Thursday, September 29, 2022

ಉಳ್ಳಾಲ: ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಕಿಂಡರ್‌ ಗಾರ್ಡನ್‌ ಶಿಕ್ಷಕಿಯ ಡೆಡ್‌ಬಾಡಿ ಬಾವಿಯಲ್ಲಿ ಪತ್ತೆ

ಮಂಗಳೂರು: ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಲಿಟಲ್ ಕಿಂಡರ್ ಗಾರ್ಡನಿನ ಶಿಕ್ಷಕಿ ಮೃತದೇಹ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದೆ.


ಮೃತರನ್ನು ಹರಿಣಾಕ್ಷಿ(50) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ಮಕ್ಕಳು ಎದ್ದಾಗ ತಾಯಿ ಹರಿಣಾಕ್ಷಿ ಮನೆಯಲ್ಲಿ ಇರಲಿಲ್ಲವಂತೆ. ಗಾಬರಿಗೊಂಡ ಮಕ್ಕಳು ತಾಯಿಗಾಗಿ ಹುಡುಕಾಟ ನಡೆಸಿದ್ದು ಕೊನೆಗೆ ಉಳ್ಳಾಲ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.

ಮಧ್ಯಾಹ್ನದ ವೇಳೆ ಸಮುದಾಯ ಆರೋಗ್ಯ ಕೇಂದ್ರದ ಬಾವಿ ಬಳಿ ಹರಿಣಾಕ್ಷಿ ಅವರು ಧರಿಸುತ್ತಿದ್ದ ಚಪ್ಪಲಿ ದೊರಕಿದೆ.

ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಈಜು ರಕ್ಷಕರು ಸೇರಿ ಬಾವಿಯೊಳಗಿದ್ದ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಹರಿಣಾಕ್ಷಿ ಅವರ ಪತಿ ಬಸವರಾಜ್ ಅವರು ನ್ಯಾಯವಾದಿಯಾಗಿದ್ದು ಶಿವಮೊಗ್ಗದಲ್ಲಿದ್ದಾರೆ. ಹರಿಣಾಕ್ಷಿ ಅವರು ತನ್ನ ಇಬ್ಬರು ಪುತ್ರರೊಂದಿಗೆ ಅಬ್ಬಕ್ಕ ಸರ್ಕಲ್ ನಲ್ಲಿ ನೆಲೆಸಿದ್ದರು.

ಮನೆಯ ಕಟ್ಟಡದಲ್ಲೇ ಸ್ವಂತ ನರ್ಸರಿಯಲ್ಲಿ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಶಿಕ್ಷಣ, ಟ್ಯೂಷನ್ ನೀಡುತ್ತಿದ್ದರು. ಹರಿಣಾಕ್ಷಿ ಅವರ ಹಿರಿಯ ಪುತ್ರ ಇನ್ಫೋಸಿಸ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಕಿರಿಯ ಪುತ್ರ ಡಿಗ್ರಿ ವ್ಯಾಸಂಗ ನಡೆಸುತ್ತಿದ್ದಾನೆ.

LEAVE A REPLY

Please enter your comment!
Please enter your name here

Hot Topics

ಅಪರಿಚಿತರಿಂದ ಕಾಲಿವುಡ್‌ ‘ಆ್ಯಕ್ಷನ್‌ ಸ್ಟಾರ್’ ವಿಶಾಲ್ ಮನೆಗೆ ಕಲ್ಲು ತೂರಾಟ

ಚೆನ್ನೈ: ಕಾಲಿವುಡ್‌ನ 'ಆ್ಯಕ್ಷನ್‌ ಸ್ಟಾರ್' ನಟ ವಿಶಾಲ್ ಅವರ ಮನೆಗೆ ಯಾರೋ ಅಪರಿಚಿತ ಗನ್‌ಮ್ಯಾನ್‌ಗಳು ನುಗ್ಗಿ ಆಕ್ರಮಣ ಮಾಡಿ ಕಲ್ಲುತೂರಾಟ ಮಾಡಿದ್ದಾರೆ. ಅದರ ಪರಿಣಾಮವಾಗಿ ಮನೆಯ ಕಿಟಕಿ ಗಾಜುಗಳು ಒಡೆದಿರುವ ಘಟನೆ ಚೆನ್ನೈಯಲ್ಲಿ...

ಪುತ್ತೂರು: PFI ಪ್ರಧಾನ ಕಛೇರಿಗೆ ಬೆಳಿಗ್ಗೆಯಿಂದಲೇ ಬೀಗ-ಗುಪ್ತಸಭೆ ನಡೆಸುತ್ತಿದ್ದ ಆರೋಪ

ಪುತ್ತೂರು: ದೇಶದಾದ್ಯಂತ ಪಿಎಫ್ಐ ಹಾಗೂ ಅದರ ಬೆಂಬಲಿತ ಸಂಘಟನೆಗಳಿಗೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪಿಎಫ್ಐ ನ ಪ್ರಧಾನ...

ಉಳ್ಳಾಲ: ಫ್ಲೆಕ್ಸ್‌ನಲ್ಲಿ ಅನುಮತಿಯಿಲ್ಲದೆ ಗರ್ಭಿಣಿ ಭಾವಚಿತ್ರ ಅಳವಡಿಕೆ: ಕೆರಳಿದ ಭಜರಂಗದಳ

ಉಳ್ಳಾಲ: ಕಾರ್ಯಕ್ರಮವೊಂದರ ಫ್ಲೆಕ್ಸ್ ನಲ್ಲಿ ಮಹಿಳೆಯ ಅನುಮತಿ ಇಲ್ಲದೆ ಫೊಟೋ ಅಳವಡಿಸಿದ ಕುರಿತಾಗಿ ಕೆರಳಿದ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಉಳ್ಳಾಲದ ಕೊಲ್ಯ ನಾರಾಯಣಗುರು ಸಭಾಭವನದಲ್ಲಿ ಬುಧವಾರ ನಡೆಯಿತು.ದಕ್ಷಿಣ...