ಮೂಡುಬಿದಿರೆ: ಒಂಟಿಕಟ್ಟೆ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಭಾನುವಾರ ಮುಕ್ತಾಯಗೊಂಡ 19 ನೇ ವರ್ಷದ ಕೋಟಿ– ಚೆನ್ನಯ ಜೋಡುಕರೆ ಕಂಬಳದಲ್ಲಿ ದಾಖಲೆ 221 ಜತೆ ಕೋಣಗಳು ಭಾಗವಹಿಸಿದ್ದು, ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಕಂಬಳ ವೀಕ್ಷಣೆ ಮಾಡಿದರು.
ಆರೂವರೆ ಕೋಲು ನಿಶಾನೆಗೆ ನೀರು ಹಾಯಿಸಿದ ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ ಹಾಗೂ ಹಲಗೆ ಮುಟ್ಟಿದವರು ಬೈಂದೂರು ಭಾಸ್ಕರ ದೇವಾಡಿಗ.
ಫಲಿತಾಂಶದ ವಿವರ: ಹಗ್ಗ ಹಿರಿಯ ಪದವು ಕಾನಡ್ಕ ಪ್ಲೇವಿ ಡಿಸೋಜ ಎ. ( ಪ್ರಥಮ) ಕೋಣ ಓಡಿಸಿದವರು ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ& ಮಿಜಾರು ಪ್ರಸಾದ್ ನಿಲಯ ಪ್ರಸಿದ್ಧ್ ಶಕ್ತಿಪ್ರಸಾದ್ ಶೆಟ್ಟಿ
ಎ.(ದ್ವಿತೀಯ) ಕೋಣ ಓಡಿಸಿದವರು ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಹಗ್ಗ ಹಿರಿಯ ವಿಭಾಗದ ಮೊದಲ ಸ್ಪರ್ಧೆಯಲ್ಲಿ ಸಮಬಲದ ಫಲಿತಾಂಶದೊಂದಿಗೆ ಸಮಬಲದ ಹೋರಾಟದಲ್ಲಿ ಅಂತ್ಯವಾಯಿತು.
ಹಗ್ಗ ಕಿರಿಯ: ಚೊಕ್ಕಾಡಿ ಕಟಪಾಡಿ ದೈವಿಕ್ ಸಂತೋಷ್ ಶೆಟ್ಟಿ ಎ(ಪ್ರಥಮ) ಕೋಣ ಒಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ ಸಿದ್ಧಕಟ್ಟೆ ಪೊಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ (ದ್ವಿತೀಯ) ಕೋಣ ಒಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ.ಶೆಟ್ಟಿ.
ಅಡ್ಡ ಹಲಗೆ: ಕೋಟ ಗಿಳಿಯಾರು ಹಂಡಿಕೆರೆ ವಸಂತ ಕುಮಾರ್ ಶೆಟ್ಟಿ (ಪ್ರಥಮ) ಕೋಣ ಓಡಿಸಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗ& ಬೋಳಾರ ತ್ರಿಶಾಲ್ ಕೆ. ಪೂಜಾರಿ ಎ.(ದ್ವಿತೀಯ) ಕೋಣ ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ,
ನೇಗಿಲು ಹಿರಿಯ: ಬೋಳದ ಗುತ್ತು ಜಗದೀಶ್ ಶೆಟ್ಟಿ ಬಿ (ಪ್ರಥಮ) ಕೋಣ ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ, ಮಾರ್ಪಳ್ಳಿ ಕಂಬಳ ಮನೆ ರಾಜೇಶ್ ಶೆಟ್ಟಿ ಎ.(ದ್ವಿತೀಯ) ಕೋಣ ಓಡಿಸಿದವರು ಭಟ್ಟಳ ಶಂಕರ್.
ನೇಗಿಲು ಕಿರಿಯ: ಭಟ್ಟಳ ಎಚ್.ಎನ್ ನಿವಾಸ ಪಿನ್ನುಪಾಲ್ (ಪ್ರಥಮ) ಕೋಣ ಓಡಿಸಿದವರು ಭಟ್ಕಳ ಶಂಕರ್, ತೋಡಾರು ಪಂಚಶಕ್ತಿ ಬಾರ್ದಲ ಶ್ಲೋಕ್ ರಂಜಿತ್ ಪೂಜಾರಿ (ದ್ವಿತೀಯ) ಕೋಣ ಓಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ.ಶೆಟ್ಟಿ.