Monday, July 4, 2022

ಬಂಟ್ವಾಳ: ವಿಷ ಸೇವಿಸಿ, ಬಾವಿಗೆ ಹಾರಿದ ಕೆಎಸ್‌ಆರ್‌ಟಿಸಿ ನೌಕರ ಆಸ್ಪತ್ರೆಯಲ್ಲಿ ಕೊನೆಯುಸಿರು

ಬಂಟ್ವಾಳ: ಸರಕಾರಿ ನೌಕರನೊಬ್ಬ ವಿಷ ಸೇವಿಸಿ, ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ಪಡ್ಪುವಿನ ಬಳಿ ನಡೆದಿದೆ.


ಮಾಣಿ ಗ್ರಾಮದ ಸೂರಿಕುಮೇರು ಪಡ್ಪು ನಿವಾಸಿ ಜನಾರ್ಧನ ಮೂಲ್ಯ ಪಿ. ಮೂಲ್ಯ (54) ಎಂಬವರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾದೇ ಸಾವನ್ನಪ್ಪಿದವರಾಗಿದ್ದಾರೆ.

ಮಂಗಳೂರು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಟಿಸಿಯಾಗಿ ಕೆಲಸ ಮಾಡಿಕೊಂಡಿರುವ  ಜನಾರ್ಧನ ಅವರು ಏಪ್ರಿಲ್ 17 ರಂದು ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದವರು ಸೋಮವಾರ ಕೆಲಸಕ್ಕೆ ತೆರಳದೆ ಮನೆಯಲ್ಲಿಯೇ ಇದ್ದರು.

ಮಧ್ಯಾಹ್ನದ ವೇಳೆ  ಯಾವುದೋ ವಿಷ ಪದಾರ್ಥ ಸೇವಿಸಿ ಮನೆ ಹತ್ತಿರದ ಬಾವಿಗೆ ಹಾರಿದ್ದರು. ಇದನ್ನು ಕಂಡ ಅವರ ಪತ್ನಿ ರೇಖಾ, ಪುತ್ರ ಪ್ರಜ್ವಲ್ ಹಗ್ಗದ ಸಹಾಯದಿಂದ ಅವರನ್ನು

ಮೇಲಕ್ಕೆತ್ತಿ ತುಂಬೆ ಖಾಸಗಿ ಆಸ್ಪತ್ರೆಗೆ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಜನಾರ್ದನ ಅವರು ಇಂದು ಮೃತಪಟ್ಟಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ‘ಬ್ಲಡ್ ಡೋನರ್ಸ್’ ಇದರ 350ನೇ ರಕ್ತದಾನ ಶಿಬಿರಕ್ಕೆ ಚಾಲನೆ

ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ವತಿಯಿಂದ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಮಂಗಳೂರು, ಫಾದರ್ ಮುಲ್ಲರ್ ರಕ್ತನಿಧಿ ಕೇಂದ್ರ ಮಂಗಳೂರು, ಯೆನೆಪೋಯಾ ಮೆಡಿಕಲ್ ಕಾಲೇಜು ರಕ್ತನಿಧಿ ಕೇಂದ್ರ ದೇರಳಕಟ್ಟೆ ಇದರ...

ಮಂಗಳೂರಿನಲ್ಲಿ 518 ಅಕ್ರಮ ವಿದೇಶಿಗರು ಪೊಲೀಸರ ವಶಕ್ಕೆ

ಮಂಗಳೂರು: ಮಂಗಳೂರು ಪೊಲೀಸರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಯೂರಿರುವ ವಿದೇಶಿಗರ ಪತ್ತೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.ಸರಿಯಾದ ದಾಖಲೆಗಳಿಲ್ಲದ 518 ವಿದೇಶಿ ವಲಸಿಗರೆಂದು ಹೇಳಲಾದವರ ವಿಚಾರಣೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಅಕ್ರಮವಾಗಿ ‌ನೆಲೆಸಿರುವ ವಿದೇಶಿಯರ...

“ಪೀ ಬನ್ನಗ ಬಿತ್ತಿಲ್‌ ನಾಡುನ ಪರಿಸ್ಥಿತಿ” ಮಳೆ ಅವಾಂತರದ ಬಗ್ಗೆ ಮಾಜಿ ಶಾಸಕ ಲೋಬೊ ವ್ಯಂಗ್ಯ

ಮಂಗಳೂರು: ಕಳೆದ ಒಂದು ವಾರದಿಂದ ಮಂಗಳೂರು ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ನಗರದಾದ್ಯಂತ ಅವ್ಯವಸ್ಥೆ ಉಂಟಾಗಿದೆ. ಮಳೆ ಪ್ರಾರಂಭವಾಗುವ ಮೊದಲು ಪೂರ್ವ ತಯಾರಿ ಮಾಡದಿದ್ದರೆ ಇಂದಿನ ಅವಾಂತರಕ್ಕೆ ಕಾರಣವಾಗುತ್ತದೆ.ಇದು ಪೀ ಬನ್ನಗ ಬಿತ್ತಿಲ್‌...