BIG BOSS
ಕಿಚ್ಚ ಸುದೀಪ್ ಜೊತೆ ಬಿಗ್‌ಬಾಸ್ ಧ್ವನಿ ಪ್ರದೀಪ್ ಬಡೆಕ್ಕಿಲ ವಿದಾಯ
Published
8 hours agoon
By
NEWS DESK2ಹಲವು ಬದಲಾವಣೆಗಳಿಗೆ ಬಿಗ್ ಬಾಸ್ ಕನ್ನಡ 11ರ ಈ ಸೀಸನ್ ಸಾಕ್ಷಿಯಾಗಿದೆ. ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಇದು ತಮ್ಮ ಕೊನೆಯ ಸೀಸನ್ ಎಂದು ಈಗಾಗಲೇ ಘೋಷಿಸಿದ್ದಾರೆ.
ಈ ಸೀಸನ್ ಶುರುವಾಗುವ ಮುನ್ನ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತಾರೋ ಎಂಬುದು ದೊಡ್ಡ ಪ್ರಶ್ನೆ ಆಗಿತ್ತು. ಆದರೆ ಈ ಸೀಸನ್ ನಲ್ಲಿ ಸುದೀಪ್ ನಿರೂಪಣೆ ಮಾಡುವುದಾಗಿ ಬಿಗ್ ಬಾಸ್ ಪ್ರೋಮೋದ ಮೂಲಕ ತಿಳಿದುಬಂದಿತ್ತು.
ಕಳೆದ ವಾರ ಕಿಚ್ಚನ ಪಂಚಾಯಿತಿ ಬಳಿಕ ತಮ್ಮ ಕೊನೆಯ ಪಂಚಾಯಿತಿ ಎಂದು ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜತೆಗೆ ಬಿಗ್ ಬಾಸ್ ಅಭಿಮಾನಿಗಳು ಇದಕ್ಕೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಇದೀಗ ಇನ್ನೊಂದು ಶಾಕ್ ಕೊಟ್ಟಿದ್ದು ಕಿಚ್ಚ ಸುದೀಪ್ ವಿದಾಯದೊಂದಿಗೆ ಬಿಗ್ ಬಾಸ್ ಧ್ವನಿಯೂ ವಿದಾಯ ಹೇಳಲಿದೆ. ಹೌದು, ಬಿಗ್ ಬಾಸ್ ಹಾಗೂ ಕಲರ್ಸ್ ಕನ್ನಡ ಹಾಗೂ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದ ಬಡೆಕ್ಕಿಲ ಪ್ರದೀಪ್ ಮನೆಮಾತಾಗಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಧ್ವನಿಯಾಗಿಯೂ ಪ್ರದೀಪ್ ಅವರೇ ಇದ್ದಾರೆ ಎಂದು ಎಲ್ಲರೂ ಹೇಳುವುದು ಹೌದು. ಹೀಗಾಗಿ ಬಿಗ್ ಬಾಸ್ ಧ್ವನಿ ಎನ್ನಲಾಗುವ ಪ್ರದೀಪ್ ಅವರು ಕೂಡ ಬೆಂಗಳೂರನ್ನು ತೊರೆಯಲಿದ್ದು, ಕಿಚ್ಚ ಸುದೀಪ್ ವಿದಾಯದೊಂದಿಗೆ ಬಿಗ್ ಬಾಸ್ ಧ್ವನಿಯೂ ವಿದಾಯ ಹೇಳಲಿದೆ.
ಬಡೆಕ್ಕಿಲ ಪ್ರದೀಪ್ ಅವರು ಈಗಾಗಲೇ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ತಾವು ಅನಿವಾರ್ಯ ಕಾರಣಗಳಿಂದಾಗಿ ಹುಟ್ಟೂರು ಪುತ್ತೂರಿಗೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ.
BIG BOSS
ಇದು ಸ್ಕ್ರಿಪ್ಟ್ ಶೋ…. ಬಿಗ್‌ಬಾಸ್ ಜರ್ನಿ ಬಗ್ಗೆ ಮೋಕ್ಷಿತಾ ಹೇಳಿದ್ದೇನು ಗೊತ್ತಾ ?
