Monday, July 4, 2022

ಸಾಲೆತ್ತೂರು: ಕೊರಗಜ್ಜನಿಗೆ ಅವಮಾನ ಪ್ರಕರಣ-ಪ್ರಮುಖ ಆರೋಪಿ ಭಾಷಿತ್ ಬಂಧನ

ಬಂಟ್ವಾಳ: ಮದುಮಗನಿಗೆ ಕೊರಗಜ್ಜನ ವೇಷ ಭೂಷಣ ಧರಿಸಿ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ವಿಟ್ಲ ಇನ್ಸ್‌ಪೆಕ್ಟರ್ ನಾಗರಾಜ್ ಎಚ್.ನೇತೃತ್ವದ ತಂಡ ಎರ್ನಾಕುಲಂ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣದ ಪ್ರಮುಖ ಆರೋಪಿ ಮದುಮಗ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಲ್ ಅಗರ್ತಿಮೂಲೆ ಸಮೀಪದ ಉಮ್ರಲ್ಲಾ ಭಾಷಿತ್ ಎಂಬಾತನನ್ನು ಪೋಲೀಸರು ಎರ್ನಾಕುಲಂ ಜಿಲ್ಲೆಯ ರೈಲ್ವೆ ನಿಲ್ದಾಣದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ವಿಟ್ಲ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಉಳಿದ ಆರೋಪಿಗಳನ್ನು ಈಗಾಗಲೇ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಮುಖ ಆರೋಪಿ ಮದುಮಗ ಭಾಷಿತ್ ಮಾತ್ರ ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ವಿದೇಶಕ್ಕೆ ಪರಾರಿಯಾಗಲು ಹೊಂಚು ಹಾಕುತ್ತಿದ್ದ, ಆದರೆ ಪೋಲೀಸರು ಆ ಮೊದಲೇ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ಸುಖಾಂತ್ಯ ಕಂಡಿದ್ದಾರೆ.

ಆರೋಪಿ ಬಂಧನವಾಗದ ಹಿನ್ನೆಲೆಯಲ್ಲಿ ಸಾಕಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದ್ದ ಪ್ರಕರಣ ಪೋಲಿಸರಿಗೆ ತಲೆನೋವಾಗಿತ್ತು.

LEAVE A REPLY

Please enter your comment!
Please enter your name here

Hot Topics

ವಿಟ್ಲದಲ್ಲಿ ನಿರಂತರ ಮಳೆಗೆ ನೀರುಪಾಲಾದ ತೋಡು-ಮನೆ ಕುಸಿಯುವ ಭೀತಿ

ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತೋಡಿನ ಬದಿ ಕುಸಿದು ಮನೆ ಅಪಾಯದಂಚಿನಲ್ಲಿದೆ.ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ನಿವಾಸಿ ರಾಮಣ್ಣ ಪಿಲಿಂಜ ಅವರಿಗೆ ಸೇರಿದ ಮನೆಯ ಪಕ್ಕದಲ್ಲಿ...

ಮರವಂತೆಯಲ್ಲಿ ಸಮುದ್ರಪಾಲಾದ ಕಾರು: ಓರ್ವ ಸ್ಪಾಟ್ ಡೆತ್-ಓರ್ವ ನಾಪತ್ತೆ

ಕುಂದಾಪುರ: ಚಲಿಸುತ್ತಿದ್ದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರ ಪಾಲಾಗಿ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿ ಇಬ್ಬರು ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದಂತಹ ದಾರುಣ ಘಟನೆ ಉಡುಪಿ...

ಡಿಸಿಪಿ ಹರಿರಾಂ ಶಂಕರ್‌ಗೆ ಮಂಗಳೂರು ನಗರ ಪೊಲೀಸರ ಹೃದಯಸ್ಪರ್ಶಿ ಬೀಳ್ಕೊಡುಗೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಿಂದ ಹಾಸನ ಜಿಲ್ಲೆಗೆ ಎಸ್ಪಿಯಾಗಿ ವರ್ಗಾವಣೆಗೊಂಡ ಡಿಸಿಪಿ ಹರಿರಾಂ ಶಂಕರ್‌ ಅವರನ್ನು ಇಂದು ಮಂಗಳೂರು ನಗರ ಪೊಲೀಸರು ಬೀಳ್ಕೊಟ್ಟರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಿರಾಂ ಶಂಕರ್‌, ಮಂಗಳೂರಿನಲ್ಲಿ ವಿವಿಧ...