FILM
ಅಶ್ಲೀಲ ಡ್ಯಾನ್ಸ್ ಜನರ ಆರೋಪಕ್ಕೆ ಪಾರ್ಕಿನಲ್ಲೆ ಬಟ್ಟೆ ಬಿಚ್ಚಿದ ನಟಿ ಸಂಯುಕ್ತಾ ಹೆಗಡೆ…!!
Published
4 years agoon
By
Adminಬೆಂಗಳೂರು : ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆಯವರು ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದ್ದು. ಬೆಂಗಳೂರಿನ ಅಗರ ಉದ್ಯಾನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶುಕ್ರವಾರ ಸಂಜೆ ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್‍ನಲ್ಲಿ ಸಂಯುಕ್ತ ಹೆಗ್ಡೆ ಮತ್ತವರ ಸಂಗಡಿಗರು ‘ಹುಲಾ ಹೂಪ್ ಡ್ಯಾನ್ಸ್’ ಮಾಡುತ್ತಿದ್ದರು. ಇದಕ್ಕೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದು. ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಪಾರ್ಕ್ ನ ಗೇಟ್ ನ್ನು ಸಾರ್ವಜನಿಕರು ಲಾಕ್ ಮಾಡಿದ್ದರು.
ಈ ವೇಳೆ ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದು ನಮ್ಮದು ಏನು ತಪ್ಪಿಲ್ಲ, ನೀವೇ ನೋಡಿ ಎನ್ನುತ್ತ ತಾವು ಧರಿಸಿದ್ದ ಮೇಲಂಗಿ ತೆಗೆದು ನಾವು ತುಂಡು ಬಟ್ಟೆ ಧರಿಸಿಲ್ಲ ಎಂದು ಸಾಕ್ಷ್ಯ ನೀಡಿದ್ದಾರೆ. ನಂತರ ಪೊಲೀಸರು ಸಂಯುಕ್ತಾ ಅವರ ಮನವೊಲಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ.
FILM
ನಟ ಶಿವರಾಜ್ ಕುಮಾರ್ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
Published
13 hours agoon
04/01/2025By
NEWS DESK2ಅಮೇರಿಕಾ: ಕ್ಯಾನ್ಸರ್ ನಿಂದ ಬಳಲುತ್ತಿದ್ದಂತ ನಟ ಶಿವರಾಜ್ ಕುಮಾರ್ ಅವರು ಅಮೇರಿಕಾದಲ್ಲಿ ಸರ್ಜರಿಗೆ ಒಳಗಾಗಿದ್ದರು.ಈಗ ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನಿಂದ ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಆ ನಂತರ ಸರ್ಜರಿ ಮಾಡಲಾಗಿತ್ತು. ಅವರು ಕ್ಯಾನ್ಸರ್ ಗೆದ್ದು ಬಂದಿದ್ದಾಗಿ ಖುಷಿಯ ವಿಚಾರವನ್ನು ಸ್ವತಃ ನಟ ಶಿವರಾಜ್ ಕುಮಾರ್ ಅವರೇ ತಿಳಿಸಿದ್ದರು.
ಈಗ ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯಕೀಯ ತಪಾಸಣೆಯಲ್ಲಿದ್ದಂತ ಅವರು, ಗುಣಮುಖರಾದ ಕಾರಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರುವುದಾಗಿ ತಿಳಿದು ಬಂದಿದೆ. ಇದೇ ಜನವರಿ 24ರಂದು ಬೆಂಗಳೂರಿಗೆ ಮರಳಳಿದ್ದು, ಆ ಬಳಿಕ ಸಿನಿಮಾ ಶೂಟಿಂಗ್ ನಲ್ಲಿ ತೊಡಗುವ ಸಾಧ್ಯತೆ ಇದೆ.