Published
7 hours agoon
27/01/2025By
NEWS DESK3ಮಂಗಳೂರು/ಬೆಂಗಳೂರು : ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತ ಅವರು 5 ಕೋಟಿ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಗೆದ್ದ ಮೊದಲ ಸ್ಪರ್ಧಿ ಎಂಬ ದಾಖಲೆಯನ್ನು ಅವರು ಸೃಷ್ಟಿಸಿದ್ದಾರೆ. ಈ ಬಾರಿ ಮೋಕ್ಷಿತಾ ಪೈ ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಇದೀಗ ಬುಡಮೇಲಾಗಿದೆ.
ಮೂರನೇ ಸ್ಪರ್ಧಿಯಾಗಿ ಮೋಕ್ಷಿತಾ ಹೊರ ಬಿದ್ದಿದ್ದಾರೆ. ಭವ್ಯಾ ಅವರ ಬಳಿಕ ಉಗ್ರಂ ಮಂಜು ದೊಡ್ಮನೆಯಿಂದ ಆಚೆ ಬಿದ್ದಿದ್ದರು. ಉಳಿದ ನಾಲ್ವರಲ್ಲಿ ಮತ್ತೊಬ್ಬರು ಆಚೆ ಬರಬೇಕಿತ್ತು.
ಆದರೆ ಮೂರನೇ ಸ್ಪರ್ಧಿಯ ಎಲಿಮಿನೇಷನ್ ಪ್ರಕ್ರಿಯೆಗೆ ಒಂದು ಆ್ಯಕ್ಟಿವಿಟಿ ನಡೆದಿದ್ದು, ನಾಲ್ವರನ್ನು ಒಂದು ಕೋಣೆಯಲ್ಲಿ ನಿಲ್ಲಿಸಿ ಹೊಗೆ ಬಿಡಲಾಗಿತ್ತು. ಹೊಗೆ ಕಮ್ಮಿಯಾದ ಬಾಕ್ಸ್‌ನಲ್ಲಿರುವ ಸೇಫ್ ಆದರು. ಈ ಪ್ರಕ್ರಿಯೆಯಲ್ಲಿ ಹೊಗೆ ಇರುವ ಬಾಕ್ಸ್‌ನಲ್ಲಿದ್ದ ಸ್ಪರ್ಧಿ ಮೋಕ್ಷಿತಾ ಎಲಿಮಿನೇಟ್ ಆಗಿದ್ದಾರೆ.
ಈ ಮೂಲಕ ಹನ್ನೊಂದು ಬಿಗ್‌ಬಾಸ್ ಸೀಸನ್‌ಗಳಲ್ಲಿ ಕೇವಲ ಒಬ್ಬ ಮಹಿಳಾ ಸ್ಪರ್ಧಿ ಮಾತ್ರ ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿದಿದ್ದರು. ಅದು ಬೇರೆ ಯಾರೂ ಅಲ್ಲ ಖ್ಯಾತ ನಟಿ ಶ್ರುತಿ. ಶ್ರುತಿಯವರನ್ನು ಹೊರತುಪಡಿಸಿ ಯಾವುದೇ ಮಹಿಳಾ ಸ್ಪರ್ಧಿ ವಿನ್ನರ್ ಆಗಿರಲಿಲ್ಲ. ಈ ಬಾರಿ ಮೋಕ್ಷಿತಾ ಗೆಲ್ಲುತ್ತಾರೆ ಅಂತಾನೇ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಮಂಜಣ್ಣನ ಬೆನ್ನಲ್ಲೇ ಸಹೋದರಿ ಮೋಕ್ಷಿತಾ ಕೂಡ ಆಚೆ ಬಂದಿದ್ದರು.
