Connect with us

LATEST NEWS

ಏಕಕಾಲದಲ್ಲಿ ಮೂರು ತೇರಿನ ಪ್ರದಕ್ಷಿಣೆ ಸಪ್ತೋತ್ಸವದಲ್ಲಿ ಕಂಗೊಳಿಸಿದ ಕೃಷ್ಣನ ವೈಭವದ ಉತ್ಸವ..!

Published

on

ಏಕಕಾಲದಲ್ಲಿ ಮೂರು ತೇರಿನ ಪ್ರದಕ್ಷಿಣೆ ಸಪ್ತೋತ್ಸವದಲ್ಲಿ ಕಂಗೊಳಿಸಿದ ಕೃಷ್ಣನ ವೈಭವದ ಉತ್ಸವ..!

ಉಡುಪಿ:  ಕೃಷ್ಣ ಮಠದ ರಥಬೀದಿಯಲ್ಲಿ  ಏಕಕಾಲದಲ್ಲಿ ಮೂರು ತೇರುಗಳು ಪ್ರದಕ್ಷಿಣೆ ಬರುವ ಈ ವಿಹಂಗಮ ನೋಟ ಕಾಣಲು ಸಾವಿರಾರು ಜನರು ಕೃಷ್ಣಮಠಕ್ಕೆ ಬರುತ್ತಾರೆ.

ಎಂಟು ಶತಮಾನಗಳ ಹಿಂದೆ ಮಕರ ಸಂಕ್ರಾಂತಿಯ ದಿನವೇ ಆಚಾರ್ಯ ಮದ್ವರು ಕಡೆಗೋಲು ಕೃಷ್ಣನನ್ನು ಮಠದಲ್ಲಿ ಪ್ರತಿಷ್ಟಾಪಿಸಿದರು. ಹಾಗಾಗಿ ಸಂಕ್ರಾಂತಿಯಂದು ಮೂರು ತೇರಿನ ಉತ್ಸವ ನಡೆಯುತ್ತೆ.

ಬ್ರಹ್ಮರಥದಲ್ಲಿ ಕೃಷ್ಣಮುಖ್ಯಪ್ರಾಣ ದೇವರನ್ನು ಇಟ್ಟು ಮೆರವಣಿಗೆ ಮಾಡಿದರೆ; ಮಹಾಪೂಜಾ ರಥ ಮತ್ತು ಗರುಡ ರಥಗಳಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವರ ಪ್ರದಕ್ಷಿಣೆ ನಡೆಯುತ್ತೆಕೃಷ್ಣಮಠದ ಈ ವಾರ್ಷಿಕ ಜಾತ್ರೆಯನ್ನು ಸಪ್ತೋತ್ಸವ ಎನ್ನುತ್ತಾರೆ. ಮಕರಸಂಕ್ರಾಂತಿ ಮತ್ತು  ಚೂರ್ಣೋತ್ಸವದಿಂದ ಈ ಮಹೋತ್ಸವ ಸಂಪನ್ನಗೊಳ್ಳುತ್ತದೆ.

ಮಧ್ವಸರೋವರದಲ್ಲಿ ನಡೆಯುವ ತೆಪ್ಪೋತ್ಸವ ಈ ಆಚರಣೆಯ ಪ್ರಧಾನ ಆಕರ್ಷಣೆ. ಆಚಾರ್ಯ ಮದ್ವರ ಮಂದಿರದ ಸುತ್ತಲೂ ಪ್ರದಕ್ಷಿಣಾಕಾರವಾಗಿ ತೆಪ್ಪದಲ್ಲಿ ದೇವರನ್ನು ಕುಳ್ಳಿರಿಸಿ ಪೂಜಿಸಲಾಗುತ್ತೆ.ಮೂರು ತೇರಿನ ಉತ್ಸವ ಕಾಣಲು ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನರು ಬರುತ್ತಾರೆ. ಕೊಂಬು, ಕಹಳೆ ಚಂಡೆಯ ನಾದದ ನಡುವೆ ಅಷ್ಟ ಮಠಾಧೀಶರು ಉತ್ಸವದಲ್ಲಿ ಭಾಗವಹಿಸಿದ್ದರು.

