ಮಂಗಳೂರು: ಬಿಗ್ ಬಾಸ್ ಕನ್ನಡದಲ್ಲಿ ಧನರಾಜ್ ಮತ್ತು ರಜತ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಧನರಾಜ್ ಮೇಲೆ ಹಲ್ಲೆ ಮಾಡಲು ರಜತ್ ಮುಂದಾಗಿದ್ದರು. ಆದರೆ ಮನೆಯವರು ಇಬ್ಬರನ್ನೂ ತಡೆದರು. ಶನಿವಾರದ ಎಪಿಸೋಡ್ ಗೆ ಬಂದಿದ್ದ ಸುದೀಪ್, ಇಬ್ಬರಿಗೂ ಶಿಕ್ಷೆ ನೀಡಿದ್ದಾರೆ.
ಈ ವಾರದ ಟಾಸ್ಕ್ ನಲ್ಲೂ ಎಂದಿನಂತೆ ರೂಲ್ಸ್ ಬ್ರೇಕ್ ಮಾಡಲಾಗಿದೆ. ಕಳಪೆ ಪಟ್ಟ ಕಟ್ಟಿಕೊಂಡಿದ್ದ ತ್ರಿವಿಕ್ರಮ್, ಚೈತ್ರಾ ಕುಂದಾಪುರ ಜೈಲಿನಿಂದ ಹೊರಗೆ ಬಂದಿದ್ದಾರೆ. ಜೊತೆಗೆ ರಜತ್, ಧನರಾಜ್ ಅವರ ಹೊಡಿಬಡಿ ಆಟ ಈ ವಾರದ ಪಂಚಾಯ್ತಿಯ ಹಾಟ್ ಟಾಪಿಕ್ ಆಗಿದೆ.
ಇದನ್ನೂ ಓದಿ: ವಿಚ್ಛೇದನಕ್ಕಾಗಿ ನ್ಯಾಯಾಲಯ ಮೆಟ್ಟಿಲೇರಿದ ಜೋಡಿಗಳಿಗೆ ಮರು ಮದುವೆಯ ಭಾಗ್ಯ
ನಿನ್ನೆ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಈ ವಿಷಯವಾಗಿ ಮಾತನಾಡಿದರು. ‘ನೀವೇನು ಮನುಷ್ಯರಾಗಿ ಇರಲು ಮನೆಯ ಒಳಗೆ ಹೋಗಿದ್ದೀರೋ ಅಥವಾ ಪ್ರಾಣಿಗಳಾಗಿ ಇರಲು ಮನೆಗೆ ಹೋಗಿದ್ದೀರೋ?’ ಎಂದು ಪ್ರಶ್ನೆ ಮಾಡಿದರು. ಮಾತು ಮುಂದುವರೆಸಿ, ಧನರಾಜ್ಗೆ, ‘ನೀವೇಕೆ ರಜತ್ ಕೆನ್ನೆ ತಟ್ಟಿ ಅವರಿಗೆ ಕೋಪ ಬರಿಸುವ ಪ್ರಯತ್ನ ಮಾಡಿದಿರಿ’ ಎಂದು ಪ್ರಶ್ನಿಸಿದರು. ಇನ್ನು ರಜತ್ಗೆ ನಿಮ್ಮ ನಾಲಗೆ ಮೇಲೆ ಹಿಡಿತ ಇರಲಿ, ಚೆನ್ನಾಗಿ ಆಡುತ್ತಿದ್ದೀರಿ ಆದರೆ ಆಡುವ ಭಾಷೆ ಮೇಲೆ ಹಿಡಿತ ಇರಲಿ’ ಎಂದರು.
ಧನರಾಜ್ ಹಾಗೂ ರಜತ್ ಗೆ ಪರಸ್ಪರ ಅಪ್ಪಿಕೊಂಡು ರಾಜಿ ಆಗುವಂತೆ ಹೇಳಿದ ಸುದೀಪ್, ಕೊನೆಗೆ ಇಬ್ಬರಿಗೂ ಶಿಕ್ಷೆಯೊಂದನ್ನು ನೀಡಿದರು. ಒಂದು ಚಕ್ರಗಳಿರುವ ಜೈಲು ತರಿಸಿ, ಅದರಲ್ಲಿ ರಜತ್ ಸೇರಿಕೊಳ್ಳುವಂತೆ ಹೇಳಿದರು. ಮುಂದಿನ ಆದೇಶ ಬರುವವರೆಗೆ ರಜತ್ ಆ ಜೈಲಿನಲ್ಲಿಯೇ ಇರಬೇಕು. ಆ ಚಕ್ರಗಳಿರುವ ಜೈಲನ್ನು ಧನರಾಜ್ ಮನೆಯಲ್ಲೆಲ್ಲ ತಳ್ಳಿಕೊಂಡು ಓಡಾಡಬೇಕು. ರಜತ್ ಎಲ್ಲಿ ಹೇಳುತ್ತಾರೋ ಅಲ್ಲಿಗೆ ಆ ಜೈಲನ್ನು ತಳ್ಳಬೇಕು ಎಂಬ ಶಿಕ್ಷೆ ನೀಡಲಾಗಿದೆ.
ಯಾವ ಸ್ಪರ್ಧಿ ಮನೆಯಿಂದ ಆಚೆ ಹೋಗ್ತಾರೆ ?
ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್, ರಜತ್, ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ಕ್ಯಾಪ್ಟನ್ ಗೌತಮಿ ಜಾಧವ್, ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದಾರೆ.
ಇನ್ನೂ 8 ಮಂದಿ ಪೈಕಿ ಈ ವಾರ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಇದರ ಮಧ್ಯೆ ಕಳೆದ ವಾರ ಯಾವ ಸ್ಪರ್ಧಿ ಕೂಡ ಎಲಿಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ಡಬಲ್ ಎಲಿಮಿನೇಷನ್ ಇರುತ್ತಾ ಎಂಬ ಭಯ ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಕಾಡುತ್ತಿದೆ.