ಜನ ನನ್ನ ಕಾಪಾಡುತ್ತಾರೆ ಅಂತ ನಂಬಿಕೆ ಇದೆ
ಈ ಹಿಂದೆ ಬಿಗ್‌ಬಾಸ್ ಟ್ರೋಫಿ ನೋಡುತ್ತಾ ಮಾತನಾಡಿದ್ದ ಮೋಕ್ಷಿತಾ, ಬಿಗ್‌ಬಾಸ್ ಯೋಚನೆನೇ ತಲೆಯಲ್ಲಿ ಇರಲಿಲ್ಲ. ನಟನೆ ಕಡೆ ನನಗೆ ಆಸಕ್ತಿ ಇತ್ತು. ಬಿಗ್‌ಬಾಸ್‌ಗೆ ಹೋಗಬೇಕು ಅನ್ನೋದು ಅಮ್ಮನ ಕನಸ್ಸಾಗಿತ್ತು. ಅವರ ಕನಸ್ಸನ್ನು ಈಡೇರಿಸಬೇಕು ಅಂತ ನಾನು ಇಲ್ಲಿಗೆ ಬಂದಿದ್ದೀನಿ. ದೇವರ ಹಾಗೂ ಜನರ ಆರ್ಶೀವಾದದಿಂದ ನಾನು ಇಲ್ಲಿಗೆ ಬಂದಿದ್ದೀನಿ.
ಫಿನಾಲೆ ಹಂತಕ್ಕೆ ಬಂದ ಮೇಲೆ ಟ್ರೋಫಿ ಬಗ್ಗೆ ಇರೋ ಆಸೆ ಜಾಸ್ತಿಯಾಗಿದೆ. ಈ ಟ್ರೋಫಿ ಗೆಲ್ಲಬೇಕು ಅಂದ್ರೆ, ಅಮ್ಮ, ದೇವರ ಹಾಗೂ ಜನರ ಪ್ರೀತಿ, ಆರ್ಶೀವಾದ ಇದ್ರೆ ಇದು ನನಗೆ ಸೇರುತ್ತೆ. 12 ವಾರ ನಾಮಿನೇಟ್ ಆದ ನನ್ನನ್ನೂ ಜನ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಅಂದ್ರೆ ಖಂಡಿತವಾಗಲು ಜನ ನನ್ನ ಕಾಪಾಡುತ್ತಾರೆ ಅಂತ ನಂಬಿಕೆ ಇದೆ ಎಂದಿದ್ದರು.
ವೇದಿಕೆಯಲ್ಲಿ ಮೋಕ್ಷಿತಾ ಹೇಳಿದ್ದೇನು?
ಇವತ್ತು ಸ್ವಲ್ಪ ಆರಾಮವಾಗಿ ಇದ್ದೆ. ಪಾತ್ರವಾಗಿ ಜನರಿಗೆ ನಾನು ಇಷ್ಟವಾಗಿದ್ದೆ. ಮೋಕ್ಷಿತಾ ಆಗಿ ಇಲ್ಲಿ ಹೇಗಿರುತ್ತೇನೋ ಎನ್ನುವ ಪ್ರಶ್ನೆ ಇತ್ತು. ಒಳಗಡೆ ಇರುವವರು ಗೆಲ್ಲುವ ಅರ್ಹತೆ ಇರುವವರು ಎಂದಿದ್ದಾರೆ. ಕೊನೆಯ ವಾರ ನನಗೆ ತುಂಬಾ ತೃಪ್ತಿ ತಂದಿತ್ತು. ಮಂಜಣ್ಣ ಜತೆ ಜಗಳ ನನಗೆ ತೃಪ್ತಿ ತರಲಿಲ್ಲ.
ಇದನ್ನೂ ಓದಿ: 50 ಲಕ್ಷದಲ್ಲಿ ಹನುಮಂತನಿಗೆ ಸಿಗೋ ಹಣ ಎಷ್ಟು ಗೊತ್ತಾ?
ಇನ್ನು ಹೊರಗಡೆ ಇದನ್ನು ಸ್ಕ್ರಿಪ್ಟ್ ಶೋ ಎಂದಿದ್ದರು. ಅಮ್ಮ ಹೇಳಿದಕ್ಕೆ ನಾನು ಬಂದಿದ್ದೆ. ಅಮ್ಮನೇ ಬಲವಂತ ಮಾಡಿ ಬಿಗ್‌ಬಾಸ್ ಶೋಗೆ ಕಳುಹಿಸಿದ್ದರು. ಕೆಲವರು ಹೇಳುವ ಹಾಗೆ ಬಿಗ್‌ಬಾಸ್ ಸ್ಕ್ರಿಪ್ಟ್ ಶೋ ಅಲ್ಲವೇ ಅಲ್ಲ. ನಾವು ಇಲ್ಲಿ ಏನು ಮಾಡುತ್ತೇವೆ ಅದನ್ನೇ ತೋರಿಸಲಾಗುತ್ತದೆ ಎಂದಿದ್ದಾರೆ.
