ಬೆಂಗಳೂರು: ಕೆಎಂಎಫ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಲು ಕೆಎಂಎಫ್ ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸುವ ಮೂಲಕ ಗೌರವ ಸಲ್ಲಿಸಲು ಮುಂದಾಗಿದೆ.
ಮುಂದಿನ 15 ದಿನಗಳ ಕಾಲ ಹಾಲಿನ ಪ್ಯಾಕೆಟ್ ಮೇಲೆ ಗಂಧದಗುಡಿ ಹೆಸರನ್ನು ಮುದ್ರಿಸಲು KMF ನಿರ್ಧರಿಸಿದೆ.
ಕರ್ನಾಟಕ ರತ್ನ ನೀಡುತ್ತಿರುವ ಸಲುವಾಗಿಯೂ ಈ ರೀತಿ ಗೌರವಿಸಲು ಕೆಎಂಎಫ್ ನಿರ್ಧರಿಸಲಾಗಿದೆ.
ಪುನೀತ್ ರಾಜ್ಕುಮಾರ್ ಈ ಹಿಂದೆ KMFನ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಹೀಗೆ ತನ್ನ ಅಂಬಾಸಿಡರ್ ಆಗಿದ್ದ ಅಪ್ಪು ರೈತರ ಸಹಾಯಕ್ಕೂ ಕೈ ಜೋಡಿಸಿದ್ದರು. ಹೀಗಾಗಿ ಕೆಎಂಎಫ್ ಈ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಲು ಕೆಎಂಎಫ್ ಮುಂದಾಗಿದೆ.
ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸಲಾಗಿದೆ. 15 ದಿನಗಳ ಕಾಲ ಹಾಲಿನ ಪ್ಯಾಕೇಟ್ ಮೇಲೆ ಹೆಸರು ಮುದ್ರಿಸಲಾಗುತ್ತದೆ.