ವೈಭವದಿಂದ ನಡೆದ ಸುಡುಮದ್ದು ಪ್ರದರ್ಶನ ನೆರೆದಿದ್ದ ಜನರನ್ನು ಸಂಭ್ರಮದಿಂದ ಕುಣಿಯುವಂತೆ ಮಾಡಿತು. ಕೋವಿಡ್ ನಿಂದ ಬಳಲಿದ್ದ ಜನರಿಗೆ, ಈ ಮಹೋತ್ಸವ ನವೋಲ್ಲಾಸ ನೀಡಿತು. ರಥಬೀದಿಯಲ್ಲಂತೂ ಎಲ್ಲಿ ನೋಡಿದರೂ ಜನವೋ ಜನ!

ಉಡುಪಿ ಕೃಷ್ಣನಿಗೆ ನಿತ್ಯವೂ ರಥೋತ್ಸವ ನಡೆಯುತ್ತೆ. ಆದರೆ ಮಕರ ಸಂಕ್ರಾಂತಿಯ ಸಪ್ತೋತ್ಸವದ  ಸಾಂಪ್ರದಾಯಿಕ ಆಚರಣೆಗಳ ಮೂಲಕ ವಿಶ್ವಪ್ರಸಿದ್ದಿ ಪಡೆದಿದೆಅಂದಹಾಗೆ ಈ ಬಾರಿ ಉಡುಪಿ ಕೃಷ್ಣ ಮಠದಲ್ಲಿ ನಡೆಯುವ ಸಪ್ತೋತ್ಸವ ಕೊರೊನಾ ಹಿನ್ನಲೆ ಸರ್ಕಾರ ಕೊವೀಡ್ ಗೈಡ್ ಲೈನ್ಸ್ ಪ್ರಕಾರ ನಡೆಸಲಾಯಿತು.ಹಲವಾರು ಮಂದಿ ಭಕ್ತರು ಕೃಷ್ಣ ಸಪ್ತೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು..

ಮಕರ ಸಂಕ್ರಾಂತಿಯಂದು ಉಡುಪಿಯ ಕೃಷ್ಣ ದೇವರನ್ನು ಮಧ್ವಾಚಾರ್ಯರು ಪ್ರತಿಷ್ಟಾಪಿಸಿದರೆಂದು ಪ್ರತೀತಿ. ಈ ನಿಟ್ಟಿನಲ್ಲಿ ಅಷ್ಟಮಠಗಳ ರಥಬೀದಿಯಲ್ಲಿ ಕಡೆಗೋಲು ಕೃಷ್ಣನ ಉತ್ಸವ ನಿನ್ನೆ ಅತ್ಯಂತ ವೈಭವದಿಂದ ನಡೆಯಿತು.ಮಕರ ಸಂಕ್ರಾಂತಿಯಂದು ನಡೆಯುವ ಈ ಮೂರು ತೇರಿನ ಉತ್ಸವಕ್ಕೆ ವಿಶೇಷ ಮಹತ್ವವಿದೆ. ಸಪ್ತೋತ್ಸವದ ಸಂಭ್ರಮದಲ್ಲಿ ಅಷ್ಟಮಠಗಳ ರಥಬೀದಿ ಕಂಗೊಳಿಸುತ್ತಿದೆ. ಮಕರ ಸಂಕ್ರಾಂತಿಯ ಸಂಭ್ರಮ ಉಡುಪಿ ಕೃಷ್ಣ ಮಠದಲ್ಲಿ ವಿಜ್ರಂಭಿಸುತ್ತಿತ್ತು.