ಕ್ಯಾಪ್ಟನ್ ಆಗಿದ್ದ ಹನುಮಂತ ಅವರಿಂದ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟು ಟಾಪ್ 3ನೇ ರನ್ನರ್ ಅಪ್ ಆಗಿ ಆಚೆ ಬಂದಿದ್ದಾರೆ. ಸದ್ಯ ಮೋಕ್ಷಿತಾ ಪೈ ಅವರ ಅಭಿಮಾನಿಗಳ ಬಳಗ ದುಪ್ಪಟ್ಟಾಗಿದೆ.
BIG BOSS
50 ಲಕ್ಷದಲ್ಲಿ ಹನುಮಂತನಿಗೆ ಸಿಗೋ ಹಣ ಎಷ್ಟು ಗೊತ್ತಾ?
Published
8 hours agoon
27/01/2025By
NEWS DESK2ಬೆಂಗಳೂರು: ಬಿಗ್‌ಬಾಸ್ ಸೀಸನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ ಹನುಮಂತ ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. 50 ಲಕ್ಷ ರೂ. ಬಹುಮಾನ ಸಿಕ್ಕಿದರೂ ಅವರಿಗೆ ಪೂರ್ಣ ಪ್ರಮಾಣದ ಹಣ ಕೈ ಸೇರುವುದಿಲ್ಲ.
ನಗದು ಬಹುಮಾನ ಮೊತ್ತಕ್ಕೆ 30% ಗಿಫ್ಟ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಹೀಗಾಗಿ ಸಿಗುವ ಬಹುಮಾನದಲ್ಲಿ 30% ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ.
1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ, ಗೇಮ್ ಶೋಗಳು, ಲಾಟರಿಗಳು ಮತ್ತು ಅಂತಹುದೇ ಚಟುವಟಿಕೆಗಳಿಂದ ಗೆದ್ದ ಹಣವನ್ನು ಇತರ ಮೂಲಗಳಿಂದ ಬಂದ ಆದಾಯ ಎಂದು ವರ್ಗೀಕರಿಸಲಾಗಿದೆ.
ಕಾಯ್ದೆಯ ಸೆಕ್ಷನ್ 194B ಪ್ರಕಾರ ಈ ಗೆಲುವಿನ ಮೇಲೆ 30% ರಷ್ಟು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ವಿಜೇತರು 1% ರಷ್ಟು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸೆಸ್ ಅನ್ನು ಸಹ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ತೆರಿಗೆ ದರ 31.2% ಏರಿಕೆಯಾಗುತ್ತದೆ. ಇದರ ಜೊತೆ ಬಹುಮಾನದ ಹಣವು 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಹೆಚ್ಚುವರಿಯಾಗಿ 10% ಶುಲ್ಕ ಅನ್ವಯಿಸಲಾಗುತ್ತದೆ.
ಎಷ್ಟು ಸಿಗಬಹುದು?
ಈ ಮೊದಲು ಬೇರೆ ಬೇರೆ ಬಿಗ್ ಬಾಸ್ ಶೋ ವಿಜೇತರಿಗೆ ನಗದು ಬಹುಮಾನ ಮೌಲ್ಯ 50 ಲಕ್ಷ ರೂ., 1 ಕೋಟಿ ರೂ. ಇರುತ್ತಿತ್ತು. ಆದರೆ ಈಗ ಎಲ್ಲಾ ಬಿಗ್ ಬಾಸ್ ಶೋ ವಿಜೇತರಿಗೆ 50 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.
ಹನುಮಂತ ಅವರಿಗೆ ತೆರಿಗೆ, ಸೆಸ್ ಎಲ್ಲಾ ಕಡಿತಗೊಂಡು 34,40,000 ರೂ. ಸಿಗಬಹುದು. ಬಹುಮಾನದಲ್ಲಿ 15,60,000 ರೂ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗುತ್ತದೆ.
