶಿರಿಯಾರ ಗುಡ್ಡಟ್ಟು ಬಳಿ ಚಂದ್ರ ಶಿರಿಯಾರ ಎಂಬವರ 6 ವರ್ಷದ ಪುತ್ರನನ್ನು ಎಳೆದೊಯ್ಯಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಮಗುವಿನ ರಕ್ಷಣೆಗೆ ಧಾವಿಸಿದ್ದಾರೆ.ಈ ವೇಳೆ ಆರೋಪಿಗಳು ಚಾಕು ತೋರಿಸಿ ಸ್ಥಳೀಯರನ್ನು ಬೆದರಿಸಿದರು. ಅಷ್ಟರಲ್ಲಿ ಮತ್ತಷ್ಟು ಸ್ಥಳೀಯರು ಬಂದ ತಕ್ಷಣ ಮಗುವನ್ನು ಬಿಟ್ಟ ಆರೋಪಿಗಳು ಬೈಕಿನಲ್ಲಿ ಪರಾರಿಯಾದರು.

ಈ ವೇಳೆ ಸಾರ್ವಜನಿಕರು ಆಟೋದಲ್ಲಿ ಬೆನ್ನಟ್ಟಿದ್ದಾರೆ.  ಸ್ಥಳೀಯರು ಕುಂದಾಪುರ ಗ್ರಾಮಾಂತರ ಠಾಣೆ ಎಸ್‍ಐ ರಾಜಕುಮಾರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಗ್ರಾಮಾಂತರ ಠಾಣೆ ಎಸ್‍ಐ ಹಾಗೂ ಪೊಲೀಸರು  ರೌಂಡ್‍ನಲ್ಲಿದ್ದ ಕಾರಣ, ಬೈಕನ್ನು ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

DAKSHINA KANNADA

ಪುತ್ತೂರಿನಲ್ಲಿ ಕಳವುಗೈದ ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ..!

Published

on

ಪುತ್ತೂರು: ಅಂತರ್‌ ಜಿಲ್ಲಾ ಕಳವು ಪ್ರಕರಣದ ಕುಖ್ಯಾತ ಆರೋಪಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್ ಎಂಬಾತನನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್ ಚಿಕ್ಕಮಂಗಳೂರು ತಾಲೂಕಿನ ಉಪ್ಪಳ್ಳಿ ಮನೆ ನಿವಾಸಿಯಾಗಿದ್ದು, ಆತನ ಮೇಲೆ ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಕಾರ್ಕಳ, ಉಡುಪಿ, ಸುರತ್ಕಲ್, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ 80 ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ 2023 ರಲ್ಲಿಯೇ ಎರಡು ಪ್ರಕರಣಗಳು ದಾಖಲಾಗಿವೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ಡಿಸೆಂಬರ್‌ 19 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

BANTWAL

ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

Published

on

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2017 ರಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಾಲಮ ಹೆಹರು ತಾಲೂಕಿನ ಚಿನ್ನಪಳ್ಳಿ ಪೆದ್ದ ಗ್ರಾಮದ ನಿವಾಸಿ ಬಿ. ಮೌಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಿ. ಮೌಲಾ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ಕುತ್ತಾರು ಎಂಬಲ್ಲಿ ಇದ್ದಾನೆ ಎಂಬುದಾಗಿ ಲಭಿಸಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ, ನ್ಯಾಯಾಲಯವು ಆರೋಪಿಗೆ ದಂಡ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ ಸ್ಟೆಬಲ್‌ ಗಣೇಶ್ ಪ್ರಸಾದ್ ಮತ್ತು ಕಾನ್‌ ಸ್ಟೆಬಲ್‌ ವಿಜಯ ಕುಮಾರ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Continue Reading

DAKSHINA KANNADA

ಮಂಗಳೂರಿನಲ್ಲಿ ಮೂರು ದಿನ ನೀರು ಪೂರೈಕೆ ವ್ಯತ್ಯಯ

Published

on

ಮಂಗಳೂರು: ಮಂಗಳೂರು ಮಹಾ ನಗರಪಾಲಿಕೆಯು ನೀರು ಸರಬರಾಜು ವ್ಯವಸ್ಥೆಯ ಕೊಳವೆಯನ್ನು ಬಲಪಡಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಡಿ. 6 ರ ಬುಧವಾರ ಬೆಳಗ್ಗೆ 6 ಗಂಟೆಯಿಂದ ಡಿ. 8 ರ ಶುಕ್ರವಾರ ಬೆಳಗ್ಗೆ 6 ಗಂಟೆಯ ವರೆಗೆ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ವ್ಯತ್ಯಯಗೊಳ್ಳಲಿದೆ ಎಂದು ಪಾಲಿಕೆಯ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ತಿಳಿಸಿದ್ದಾರೆ.

ತುಂಬೆ- ಬೆಂದೂರ್‌ವೆಲ್–ಪಣಂಬೂರು ಪ್ರದೇಶಗಳಿಗೆ ನೀರು ಪೂರೈಸುವ 1 ಸಾವಿರ ಮಿಲಿ ಮೀಟರ್ ವ್ಯಾಸದ ಮುಖ್ಯ ಕೊಳವೆಯನ್ನು ನಾಗುರಿ ಮಾರುಕಟ್ಟೆ ಬಳಿ ಬಲಪಡಿಸುವುದು, ತುಂಬೆ ರಾಮಲ್‌ಕಟ್ಟೆ ಬಳಿ ಕೆಯುಐಡಿಎಫ್‌ಸಿ ವತಿಯಿಂದ ಬಲ್ಕ್‌ ಫ್ಲೋ ಮೀಟರ್‌ ಅಳವಡಿಕೆ ಹಾಗೂ ಪಾಲಿಕೆ ವತಿಯಿಂದ 900 ಮಿ.ಮೀ ವ್ಯಾಸದ ಕೊಳವೆಯನ್ನು ಕೆಐಒಸಿಎಲ್‌ ಬಳಿ ಬದಲಾಯಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮಂಗಳೂರಿನ ಬೆಂದೂರ್‌ವೆಲ್‌ಗಿಂತ ತಗ್ಗಿನಲ್ಲಿರುವ ಪ್ರದೇಶಗಳಾದ ಪಿ.ವಿ.ಎಸ್, ಲೇಡಿಹಿಲ್, ಬಂದರು ಹಾಗೂ ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲ್‌ಬೈಲ್, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯು ಭಾಗಶಃ ಸ್ಥಗಿತಗೊಳ್ಳಲಿದೆ. ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಪ್ರದೇಶಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

Continue Reading

LATEST NEWS

Trending