FILM

ಕೊನೆಗೂ ಉರ್ಫಿ ಜಾವೇದ್ ಇನ್ಸ್ಟಾಗ್ರಾಮ್ ಅಕೌಂಟ್ ಡಿಲೀಟ್…

Published

on

Urfi javed: ಸೋಷಿಯಲ್ ಮೀಡಿಯಾದಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಉರ್ಫಿ ಜಾವೇದ್ ಆಕೆಯ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಆಗಿರುವುದು ಇದೀಗ ಆಕೆಗೆ ಸಂಕಷ್ಟ ಎದುರಾಗಿದೆ.

ಉರ್ಫಿ ಜಾವೇದ್ ಎಂದರೆ ಅವಳ ಡ್ರೇಸ್ ನೋಡಿ.. ಅದೇನು ಡ್ರೇಸ್ ಹಾಕಿದ್ದಾಳೆ ಅಂತಾರೆ ಜನ. ಅಂತೂ ಸಾಮಾಜಿಕ ಜಾಲತಾಣದಲ್ಲಿ ಆಕೆಯು ವಿಚಿತ್ರ ವಿಚಿತ್ರ ಪೋಟೋಗಳನ್ನು ಅಪ್ಲೋಡ್ ಮಾಡ್ತಾ ಇರುತ್ತಾಳೆ.

ಆಕೆ ಫಾಲೋವರ್ಸ್ ಹೆಚ್ಚಾಗಳು ಇಂತಹ ಡ್ರೇಸ್ ಹಾಕ್ತ ಇದ್ದಾಳ…ಎಸ್, ಈಕೆ ಅಂತಹ ವಿಚಿತ್ರವಾದ ಡ್ರೇಸ್ ಗಳನ್ನು ಹಾಕಿ ಫೋಟೊ ಶೂಟ್ ಮಾಡಿದ ಬಳಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾಳೆ. ಹಾಗೇ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಸುಮಾರು 4 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಳು.

ಅರೆಬರೆ ಡ್ರೇಸ್ ಹಾಕುತ್ತಾ ದಿನದಿಂದ ದಿನಕ್ಕೆ ಹೊಸ ಟ್ರೆಂಡ್ ಗಳನ್ನು ಸೃಷ್ಟಿಸುತ್ತಿದ್ದಳು. ಆದರೆ ಇದೀಗ ಆಕೆಯ ಖಾತೆಯನ್ನು ಇನ್​ಸ್ಟಾಗ್ರಾಂ ಅಮಾನತು ಮಾಡಿದೆ. ಡಿಲೀಟ್ ಆಗಿರುವ ಕುರಿತು ಆಕೆ ಮಾಡೆಲ್​ ಸ್ಕ್ರೀನ್​ ಶಾಟ್​ ತೆಗೆಯುವ ಮೂಲಕ ಹಂಚಿಕೊಂಡಿದ್ದಾಳೆ.

ಇನ್ನು ಇನ್​​ಸ್ಟಾ ಆಕೆಯ ಖಾತೆಯನ್ನು ಅಮಾನತುಗೊಳಿಸಿದ್ದಲ್ಲದೆ, ಈ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 180 ದಿನಗಳ ಕಾಲಾವಕಾಶ ನೀಡಿದೆ. ಆದ​ರೆ ಉರ್ಫಿ ಇವೆಲ್ಲದಕ್ಕೆ ಉತ್ತರ ನೀಡಿ ತನ್ನ ಖಾತೆಯನ್ನು ಮರಳಿ ಪಡೆಯುತ್ತಾಳಾ ಎಂಬ ಪ್ರಶ್ನೆ ಫ್ಯಾನ್ಸ್​ಗೆ ಕಾಡಿದೆ. ಇನ್ಸ್ಟಾಗ್ರಾಮ್ ಖಾತೆ ಮರಳಿ ಬಂದರೆ ಆಕೆ ಇನ್ನಾದರೂ ಸರಿಯಾದ ಡ್ರೇಸ್ ಹಾಕುತ್ತಾಳ ಎಂದು ಕಾದು ನೋಡಬೇಕಷ್ಟೇ.