BIG BOSS
ಹನುಮಂತನ ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತನೇ ಗೆಲ್ಲುತ್ತಿದ್ದ- ರಜತ್
Published
9 hours agoon
27/01/2025By
NEWS DESK2ಬೆಂಗಳೂರು: ಬಿಗ್ ಬಾಸ್ ಕನ್ನಡ -11 ರ ಟ್ರೋಫಿಯನ್ನು ಹಳ್ಳಿಹೈದ ಹನುಮಂತು ಮುಡಿಗೇರಿಸಿಕೊಂಡಿದ್ದಾರೆ. ಅವರ ಗೆಲುವನ್ನು ಅಭಿಮಾನಿಗಳು ಅದ್ಧೂರಿಯಾಗಿಯೇ ಆಚರಿಸಿಕೊಂಡಿದ್ದಾರೆ.
ದೊಡ್ಮನೆ ಆಟಕ್ಕೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಹನುಮಂತು, ಟಾಕ್ – ಟಾಸ್ಕ್ ಎರಡರಲ್ಲೂ ಮೇಲುಗೈ ಸಾಧಿಸಿ 5 ಕೋಟಿ ವೋಟ್ಸ್ ಪಡೆದು ಬಿಗ್ ಬಾಸ್ ಕಪ್ ಎತ್ತಿಕೊಂಡಿದ್ದಾರೆ. ಅವರ ಗೆಲುವನ್ನು ದೊಡ್ಮನೆಯ ಸ್ಪರ್ಧಿಗಳು ಕೂಡ ಖುಷಿಪಟ್ಟಿದ್ದಾರೆ. ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ ರಜತ್ ಕಿಶನ್ ಅವರು ಹನುಮಂತು ಗೆಲುವಿನ ಬಗ್ಗೆ ಖುಷಿಯಿಂದಲೇ ಮಾತನಾಡಿದ್ದಾರೆ.
“ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ಲುತ್ತಿದ್ದ. ತೊಂದರೆ ಇಲ್ಲ. ಎಲ್ಲ ಆರಾಮವಾಗಿದ್ದೀವಿ. ಖುಷಿ ಆಗಿದ್ದೀವಿ. ಇಷ್ಟು ಸಣ್ಣ ಅವಧಿಯಲ್ಲಿ ಪ್ರೀತಿ – ಅಭಿಮಾನ ಸಿಗೋದು ತುಂಬಾ ಕಷ್ಟ. ಇದಕ್ಕೆ ಯಾವತ್ತೂ ಚಿರಋಣಿ” ಎಂದು ರಜತ್ ಹೇಳಿದ್ದಾರೆ.
LATEST NEWS
ದೈವದ ಮುನಿಸೇ ಈ ಗ್ರಾಮದಲ್ಲಿ ಜನರ ಸರಣಿ ಸಾವಿಗೆ ಕಾರಣವಾಯಿತಾ ?
ಕೋಟೆಕಾರು ಬ್ಯಾಂಕ್ ದರೋಡೆ ಕೇಸ್; ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಕಮಿಷನರ್
ಉಡುಪಿ : ಪ್ರತಿಷ್ಠಿತ ವಸತಿ ಶಾಲೆಗೆ ಬಾಂ*ಬ್ ಬೆ*ದರಿಕೆ ಇಮೇಲ್
ತಾಯಿಗೆ ತಕ್ಕ ಮಗ ; ಜೊತೆಯಾಗಿ ರಾಷ್ಟ್ರಪತಿ ಪುರಸ್ಕಾರ ಪಡೆದ ಸಾಧನಾ, ತರುಣ್
ಗುಯಿಲಿನ್ ಬಾರ್ ಸಿಂಡ್ರೋಮ್ಗೆ ಮಹಾರಾಷ್ಟ್ರದಲ್ಲಿ ಮೊದಲ ಬ*ಲಿ; ಏನಿದು ಜಿಬಿಎಸ್?
ಪ್ರೀತಿಗೆ ವಯಸ್ಸು ಮುಖ್ಯನಾ ? ವೃದ್ಧಾಶ್ರಮದಲ್ಲಿ ಅಜ್ಜ – ಅಜ್ಜಿ ಅದ್ದೂರಿ ಪ್ರೇಮವಿವಾಹ
Trending
- BIG BOSS5 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS4 days ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS5 days ago
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ
- BIG BOSS2 days ago
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್