ಮಂಗಳೂರು/ಬೆಂಗಳೂರು : ಬೇಟೆಗಾರನನ್ನು ಬೇಟೆ ಆಡುವ ರಣ ಬೇಟೆಗಾರ ಬಂದ ಎಂಬ ಡೈಲಾಗ್ನಂತೆ ‘ಬಿಗ್ ಬಾಸ್’ ದಾಖಲೆಯನ್ನು ‘ಸರಿಗಮಪ’ ಹಿಂದಿಕ್ಕಿದೆ. ಇಷ್ಟು ದಿನಗಳ ಕಾಲ ಟಿಆರ್‌ಪಿಯಲ್ಲಿ ಬಿಗ್ ಬಾಸ್ ಪಾರುಪತ್ಯ ಸಾಧಿಸುತ್ತಾ ಬರುತ್ತಿತ್ತು. ಎಲ್ಲಾ ಧಾರಾವಾಹಿಗಳ ಟಿಆರ್ಪಿಯನ್ನು ಬೀಟ್ ಮಾಡಿ ಬಿಗ್ ಬಾಸ್ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಭರ್ಜರಿ ಟಿಆರ್ಪಿ ಪಡೆಯುವ ಮೂಲಕ ಈ ಶೋ ಮೊದಲ ಸ್ಥಾನ ಪಡೆದಿದೆ.
52ನೇ ವಾರದ ಟಿಆರ್ಪಿ ಪ್ರಕಾರ, ಬಿಗ್ ಬಾಸ್ಗೆ ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ವಾರದ ದಿನ 8 ಟಿವಿಆರ್, ಶನಿವಾರ 9.1 ಟಿವಿಆರ್ ಹಾಗೂ ಭಾನುವಾರ 10 ಟಿವಿಆರ್ ಸಿಕ್ಕಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಇರುವ ಕಾರಣ ಶೋಗೆ ಭರ್ಜರಿ ಟಿಆರ್ಪಿ ದೊರೆಯುತ್ತಿದೆ. ‘ಸರಿಗಮಪ’ ಆಡಿಷನ್ ಇತ್ತೀಚೆಗೆ ಪೂರ್ಣಗೊಂಡಿದೆ. ಶನಿವಾರ ಹಾಗೂ ಭಾನುವಾರ ಸಂಜೆ 7.30ರಿಂದ 9 ಗಂಟೆವರೆಗೆ ಈ ಶೋ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಆಡಿಷನ್ ಎಪಿಸೋಡ್ ಉತ್ತಮ ಟಿಆರ್ಪಿ ಪಡೆದುಕೊಂಡಿದೆ. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ 11.1 ಟಿವಿಆರ್ ಹಾಗೂ ಗ್ರಾಮೀಣ ಭಾಗದಲ್ಲಿ 13.1 ಟಿವಿಆರ್ ಈ ಶೋಗೆ ಸಿಕ್ಕಿದೆ. ಈ ಮೂಲಕ ಬಿಗ್ ಬಾಸ್ನ ಶೋ ಹಿಂದಿಕ್ಕಿದೆ. ‘ಸರಿಗಮಪ’ ಶೋನಲ್ಲಿ ಅನುಶ್ರೀ ಅವರು ಆ್ಯಂಕರಿಂಗ್ ಮಾಡುತ್ತಿದ್ದಾರೆ. ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಜಡ್ಜ್ ಸ್ಥಾನದಲ್ಲಿ ಇದ್ದಾರೆ.
ಸೀರಿಯಲ್‌ಗಳ ಟಿಆರ್ಪಿ
ಸೀರಿಯಲ್‌ಗಳ ಟಿಆರ್ಪಿ ವಿಚಾರಕ್ಕೆ ಬರೋದಾದರೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ಹಾಗೂ ‘ಅಣ್ಣಯ್ಯ’ ಧಾರಾವಾಹಿಗಳು ಇವೆ. ಮೂರನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’, ನಾಲ್ಕನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಹಾಗೂ ಐದನೇ ಸ್ಥಾನದಲ್ಲಿ ‘ಭಾಗ್ಯ ಲಕ್ಷ್ಮೀ’ ಧಾರಾವಾಹಿ ಇದೆ.
ಮಂಗಳೂರು/ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಜ್ಯೂರಿ ಪ್ಯಾನೆಲ್‌ನಲ್ಲಿ ಇರುತ್ತಿದ್ದ ಬಹುವಾದ್ಯ ಪರಿಣಿತರಾಗಿ ಎಸ್. ಬಾಲಿ ಎಂದೇ ಪ್ರಖ್ಯಾತರಾಗಿರುವ ಎಸ್ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ.