ಆಕೆಯ ಅರೆಬರೆ ಡ್ರೇಸ್ ನೋಡಿ ಕೆಳವರು ಆಕೆಯ ಖಾತೆ ಡಿಲೀಟ್ ಆಗಿದ್ದು, ಒಳ್ಳೆಯದೇ ಎಂದು ಹೆಳುತ್ತಿದ್ದಾರೆ. ಆದರೆ ಆಕೆ ಮಾತ್ರ ನೊಂದುಕೊಂಡಿದ್ದಾಳೆ.

Continue Reading

FILM

ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ

Published

on

ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರವಾಹಿಯ ನಟ ಧಾರವಾಹಿಗೆ ಆಯ್ಕೆಯಾದ ತಮ್ಮ ಅಭಿಪ್ರಾಯವನ್ನು ಕೊನೆಗೂ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ವರುಣ್ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಜನಪ್ರಿಯತೆ ಪಡೆದುಕೊಂಡವರು. ಅಲ್ಲದೇ ಇತ್ತೀಚೆಗೆ ಗರ್ಲ್ ಫ್ರೆಡ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.

ಇದೀಗ ಸೀರಿಯಲ್ ಗೆ ಆಯ್ಕೆಯಾದ ಬಗ್ಗೆ ಮಾತನಾಡಿರುವ ನಟ ವರುಣ್ ಆರಾಧ್ಯ “ದೀಪಾವಳಿ ಹಬ್ಬದ ಊಟ ಮುಗಿಸಿಕೊಂಡು ಮಲಗಿಕೊಂಡಿದ್ದೆ. ರಾತ್ರಿ 12.30ಗೆ ಕರೆ ಮಾಡಿ ಸೀರಿಯಲ್‌ನಲ್ಲಿ ನಟಿಸುವ ಇಂಟ್ರೆಸ್ಟ್‌ ಇದ್ಯಾ. ಅವಕಾಶ ಇದೆ ಎಂದು ಫೋನ್ ಮಾಡಿದರು. ರಾತ್ರಿ ಆ ಸಮಯದಲ್ಲಿ ಮಾಡಿದಕ್ಕೆ ನಾನು ಗಾಬರಿ ಆಗಿದೆ ಆ ಸಮಯದಲ್ಲಿ ಆಡಿಷನ್‌ಗೆ ಬರೆಲು ಹೇಳಿದರು. ನನ್ನ ಸ್ನೇಹಿತರನ್ನು ಕರೆದುಕೊಂಡು ನಾಗರಭಾವಿಯಲ್ಲಿ ನಿರ್ದೇಶಕರಾದ ರಾಮ್‌ಜೀ ಹೇಳಿದ ಸ್ಥಳಕ್ಕೆ ಹೋದೆ. ಕೈಗೆ ಒಂದು ಸ್ಕ್ರಿಪ್ಟ್‌ ಕೊಟ್ಟರು ಆಡಿಷನ್ ಮಾಡಿದೆ.

