ಬಂಟ್ವಾಳ: ಚಲಿಸುತ್ತಿದ್ದ ಸರ್ಕಾರಿ ಬಸ್‌ನ ಎಕ್ಸಿಲ್ ತುಂಡಾಗಿದ್ದರೂ, ಚಾಲಕನ ಜಾಣ್ಮೆಯಿಂದಾಗಿ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಕಲ್ಲಡ್ಕ ಸಮೀಪದ ಬೋಳಂಗಡಿಯಲ್ಲಿ ನಿನ್ನೆ ನಡೆದಿದೆ.
ಪುತ್ತೂರಿನಿಂದ ಮಂಗಳೂರಿಗೆ ಹೊರಟಿದ್ದ ಸರ್ಕಾರಿ ಬಸ್ಸು ಕಲ್ಲಡ್ಕದಿಂದ ಮುಂದೆ ಬೋಳಂಗಡಿ ತಲುಪುತ್ತಿದ್ದಂತೆಯೇ ಈ ಅವಘಡ ನಡೆದಿದ್ದು. ಈ ವೇಳೆ ಬಸ್ಸು ರಸ್ತೆಯ ತೀರಾ ಬಲಭಾಗಕ್ಕೆ ಚಲಿಸಿದೆ.
ಚಾಲಕ ಜಾಣ್ಮೆಯಿಂದ ಬಸ್ಸನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಲು ಪ್ರಯತ್ನಿಸಿದ್ದು, ಸುಮಾರು 200. ಮೀಟರ್ ದೂರ ಹೆದ್ದಾರಿ ಎಡಭಾಗದಲ್ಲಿ ಚಲಿಸಿ ಬೋಳಂಗಡಿ ಮಸೀದಿ ಸಮೀಪ ಬಸ್ಸನ್ನು ನಿಲ್ಲಿಸಿದ್ದಾನೆ.
ಬಳಿಕ ಬಸ್‌ನ ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಕಳುಹಿಸಿಕೊಡಲಾಗಿದೆ. ಚಾಲಕನ ಸಮಯಪ್ರಜ್ಞೆಯ ಚಾಲನೆಯನ್ನು ಪ್ರಯಾಣಿಕರು ಶ್ಲಾಘಿಸಿದ್ದಾರೆ.