kerala
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಮುಗಿಬಿದ್ದ ಮಾಲಾಧಾರಿಗಳು
Published
9 hours agoon
ಮಂಗಳೂರು/ಪತ್ತಿನಂತಿಟ್ಟ: ಕೇರಳದ ಪ್ರಮುಖ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳ ಭೇಟಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೇರಳ ಹೈಕೋರ್ಟ್ ನಿರ್ದೇಶನವನ್ನು ಪಾಲಿಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ), ಮಕರವಿಳಕ್ಕು ಹಬ್ಬಕ್ಕೆ ಸಕಲ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಂಡಿದೆ. 2025ರ ಜನವರಿ 8 ರಿಂದ 15 ರವರೆಗೆ ಪ್ರತಿದಿನ 5 ಸಾವಿರ ಭಕ್ತರಿಗೆ ಮಾತ್ರ ಸನ್ನಿಧಾನಂ ಸ್ಪಾಟ್ ಬುಕಿಂಗ್ ಅನ್ನು ಸೀಮಿತಗೊಳಿಸಿದೆ.
ಮಕರ ಜ್ಯೋತಿ ಎಂದು ಕರೆಯಲ್ಪಡುವ ಪೊನ್ನಂಬಲಮೇಡಿನ ಕರ್ಪೂರದ ಪೂಜೆಯೇ ಮಕರವಿಳಕ್ಕು ಹಬ್ಬವಾಗಿದೆ. ಪ್ರತಿ ವರ್ಷ ಮಕರವಿಳಕ್ಕು ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುತ್ತಾರೆ. ದೇಶದ ನಾನಾ ಭಾಗಗಳಿಂದ ಅಯ್ಯಪ್ಪ ಮಾಲಾಧಾರಿಗಳು ಆಗಮಿಸಿ ಮಕರ ಜ್ಯೋತಿ ಕಣ್ತುಂಬಿಕೊಳ್ಳಲು ಕಾಯುತ್ತಾರೆ. ಇಂದು (ಜ.14) ಕಾಣುವ ಮಕರ ಜ್ಯೋತಿಯ ಕಣ್ತುಂಬಿಸಿಕೊಳ್ಳಲು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬೆಟ್ಟದ ದೇವಾಲಯವಾದ ಶಬರಿಮಲೆಯಲ್ಲಿ ಸೇರಿದ್ದಾರೆ. ಸಾರ್ವಜನಿಕ ಹಿತ ದೃಷ್ಠಿಯಿಂದ ಇಂದು 40,000 ಬುಕಿಂಗ್ ಗೆ ಮಿತಿಗೊಳಿಸಲಾಗಿದೆ.
ಇದನ್ನೂ ಓದಿ : ಎಡಪದವು : ಇರುಮುಡಿ ಕಟ್ಟಿ, ಶಬರಿಮಲೆಗೆ ಹೊರಟ ಅಯ್ಯಪ್ಪ ಮಾಲಾಧಾರಿಗಳು
ಡಿ. 30 ರಂದು ಸುಮಾರು 15,000 ಭಕ್ತರು ಸರತಿ ಸಾಲನ್ನು ದಾಟಿ ಬಂದು ನೇರವಾಗಿ ದೇವಸ್ಥಾನದ 18 ಮೆಟ್ಟಿಲುಗಳ ಬಳಿಗೆ ಪ್ರವೇಶಿಸಲು ಮುಂದಾದಾಗ ಭಾರಿ ನೂಕುನುಗ್ಗಲು ಉಂಟಾಗಿತ್ತು. ಅವ್ಯವಸ್ಥೆಯನ್ನು ಖಂಡಿಸಿ ಹಲವಾರು ಭಕ್ತರು ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ಬಳಿಕ ಎಚ್ಚೆತ್ತಿರುವ ಟಿಡಿಬಿ, ಭಕ್ತರು ಸರತಿ ಸಾಲಿನಲ್ಲೇ ಬರಲು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಭದ್ರತೆಯನ್ನು ಹೆಚ್ಚಿಸಿದೆ. ಭಕ್ತರ ದಟ್ಟಣೆಯ ಬಗ್ಗೆ ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.
kerala
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ 3,235 ಕಿ.ಮೀ. ನಡೆದು ಬಂದ ಭಕ್ತರು
Published
2 days agoon
12/01/2025ಮಂಗಳೂರು/ಪತ್ತನಂತಿಟ್ಟ: ಭಕ್ತರಿಬ್ಬರು ವಿಶ್ವಶಾಂತಿಗಾಗಿ ಪ್ರಾರ್ಥಿಸಿ ಸುಮಾರು 223 ದಿನಗಳ ಕಾಲ 3,235 ಕಿ.ಮೀ ದೂರ ಬರಿಗಾಲಲ್ಲಿ ನಡೆದುಕೊಂಡು ಬಂದು ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ನಿನ್ನೆ (ಜ.11) ತಲುಪಿದ್ದಾರೆ.
ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಯ ಮುಖಾಂತರ ಈ ವಿಚಾರ ತಿಳಿದಿದೆ.
ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿರುವ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯವೂ ಒಂದು. ದಟ್ಟ ಕಾಡಿನ ನಡುವೆ ಈ ದೇವಾಲಯವಿದ್ದು, ಪ್ರಾಕೃತಿಕವಾಗಿ ಎಷ್ಟು ಸುಂದರವಾಗಿದೆಯೋ ಶ್ರದ್ಧಾ ಭಕ್ತಿಗೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಅಯ್ಯಪ್ಪ ಮಾಲೆ ಧರಿಸುವುದನ್ನು ಅತ್ಯಂತ ಪವಿತ್ರವಾದ ಕೆಲಸ ಎಂದು ಪರಿಗಣಿಸಲಾಗಿದೆ. ಮಾಲಾಧಾರಿಗಳು ಕಠೋರ ಜೀವನಶೈಲಿ ನಡೆಸಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಆದರೆ ಈ ಭಕ್ತರಿಬ್ಬರು ಅತೀ ಕಠಿಣ ವೃತಾಚರಣೆ ಮಾಡಿ ಸ್ವಾಮಿಯ ದರ್ಶನ ಪಡೆಯುವ ಮೂಲಕ ಸುದ್ಧಿಯಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯ ರಾಮದಾಸ್ ನಗರದ ನಿವಾಸಿಗಳಾದ ಸನತ್‌ಕುಮಾರ್ ನಾಯಕ್ ಮತ್ತು ಸಂಪತ್‌ಕುಮಾರ್ ಶೆಟ್ಟಿ ಅವರು 2024ರ ಮೇ 26ರಂದು ಕೇರಳದಿಂದ ಬದರಿನಾಥಕ್ಕೆ ರೈಲಿನಲ್ಲಿ ಪ್ರಯಾಣಿಸಿದರು. ಜೂನ್ 3ರಂದು ತಮ್ಮ ‘ಇರುಮುಡಿ’ ಹೊತ್ತು ಅಲ್ಲಿಂದ ಶಬರಿಮಲೆಗೆ ಪ್ರಯಾಣ ಬೆಳಸಿದ್ದರು. ನಿನ್ನೆ ದೇವಸ್ಥಾನ ತಲುಪಿ ದೇವರ ದರ್ಶನ ಪಡೆದಿದ್ದಾರೆ.
DAKSHINA KANNADA
ಶೇರು ಮಾರ್ಕೆಟ್ ನಲ್ಲಿ ಹಣ ತೊಡಗಿಸಿದರೆ ಅಧಿಕ ಲಾಭಾಂಶ ಆಮಿಷ
Published
4 days agoon
10/01/2025By
NEWS DESK3ಮಂಗಳೂರು : ವಾಟ್ಸಾಪ್‌ನಲ್ಲಿ ಪರಿಚಯವಾದ ವ್ಯಕ್ತಿಗೆ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬ ಆಮಿಷವೊಡ್ಡಿ 10 ಲಕ್ಷ ರೂಪಾಯಿ ವಂಚಿಸಿದ್ದ ಪ್ರಕರಣವೊಂದರಲ್ಲಿ ಕೇರಳ ಮೂಲದ ಯುವಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೇರಳದ ತ್ರಿಶೂರ್‌ನ ಮಟ್ಟೂರು ನೂಲುವ್ಯಾಲಿಯ ಕೈಪುಝ ಹೌಸ್ ನಿವಾಸಿ ನಿಧಿನ್ ಕುಮಾರ್ ಕೆ.ಎಸ್ ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಶೋಧ ನಡೆದಿದೆ.
ಈತ ಕಳೆದ ವರ್ಷ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗ ಬಹುದೆಂದು ನಂಬಿಸಿ ವ್ಯಕ್ತಿಯೊಬ್ಬರಿಂದ 10,32,000 ರೂಪಾಯಿಗಳನ್ನು ಹಂತಹಂತವಾಗಿ ಪಡೆದುಕೊಂಡಿದ್ದ. ಈ ಬಗ್ಗೆ ಮಂಗಳೂರಿನ ಸೆನ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದರು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಳಿ ದುರಂತ
ಪ್ರಕರಣಕ್ಕೆ ಸಂಬಂಧಿಸಿ ದೂರುದಾರರ ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆಯಾದ ಬಗ್ಗೆ ಮತ್ತು ಅದು ಯಾರ ಖಾತೆಗೆ ಪಾವತಿಯಾಗಿದೆ ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸಿ ಪೊಲೀಸರು ತನಿಖೆಯನ್ನು ನಡೆಸಿದ್ದರು. ಆರೋಪಿಯ ಬ್ಯಾಂಕ್ ಖಾತೆಗೆ 1 ಲಕ್ಷ ರೂಪಾಯಿ. ಬಂದಿದ್ದು, ಆತನ ಸ್ನೇಹಿತ ತಿಳಿಸಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಕಮಿಷನ್ ಪಡೆದುಕೊಂಡು ಹಣವನ್ನು ವರ್ಗಾವಣೆ ಮಾಡಿದ್ದಾಗಿ ತಿಳಿದು ಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ರವಿಶಂಕರ್ ನಿರ್ದೇಶನದಂತೆ ಸೆನ್ ಎಸಿಪಿ ರವೀಶ್ ನಾಯಕ್, ಇನ್‌ಸ್ಪೆಕ್ಟರ್ ಸತೀಶ್ ಎಂ.ಪಿ ಹಾಗೂ ಎಸ್‌ಐ ಗುರಪ್ಪ ಕಾಂತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಮಂಗಳೂರು/ಶಬರಿಮಲೆ: ಕಾಲ್ನಡಿಗೆಯಲ್ಲಿ ಅರಣ್ಯ ಮಾರ್ಗವಾಗಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುವ ಭಕ್ತರಿಗೆ ನೀಡಲಾಗಿದ್ದ ವಿಶೇಷ ಪಾಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಿರುವಾಂಕೂರು ದೇವಸ್ವಂ ಮಂಡಳಿ (TDB) ಪ್ರಕಟಿಸಿದೆ.
