ಉಡುಪಿ : ಉಡುಪಿ ಜಿಲ್ಲೆಯನ್ನು ಬೆಚ್ಚಿಬಿಳಿಸಿದ್ದ ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನೋಜ್ ಕೊಡಿಕೆರೆ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದೆ.
ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ನಡುವೆ ಉಂಟಾದ ಹಣಕಾಸಿನ ವೈನಸ್ಸಿನ ಕಾರಣದಿಂದಾಗಿ ಈ ಘಟನೆ ನಡೆದಿದ್ದು, ಪೊಲೀಸರು ಈಗಾಗಲೇ ಈ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಕಿಶನ್ ಹೆಗ್ಡೆ ಅಂದು ಮಂಗಳೂರಿನ ದಿವ್ಯರಾಜ್ ಶೆಟ್ಟಿ ಹಾಗೂ ಹರಿಪ್ರಸಾದ್ ಶೆಟ್ಟಿ ಅವರ ಜೊತೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆಂದು ತೆರಳಿದ್ದ. ಆದರೆ, ಕಾರಿನಿಂದ ಇಳಿಯುವ ವೇಳೆ ಬೆನ್ನಟ್ಟಿ ಬಂದಿದ್ದ ರೌಡಿಗಳ ತಂಡ ಅಡ್ಡಗಟ್ಟಿದೆ.
ಮಾರಕಾಯುಧಗಳ ಜೊತೆ ಬಂದಿದ್ದ ತಂಡ, ಕಿಶನ್ ಹೆಗ್ಡೆ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ 4-5 ಮಂದಿ ಸೇರಿ ಕಿಶನ್ ಹೆಗ್ಡೆ ಕಾರಿನಿಂದ ಇಳಿಯುತ್ತಿದ್ದಾಗಲೇ ತಲವಾರಿನಿಂದ ಕಡಿದಿದ್ದಾರೆ. ಕಿಶನ್ ಹೆಗ್ಡೆ ಜತೆಯಲ್ಲಿದ್ದ ಹರಿಪ್ರಸಾದ್ ತಲೆಗೂ ಏಟು ಬಿದ್ದಿತ್ತು.ರೌಡಿಶೀಟರ್‌ಗಳಾದ ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಇತ್ತು. ಇದೇ ವೈಷಮ್ಯದಲ್ಲಿ ಮನೋಜ್ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗ್ತಿದೆ.
ಕೊಲೆಯ ಬಳಿಕ ರೌಡಿಗಳು ತಾವು ಬಂದಿದ್ದ ರಿಡ್ಜ್ ಹಾಗೂ ಇನೋವಾದಲ್ಲಿ ಪಲಾಯನ ಆಗಿದ್ದರು. ರಿಡ್ಜ್ ಕಾರು ಗುರುವಾರವೇ ಕಣಂಜಾರು ಬಳಿ ಪತ್ತೆಯಾಗಿತ್ತು.