Connect with us

ಬಯಲಾಯ್ತು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಂಗಡಿಗಳ ಹಗರಣ….!

Published

on

ಅಂಗಡಿ ಬಾಡಿಗೆ ಕಲೆಕ್ಷನ್ ನಲ್ಲಿ ಭಾರಿ ಲೋಪ: ಬರೋಬ್ಬರಿ 3 ಕೋಟಿ ರೂಪಾಯಿ ಹಣ ಬಾಕಿ…

ಸುಬ್ರಹ್ಮಣ್ಯ: ರಾಜ್ಯದಲ್ಲೆ ಅತೀ ಹೆಚ್ಚು ಆದಾಯ ತಂದುಕೊಡುವ ಶ್ರೀಮಂತ ದೇಗುಲ ಎಂಬ ಖ್ಯಾತಿ ಪಡೆದಿರುವ ಸುಬ್ರಹ್ಮಣ್ಯ ದೇವಸ್ಥಾನದ ಅಂಗಡಿಗಳ ವಿಚಾರಲ್ಲಿ ದೊಡ್ಡ ಹಗರಣವೇ ಬಯಲಿಗೆ ಬಂದಿದೆ.

ದೇವಸ್ಥಾನಕ್ಕೆ ಬರಬೇಕಾಗಿದ್ದ ಅಂಗಡಿ ಬಾಡಿಗೆ ಕಲೆಕ್ಷನ್ ನಲ್ಲಿ ಭಾರಿ ಲೋಪವಾಗಿದ್ದು ಬರೋಬ್ಬರಿ 3 ಕೋಟಿ ರೂಪಾಯಿಗಳ ಹಣ ಬಾಕಿ ಇದೆ.

ಈ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.

ಬಾಲಕೃಷ್ಣ ಮಾರಾರ್ ಮತ್ತು ಲೋಕೇಶ್ ಅಮಾನತುಗೊಂಡ ಸಿಬ್ಬಂದಿಗಳಾಗಿದ್ದಾರೆ.

ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದು, ಬಾಡಿಗೆ ವಸೂಲಿ ಬಳಿಕವೇ ಸೇವೆಗೆ ಪುನರ್ ನಿಯುಕ್ತಿ ಸೂಚಿಸಿದ್ದಾರೆ.

ಈ ಮಧ್ಯೆ ದೇಗುಲಕ್ಕೆ ಸಂಬಂಧಿಸಿದ ಅಂಗಡಿಯನ್ನು ಬಾಡಿಗೆ ಪಡೆದು ಕೋಟಿಗೂ ಮಿಕ್ಕಿ ಬಾಡಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿರುವವರ ಮೇಲೆ ಪೊಲೀಸ್ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

Click to comment

Leave a Reply

Your email address will not be published. Required fields are marked *

LATEST NEWS

ಮಹಾ ಕುಂಭಮೇಳದಲ್ಲಿ ಭಾರೀ ಅಗ್ನಿ ಅವಘಡ

Published

on

ಮಂಗಳೂರು/ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಪ್ರಯಾಗ್​ರಾಜ್​ನ ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕುಂಭಮೇಳ ಪ್ರದೇಶದ ಸೆಕ್ಟರ್ 19ರಲ್ಲಿ ಸುಮಾರು 12ಕ್ಕೂ ಹೆಚ್ಚು ಸಿಲಿಂಡರ್​​ಗಳು ಸ್ಫೋಟಗೊಂಡಿರುವಂತಹ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಟೆಂಟ್​​ಗಳು ಹೊತ್ತಿ ಉರಿದಿದ್ದು, ಕುಂಭಮೇಳ ಪ್ರದೇಶದ ಸೆಕ್ಟರ್ 20ಕ್ಕೂ ಬೆಂಕಿ ವ್ಯಾಪಿಸುತ್ತಿದೆ. ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ.

ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ, ಈ ಮಹಾ ಕುಂಭಮೇಳಕ್ಕೆ ಸಾಧು ಸಂತರು ಸೇರಿದಂತೆ ಕೋಟ್ಯಾಂತರ ಭಕ್ತರು ಆಗಮಿಸಿದ್ದರು.

ಇದನ್ನೂ ಓದಿ: ಹೊ*ತ್ತಿ ಉರಿದ ಮನೆ; ಮಹಿಳೆ, ಮೂರು ಮಕ್ಕಳು ಸಜೀವ ದ*ಹನ

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಿದ್ದರು. ಆದ್ರೆ ಇದೇ ಹೊತ್ತಲ್ಲಿ ಪ್ರಯಾಗ್​ರಾಜ್​ನ ಶಾಸ್ತ್ರಿ ಬ್ರಿಡ್ಜ್​ ಸೆಕ್ಟರ್ 19ರಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಕರ ಸಂಕ್ರಾಂತಿಯದ್ದೇ ಕೋಟ್ಯಂತರ ಭಕ್ತರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದರು.

ಘಟನೆಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮಾಹಿತಿ ಪಡೆದಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

Continue Reading

LATEST NEWS

ಹೊ*ತ್ತಿ ಉರಿದ ಮನೆ; ಮಹಿಳೆ, ಮೂರು ಮಕ್ಕಳು ಸಜೀವ ದ*ಹನ

Published

on

ಮಂಗಳೂರು/ಗಾಜಿಯಾಬಾದ್ : ಮನೆಯೊಂದು  ಬೆಂ*ಕಿಗಾಹುತಿಯಾಗಿ, ಒಳಗಿದ್ದ ನಾಲ್ವರು ಸಜೀವದ*ಹನವಾದ ಘಟನೆ ಇಂದು(ಜ.19) ಗಾಜಿಯಾಬಾದ್‌ನ ಲೋನಿ ಪ್ರದೇಶದ ಕಾಂಚನ್ ಪಾರ್ಕ್  ಬಳಿ ನಡೆದಿದೆ. ಕಟ್ಟಡದ ಮೂರನೇ ಮಹಡಿಯ ಮನೆಯಲ್ಲಿ  ಬೆಂ*ಕಿ ಕಾಣಿಸಿಕೊಂಡಿದೆ.  ಮನೆಯಲ್ಲಿ 8 ಮಂದಿ ವಾಸವಾಗಿದ್ದರು. ಬೆಂ*ಕಿ ಕಾಣಿಸಿಕೊಂಡಾಗ  ಮನೆಯವರೆಲ್ಲಾ ನಿದ್ರೆಯಲ್ಲಿದ್ದರು ಎನ್ನಲಾಗಿದೆ.

ಗುಲ್ಬಹಾರ್ (32),  ಮಕ್ಕಳಾದ ಶಾನ್ (8) ಮತ್ತು ಜಾನ್ (9), ಅವರ   ಸಂಬಂಧಿಕರ ಮಗ ಜೀಶನ್ (5) ಮೃತಪಟ್ಟವರು.  ಮೃತ ಗುಲ್ಬಹಾರ್‌ನ ಪತಿ ಶಹನವಾಜ್ ಯಾವುದೇ ಗಾ*ಯಗಳಿಲ್ಲದೆ ಪಾರಾಗಿದ್ದಾರೆ. ಇನ್ನು ಉಳಿದವರು ಗಾ*ಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ರಾಜ್ಯದ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ; ಎಲ್ಲೆಲ್ಲಿ ?

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂ*ಕಿ ಕಾಣಿಸಿಕೊಂಡಿರಬಹುದೆಂಬ ಶಂಕೆ ಇದೆ. ಆದರೆ, ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆ ಬಳಿಕವಷ್ಟೇ ತಿಳಿಯಲಿದೆ.

Continue Reading

LATEST NEWS

ರಾಜ್ಯದ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ; ಎಲ್ಲೆಲ್ಲಿ ?

Published

on

ಮಂಗಳೂರು/ಬೆಂಗಳೂರು : ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಸುರಿದ ಮಳೆ ಅಚ್ಚರಿ ಮೂಡಿಸಿದೆ. ಈ ನಡುವೆ ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಕುರಿತು ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು (KSNDMC) ಹವಾಮಾನ ಇಲಾಖೆ ಮುನ್ಸೂಚನೆಯನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದೆ. ‘ರಾಜ್ಯದ ದಕ್ಷಿಣ ಒಳಭಾಗ, ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮುಂದಿನ 5 ದಿನ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ. ಉತ್ತರದ ಜಿಲ್ಲೆಗಳ ಶುಷ್ಕ ಗಾಳಿ ಇರಲಿದೆ. ರಾಜ್ಯದಾದ್ಯಂತ ಸಾಧಾರಣದಿಂದ ಮಂಜು ಮತ್ತು ಅಲ್ಲಲ್ಲಿ ತುಂತುರು ಮಳೆ ಇರುತ್ತದೆ’ ಎಂದು ಹೇಳಿದೆ.

ಎಲ್ಲೆಲ್ಲಿ ಮಳೆ ?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತೀವ್ರ ಚಳಿ ಇರಲಿದೆ ಎಂದು ತಿಳಿಸಿದೆ.

Continue Reading

LATEST NEWS

Trending

Exit mobile version