ದೇವಸ್ವಂ ಮಂಡಳಿ ಸದಸ್ಯ ಎ.ಅಜಿಕುಮಾರ್ “ವರ್ಚುವಲ್ ಸರತಿ ವ್ಯವಸ್ಥೆ ಮತ್ತು ಸ್ಪಾಟ್ ಬುಕ್ಕಿಂಗ್ ಮಾಡಿ ಪಂಪಾ ಮೂಲಕ ಆಗಮಿಸುವ ಭಕ್ತರು ದರ್ಶನಕ್ಕಾಗಿ ದೀರ್ಘಾವಧಿ ಕಾಯುವ ಸಮಯವನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು” ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಅರಣ್ಯ ಮಾರ್ಗದಲ್ಲಿ ಸಂಚರಿಸುವ 5,000 ಭಕ್ತರಿಗೆ ವಿಶೇಷ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿತ್ತು.ಆದರೆ, ಅರಣ್ಯ ಮಾರ್ಗವಾಗಿ ಆಗಮಿಸುವ ಭಕ್ತರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಪಾಸ್ ನೀಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಮುಂದಿನ ಸೂಚನೆ ಬರುವವರೆಗೂ ವಿಶೇಷ ಪಾಸ್‌ಗಳನ್ನು ನೀಡದಿರಲು ಮಂಡಳಿ ನಿರ್ಧರಿಸಿದೆ .ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಪಾದಯಾತ್ರೆ ಮಾಡುವ ಯಾತ್ರಾರ್ಥಿಗಳಿಗೆ ವಿಶೇಷ ದರ್ಶನ ವ್ಯವಸ್ಥೆಗಳನ್ನು ಕಳೆದ ತಿಂಗಳು ಪರಿಚಯಿಸಲಾಗಿತ್ತು. ಅಂತಹ ಯಾತ್ರಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ವಿಶೇಷ ಟ್ಯಾಗ್‌ಗಳನ್ನು ನೀಡಲಾಗಿದ್ದು, ದರ್ಶನಕ್ಕೆ ಪ್ರತ್ಯೇಕ ಸರತಿ ಸಾಲು ಸೇರಿದಂತೆ ಸವಲತ್ತುಗಳನ್ನು ನೀಡಲಾಗುತ್ತಿತ್ತು.
LATEST NEWS
ಅಧಿಕಪ್ರಸಂಗದ ಪ್ರಶ್ನೆ ಕೇಳಿದ ಯೂಟ್ಯೂಬರನ್ನು ಹೊಡೆದ ನಾಗಾಸಾಧು
ತುಳು ಸಿನೆಮಾಗೆ ‘ಜೈ’ ಅಂದ ಸುನೀಲ್ ಶೆಟ್ಟಿ; ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ
ಮಕರ ಜ್ಯೋತಿ ಯಾವ ಹೊತ್ತಲ್ಲಿ ಕಾಣುತ್ತದೆ ಗೊತ್ತಾ ?
ನಟ ದರ್ಶನ್ ಸಂಕ್ರಾಂತಿ ಆಚರಣೆ…ಪತ್ನಿ ಮಾಡಿರುವ ಪೋಸ್ಟ್ ವೈರಲ್!
ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್; ಕಟ್ಟುನಿಟ್ಟಿನ ಕ್ರಮಕೈಗೊಂಡ ಬಿಸಿಸಿಐ
ಟ್ಯಾಂಕರ್ಗಳಿಂದ ಡಿಸೇಲ್ ಕಳ್ಳತನ; ಆರೋಪಿಗಳು ಅರೆಸ್ಟ್
Trending
- BIG BOSS3 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- LATEST NEWS4 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- FILM6 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- FILM5 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