Monday, July 4, 2022

ನಾಳೆಯಿಂದ ಮುಲ್ಕಿಯ ಕೊಲ್ನಾಡುವಿನಲ್ಲಿ ‘ಕೃಷಿ ಸಿರಿ-2022’

ಮುಲ್ಕಿ: ದ.ಕ ಜಿಲ್ಲೆಯ ಮುಲ್ಕಿಯ ಕೊಲ್ನಾಡು ಅನ್ನೋ ಪುಟ್ಟ ಊರು ಸದ್ಯ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ಸಜ್ಜಾಗಿದೆ.
ಕಾರ್ಯಕ್ರಮಕ್ಕೆ 10,000ಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದ್ದು ಈಗಾಗಲೇ ವಿಶಾಲವಾದ ವೇದಿಕೆ, ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.


ದ.ಕ, ಉಡುಪಿ, ಕಾಸರಗೋಡು, ಉತ್ತರ ಕನ್ನಡ ಜನತೆಯ ಜೊತೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಹಾಗೂ ಹಾಸನದಿಂದಲೂ ದೊಡ್ಡ ಮಟ್ಟದಲ್ಲಿ ಕೃಷಿಕರು, ಯುವಕರು, ಉದ್ಯಮಿಗಳು ನಾಳೆ ನಡೆಯುವ ಮೇಳಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೇಳದ ಸಂಚಾಲಕರಾದ ಅಣ್ಣಯ್ಯ ಕುಲಾಲ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ಮಾಹಿತಿ ನೀಡಿದ ಅವರು “ಕುಂಬಾರಿಕೆ, ನೇಕಾರಿಕೆ, ಕಮ್ಮಾರಿಕೆಯ ನೈಜ ಹಳ್ಳಿ ಬದುಕಿನ ಸೊಬಗನ್ನು ಅನಾವರಣಗೊಳಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಕೃಷಿಗೆ ಪೂರಕವಾಗಿ 15 ಜನರನ್ನು ಸನ್ಮಾನಿಸಲಿದ್ದೇವೆ. ಮಾರ್ಚ್ 11ರಿಂದ 13ರವರೆಗೆ ಕೃಷಿ ಸಿರಿ-2022 ಜರುಗಲಿದ್ದು ತುಳುನಾಡಿನ ಆಚಾರ ವಿಚಾರ, ಕಲೆ, ಜಾನಪದ ಸಂಸ್ಕೃತಿ, ಕೃಷಿ ಬದುಕಿನ ಅಳಿವು ಉಳಿವಿನ ಬಗ್ಗೆ ಕೃಷಿ ಮೇಳ ಬೆಳಕು ಚೆಲ್ಲಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೇಳದ ಅಧ್ಯಕ್ಷರಾದವಿಜಯ್ ಶೆಟ್ಟಿ, ಸಂಚಾಲಕರಾದ ಜಗದೀಶ್ ಪೈ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Hot Topics

ಮರವಂತೆಯಲ್ಲಿ ಸಮುದ್ರಪಾಲಾದ ಕಾರು: ಓರ್ವ ಸ್ಪಾಟ್ ಡೆತ್-ಓರ್ವ ನಾಪತ್ತೆ

ಕುಂದಾಪುರ: ಚಲಿಸುತ್ತಿದ್ದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರ ಪಾಲಾಗಿ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿ ಇಬ್ಬರು ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದಂತಹ ದಾರುಣ ಘಟನೆ ಉಡುಪಿ...

ಸೆಗಣಿ ತಿಂದು ಬದುಕುತ್ತಿದ್ದ ಮಾನಸಿಕ ಅಸ್ವಸ್ಥನ ಬಾಳಿಗೆ ಬೆಳಕಾದ ಸಮಾಜ ಸೇವಕ ಈಶ್ವರ್ ಮಲ್ಪೆ

ಉಡುಪಿ: ಸೆಗಣಿ ತಿಂದು ಬದುಕುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಉಡುಪಿಯ ಹೊಸಬೆಳಕು ಆಶ್ರಮಕ್ಕೆ ಸೇರಿಸಿ ಹೊಸ ಬದುಕು ನೀಡಿದ ಉಡುಪಿ ಸಮಾಜ ಸೇವಕ ಈಶ್ವರ್ ಮಲ್ಪೆ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ಕಾರವಾರ...

ಮಂಗಳೂರಿನ ‘ಕದ್ರಿ‌ ರೋಲರ್ಸ್ ಸ್ಕೇಟಿಂಗ್ ಕ್ಲಬ್’ ಅಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆ

ಮಂಗಳೂರು: ಮಂಗಳೂರಿನಲ್ಲಿ‌ ನೂತನವಾಗಿ "ಕದ್ರಿ‌ ರೋಲರ್ಸ್ ಸ್ಕೇಟಿಂಗ್ ಕ್ಲಬ್(ರಿ)" ಆರಂಭಗೊಂಡಿದ್ದು, ಇದರ ಸ್ಥಾಪಕಾಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆಯಾಗಿದ್ದಾರೆ.ನಗರದ ಕೆಪಿಟಿ‌ ಸರ್ಕಲ್ ನ ಬಳಿಯ ಕದ್ರಿ ಪಾರ್ಕ್ ನಲ್ಲಿರುವ "ಅನಘಾಸ್ ಸ್ಕೇಟಿಂಗ್ ಅಕಾಡೆಮಿ"ಯಲ್ಲಿ ಇತ್ತೀಚೆಗೆ...