ಮೃದಂಗ, ತಬಲಾ, ಢೋಲಕ್ , ಢೋಲ್ಕಿ, ಖಂಜರಿ, ಕೋಲ್ ಹೀಗೆ ಹತ್ತು ಹಲವು ಲಯವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ಅಪರೂಪದ ವಿದ್ವಾಂಸ ಎಸ್ ಬಾಲಸುಬ್ರಹ್ಮಣ್ಯಂ ಅವರಿಗೆ 71 ವರ್ಷವಾಗಿತ್ತು.
ಕನ್ನಡ ಚಿತ್ರರಂಗದ ಅನೇಕ ಸಂಗೀತ ಸಾಧಕರು ಬಾಲಿ ಅವರನ್ನು ರಿದಂ ಕಿಂಗ್ ಎಂದೇ ಕರೆಯುತ್ತಿದ್ದರು. ಸುಗಮ ಸಂಗೀತದಲ್ಲೂ ಇವರು ಮಾಸ್ಟರ್. ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಕೆ ಇವರದು.
ಇದನ್ನೂ ಓದಿ: ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಗಂಡು ಮಕ್ಕಳು ಸಾವು
ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಯ ಮಗನಾಗಿ 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಬಾಲಿ ಅವರು ಜನಿಸಿದರು. ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಮೂಡಿಸಿಕೊಂಡ ಬಾಲಿ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು. ಮುಂದೆ ಅವರು ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ಪಕ್ಕವಾದ್ಯ ಸಹಕಾರದಲ್ಲಿ ಬಾಗಿಯಾಗಿದ್ದಾರೆ.
ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್-ಅರೇಂಜರ್-ಕಂಡಕ್ಟರ್ ಎಂಬ ಹೆಗ್ಗಳಿಕೆ ಎಸ್. ಬಾಲಿ ಅವರದ್ದಾಗಿದೆ. ಶಂಕರನಾಗ್ ಅವರ ಸಂಕೇತ್ ಸ್ಟುಡಿಯೊ ಆರಂಭದ ದಿನಗಳಲ್ಲಿ ಎದುರಾದ ಸವಾಲುಗಳನ್ನು ಎದುರಿಸಲು ಬಾಲಿ ಹೆಗಲು ನೀಡಿದರು.
ಬಾಲಿ ಅವರು ಕನ್ನಡದ ಮೊಟ್ಟಮೊದಲ ಧ್ವನಿಸುರಳಿ ಕವಿ ನಿಸಾರ್ ಅಹಮ್‌ದರವರ ನಿತ್ಯೋತ್ಸವದಿಂದ ಮೊದಲುಗೊಂಡು ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ ವಾದ್ಯದ ನೆರವು ನೀಡಿದವರು. ಹಲವಾರು ಧ್ವನಿಸುರುಳಿಗಳು, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶ್ವದೆಲ್ಲೆಡೆ ಬಾಲಿ ಅವರ ಲಯ ಸಂಗೀತ ಶಾಶ್ವತವಾಗಿ ಮೊಳಗುತ್ತಲೇ ಇದೆ. 1970ರ ದಶಕದಲ್ಲಿ ಬಾಲಿ ಬಹುಬೇಡಿಕೆಯ ವ್ಯಕ್ತಿಯಾಗಿದ್ದರು. ಅವರಿಗ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಗೌರವ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
LATEST NEWS
ಬಡವರ ಧ್ವನಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕೆಲಸ ಮಾಡುತ್ತಿದೆ : ಐಕಳ ಹರೀಶ್ ಶೆಟ್ಟಿ
ಉಡುಪಿ: ಬಾಡಿಗೆ ರೂಂ ಬಳಿ ಕುಸಿದು ಬಿದ್ದು ಯುವತಿ ಸಾವು
ನಟ ಶಿವರಾಜ್ ಕುಮಾರ್ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಕಸದ ಲಾರಿಗೆ ಅಕ್ಕ-ತಂಗಿ ಬಲಿ
BBK11: ಮೈ ಮರೆತು ಮಾತಾಡಿದ ತ್ರಿವಿಕ್ರಮ್, ಮಂಜು, ಗೌತಮಿ; ಮೂವರಿಗೂ ಬಿಗ್ ಶಾಕ್!
6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ
Trending
- DAKSHINA KANNADA3 days ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- BIG BOSS7 days ago
ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..!
- DAKSHINA KANNADA1 day ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- LATEST NEWS4 days ago
ಮೈಸೂರು: ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷ; ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಸೂಚನೆ