LATEST NEWS
MAX ಸಿನಿಮಾ ಯಶಸ್ವಿ ಬೆನ್ನಲ್ಲೇ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಕಿಚ್ಚ ಸುದೀಪ್
Published
3 days agoon
By
NEWS DESK2ಮೈಸೂರು: ಮ್ಯಾಕ್ಸ್ ಸಿನಿಮಾ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ಇಂದು ಚಾಮುಂಡಿ ಬೆಟ್ಟದಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಚಾಮುಂಡಿಶ್ವೇರಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಮ್ಯಾಕ್ಸ್ ಮೂವಿ ಥಿಯೇಟರ್ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಸುದೀಪ್ ಅವರು ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.
ಸುದೀಪ್ ಅವರು ದೇವಾಲಯಕ್ಕೆ ಬರುತ್ತಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ದೇವಾಲಯದ ಬಳಿ ಸುದೀಪ್ ಬರುತ್ತಿದ್ದಂತೆ ಕಿಚ್ಚ ಕಿಚ್ಚ ಎಂದು ಫ್ಯಾನ್ಸ್ ಕೂಗಿದ್ದು ಅಲ್ಲದೇ ಕೇಕೆ, ಶಿಳ್ಳೆ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ತಮ್ಮ ಫೋನ್ಗಳಲ್ಲಿ ನಟನ ಫೋಟೋ ತೆಗೆದುಕೊಂಡಿದ್ದಾರೆ. ಇನ್ನು ಸುದೀಪ್ ಅವರು ದೇವಾಲಯದ ಒಳಗೆ ಹೋಗುವಾಗ ಪುಟ್ಟ ಮಕ್ಕಳಿಗೆ ಶೇಕ್ ಹ್ಯಾಂಡ್ ಮಾಡಿರುವುದು ಮೆಚ್ಚುಗೆಗೆ ಕಾರಣವಾಯಿತು.
ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಹೊರ ಬಂದ ಸುದೀಪ್ ಅವರು ಅಭಿಮಾನಿಗಳ ಕಡೆ ಕೈ ಮಾಡಿದರು. ಕೊನೆಯದಾಗಿ ಬೆಟ್ಟದಿಂದ ತೆರಳುವಾಗ ಕಾರು ಮೇಲೆ ಹತ್ತಿ ಸುತ್ತಲು ನಿಂತಿದ್ದ ಮತ್ತೆ ಫ್ಯಾನ್ಸ್ಗೆ ಮತ್ತೊಂದು ಬಾರಿ ಫ್ಲೈಯಿಂಗ್ ಕಿಸ್ ಕೊಟ್ಟು, ಕೈ ಬೀಸಿ ತೆರಳಿದರು.
LATEST NEWS
ಹೊಸ ವರ್ಷಕ್ಕೆ ರಾಜ್ಯದಲ್ಲಿ ಮದ್ಯದ ಹೊಳೆ : ನಿನ್ನೆ ಒಂದೇ ದಿನ ಭರ್ತಿ 308 ಕೋಟಿ ರೂ. ಮದ್ಯ ಸೇಲ್.!
Published
16 minutes agoon
01/01/2025By
NEWS DESK2ಬೆಂಗಳೂರು: ರಾಜ್ಯದಲ್ಲಿ ಹೊಸವರ್ಷ 2025 ನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಲಾಗಿದ್ದು, ಈ ನಡುವೆ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.
ಹೌದು, 2024 ರ ಡಿಸೆಂಬರ್ 31 ರಂದು ರಾಜ್ಯಾದ್ಯಂತ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿದೆ. 2023 ರ ಡಿಸೆಂಬರ್ 31 ರಂದು 193 ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿತ್ತು. 2,92,339 ಬಿಯರ್ ಬಾಕ್ಸ್ ಮಾರಾಟದಿಂದ 57.75 ಕೋಟಿ ರೂ. ಒಟ್ಟು 7,76,042 ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಬಂದಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡಿಸೆಂಬರ್ 28ರ ಶನಿವಾರ 408.53 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಡಿಸೆಂಬರ್ 27ರಂದು ರಜೆ ಘೋಷಣೆ ಮಾಡಿದ್ದರಿಂದ ಮದ್ಯ ಖರೀದಿ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 28 ರಂದು ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ರಾಜ್ಯಾದ್ಯಂತ ಡಿ. 28ರಂದು 6,22,062 ಕೇಸ್ ವಿಸ್ಕಿ ಮತ್ತು ಇತರ ಸ್ಪಿರಿಟ್ ಖರೀದಿ ಮಾಡಲಾಗಿದೆ. 4,04,998 ಕೇಸ್ ಬಿಯರ್ ಸೇರಿದಂತೆ 10,27,060 ಕೇಸ್ ಮದ್ಯ ಮಾರಾಟ ಆಗಿದೆ. ಇದರಲ್ಲಿ 80.58 ಕೋಟಿ ಮೊತ್ತದ ಬಿಯರ್ ಇದ್ದರೆ, 327,50 ಕೋಟಿ ಮೌಲ್ಯದ ಸ್ಪಿರಿಟ್ಸ್ ಮಾರಾಟವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
LATEST NEWS
ಸೇನಾ ವಾಹನ ದು*ರಂತ ಪ್ರಕರಣ; ಹುತಾತ್ಮ ಯೋಧ ದಿವಿನ್ ಅಂತ್ಯಕ್ರಿಯೆ
Published
29 minutes agoon
01/01/2025By
NEWS DESK3ಮಂಗಳೂರು/ಮಡಿಕೇರಿ: ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ನಡೆದ ಸೇನಾ ವಾಹನ ದುರಂತದಲ್ಲಿ ಗಂ*ಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕೊಡಗಿನ ಯೋಧ ದಿವಿನ್ (28) ಭಾನುವಾರ ರಾತ್ರಿ ಹುತಾತ್ಮರಾಗಿದ್ದಾರೆ. ಅವರ ಪಾರ್ಥಿ*ವ ಶರೀರ ಹೂಟ್ಟುರು ತಲುಪಿದೆ.
ಓದಿದ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಹುತಾತ್ಮ ಯೋಧ ದಿವಿನ್ ವಿದ್ಯಾಭ್ಯಾಸ ಮಾಡಿದ ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಕೆಲ ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.
ಬಳಿಕ ಕುಶಾಲನಗರದಿಂದ ನೇರವಾಗಿ ಆಲೂರು ಸಿದ್ದಾಪುರಕ್ಕೆ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತದೆ.
ಇದನ್ನೂ ಓದಿ: ಸೇನಾ ವಾಹನ ಅಪಘಾತ ಪ್ರಕರಣ : ಕೋಮಾದಲ್ಲಿದ್ದ ಕೊಡಗಿನ ಯೋಧ ವಿಧಿವಶ..!
ಬಳಿಕ ದಿವಿನ್ ಅವರ ತೋಟದಲ್ಲಿರುವ ಅವರ ತಂದೆ ಸಮಾಧಿ ಪಕ್ಕದಲ್ಲಿ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂ*ತದಲ್ಲಿ ಕೊಡಗಿನ ಯೋಧ ಗಂ*ಭೀರ ಗಾಯಗೊಂಡಿದ್ದರು. ದುರಂತದಲ್ಲಿ ಕರ್ನಾಟಕದ ಮೂವರು ಸೈನಿಕರು ಹುತಾತ್ಮರಾಗಿದ್ದರು.
LATEST NEWS
ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್ !
Published
59 minutes agoon
01/01/2025By
NEWS DESK3ಮಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿದ ಜನರಿಗೆ ಈಗ ಗೂಡ್ ನ್ಯೂಸ್ ಒಂದು ಸಿಕ್ಕಿದೆ. ಎಲ್ ಪಿಜಿ ಗ್ಯಾಸ್ ಸಿಲಿಂಡರ್ ರಿಫಿಲ್ ಮತ್ತಷ್ಟು ಅಗ್ಗವಾಗಿದೆ.
ಸರ್ಕಾರಿ ತೈಲ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು, ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಲ್ಲಿದೆ.
ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
ಪ್ರತಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 14.50 ರೂಪಾಯಿ ಇಳಿಕೆ ಆಗಿದೆ. ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ 1818.50 ರೂಪಾಯಿಯಿಂದ 1804 ರೂಪಾಯಿಗೆ ಇಳಿಕೆ ಆಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ ಹೊಸ ಬೆಲೆ ಪ್ರಕಟಿಸುತ್ತವೆ.
ಹೊಸ ವರ್ಷದಂದು ತಮ್ಮ ಗ್ರಾಹಕರಿಗೆ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಕೋಲ್ಕತ್ತಾದಲ್ಲಿ 1911 ರೂಪಾಯಿಗೆ ಇಳಿಕೆ ಆಗಿದೆ. ಈ ಮುಂಚೆ 1927 ರೂಪಾಯಿ ಪಾವತಿ ಮಾಡಬೇಕಾಗಿತ್ತು. ಮುಂಬೈನಲ್ಲಿ ಸಿಲಿಂಡರ್ ಬೆಲೆ 1756 ರೂಪಾಯಿಗೆ ಇಳಿಕೆ ಆಗಿದೆ. ಚೆನ್ನೈನಲ್ಲಿ ಇವತ್ತಿನಿಂದ 19 ಕೆಜಿ ಸಿಲಿಂಡರ್ಗೆ 1966 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಈ ಮೂಲಕ ಹೊಸ ವರ್ಷದ ಸಂಭ್ರಮದಲ್ಲಿದ್ದ ಗ್ರಾಹಕರಿಗೆ ಎಲ್ ಪಿಜಿ ಬೆಲೆ ಇಳಿಕೆಯಾಗಿರುವುದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.
LATEST NEWS
ಹೊಸ ವರ್ಷದ ಅಮಲಿನಲ್ಲಿ ಹಾಸ್ಟೆಲ್ ದಾರಿ ಕಾಣದೆ ಕಂಗಾಲಾದ ವಿದ್ಯಾರ್ಥಿಗಳು
ಕಿರಿಬತಿ ದ್ವೀಪ ರಾಷ್ಟ್ರದಿಂದ ಹೊಸ ವರ್ಷ ಆರಂಭ
ಭೀ*ಕರ ರಸ್ತೆ ಅ*ಪಘಾತ ; ಯಕ್ಷಗಾನ ಯುವ ಕಲಾವಿದ ಸಾ*ವು
ಮೈಸೂರು: ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷ; ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಸೂಚನೆ
ಮಕ್ಕಳನ್ನು ಬಾವಿಗೆಸೆದು ಕೊಲೆ ಮಾಡಿದ ಆರೋಪಿಗೆ ಮರಣ ದಂಡನೆ..!
ಉಡುಪಿ : ಶ್ರೀಕೃಷ್ಣ ಮಠದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ದಾಂ*ಧಲೆ; 8 ಮಂದಿಯ ಬಂಧನ
Trending
- DAKSHINA KANNADA5 days ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- BIG BOSS4 days ago
ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?
- DAKSHINA KANNADA4 days ago
‘ದಿ ಅಕ್ಸಿಡೆಂಟಲ್ PM’ ಸುಳ್ಳಿನ ಕಂತೆ..! ಕ್ಷಮಿಸಿ ಎಂದ ಚಿತ್ರ ನಿರ್ಮಾಪಕ..!
- BIG BOSS3 days ago
ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..!