ಮತ್ತೆ ಧೂಳೆಬ್ಬಿಸಲು ಸಿದ್ಧವಾಗಿದೆ ಕೆಜಿಎಫ್ – ಮಲ್ಪೆ ಆಸುಪಾಸಿನಲ್ಲಿ ಬಿರುಸಿನ ಚಿತ್ರೀಕರಣ..!
ಉಡುಪಿ : ಸ್ಯಾಂಡಲ್ ವುಡ್ ಅಷ್ಟೇ ಅಲ್ಲ ಇಡೀ ಭಾರತ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾದ ಕೆಜಿಎಫ್ ಚಾಪ್ಟರ್ -2 ನ 2ನೇ ಹಂತದ ಶೂಟಿಂಗ್ ಆರಂಭವಾಗಿದೆ.
ಚಿತ್ರೀಕರಣದ ಕೊನೆಯ ಹಂತಕ್ಕೆ ಬಂದಿರುವ ಚಿತ್ರದ ಶೂಟಿಂಗ್ ಅಖಾಡಕ್ಕೆ ರಾಕಿ ಭಾಯ್ ಎಂಟ್ರಿ ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2018ರಲ್ಲಿ ವಿಶ್ವದಾದ್ಯಂತ ಸೌಂಡ್ ಮಾಡಿತ್ತು.
ಇದೀಗ ಕೆಜಿಎಫ್ 2 ಮತ್ತೆ ಧೂಳೆಬ್ಬಿಸಲು ತಯಾರಾಗುತ್ತಿದೆ. ಲಾಕ್ಡೌನ್ ಫ್ರೀ ಆದ ಬಳಿಕ ಇದೀಗ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು, ಚಿತ್ರದ ಜಬರ್ದಸ್ತ್ ಸೀಕ್ವೆನ್ಸ್ ಗಳ ಶೂಟಿಂಗ್ ಗಾಗಿ ಚಿತ್ರ ತಂಡ ಕೃಷ್ಣ ನಗರಿ ಉಡುಪಿಯ ಮಲ್ಪೆ ಬೀಚ್ ನಲ್ಲಿ ಬೀಡುಬಿಟ್ಟಿದೆ.
ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿ ಬಿಡುವಿಲ್ಲದೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಕಪ್ಪು ಬಣ್ಣದ 8 – 10ಪಜೇರೋ ಕಾರುಗಳು, ಐದಾರು ಬೋಟುಗಳು ಶೂಟಿಂಗ್ ಗಾಗಿ ಬಳಸಿಕೊಳ್ಳಲಾಗುತ್ತಿದ್ದು ರಾಕಿಂಗ್ ಸ್ಟಾರ್ ಯಶ್ ಬಿಡುವಿಲ್ಲದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.
ಇನ್ನು ರಾಕಿ ಬಾಯ್ ನನ್ನು ನೋಡಬೇಕು ಸೆಲ್ಫಿ ತೆಗಿಬೇಕು ಅಂತ ನೂರಾರು ಮಂದಿ ಪಡುಕೆರೆ ಕಡಲಕಿನಾರೆಗೆ ಬಂದಿದ್ದರೆ ಅಲ್ಲಿ ಭದ್ರತೆಗಾಗಿ ನೇಮಿಸಿದ ನೂರು ಮಂದಿ ಬೌನ್ಸರ್ ಗಳು ಬಿಡಬೇಕೆ..?
ನಮ್ಮ "ರಾಕಿಂಗ್ ಸ್ಟಾರ್ ಯಶ್ ಬಾಸ್" ಅವರು #KGFChapter2 ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲು ಮಂಗಳೂರಿಗೆ ತೆರಳಲು ಬೆಂಗಳೂರು ಏರ್ಪೋರ್ಟ್ ಗೆ ಆಗಮಿಸಿದ ಕ್ಷಣ..!!
BOSS at Bangalore Airport
Going to Mangalore for KGF Chapter 2 Shoot..!!@TheNameIsYash #YashBOSS pic.twitter.com/dAW8qz7LuK— Yash The Brand™ (@YashBoss182) October 8, 2020
ಅದೂ ಅಲ್ಲದೇ ಮೊಬೈಲ್ ಚಿತ್ರೀಕರಣ ಕೂಡ ಮಾಡದಂತೆ ತಡೆ ಒಡ್ಡಿದ್ದಾರೆ. ಮಲ್ಪೆ ಬೀಚ್, ಮಲ್ಪೆ ಬಂದರು, ಪಡುಕೆರೆ ಬ್ರಿಜ್ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ.
ಅಂದಹಾಗೇ ಮಹಾರಾಷ್ಟ್ರದಲ್ಲಿ ಕೊರೋನ ಅಟ್ಟಹಾಸ ಜೋರಾಗಿರುವುದರಿಂದ ಮಲ್ಪೆ-ಪಡುಕೆರೆ ಕಡಲ ತೀರವನ್ನು ಮುಂಬೈ ಮಾದರಿಯಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಶೀಘ್ರದಲ್ಲೇ ಚಿತ್ರಿಕರಣ ಪೂರ್ಣಗೊಳಿಸಿ ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರಲು ಚಿತ್ರ ತಂಡ ಕಾರ್ಯೋನ್ಮುಖವಾಗಿದೆ.