Sunday, March 26, 2023

ಕೇರಳ ಕೋಯಿಕ್ಕೋಡ್​ ಏರ್​ ಇಂಡಿಯಾ ವಿಮಾನ ದುರಂತ; ಸಾವಿನ ಸಂಖ್ಯೆ 20ಕ್ಕೆ ಏರಿಕೆ

ಕೇರಳ ಕೋಯಿಕ್ಕೋಡ್​ ಏರ್​ ಇಂಡಿಯಾ ವಿಮಾನ ದುರಂತ; ಸಾವಿನ ಸಂಖ್ಯೆ 20ಕ್ಕೆ ಏರಿಕೆ

ಕಾಸರಗೋಡು : ದುಬೈನಿಂದ 180 ಮಂದಿ ಪ್ರಯಾಣಿಕರನ್ನು ಹೊತ್ತು ಬಂದ ಏರ್‌ ಇಂಡಿಯಾ ವಿಮಾನ ನಿನ್ನೆ ಸಂಜೆ ಕೇರಳದ ಕೋಯಿಕ್ಕೋಡ್​ನ ಕರಿಪುರ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗುವಾಗ ರನ್​ವೇಯಿಂದ ಜಾರಿ ನಡೆದ ದುರ್ಘಟನೆಯಲ್ಲಿ ಸತ್ತವರ ಸಂಖ್ಯೆ 17 ಕ್ಕೇರಿದೆ.

ಈ ಅವಘಡದಲ್ಲಿ ವಿಮಾನದ ಇಬ್ಬರು ಪೈಲಟ್‌ ಗಳು ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ 180 ಮಂದಿ ಪ್ರಯಾಣಿಕರು ಇದ್ದರು. ಅವಘಡದಲ್ಲಿ ಇಬ್ಬರು ಪೈಲಟ್​ಗಳು​ ಸೇರಿದಂತೆ 20 ಮಂದಿ ಮೃತಪಟ್ಟಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮಾಹಿತಿ ನೀಡಿದೆ.

ನಿನ್ನೆ ರಾತ್ರಿಯಿಡಿ ನಡೆದ ಕಾರ್ಯಾಚರಣೆಯಲ್ಲಿ 24 ಆ್ಯಂಬುಲೆನ್ಸ್​ಗಳು ಹಾಗೂ ಅಗ್ನಿ ಶಾಮಕ ವಾಹನಗಳು , ಇತರ ರಕ್ಷಣಾ ಪಡೆಗಳು ಭಾಗವಹಿಸಿದ್ದುವು.

ದುರ್ಘಟನೆಯಲ್ಲಿ 35 ಮಂದಿ ಗಂಭೀರ ಗಾಯಗೊಂಡಿದ್ದು ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ದುರ್ಘಟನೆಯ ಸಂದರ್ಭ ವಿಮಾನಕ್ಕೆ ಬೆಂಕಿ ಹತ್ತದ ಕಾರಣ ಹೆಚ್ಚಿನ ಸಾವುಗಳು ತಪ್ಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದುರ್ಘಟನೆಯ ಬಗ್ಗೆ ಡಿಜಿಸಿಎ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.ದುರ್ಘಟನೆಗೆ ರಾಷ್ಟ್ರಪತಿ ರಮನಾಥ್ ಕೋವಿಂದ್, ಪ್ರಧಾನಿ ಮೋದಿ ಸಹಿತ ಅನೆಕ ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ.

ಈ ದುರಂತ ತಪ್ಪಿಸಲು ವಿಮಾನದ ಪೈಲಟ್ ಬಹಳ ಹರಸಾಹಸ ಮಾಡಿರುವುದು ಬೆಳಕಿಗೆ ಬಂದಿದೆ. ಮಳೆಯ ಮಧ್ಯೆ ಉಬ್ಬಿದ ರನ್ ವೇಯಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪೈಲಟ್ ಎರಡು ಬಾರಿ ಪ್ರಯತ್ನಿಸಿದ್ದು ತಿಳಿದುಬಂದಿದೆ. ಅಷ್ಟೇ ಅಲ್ಲ, ವಿಮಾನ ಇಳಿಯುವ ಮುನ್ನ ಹಲವು ಬಾರಿ ಏರ್​ಪೋರ್ಟ್ ಅನ್ನು ವಿಮಾನ ಸುತ್ತಾಡಿದೆ. ಜಾಗತಿಕವಾಗಿ ವಿಮಾನಗಳನ್ನ ಲೈವ್ ಆಗಿ ಟ್ರ್ಯಾಕ್ ಮಾಡುವ FlightRadar24 ಎಂಬ ಫ್ಲೈಟ್ ಟ್ರ್ಯಾಕರ್ ವೆಬ್​ಸೈಟ್​ನಲ್ಲಿನ ಮಾಹಿತಿಯಲ್ಲಿ ಇದು ಬೆಳಕಿಗೆ ಬಂದಿದೆ. ಈ ದುರಂತದಲ್ಲಿ ಬದುಕುಳಿದವರೂ ಕೂಡ ಇದನ್ನು ದೃಢಪಡಿಸಿದ್ದಾರೆ. ವಿಮಾನ ಕೆಳಗಿಳಿಯುವ ಮುನ್ನ ಹಲವು ಬಾರಿ ಸುತ್ತಾಡಿತು. ರನ್ ವೇಗೆ ಇಳಿದಾಗ ವಿಮಾನ ಜಾರಿ ಕೆಳಗಿನ ಹಳ್ಳಕ್ಕೆ ಬಿದ್ದಿತು ಎಂದು ಪ್ರಯಾಣಿಕರು ಈ ಘೋರ ದುರಂತ ಘಟನೆಯನ್ನು ವಿವರಿಸಿದ್ಧಾರೆ.

 

LEAVE A REPLY

Please enter your comment!
Please enter your name here

Hot Topics