ಮಧ್ಯರಾತ್ರಿ 2.30ಕ್ಕೆ ಸೆಲೆಕ್ಟ್‌ ಆಗಿರುವೆ ಎಂದು ಹೇಳಿದರು. ನಾನು ಫುಲ್ ಶಾಕ್ ಆಗಿಬಿಟ್ಟಿ..ಅಲ್ಲದೆ ಬೆಳಗ್ಗೆನಿಂದ ಶೂಟಿಂಗ್ ಎಂದು ಹೇಳಿದರು. ಅಷ್ಟೊತ್ತರಲ್ಲಿ ಮನೆಗೆ ಬಂದು ಅಕ್ಕ ಮತ್ತು ಅಮ್ಮ ಮಲಗಿದ್ದರು, ಅವರನ್ನು ಎಬ್ಬಿಸಿ ಸೆಲೆಕ್ಟ್‌ ಅನ್ನೋ ವಿಚಾರ ಹೇಳಿದೆ. ಬೆಳಗ್ಗೆ ಶೂಟಿಂಗ್ ಇತ್ತು…ಹೇರ್ ಕಟ್ ಮಾಡಿಸಬೇಕು ಮತ್ತು ಗಡ್ಡ ಟ್ರಿಮ್ ಮಾಡಬೇಕು ಎಂದು ಹೇಳಿದರು ಅದೂ ಮಾಡಿಸಿಕೊಂಡು ಬೆಳಗ್ಗೆ ಶೂಟಿಂಗ್ ಸ್ಥಳಕ್ಕೆ ಹೋದೆ ಮರು ದಿನವೇ ಪ್ರಸಾರ ಮಾಡಲು ಶುರು ಮಾಡಿದ್ದರು. ಮೊದಲ ದೃಶ್ಯವೇ ಮದುವೆ ಮನೆ ಸೀನ್ ಅಗಿತ್ತು ಎಂದಿದ್ದಾರೆ.

Continue Reading

bengaluru

ಹೈಕೋರ್ಟ್​ ಕಲಾಪವನ್ನೂ ಬಿಡದ ಸೈಬರ್​ ಹ್ಯಾಕರ್ಸ್​​-ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್

Published

on

ಬೆಂಗಳೂರು: ಸೈಬರ್‌ ಖದೀಮರ ಉಪಟಳ ಎಲ್ಲಿಯವರೆಗೆ ತಲುಪಿದೆ ಎಂದರೆ ಅದು ಇದೀಗ ಕರ್ನಾಟಕ ಹೈಕೋರ್ಟ್ ಕಲಾಪಕ್ಕೂ ತಟ್ಟಿದೆ.

ಮಂಗಳವಾರ ಸಂಜೆ ಹೈಕೋರ್ಟಿನ ಹಾಲ್‌ ನಂಬರ್‌ 6, 12, 18, 23, 24, 26 ಮತ್ತು ಇತರ ಹಾಲ್‌ ಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾಗಲೇ ಲಿಂಕ್‌ ಮೂಲಕ ಭಾಗವಹಿಸಿದ್ದ ಅಪರಿಚಿತ ಆರೋಪಿಗಳು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಬಗ್ಗೆ ಹೈಕೋರ್ಟಿನ ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಅವರು ಸೆಂಟ್ರಲ್‌ ಸೆನ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಲೈವ್‌ ಸ್ಟ್ರೀಮಿಂಗ್‌ ಮತ್ತು ವೀಡಿಯೋ ಕಾನ್ಫರೆನ್ಸ್‌ ಸೌಲಭ್ಯವನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಬುಧವಾರ ಸಂಜೆ ಹೈಕೋರ್ಟ್ ಕಲಾಪದ ವೇಳೆ ವೀಡಿಯೋ ಕಾನ್ಫರೆನ್ಸ್‌ ಆ್ಯಪ್‌ ಅನ್ನು ಹ್ಯಾಕ್‌ ಮಾಡಿ ಆಶ್ಲೀಲ ದೃಶ್ಯಾವಳಿಯನ್ನು ಅಪ್‌ ಲೋಡ್‌ ಮಾಡಲಾಗಿತ್ತು. ಅಶ್ಲೀಲ ವೀಡಿಯೋ ಪ್ರಸಾರವಾಗುತ್ತಿದ್ದಂತೆ ಅದನ್ನು ನಿರ್ವಹಣೆ ಮಾಡುತ್ತಿದ್ದ ಸಿಬಂದಿಯನ್ನು ಕರೆದು ವಿಚಾರಿಸಿದಾಗ ಸೈಬರ್‌ ಹ್ಯಾಕ್‌ ಆಗಿರುವ ವಿಷಯ ಗೊತ್ತಾಗಿದೆ. ಕೂಡಲೇ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

Continue Reading

LATEST NEWS

Trending